ಹೊನ್ನಾವರ: ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರೋಧಿಸಿ ನಡೆದ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಇವರು ಹಾತಾಶೆಯಿಂದ ಸಭೆಯ ಮುಖ್ಯ ಉದ್ದೇಶವನ್ನೇ ಮರೆತು ಶ್ರೀ ರಾಘವೇಶ್ವರ ಸ್ವಾಮಿಗಳು ಮತ್ತು ಶ್ರೀ ಮಾರುತಿ ಗುರೂಜಿ ಹಾಗು ಶ್ರೀ ಪ್ರಣವಾನಂದ ಸ್ವಾಮಿಗಳ ಸಾನಿಧ್ಯ ವಹಿಸಿದ ವೇದಿಕೆಯ ಮುಂದೆ ಭಾಷಣ ಮಾಡುವಾಗ ಹೇಳಿದ ಸುಳ್ಳು ಬಹಿರಂಗವಾಗಿದ್ದು, ಸಚಿವರು ಕ್ಷಮೆ ಕೇಳುವಂತೆ ಸಾಮಾಜಿಕ ಕಾರ್ಯಕರ್ತ ಮಾಸ್ತಪ್ಪ ನಾಯ್ಕ ಒತ್ತಾಯಿಸಿದ್ದಾರೆ.
ಸಭೆಯಲ್ಲಿ ಸಚಿವರು ದೇವರಿಗಿಂತ ನಮ್ಮ ಗುರುಗಳು ಮೇಲು, ಗುರುಗಳೆಂದರೆ ನಮಗೆ ಭಯ ಭಕ್ತಿ ಜಾಸ್ತಿ, ಅದೇ ರೀತಿ ಕ್ಷೇತ್ರದ ಜನರು ನಮ್ಮ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಅಂತ ಹೇಳಿ ಅವರ ಮುಂದೆ ದಗಲ್ಬಾಜಿ ರಾಜಕಾರಣ ಮಾಡಿದರೆ ಭಿಕ್ಷೆ ಬೇಡಲು ಹೋಗಿ ಎಂದು ವಾಗ್ದಾಳಿ ನಡೆಸಿದರು. ಇದೆ ವೇಳೆ ರಾಜ್ಯದ ಉಪಮುಖ್ಯಮಂತ್ರಿ ಡಿಕೆಶಿ ಯವರು ಕಾರವಾರದಲ್ಲಿ ಇತ್ತೀಚಿಗೆ ನಡೆದ ಕರಾವಳಿ ಉತ್ಸವಕ್ಕೆ ಬಂದಾಗ ಹೊನ್ನಾವರದ ಪಂಪ್ಡ್ ಸ್ಟೋರೇಜ್ ಬಗ್ಗೆ ಮಾತನಾಡಲಿಲ್ಲ ಅನ್ನುವ ಇವರ ಮಾತು ನಿಜಕ್ಕೂ ನೀವು ಗುರುಗಳ ಮುಂದೆ ನಿಂತು ಈ ರೀತಿ ಸುಳ್ಳು ಹೇಳಿದ್ದಕ್ಕೆ ನೀವು ಬಹಿರಂಗ ಕ್ಷಮೆ ಕೇಳುವುದು ಒಳ್ಳೆಯದು ಎಂದಿದ್ದಾರೆ.
ಕಾರವಾರದಲ್ಲಿ ಡಿಕೆಶಿ ಯವರು ಕರಾವಳಿ ಉತ್ಸವಕ್ಕೆ ಆಗಮಿಸಿದಾಗ ಮಾಧ್ಯಮದವರ ಎದುರುಗಡೆ, ನೀವು ಅವರ ಪಕ್ಕದಲ್ಲಿ ಕುಳಿತಿರುವ ವಿಡಿಯೋ ಟಿವಿ ವಾಹಿನಿ, ಹಾಗು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಹೇಳಿದ ಸುಳ್ಳು ನಿಮಗೆ ಶೋಭೆ ತರುವಂತದ್ದಲ್ಲ. ಸಭೆಯ ಉದ್ದೇಶ ಪಂಪ್ಡ ಸ್ಟೋರೇಜ್ ವಿರೋಧದ ಬಗ್ಗೆ ಆದರೂ, ತಾವು ತಮ್ಮ ವೈಯುಕ್ತಿಕ ಫೇಸ್ಟುಕ್ ಫೇಕ್ ಐಡಿ ಗಳ ಹಾಗು ತಮ್ಮ ಸಂಸಾರದ ಬಗ್ಗೆ ಹೇಳಿಕೆ ಕೊಡುತ್ತಿರುವುದು ನಗೆಪಾಟಿಲಿಗೆ ಬರುತ್ತದೆ. ಇದನ್ನು ನೋಡಿದರೆ ನಿಮ್ಮದೇ ಮನೆಯಲ್ಲಿ ಮೂರು ಜನ ಸೋಶಿಯಲ್ ಮೀಡಿಯಾ ಫೇಕ್ ಐಡಿ ಮಾಡಿಕೊಂಡು ಬರೆಯಲು ನೀವೇ ಅವರಿಗೆ ತಿಂಗಳಿಗೆ ತಲಾ 35 ಸಾವಿರ ಕೊಟ್ಟು ಬೇರೆಯವರ ತೇಜೋವದೆ ಮಾಡುತ್ತಿದ್ದಾರೆ ಎನ್ನುವ ಗಂಭೀರ ಆರೋಪವು ಇದೆ. ತಮ್ಮ ಮೇಲೆ ಆರೋಪ ಇದ್ದರೂ, ಭವ್ಯ ಸಮಾವೇಶದಲ್ಲಿ ಬೇರೆಯವರಿಗೆ ತಿರಸ್ಕಾರದ ಅವಾಚ್ಯ ಶಬ್ದದ ನಿಂದನೆ ಮಾಡಿದ್ದೀರಿ. ನಿಮ್ಮ ಭಾಷಣವು ನಿಮ್ಮದೇ ವ್ಯಯುಕ್ತಿಕ ಜೀವನವನ್ನು ಎತ್ತಿ ತೋರಿಸಿದಂತೆ ಆಗಿದೆ. ಬ್ರಹತ್ ಸಮಾವೇಶದಲ್ಲಿ ಸ್ವಾಮೀಜಿಗಳ ಮುಂದೆ ಅವಾಚ್ಯ ಶಬ್ದದ ಭಾಷಣ ಮಾಡಿ ನೀವು ಆ ಸಮಾವೇಶದ ಘನತೆಯನ್ನೇ ಹಾಳುಮಾಡಿದ್ದೀರಿ. ಇಷ್ಟು ವರ್ಷ ನೀವು ಜನಸಾಮಾನ್ಯರಿಗೆ ಇದೆ ರೀತಿಯ ಸುಳ್ಳನ್ನು ಹೇಳಿ ನಿಮ್ಮ ರಾಜಕೀಯ ಜೀವನ ವನ್ನು ಕಟ್ಟಿಕೊಂಡಿದ್ದೀರಿ ಅನ್ನುವುದಕ್ಕೆ ನಿನ್ನೆ ನಿಮ್ಮ ಭಾಷಣವೇ ಸಾಕ್ಷಿಯಾಗಿದೆ.
ಸಚಿವರೇ ನಿಮಗೆ ನಮ್ಮ ಹಿಂದೂ ಧರ್ಮದ ಮೇಲೆ ಗೌರವ ಇದ್ದರೆ, ದಯವಿಟ್ಟು ನಿನ್ನೆ ಸ್ವಾಮೀಜಿಗಳ ಮುಂದೆ ಆಡಿದ ಅವಾಚ್ಯ ಶಬ್ದ ಹಾಗು ಸುಳ್ಳಿಗೆ ತಾವು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಅಧಿಕಾರದ ಆಸೆಗಾಗಿ ತಾವು ಸಮಾಜಕ್ಕೆ ಸುಳ್ಳನ್ನು ಬಿತ್ತರಿಸಿ ತಮ್ಮ ಜೀವನ ಕಟ್ಟಿಕೊಳ್ಳುವುದಕ್ಕೆ ಅಮಾಯಕ ಜನರ ಬದುಕಿಗೆ ಕತ್ತರಿ ಇಡಬಾರದು. ಒಂದು ಗೌರವಾನ್ವಿತ ಹುದ್ದೆಯಲ್ಲಿ ಇದ್ದವರು ನೀವೇ ಒಂದು ಸಭೆಯ ಘನತೆಯನ್ನು ಹಾಳುಮಾಡುತ್ತಿದ್ದೀರಿ. ನಿಮ್ಮಿಂದ ಸಮಾಜಕ್ಕೆ ಒಂದು ಕಪ್ಪು ಚುಕ್ಕೆ ಅಂಟಿದAತೆ ಇದ್ದು ಬಹಿರಂಗ ಕ್ಷಮೆ ಕೇಳುವಂತೆ ಮಾಸ್ತಪ್ಪ ನಾಯ್ಕ ಒತ್ತಾಯಿಸಿದ್ದಾರೆ.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಹೊನ್ನಾವರದಲ್ಲಿ ಶರಾವತಿ ಪಂಪ್ಡ ಸ್ಟೋರೇಜ ಭೂಗತ ವಿದ್ಯುತ ಯೋಜನೆಯ ವಿರುದ್ಧ ಹೊನ್ನಾವರದ ಶರಾವತಿ ಉಳಿಸಿ ಹೋರಾಟ ಸಮಿತಿಯ ಆಶ್ರಯದಲ್ಲಿ ನಡೆದ ಪ್ರತಿಭಟನಾ ಜನಸಮಾವೇಶ.
‘ನಿಯಮ ಪಾಲನೆಯಿಂದ ವೃತ್ತಿ ಗೌರವ ಹೆಚ್ಚಳ’
ಇಡಗುಂಜಿ ಪ್ರೌಢಶಾಲೆಯಲ್ಲಿ ಮಾದರಿಯಾಗಿ ನಡೆದ ಮಕ್ಕಳ ಮಾದರಿ ಯುವ ಗ್ರಾಮಸಭೆ