# Bhavana TV ## Posts - [“ಸಂಸ್ಕಾರ ಸುಧಾ” ಅರಿವಿನ ಹಲವು ದಾರಿಗಳು ಎನ್ನುವ ನೈತಿಕ ಮೌಲ್ಯಗಳ ಹತ್ತನೇಯ ಸಂಚಿಕೆ](https://bhavanatv.com/2025/1902/): ಭಟ್ಕಳ : ಜೀವನದಲ್ಲಿ ಪ್ರಾರ್ಥನೆ, ಆರಾಧನೆ ಮತ್ತು ಸಾಧನೆ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವ ಆಧಾರ ಸ್ತಂಭಗಳು ಎಂದು ಪುಣೆಯ ಎಮ್.ಆಯ್.ಟಿ ಇನ್ಸಿ÷್ಟಟ್ಯೂಟ್ ಆಪ್ ಡಿಸೈನ್ ಮತ್ತು ಟೆಕ್ನಾಲಜಿ ಯುನಿವರ್ಸಿಟಿಯ ನಿವೃತ್ತ ಪ್ರಾಧ್ಯಾಪಕ ಸೂರ್ಯನಾರಾಯಣ ರಾವ್ ಹೇಳಿದರು. ಅವರು ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ ಪಿ.ಯು ಕಾಲೇಜಿನಲ್ಲಿ ಆಯೋಜಿಸಿದ್ದ “ಸಂಸ್ಕಾರ ಸುಧಾ” ಅರಿವಿನ ಹಲವು ದಾರಿಗಳು ಎನ್ನುವ ನೈತಿಕ ಮೌಲ್ಯಗಳ ಹತ್ತನೇಯ ಸಂಚಿಕೆ ಯ “ಮೌಲ್ಯಯುತರಾಗಿರಿ” ಎನ್ನುವ ವಿಷಯದ ಮೇಲೆ ಮಾತನಾಡುತ್ತಾ ದೇವರಲ್ಲಿ ಶ್ರಧ್ಧೆಯಿಂದ ಪ್ರಾರ್ಥಿಸಿ ಉತ್ತಮ ಮೌಲ್ಯಗಳನ್ನು ಆರಾಧಿಸಿ ಗುರಿ ಮತ್ತು ಉದ್ದೇಶಗಳನ್ನು ಸಾಧಿಸಿದಾಗ ರಾಷ್ಟçದ ನಿರ್ಮಾಣ ಸಾದ್ಯ ಎಂದು ಹೇಳಿದರು. ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಚೇರಮನ್ ಡಾ. ಸುರೇಶ ವಿ. ನಾಯಕ ಅಧ್ಯಕ್ಷತೆ ವಹಿಸಿದ್ದರು. ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಟ್ರಸ್ಟಿ ರಮೇಶ ಖಾರ್ವಿ, ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಮುಖ್ಯೋದ್ಯಾಪಕ ರಾಘವೇಂದ್ರ ಕಾಮತ, ವಿದ್ಯಾಭಾರತಿ ಶಾಲೆಯ ಮುಖ್ಯೋದ್ಯಾಪಕಿಯಾದ ರೂಪಾ ಖಾರ್ವಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ. ವಿರೇಂದ್ರ ವಿ ಶಾನಭಾಗ... - [ರಾಜ್ಯ ಮಟ್ಟದ ನವೋನ್ಮೇಷ - 2025 ಎನ್ನುವ ಸ್ಪರ್ಧೆಯಲ್ಲಿ ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳು….](https://bhavanatv.com/2025/1898/): ಕುಂದಾಪುರ ಐ ಎಮ್ ಜೆ ಇನ್ಸಿ÷್ಟಟ್ಯುಟ್ ಮೂಡಲಕಟ್ಟೆ ಕುಂದಾಪುರದಲ್ಲಿ ನಡೆದ ರಾಜ್ಯ ಮಟ್ಟದ ನವೋನ್ಮೇಷ – 2025 ಎನ್ನುವ ಸ್ಪರ್ಧೆಯಲ್ಲಿ ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿದ್ದು ಲೋಗೋ ಡಿಸೈನ್ ನಲ್ಲಿ ನಾಗರಾಜ ಜಿ ಶಿರಾಲಿ ಪ್ರಥಮ, ಟೆಕ್ನೋಗ್ರಿಡ್ ನಲ್ಲಿ ಯುವರಾಜ ಜಿ ನಾಯ್ಕ ಮತ್ತು ತೆಜಸ ರವಿ ನಾಯ್ಕ ದ್ವಿತೀಯ ಹಾಗೂ ಪೂರ್ಣಾ ಹೆಗಡೆ, ಅಂಕಿತಾ ಕಾಮತ, ವಸುಧಾ ಹೆಬ್ಬಾರ ಮತ್ತು ಲಾವಣ್ಯ ದೇವಾಡಿಗ ಇವರು ಗಾನ ವೈಭವ – ಸಮೂಹ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುರೇಶ ವಿ. ನಾಯಕ, ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀ ಆರ್, ಜಿ, ಕೊಲ್ಲೆ, ಟ್ರಸ್ಟಿ ಮ್ಯಾನೇಜರ್À ಶ್ರೀ ರಾಜೇಶ ನಾಯಕ, ಪ್ರಾಂಶುಪಾಲರಾದ ಡಾ. ವಿರೇಂದ್ರ ವಿ. ಶಾನಬಾಗ, ಸಾಂಸ್ಕೃತಿಕ ಸ್ಪರ್ಧೆಯ ಸಂಯೋಜಕರಾದ ಉಪನ್ಯಾಸಕಿ ದೀಕ್ಷಾ ಭಂಡಾರಿ ಮತ್ತು... - [ವಿ.ಡಿ.ನಾಯಕರಿಗೆ ಬಾಪು ಸದ್ಭಾವನಾ ಪುರಸ್ಕಾರ ಪ್ರದಾನ](https://bhavanatv.com/2025/1895/): ಅಂಕೋಲಾ : ಇಲ್ಲಿನ ಶ್ರೀರಾಮ್ ಸ್ಟಡಿ ಸರ್ಕಲ್ಲಿನ ಬಂಗಾರಮಕ್ಕಿ ಶ್ರೀ ವೀರಾಂಜನೇಯ ಸಭಾಭವನದಲ್ಲಿ ವಿಶ್ರಾಂತ ಅಧ್ಯಾಪಕ ನಾಡುಮಾಸ್ಕೇರಿ ವಿ.ಡಿ. ನಾಯಕ ವಂದಿಗೆಯವರಿಗೆ ” ಬಾಪು ಸದ್ಭಾವನಾ ಪುರಸ್ಕಾರ -2025 ” ನ್ನು ಪ್ರದಾನಗೊಳಿಸಲಾಯಿತು.ಉತ್ತರ ಕನ್ನಡ ಜಿಲ್ಲೆಯ ಟಾಪ್ ಒನ್ ಹಾಗೂ ನಾಡಿನ ಟಾಪ್ ಟೆನ್ ಸ್ಪರ್ಧಾತ್ಮಕ ತರಬೇತಿ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಅಂಕೋಲಾದ ಪ್ರತಿಷ್ಠಿತ ಶ್ರೀರಾಮ್ ಸ್ಟಡಿ ಸರ್ಕಲ್ಲಿನ ದಶಮಾನೋತ್ಸವದ ಸ್ಮೃತಿಯಾಗಿ ಗಾಂಧಿ ಶತಮಾನೋತ್ತರ ಸುವರ್ಣ ಮಹೋತ್ಸವದ ವರ್ಷದಿಂದ ಪ್ರತಿ ವರ್ಷವೂ ಅಸಮಾನ್ಯ ಸಾಧಕರನ್ನು ಗುರುತಿಸಿ, ಗಾಂಧಿ ಮಾಸದಲ್ಲಿ ಅಂಕೋಲಾದ ನವ ಕರ್ನಾಟಕ ಸಂಘದ ಸಹಯೋಗದಲ್ಲಿ ನೀಡಲಾಗುತ್ತಿರುವ “ಬಾಪು ಪದ್ಮಾವನಾ ಪುರಸ್ಕಾರ” ಕ್ಕೆ, ಈ ವರ್ಷ ನಾಡಿನ ಹೆಸರಾಂತ ಸಾಹಿತಿಗಳಾದ ಭಟ್ಕಳದ ಡಾ. ಸೈಯದ್ ಜಮೀರುಲ್ಲಾ ಷರೀಪ್ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ಸಮಾಜಮುಖಿ ವ್ಯಕ್ತಿತ್ವದ ವಿಶ್ರಾಂತ ಅಧ್ಯಾಪಕರಾದ ಅಂಕೋಲಾದ ವಂದಿಗೆಯ ನಿವಾಸಿ ವಿ.ಡಿ. ನಾಯಕರವರನ್ನು ಆಯ್ಕೆ ಸಮಿತಿಯು ಆಯ್ಕೆಗೊಳಿಸಿತ್ತು. ಕಾರ್ಯನಿಮಿತ್ತ ಷರೀಫರ ಅನುಪಸ್ಥಿತಿಯಲ್ಲಿ, ಷರೀಫರಿಗೆ ಪುರಸ್ಕಾರ ಪ್ರಧಾನವನ್ನು... - [ಹಿರಿಯ ನಟ ರಾಮಕೃಷ್ಣ ಅವರಿಂದ ಬನವಾಸಿಯಲ್ಲಿ ಉಮೇಶ ಮುಂಡಳ್ಳಿ ಅವರಿಗೆ ಕದಂಬ ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ](https://bhavanatv.com/2025/1892/): ಭಟ್ಕಳ- ಕದಂಬ ಕನ್ನಡ ಸೇನೆ ಕರ್ನಾಟಕ ಇವರು ಆಯೋಜಿಸಿದ ಕದಂಬರ ನಾಡಿನಲ್ಲಿ ಕನ್ನಡದ ವೈಭವ ಕಾರ್ಯಕ್ರಮ ದಲ್ಲಿ ಕವಿ ಲೇಖಕ ಸಂಗೀತ ಸುಗಮಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರಿಗೆ ಕದಂಬ ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕನ್ನಡದ ಮೊಟ್ಟಮೊದಲ ರಾಜ ಮನೆತನ ಕದಂಬರ ಐತಿಹಾಸಿಕ ಬನವಾಸಿಯ ಶ್ರೀ ಮಧುಕೇಶ್ವರ ದೇವಾಲಯದ ಪ್ರಾಗಂಣದಲ್ಲಿ ಸೋಮವಾರ ಸಂಜೆ ನಡೆದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡದ ಹಿರಿಯ ಜನಪ್ರಿಯ ಚಿತ್ರನಟ ನಿರ್ನಳ್ಳಿ ರಾಮಕೃಷ್ಣ ಅವರು ಉಮೇಶ ಮುಂಡಳ್ಳಿ ಅವರಿಗೆ ಸಾಲು ಹೊದಿಸಿ “ಕದಂಬ ಕನ್ನಡ ಸಾಹಿತ್ಯ ರತ್ನ 2025 ” ಪ್ರಶಸ್ತಿ ಪ್ರಧಾನ ಮಾಡಿ ಹರಸಿದರು.ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ರಾಜ್ಯದ ಅನೇಕ ಸಾಧಕರನ್ನು ಗೌರವಿಸಲಾಯಿತು. ಕಾರ್ಯಕ್ರವನ್ನು ಶಿರಸಿ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ ಉದ್ಟಾಟಿಸಿದ್ದರು. ವೇದಿಕೆಯಲ್ಲಿ ಹಿರಿಯ ನಟ ನೀರ್ನಳ್ಳಿ ರಾಮಕೃಷ್ಣ, ಬನವಾಸಿ ಮಧುಕೇಶ್ವರ ದೇವಾಲಯದ ಧರ್ಮದರ್ಶಿ ರಾಜಶೇಖರ್ ಒಡೆಯರ್, ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಮಲ್ಲೇಶ್ವರ,... - [ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಲಾಸ್ಯ ಮಧ್ಯಸ್ಥ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ](https://bhavanatv.com/2025/1889/): ಭಾವನಾ ಸುದ್ದಿ ಬೈಂದೂರು : ಮಂಡ್ಯ ಜಿಲ್ಲೆಯ ಶ್ರಿ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯ ಸಾಂಪ್ರದಾಯಿಕ ವಿಭಾಗದಲ್ಲಿ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಲಾಸ್ಯ ಮಧ್ಯಸ್ಥ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಸ್ಕೂಲ್ ಗೇಮ್ಸ್ ಆಫ್ ಇಂಡಿಯಾ (SಉಈI) ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಆದಿಚುಂಚನಗಿರಿಯಲ್ಲಿ ಇತ್ತೀಚೆಗೆ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್. ಕೆ ವಿಜೇತ ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಕುಮಾರ್ ವಿದ್ಯಾರ್ಥಿನಿಗೆ ಮಾರ್ಗದರ್ಶನ ನೀಡಿದ್ದರು. ಸುಜ್ಞಾನ ಪದವಿ ಪೂರ್ವ ಕಾಲೇಜು ಮತ್ತು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಬೋಧಕ ಬೋಧಕೇತರ ವರ್ಗದವರು ಸಂತಸ ವ್ಯಕ್ತಪಡಿಸಿದ್ದಾರೆ.ವರದಿ : ಎಚ್ ಸುಶಾಂತ್ ಆಚಾರ್ ಬೈಂದೂರು - [ಯಕ್ಷಗಾನ ನಮ್ಮ ಪರಂಪರೆ, ಸಂಸ್ಕೃತಿಯನ್ನು ಉಳಿಸುವ ಕಲೆಯಾಗಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.](https://bhavanatv.com/2025/1886/): ಹೊನ್ನಾವರ: ಪಟ್ಟಣದ ಮೂಡಗಣಪತಿ ದೇವಸ್ಥಾನದ ಸಭಾಭವನದಲ್ಲಿ ಯಲಗುಪ್ಪಾ ಸುಬ್ರಹ್ಮಣ್ಯ ಹೆಗಡೆ ಅಭಿನಂದನಾ ಸಮಿತಿ ವತಿಯಿಂದ ಹಮ್ಮಿಕೊಂಡ “ಯಲಗುಪ್ಪಾ ಯಕ್ಷಾರ್ಚನೆ” ಯಕ್ಷಗಾನ ಕಲಾವಿದ ಯಲಗುಪ್ಪಾ ಸುಬ್ರಹ್ಮಣ್ಯ ಹೆಗಡೆ ಅವರ ಅಭಿನಂದನೆ-ಸನ್ಮಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಯಕ್ಷಗಾನ ಈ ನಾಡಿದ ಕಲೆ. ವಿಶ್ವದರ್ಜೆಗೇರಿದ ಕಲೆ. ನಮ್ಮ ಭಾಷೆ, ಸಂಸ್ಕೃತಿ ಉಳಿಸುವ ಕಲೆ ಎಂದು ಬಣ್ಣಿಸಿದರು. ಕನ್ನಡ ಉತ್ಸವ ಒಂದು ತಿಂಗಳಕ್ಕೆ ಮೀಸಲಾಗದೇ ವರ್ಷವಿಡೀ ನಡೆಯಬೇಕು ಎಂದ ಅವರು ಕನ್ನಡವನ್ನು ಹೆಚ್ವು ಮಾತನಾಡಿ. ಕನ್ನಡವನ್ನು ಉಳಿಸಬೇಕು ಎಂದರು. ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಮಾತನಾಡಿ ಸುಬ್ರಹ್ಮಣ್ಯ ಹೆಗಡೆ ಕಲಾ ನೈಪುಣ್ಯತೆ, ಪೌರಾಣಿಕ ಜ್ಞಾನ ಹೊಂದಿದ ಕಲಾವಿದ ಎಂದರು. ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಅವರನ್ನು ದಂಪತಿ ಸಮೇತ ಸನ್ಮಾನಿಸಲಾಯಿತು. ಸುಬ್ರಹ್ಮಣ್ಯ ಹೆಗಡೆ ಅವರಿಗೆ 5ಲಕ್ಷ ರೂ.ಗಳ ಮೊತ್ತದ ಕಲಾಕಾಣಿಕೆಯನ್ನು ಅರ್ಪಿಸಲಾಯಿತು. ಪ್ರೋ. ಪವನ ಕುಮಾರಕೆರೆ ಅಭಿನಂದನಾ ನುಡಿಗಳನಾಡಿ ಸುಬ್ರಹ್ಮಣ್ಯ ಹೆಗಡೆ ಅವರು ಪೋಷಿಸಿಕೊಂಡು ಬಂದ ಸ್ರ‍್ತೀ ಪಾತ್ರದ ದಾಖಲೀಕರಣ ಆಗಬೇಕು... - [ರಾಜ್ಯಮಟ್ಟದ ಸಂಗೀತ ಸ್ಪರ್ಧೆ ಆಯ್ಕೆ ಪ್ರಕ್ರಿಯೆ](https://bhavanatv.com/2025/1882/): ಕಾರ್ಕಳ : ಪ್ರತಿಯೊಬ್ಬರು ತಮಗೆ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು. ಸತತ ಪ್ರಯತ್ನದಿಂದ ಯಾವುದೇ ಕ್ಷೇತ್ರದಲ್ಲಿ ಮುಂದೆ ಬರಬಹುದು. ಗ್ರಾಮೀಣ ಪ್ರದೇಶದ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿ ಚಾಣಕ್ಯ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಕಲಾ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಕಾರ್ಕಳ ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಹೇಳಿದರು. ಅವರು ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ). ಇವರ ಸಹಯೋಗದೊಂದಿಗೆ ಚಾಣಕ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹೆಬ್ರಿ ಇವರ ನೇತೃತ್ವದಲ್ಲಿ ನಡೆಯುವ ವಾಯ್ಸ್ ಆಪ್ ಚಾಣಕ್ಯ ರಾಜ್ಯಮಟ್ಟದ ಸಂಗೀತ ಸ್ಪರ್ಧೆಯ ಬಗ್ಗೆ ಕಾರ್ಕಳ ರೋಟರಿ ಬಾಲ ಭವನದಲ್ಲಿ ರೋಟರಿ ಕ್ಲಬ್ ಕಾರ್ಕಳ, ರೋಟರಿ ಆನ್ಸ್ ಕ್ಲಬ್ ಮತ್ತು ವಿಹಾನ ಮೆಲೋಡೀಸ್ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯನ್ನು ಉದ್ಘಾಟಿಸಿ ಮಾತನಾಡಿದರು.ಆಯ್ಕೆ ಪ್ರಕ್ರಿಯೆಯ ತೀರ್ಪುಗಾರರಾಗಿ ಸಂಗೀತ ಶಿಕ್ಷಕಿ ಸವಿತಾ ಆಚಾರ್ಯ ಉಡುಪಿ, ಸಂಗೀತ ನಿರ್ದೇಶಕ ಬಾಲಚಂದ್ರ ಮುದ್ರಾಡಿ... - [ಬೈಂದೂರು - ಬೆಂಗಳೂರು ನಡುವೆ ಕೆಎಸ್ಸಾರ್ಟಿಸಿ ಸೇವೆ ಮರು ಆರಂಭ](https://bhavanatv.com/2025/1879/): ಭಾವನಾ ಸುದ್ದಿ ಬೈಂದೂರು : ಕುಂದಾಪುರದಿAದ ಕೊಲ್ಲೂರು ಮಾರ್ಗವಾಗಿ ಬೆಂಗಳೂರಿಗೆ ಪ್ರತಿದಿನ ಸಂಚರಿಸುತ್ತ ಮಧ್ಯಮ ವರ್ಗದ ಜನರಿಗೆ ಸಹಕಾರಿಯಾಗಿದ್ದ ಸರಕಾರಿ ಬಸ್ ಕರೋನಾ ಮಹಾಮಾರಿಯ ಸಮಯದಲ್ಲಿ ತನ್ನ ಸೇವೆಯನ್ನು ನಿಲ್ಲಿಸಿತ್ತು. ಬಳಿಕ ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಮಾಜಿ ಶಾಸಕರು ಮತ್ತು ಗ್ಯಾರಂಟಿ ಸಮಿತಿ ಅಧ್ಯಕ್ಷರ ಸಹಕಾರದೊಂದಿಗೆ ಬಸ್ ಸೇವೆಯನ್ನು ಮರು ಆರಂಭಿಸಿದ್ದು ಬೈಂದೂರಿನ ನಾಗರೀಕರು ಬೈಂದೂರು ಸರ್ಕಲ್ ನಲ್ಲಿ ಬಸ್‌ಗೆ ಸ್ವಾಗತಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಬೈAದೂರು ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ ಉಪ್ಪುಂದ ಅವರು ಮಾತನಾಡಿ, ಸಾರ್ವಜನಿಕರು ಅನಗತ್ಯವಾಗಿ ಖಾಸಗಿ ವಾಹನ ಬಳಸದೆ ಪ್ರತಿನಿತ್ಯದ ಪ್ರಯಾಣಕ್ಕಾಗಿ ರಸ್ತೆ ಸಾರಿಗೆ ಬಸ್‌ಗಳನ್ನು ಬಳಸಬೇಕು. ಇದರಿಂದ ಪರಿಸರ ಮಾಲಿನ್ಯ ತಡೆಗಟ್ಟುವುದರ ಜೊತೆಗೆ ವೈಯಕ್ತಿಕ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದರು. ಈ ಸಂದರ್ಭದಲ್ಲಿ ಬೈಂದೂರು ಪಟ್ಟಣ ಪಂಚಾಯತ್ ನಾಮ ನಿರ್ದೇಶಕ ಸದಾಶಿವ ಡಿ ಪಡುವರಿ, ಗ್ಯಾರಂಟಿ... - [ಬೈಂದೂರು ಕೊಡೇರಿ ಕಿರು ಬಂದರಿಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಭೇಟಿ](https://bhavanatv.com/2025/1876/): ಭಾವನಾ ಸುದ್ಧಿ ಬೈಂದೂರು : ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಮಂಗಳವಾರ ಕೊಡೇರಿ ಕಿರು ಬಂದರು ವ್ಯಾಪ್ತಿಯಲ್ಲಿ ಆಗಬೇಕಾದ ಕಾಮಗಾರಿಗಳ ಬಗ್ಗೆ ಮತ್ತು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಮಸ್ಯೆ ಪರಿಶೀಲನೆಗೆ ನಡೆಸಿ, ಮೂಲಭೂತ ಸೌಕರ್ಯ ಬಗ್ಗೆ ಸಂಬAಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಉಪ್ಪುಂದ ರಾಣಿ ಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ಉಪ್ಪುಂದ ಇದರ ಅಧ್ಯಕ್ಷ ನಾಗೇಶ್ ಖಾರ್ವಿ ಅಳ್ವಿವೆಕೋಡಿ, ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಪಿಡಿಓ ರಾಜೇಶ, ಉಪ್ಪುಂದ ಗ್ರಾ.ಪಂ ಅಧ್ಯಕ್ಷ ಮೋಹನಚಂದ್ರ ಉಪ್ಪುಂದ, ಮಡಿಕಲ್ ಶ್ರೀ ಈಶ್ವರ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಬಿ. ರಾಮ ಖಾರ್ವಿ, ನಾಡದೋಣಿ ಮೀನುಗಾರರ ಸಂಘದ ಉಪಾಧ್ಯಕ್ಷ ನಾಗೇಶ್ ಖಾರ್ವಿ ಉಪ್ಪುಂದ, ಕೊಡೇರಿ ಮೀನುಗಾರಿಕೆ ಸಹಾಯಕ ನಿದೇ9ಶಕ ಬಿ.ಎ0.ಯಕ್ಕರನಾಳ , ಗ0ಗೋಳ್ಳಿ ಮೀನುಗಾರಿಕೆ ಉಪನಿದೇ9ಶಕ ಸ0ಜೀವ ಅರಕೇರಿ ಮೊದಲಾದವರು ಉಪಸ್ಥಿತರಿದ್ದರು. ವರದಿ : ಎಚ್. ಸುಶಾಂತ್ ಆಚಾರ್ ಬೈಂದೂರು - [ಗುಂಡ್ಲುಪೇಟೆಯ ಮೋನಿಷಾ ಎಂ ರವರು ಚಿನ್ನದ ಪದಕ](https://bhavanatv.com/2025/1872/): ಗುಂಡ್ಲುಪೇಟೆ: ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ 14ನೇ ಮಿನಿ ಕರ್ನಾಟಕ ಒಲಂಪಿಕ್ಸ್ ಕ್ರೀಡಾಕೂಟ 2025 ವುಶು ಮಾಸ್ಟರ್ ಆರ್ಟ್ಸ್ ಸಬ್ ಜೂನಿಯರ್ ಕ್ರೀಡಾಕೂಟದಲ್ಲಿ ಗುಂಡ್ಲುಪೇಟೆಯ ಮೋನಿಷಾ ಎಂ ರವರು ಚಿನ್ನದ ಪದಕವನ್ನು ಪಡೆದಿದ್ದಾರೆ. ಇವರ ತಾಯಿ ನಂದಿನಿ ಹಾಗೂ ತಂದೆ ಮಧು ತಾಲೂಕು ಪಂಚಾಯಿತಿ ವಸತಿ ನೋಡಲ್ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಮೋನಿಷಾ ರವರು ಪ್ರೇಮ್ ಸ್ಟುಡಿಯೋ ನಲ್ಲಿ ಪಾರ್ಥಿವ ಹಾಗೂ ದರ್ಶನ್ ರವರ ಹತ್ತಿರ ತರಬೇತಿಯನ್ನು ಪಡೆದಿದ್ದಾರೆ.ವರದಿ : ಸದಾನಂದ ಕನ್ನೆಗಾಳ ಗುಂಡ್ಲಪೇಟೆ - [ಸ್ನೇಹ ಶಾಲೆಯ ಮಕ್ಕಳ ಮುಖದಲ್ಲಿ ನಗು ಮೂಡಿಸಿದ ನಮ್ಮ ಊಟ](https://bhavanatv.com/2025/1868/): ಭಟ್ಕಳ: ದಾನಗಳಲ್ಲಿ ಶ್ರೇಷ್ಠವಾದ ದಾನ ಅನ್ನದಾನ, ಈ ನುಡಿಗಟ್ಟನ್ನು ಮನಸ್ಸಿನಲ್ಲಿ ತುಂಬಿಕೊAಡು ಅಂಜುಮನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳು ಭಟ್ಕಳದ ಸ್ನೇಹ ವಿಶೇಷ ಶಾಲೆಯ ಮಕ್ಕಳಿಗೆ ಪ್ರೀತಿಯ ಆಹಾರವನ್ನು ಹಂಚಿದರು. ಅAಜುಮನ್ ಮಹಾವಿದ್ಯಾಲಯ, ಸಾಹಿಲ್ ಆನ್‌ಲೈನ್ ಭಟ್ಕಳ ಹಾಗೂ ಭಟ್ಕಳ ಮುಸ್ಲಿಂ ಯುವ ಜನತಾ ಫೆಡರೇಶನ್‌ಗಳ ಸಂಯುಕ್ತ ಆಶ್ರಯದಲ್ಲಿ ನಡೆದ ನಮ್ಮ ಊಟ-3 ಅನ್ನದಾನ ಕಾರ್ಯಕ್ರಮವು ಮಾನವೀಯ ಮೌಲ್ಯಗಳನ್ನು ಜೀವಂತಗೊಳಿಸಿತು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಮೊಹಮ್ಮದ್ ಯೂಸುಫ್ ಕೋಲಾ ಹಾಗೂ ಮುಬಶಿರ್ ಹಲ್ಲಾರೆ, ಪ್ರಧಾನ ಕಾರ್ಯದರ್ಶಿ, ಭಟ್ಕಳ ಮುಸ್ಲಿಂ ಯುವ ಜನತಾ ಫೆಡರೇಶನ್ ಇವರ ಮಾರ್ಗದರ್ಶನದಲ್ಲಿ ನಡೆದ ಈ ಉಪಕ್ರಮಕ್ಕೆ ಸಾಹಿಲ್ ಆನ್‌ಲೈನ್‌ನಿಂದ ಆಹಾರ ಪೂರೈಕೆಯ ಸಹಕಾರ ದೊರೆಯಿತು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಅಧಿಕಾರಿ ದಾಮೋರ ನಾಯ್ಕ, ಪ್ರೊ. ಬಿ.ಎಚ್. ನಧಾಫ್, ಮಂಜುನಾಥ ಪ್ರಭು, ಉಮೇಶ ಮೇಸ್ತ, ಕೆ. ಕಲಿಮುಲ್ಲಾ, ಶ್ರೀಮತಿ ಪುರ್ಣಿಮಾ, ಶ್ರೀಮತಿ ಫಮಿನಾ ಪಾತಿಮಾ ಹಾಗೂ ಎನ್.ಎಸ್.ಎಸ್. ಸ್ವಯಂಸೇವಕರು ಹೃದಯಪೂರ್ವಕ ಶ್ರಮವನ್ನರ್ಪಿಸಿದರು. - [ಮುರ್ಡೇಶ್ವರದಲ್ಲಿ ಮಟ್ಕಾ ಜೂಜಾಟ ದಾಳಿ ಒಬ್ಬ ಬಂಧನ](https://bhavanatv.com/2025/1866/): ಭಟ್ಕಳ: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮುರ್ಡೇಶ್ವರ ಪೊಲೀಸರು ಬಂಧಿಸಿದ್ದಾರೆ.ಮಾವಿನಕಟ್ಟೆಯ ಮಂಜುನಾಥ ಡಿಲಕ್ಸ್ ಹೋಟೆಲ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಗಿರೀಶ ತಂದೆ ಮಂಜುನಾಥ ಬಾಕಡ, ನ್ಯಾಷನಲ್ ಕಾಲೋನಿ, ಮುರ್ಡೇಶ್ವರ ನಿವಾಸಿ, ಈತನು ಮಟ್ಕಾ, ಓಸಿ ಜೂಜಾಟ ನಡೆಸುತ್ತಿದ್ದಾನೆಂಬ ನಿಖರ ಮಾಹಿತಿಯ ಮೇರೆಗೆ ಮುರುಡೇಶ್ವರ ಠಾಣೆ ಪಿಎಸೈ ಲೋಕನಾಥ ರಾಥೋಡ,ದಾಳಿ ನಡೆಸಿ,ದಾಳಿ ಯಲ್ಲಿ ನಗದು ಹಾಗೂ ಇತರೆ ವಶಪಡಿಸಿಕೊಂಡಿದ್ದಾರೆ ಈ ಸಂಬAಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 78(3) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. - [ಹನೀಪಾಬಾದ್‌ನಲ್ಲಿ ಓ.ಸಿ ಮಟಕಾ ಆಟ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ](https://bhavanatv.com/2025/1864/): ಭಟ್ಕಳ: ಹನೀಪಾಬಾದ್ ಪೆಟ್ರೋಲ್ ಪಂಪ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದ ಇಬ್ಬರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿಗಳಾದ ಮಂಜುನಾಥ ತಂದೆ ನಾರಾಯಣ ನಾಯ್ಕ ,ಕೋಟೇಬಾಗಿಲು ಶಿರಾಲಿ ಹಾಗೂ ರೋಹಿದಾಸ ತಂದೆ ಭೈರಪ್ಪ ನಾಯ್ಕ,ಚಿತ್ರಾಮರ,ಇವರು ಓ.ಸಿ ಮಟಕಾದಿಂದ ಸಂಗ್ರಹಿಸಿದ ಹಣವನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರೆAಬ ಗುಪ್ತ ಮಾಹಿತಿಯ ಆಧಾರದಲ್ಲಿ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ದಾಳಿ ನಡೆಸಿದ್ದಾರೆ. ನಗದು ಹಾಗೂ ಇತರೆ ವಸ್ತುಗಳು ವಶಕ್ಕೆ ಪಡೆದ್ದು ಕೊಂಡಿದ್ದಾರೆ. - [ಶಿರಾಲಿ ಅರಣ್ಯ ಪ್ರದೇಶದಲ್ಲೇ ಅಂದರ್ ಬಾಹರ್ ಜೂಜಾಟ ಭಟ್ಕಳ ಗ್ರಾಮೀಣ ಪೊಲೀಸರ ದಾಳಿ](https://bhavanatv.com/2025/1861/): ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮದ ತೆಕ್ಕಿನಗದ್ದೆ ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಜೂಜಾಟ ನಡೆಯುತ್ತಿರುವ ಮಾಹಿತಿ ಮೇರೆಗೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿತರನ್ನು ಬಂಧಿಸಿದ್ದಾರೆ. ದಾಳಿಯ ವೇಳೆ ರೂ 5.05 ಲಕ್ಷ ಮೌಲ್ಯದ ಸ್ವತ್ತುಗಳೊಂದಿಗೆ ಸೇರಿದಂತೆ ಜೂಜಾಟಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಏಳು ಮಂದಿ ಆರೋಪಿತರು ಸ್ಥಳದಿಂದ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಬಂಧಿತರಾದವರನ್ನು ಹೊನ್ನಾವರ ಮೂಲದ ಅಕ್ಷಯ (ತಂದೆ ರಮೇಶ್ ಮಡಿವಾಳ), ಸುಬ್ರಾಯ (ತಂದೆ ಕೃಷ್ಣ ಗೌಡ) ಹಾಗೂ ಅಜಿತ (ತಂದೆ ಜಟ್ಟಿ ಗೌಡ) ಎಂದು ಗುರುತಿಸಲಾಗಿದೆ.ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಅಂಗಾರೆಡ್ಡಿ ಅವರು ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದಿದೆ. - [ಗೃಹೋಪಯೋಗಿ ವಸ್ತುಗಳ ಹೆಸರಿನಲ್ಲಿ ಜನರಿಗೆ ವಂಚನೆ, 180 ಮಂದಿ ಮೋಸಕ್ಕೆ ಒಳಗಾದರೆಂದು ಎಸ್‌ಪಿ ದೀಪನ್ ಎಂ.ಎನ್. ಮಾಹಿತಿ](https://bhavanatv.com/2025/1857/): ಭಟ್ಕಳ: ಕಡಿಮೆ ಬೆಲೆಗೆ ಗೃಹೋಪಯೋಗಿ ವಸ್ತುಗಳು,10 – 40 ಶೇಕಡಾ ರಿಯಾಯಿತಿ! ಈ ಆಮಿಷದ ನುಡಿಗೆ ಜನರು ನಂಬಿ ಹಣ ಪಾವತಿಸಿದರೂ, ವಸ್ತು ಸಿಗದೇ ಈಗ ನಷ್ಟದಲ್ಲಿ ತಲೆ ಹಿಡಿದುಕೊಂಡಿದ್ದಾರೆ. ಜನರನ್ನು ಈ ರೀತಿಯಲ್ಲಿ ಮೋಸ ಮಾಡಿದ ಗ್ಲೋಬಲ್ ಎಂಟರ್‌ಪ್ರೈಸಸ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಕಾರ್‌ಸ್ಟ್ರೀಟ್‌ನ ಮಿಸ್ಥಾ ಟವರ್ ಎದುರಿನ ಕಟ್ಟಡದಲ್ಲಿ ಮೂವರು ವ್ಯಕ್ತಿಗಳು ಕಟ್ಟಡ ಮಾಲಕರ ಸಹಕಾರದಲ್ಲಿ ಅಂಗಡಿ ಆರಂಭಿಸಿದ್ದರು. ಜನರನ್ನು ರಿಯಾಯಿತಿ ಆಮಿಷದ ಮೂಲಕ ಸೆಳೆಯುವ ಇವರು ಮೊತ್ತವನ್ನು ಮುಂಗಡವಾಗಿ ಪಡೆದು ವಸ್ತು ನೀಡದೇ ಅಂಗಡಿ ಬಂದ ಮಾಡಿ ಪರಾರಿಯಾಗಿದ್ದಾರೆ. ಪೀಡಿತರಲ್ಲಿ ಒಬ್ಬರಾದ ಮೊಹಮ್ಮದ್ ಸವೂದ್ (ತಂದೆ ಹಸನ್ ಶಬ್ಧರ್ ಮೋತ್ಯಶಾಮ್) ಅವರು ಭಟ್ಕಳ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ?84,270 ಮೊತ್ತ ಪಾವತಿಸಿ ವಸ್ತು ಬುಕ್ ಮಾಡಿಕೊಂಡಿದ್ದರೂ ಸಾಮಾನು ಸಿಕ್ಕಿಲ್ಲವೆಂದು ತಿಳಿಸಿದ್ದಾರೆ. ಇದೇ ರೀತಿಯಾಗಿ ಇನ್ನೂ ಹಲವರಿಂದ ಹಣ ಪಡೆದು ವಂಚನೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಮಾತನಾಡಿದ ಉತ್ತರ ಕನ್ನಡ ಜಿಲ್ಲಾ... - [ಸುರಕ್ಷಿತ ಚಾಲನೆಗೆ ಭಟ್ಕಳದ ರಾಮಚಂದ್ರ ನಾಯ್ಕರಿಗೆ ಬೆಳ್ಳಿ ಪದಕ ಗೌರವ](https://bhavanatv.com/2025/1853/): ಐದು ವರ್ಷಗಳಿಂದ ಅಪಘಾತರಹಿತ ಸೇವೆ ವಾ.ಕ.ರ.ಸಾ.ಸಂ. ವತಿಯಿಂದ ಸುರಕ್ಷಾ ಚಾಲಕ ಪ್ರಶಸ್ತಿ ಭಟ್ಕಳ: ಸುರಕ್ಷಿತ ಚಾಲನೆಯ ಮಾದರಿಯಾಗಿರುವ ಭಟ್ಕಳದ ಚಾಲಕ ರಾಮಚಂದ್ರ ಎಲ್. ನಾಯ್ಕ ಅವರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾ.ಕ.ರ.ಸಾ.ಸಂ) ವತಿಯಿಂದ 2022-23ನೇ ಸಾಲಿನ ಸುರಕ್ಷಾ ಚಾಲಕ ಬೆಳ್ಳಿ ಪದಕ ಗೌರವ ಕ್ಕೆ ಆಯ್ಕೆ ಆಗಿದ್ದಾರೆ. ಶಿರಸಿ ಘಟಕದ ಭಟ್ಕಳ ಡಿಪೋಗೆ ಸೇರಿದ ರಾಮಚಂದ್ರ ನಾಯ್ಕ ಅವರು ಭಟ್ಕಳ ತಾಲ್ಲೂಕಿನ ತಲಾನ ಕಸಲಗದ್ದೆ ನವರು ಆಗಿದ್ದುಇವರು ಕಳೆದ ಐದು ವರ್ಷಗಳಿಂದ ಯಾವುದೇ ಅಪಘಾತವಿಲ್ಲದೆ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಮಳೆಗಾಲದ ರಾತ್ರಿ, ಕಷ್ಟದ ಹಾದಿ, ದಟ್ಟ ಸಂಚಾರ ಯಾವ ಸವಾಲಿನಲ್ಲೂ ಕರ್ತವ್ಯದಿಂದ ಹಿಂದೆ ಸರಿಯದೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಗಮ್ಯಸ್ಥಾನಕ್ಕೆ ತಲುಪಿಸುತ್ತಿರುವುದಕ್ಕಾಗಿ ಸಂಸ್ಥೆಯು ಈ ಗೌರವಕ್ಕೆ ಆಯ್ಕೆ ಮಾಡಿದೆ. ನಾಳೆ(ಶುಕ್ರವಾರ) ನಡೆಯುವ ಹುಬ್ಬಳ್ಳಿ ಧಾರವಾಡದ ನೂತನ ಬಸ್ ನಿಲ್ದಾಣಗಳ ಉದ್ಘಾಟನಾ ಕಾರ್ಯಕ್ರಮದ ವೇಳೆ ಈ ಪದಕ ಪ್ರದಾನ ನಡೆಯಲಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ... - [ಸರ್ಕಾರದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ](https://bhavanatv.com/2025/1848/): ಹೊನ್ನಾವರ : ಕೇಂದ್ರ ಸರ್ಕಾರದ ಯುವಜನ ಮತ್ತು ಕ್ರೀಡಾ ಸಚಿವಾಲಯ ಮೈ ಭಾರತ ಕೇಂದ್ರ ಉತ್ತರಕನ್ನಡ, ಜಿಲ್ಲಾಡಳಿತ ಮತ್ತು ತಾಲೂಕ ಆಡಳಿತ ಆಯೋಜಿಸಿದ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ವೇದಿಕೆಯ ಮೇಲೆ ಇರಬಹುದು ಎನ್ನುವ ನಿಯಮವಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರೊರ್ವರು ವೇದಿಕೆಯ ಮೇಲೆ ಎದುರು ಸಾಲಿನಲ್ಲಿ ಕುಳಿತಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತೆ ಕಾವ್ಯರಾಣಿ, ತಹಶೀಲ್ದಾರ ಪ್ರವೀಣ ಕರಾಂಡೆ, ಜನಪ್ರತಿನಿಧಿಗಳಾದ ಸಂಸದರು, ಶಾಸಕರು ಪ.ಪಂ.ಸದಸ್ಯರು, ಗ್ರಾ.ಪಂ.ಸದಸ್ಯರು ಇದ್ದರು. ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ವೇದಿಕೆಯ ಮೇಲೆ ಇರುವುದು ಕಾನೂನು ಪ್ರಕಾರ ನಿಯಮ ಉಲ್ಲಂಘನೆಯಾಗಿದ್ದು, ಸಾರ್ವಜನಿಕ ವಲಯದಿಂದಲೂ ಆಕ್ಷೇಪ ವ್ಯಕ್ತವಾಗುತ್ತಿದ್ದು, ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗುತ್ತಿದೆ. ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ - [ರಾಷ್ಟ್ರಗೀತೆಯನ್ನು ಬ್ರೀಟಿಷ್ ಅಧಿಕಾರಿಗಳ ಸ್ವಾಗತಗೀತೆ ಎಂದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ](https://bhavanatv.com/2025/1845/): ಹೊನ್ನಾವರ : 150ನೇ ವರ್ಷದ ಸಂಭ್ರಮದಲ್ಲಿ ವಂದೆಮಾತರA ಗೀತೆ ಇದ್ದು, ಇದಕ್ಕೆ ಕೊಡುವ ಪ್ರಾಮುಖ್ಯತೆ ಇನ್ನಷ್ಟು ಬಲವಾಗಬೇಕು. ದೇಶದ ರಾಷ್ಟ್ರಗೀತೆಗೆ ಸರಿಸಮಾನವಾಗಿ ವಂದೆಮಾತರA ಗೀತೆ ಇಂದು ಇದೆ. ಇತಿಹಾಸ ಮತ್ತೆ ಕೆದುಕಲು ಹೋಗುವುದಿಲ್ಲ ಎನ್ನುತ್ತಾ ಸಂಸದರಾದ ಕಾಗೇರಿಯವರು, ವಂದೆಮಾತರA ರಾಷ್ಟ್ರಗೀತೆ ಆಗುಬೇಕು ಎನ್ನುವ ಕೂಗು ಬಲವಾಗಿ ಇತ್ತು. ಆದರೆ ಆವತ್ತಿನ ಪೂರ್ವಜರು ವಂದೆ ಮಾತರಂ ಇರಲಿ, ಬ್ರೀಟಿಷ್ ಅಧಿಕಾರಿಗಳನ್ನು ಸ್ವಾಗತಿಸಲು ಇರುವ ಜನಗಮನವು ಇರಲಿ ಎಂದರು. ಆ ಕಾರಣದಿಂದ ಇಂದು ನಾವು ರಾಷ್ಟ್ರಗೀತೆ ಎಂದು ಪಾಲಿಸುತ್ತಿದ್ದೇವೆ. ಸ್ವಾತಂತ್ರ‍್ಯ ಹೋರಾಟಕ್ಕೆ ವಂದೆಮಾತರA ಕೊಟ್ಟ ಕೊಡುಗೆ ಪ್ರೇರಣೆಯಾಗಿದೆ. 150ನೇ ವರ್ಷದ ಸಂಭ್ರಮದಲ್ಲಿರುವ ಈ ಗೀತೆಯು ಕಂಠ, ಕಂಠದಲ್ಲಿ ಪ್ರತಿಧ್ವನಿಸಬೇಕು ಎಂದು ಕರೆ ನೀಡಿದರು. - [ಸರದಾರ್ ವಲ್ಲಭಭಾಯ್ ಪಟೇಲ ಅವರ 150 ನೇ ಜನ್ಮ ದಿನದ ಅಂಗವಾಗಿ ಬುಧವಾರ ನಡೆದ ಏಕತಾ ನಡಿಗೆ ಕಾರ್ಯಕ್ರಮ](https://bhavanatv.com/2025/1840/): ಸ್ವಾತಂತ್ರ‍್ಯ ಪೂರ್ವದಲ್ಲಿ, ಸ್ವಾತಂತ್ರ‍್ಯ ಹೋರಾಟದಲ್ಲಿ, ಸ್ವಾತಂತ್ರ‍್ಯಾನAತರದ ಭಾರತದ ನಿರ್ಮಾಣದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲರ ಕೊಡುಗೆ ಸದಾ ಸ್ಮರಿಸುವಂತದಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಹೊನ್ನಾವರ; ಪಟ್ಟಣದ ಪೊಲೀಸ್ ಪೆರೇಡ್ ಮೈದಾನದಲ್ಲಿ ವಿವಿಧ ಇಲಾಖೆಗಳು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸರದಾರ್ ವಲ್ಲಭಭಾಯ್ ಪಟೇಲ ಅವರ 150 ನೇ ಜನ್ಮ ದಿನದ ಅಂಗವಾಗಿ ಬುಧವಾರ ನಡೆದ ಏಕತಾ ನಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಂಗಾಲವನ್ನು ವಿಭಜಿಸಿದ ಬ್ರಿಟೀಷ ಶಕ್ತಿಯ ವಿರುದ್ದ ಹೋರಾಡಿ ಒಡೆದು ಹೋಗಿದ್ದ ಬಂಗಾಲವನ್ನು ಒಂದು ಮಾಡುವುದಕ್ಕೆ ಸ್ಪೂರ್ತಿಯ ಕೇಂದ್ರವಾಗಿದ್ದುದು ವಂದೇ ಮಾತರಂ. ಸ್ವಾತಂತ್ರ‍್ಯ ಹೋರಾಟದಲ್ಲಿ ವಂದೇ ಮಾತರಂ ಮೊಳಗಿತ್ತು. ಸ್ವಾತಂತ್ರ‍್ಯದ ನಂತರವೂ ವಂದೇ ಮೊಳಗುತ್ತಿದೆ. ವಂದೇ ಮಾತರಂ, ಭಾರತ ಮಾತಾ ಕೀ ಜೈ ನಮ್ಮ ಉಸಿರಿನ ಭಾಗವಾಗಬೇಕು ಎಂದರು. ಸ್ವಾತAತ್ರ‍್ಯದ ಕೆಲವು ದಶಕಗಳು ಗುಲಾಮಿತನದ ಮಾನಸಿಕತೆಯನ್ನು ದೂರ ಮಾಡುವಂಥ ಆಡಳಿತವನ್ನು ಕೊಡಲಿಲ್ಲ. ಈಗ ನರೇಂದ್ರ ಮೋದಿಯವರು ಕಳೆದ ಹತ್ತು ಹನ್ನೊಂದು ವರ್ಷಗಳಲ್ಲಿ ದೇಶ ಮೊದಲು ದೇಶಕ್ಕಾಗಿ ನಾವು... - [ಭಟ್ಕಳ ಹವ್ಯಕ ವಲಯದಲ್ಲಿ ಪಂಚ ವಲಯೋತ್ಸವ ನಡೆಸಲು ತೀರ್ಮಾನ.](https://bhavanatv.com/2025/1836/): ಭಟ್ಕಳ: ಅವಿಚ್ಛಿನ್ನ ಪರಂಪರೆಯ ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಸದಾಶಯಗಳಂತೆ ಭಟ್ಕಳ ಹವ್ಯಕ ವಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಪಂಚ ವಲಯೋತ್ಸವ ನಡೆಸಲು ತೀರ್ಮಾನಿಸಲಾಯಿತು. ಇತ್ತೀಚೆಗೆ ಬಸ್ತಿಮಕ್ಕಿಯಲ್ಲಿರುವ ಆಚಾರ್ಯಭವನದಲ್ಲಿ ಭಟ್ಕಳ ಹವ್ಯಕ ವಲಯದ ಅಧ್ಯಕ್ಷ ಎಂ.ವಿ.ಹೆಗಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಂಚ ವಲಯೋತ್ಸವದ ಆಮಂತ್ರಣ ಪತ್ರಿಕೆಯನ್ನು ವಲಯದ ವೈವಾಹಿಕ ವಿಭಾಗದ ಪ್ರಧಾನ ಕೃಷ್ಣಾನಂದ ಭಟ್ಟ ಬಲ್ಸೆ ಬಿಡುಗಡೆಗೊಳಿಸಿದರು. ಪ್ರಥಮ ಕಾರ್ಯಕ್ರಮ ನ.16ರಂದು ರವಿವಾರ ಬಸ್ತಿಮಕ್ಕಿಯ ಆಚಾರ್ಯ ಭವನದಲ್ಲಿ ಕುಂಕುಮಾರ್ಚನೆ, ಸಾಮೂಹಿಕ ಗುರುಪಾದುಕಾ ಸ್ತೋತ್ರ ಪಠಣ ಹಾಗೂ ಸಂಸ್ಕಾರ-ಸAವಾದ ಕಾರ್ಯಕ್ರಮ ನಡೆಯಲಿದೆ. ಕೃಷ್ಣಾನಂದ ಭಟ್ಟ ಬಲ್ಸೆ ಅವರ ಆತಿಥ್ಯದಲ್ಲಿ ನಡೆಯಲಿದೆ. ಎರಡನೇ ಕಾರ್ಯಕ್ರಮ ಡಿ.7ರಂದು ರವಿವಾರ ಬಸ್ತಿಮಕ್ಕಿ ಆಚಾರ್ಯ ಭವನದಲ್ಲಿ ಮಾತೃ ವಿಭಾಗದಿಂದ ನಡೆಯಲಿದ್ದು ಕುಂಕುಮಾರ್ಚನೆ, ಸಾಮೂಹಿಕ ಗುರುಪಾದುಕಾ ಸ್ತೋತ್ರ ಪಠಣ ನಡೆಯಲಿದೆ. ಆತಿಥ್ಯವನ್ನು ಗಣಪತಿ ಪರಮೇಶ್ವರ ಭಟ್ಟ ಮೊಮ್ಮನಕೆರೆ ಹಾಗೂ ವಲಯ ಮಾತೆಯರು ವಹಿಸಲಿದ್ದಾರೆ. ಮೂರನೇ ಕಾರ್ಯಕ್ರಮ ಡಿ.28ರಂದು ರವಿವಾರ ಕಡವಿನಕಟ್ಟೆ... - [ಸರಕಾರಿ ಪ್ರೌಢಶಾಲೆ ತೆಂಗಿನಗುAಡಿಯ ವಿದ್ಯಾರ್ಥಿಗಳು ಕ್ರೀಡಾ ವಿಭಾಗದಲ್ಲಿ ಉತ್ತಮ ಸಾಧನೆ](https://bhavanatv.com/2025/1833/): ಭಟ್ಕಳ: ಸರಕಾರಿ ಪ್ರೌಢಶಾಲೆ ತೆಂಗಿನಗುAಡಿಯ ವಿದ್ಯಾರ್ಥಿಗಳು ಕ್ರೀಡಾ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿ ಇಬ್ಬರು ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾರವಾರದಲ್ಲಿ ನಡೆದ ಜಿಲ್ಲಾಮಟ್ಟದ 17 ವಯೋಮಾನದ ಒಳಗಿನ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಹರ್ಷಿತ ವಸಂತ ದೇವಾಡಿಗ ಈಕೆ 100 ಮೀಟರ್, 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, 400 ಮೀಟರ್ ಓಟದಲ್ಲಿ ದ್ವಿತಿಯ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ. 100 ಮೀಟರ್ ಹರ್ಡಲ್ಸ್ನಲ್ಲಿ ಹೇಮಲತಾ ಮಾದೇವ ಗಾವಡಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಉತ್ತಮ ಕ್ರೀಡಾ ಸಾಧನೆ ತೋರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾಯ ಸಂತೋಷ ಶ್ರೇಷ್ಠಿ, ತರಬೇತಿ ನೀಡಿದ ಶಿಕ್ಷಕ ನಾಗರಾಜ್ ಎನ್.ಎಸ್, ಸಹಕರಿಸಿದ ವಿನಾಯಕ ಪಟಗಾರ, ಗೋವಿಂದ ಪಟಗಾರ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಮೋಹನ್ ದೇವಾಡಿಗ ಅಭಿನಂದಿಸಿದ್ದಾರೆ. - [ಗೃಹೋಪಯೋಗಿ ವಸ್ತುಗಳನ್ನು ಅರ್ಧ ಬೆಲೆಗೆ ನೀಡುತ್ತೇವೆ ಎಂದು ನಂಬಿಸಿ ಮುಂಗಡ ಹಣ ಪಡೆದು ಪರಾರಿ](https://bhavanatv.com/2025/1830/): ಭಟ್ಕಳ: ನೂರಾರು ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಮುಂಗಡ ಹಣ ಪಡೆದು ವಸ್ತು ನೀಡದೆ ಅಂಗಡಿ ಮುಚ್ಚಿ ಪರಾರಿಯಾದ ಘಟನೆ ಭಟ್ಕಳ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಪಟ್ಟಣದ ರಥಬೀದಿಯ ಯೂನಿಯನ್ ಬ್ಯಾಂಕ್ ಎದುರಿನ ಕಾಂಪ್ಲೆಕ್ಸ್ನಲ್ಲಿ ಗ್ಲೋಬಲ್ ಎಂಟರ್‌ಪ್ರೈಸಸ್ (ಅಥವಾ ಗ್ಲೋಬಲ್ ಇಂಟರ್ನ್ಯಾಷನಲ್) ಎಂಬ ಹೆಸರಿನಲ್ಲಿ ಗೃಹೋಪಯೋಗಿ ಮಳಿಗೆ ಆರಂಭಿಸಿದ್ದ ತಮಿಳುನಾಡು ಮೂಲದ ಉದಯಕುಮಾರ್ ರೇಂಗರಾಜು ಎಂಬಾತ ಈ ವಂಚನೆ ನಡೆಸಿದ್ದಾನೆಂದು ತಿಳಿದುಬಂದಿದೆ. ಸುಮಾರು 25 ದಿನಗಳ ಹಿಂದೆ ಅಂಗಡಿ ಆರಂಭಿಸಿದ ಆತ, ಸ್ಥಳೀಯ ಆರು ಮಂದಿ ಯುವಕ ಯುವತಿಯರನ್ನು ಕೆಲಸಕ್ಕೆ ನೇಮಿಸಿಕೊಂಡು ಮಾರುಕಟ್ಟೆ ದರಕ್ಕಿಂತ ಅರ್ಧ ಬೆಲೆಗೆ ವಸ್ತು ನೀಡುವುದಾಗಿ ಪ್ರಚಾರ ನಡೆಸಿ ಜನರನ್ನು ಸೆಳೆದಿದ್ದ. ಆರಂಭದಲ್ಲಿ ಬಂದ ಕೆಲ ಗ್ರಾಹಕರಿಗೆ ಹಣ ಪಡೆದ ನಾಲ್ಕೇ ದಿನಗಳಲ್ಲಿ ಟಿವಿ, ಫ್ರಿಜ್, ಎಸಿ ಸೇರಿದಂತೆ ಕೆಲವು ವಸ್ತುಗಳನ್ನು ನೀಡಿದ ಕಾರಣ ಜನರಲ್ಲಿ ನಂಬಿಕೆ ಮೂಡಿತ್ತು. ನಂತರ ಆತ ಮನೆಗೆ ಮನೆಗೆ ತೆರಳಿ ಭಿತ್ತಿಪತ್ರ ಹಂಚಿ ಆಕರ್ಷಕ ಆಫರ್‌ಗಳ ಪ್ರಚಾರ ನಡೆಸಿದ.ಅಲ್ಪಾವಧಿಯಲ್ಲಿ ನೂರಾರು ಜನರು ಬಲೆಗೆ... - [ಕದಂಬರ ನಾಡಿನಲ್ಲಿ ಕನ್ನಡದ ವೈಭವ -ಉಮೇಶ ಮುಂಡಳ್ಳಿ ಅವರಿಗೆ ಕದಂಬ ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿಗೆ ಆಯ್ಕೆ](https://bhavanatv.com/2025/1826/): ಭಟ್ಕಳ– ಕದಂಬ ಕನ್ನಡ ಸೇನೆ ಕರ್ನಾಟಕ ಇವರು ಕೊಡಮಾಡುವ “ಕದಂಬ ಕನ್ನಡ ಸಾಹಿತ್ಯ ರತ್ನ 2025 ” ಪ್ರಶಸ್ತಿಗೆ ಜಿಲ್ಲೆಯ ಭಾವಕವಿ ಸುಗಮ ಸಂಗೀತ ಗಾಯಕ ಸ್ವರ ಸಂಯೋಜಕ ಉಮೇಶ ಮುಂಡಳ್ಳಿಯವರನ್ನು ಆಯ್ಕೆ ಮಾಡಲಾಗಿದೆ. ಕನ್ನಡದ ಮೊಟ್ಟ ಮೊದಲ ರಾಜ ಮನೆತನವಾದ ಕದಂಬರ ರಾಜಧಾನಿ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ನ.10 ರಂದು ಅದ್ದೂರಿಯಾಗಿ ಆಯೋಜಿಸಿರುವ “ಕದಂಬರ ನಾಡಿನಲ್ಲಿ ಕನ್ನಡದ ವೈಭವ” ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದ ಕೊಡುಗೆಗಾಗಿ ಉಮೇಶ ಮುಂಡಳ್ಳಿ ಅವರನ್ನು ಆಯ್ಕೆ ಮಾಡಿರುವುದಾಗಿ ಕದಂಬ ಸೇನೆಯ ಸಂಸ್ಥಾಪಕ ಅಧ್ಯಕ್ಷ ಕದಂಬ ನಾ.ಅಂಬರೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಕಳೆದ ಇಪ್ಪತೈದು ವರ್ಷಗಳಿಂದ ಸಾಹಿತ್ಯ ಮತ್ತು ಸಂಗೀತ ಸೇವೆಯನ್ನು ಜೊತೆಜೊತೆಗೆ ನಡೆಸಿಕೊಂಡು ಬರುತ್ತಿರುವ ಮುಂಡಳ್ಳಿ ಅವರು ಮೌನಗೀತೆ, ಭಾವಸುಮ, ಕರುನಾಡ ಕುಡಿಗಳು,ನಾನೂ ಶಿಲ್ಪವಾಗಬೇಕು, ಹಾಗೂ ತಿಂಗಳ ಬೆಳಕು ( ಹನಿಕವನ) ಎನ್ನುವ ಕವನ ಸಂಕಲನಗಳನ್ನು, ಬೆಂಕಿ ಬಿದ್ದಿದೆ ಹೊಳೆಗೆ ಮಕ್ಕಳ ಕಥಾ ಸಂಕಲನ, ಉತ್ತರ... - [ರಾಷ್ಟ್ರಖ್ಯಾತಿಯ ಪರಿಸರ ಹೋರಾಟಗಾರ್ತಿ ಮೇಧಾಪಾಟ್ಕರ್ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ನೇತೃತ್ವದಲ್ಲಿ ಕಾಸರಕೋಡ ಬಂದರು ವಿರೋದಿ ಹೋರಾಟ ಪ್ರಮುಖರ ನಿಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೇಟಿ.](https://bhavanatv.com/2025/1823/): ಬೆಂಗಳೂರು ; ಮುಖ್ಯಮಂತ್ರಿಯವರ ಕಛೇರಿಯಲ್ಲಿ ಭೇಟಿಮಾಡಿ ವಿವಾದಿತ ಕಾಸರಕೋಡ ವಾಣಿಜ್ಯ ಬಂದರುನಿರ್ಮಾಣ ಯೋಜನೆಯನ್ನು ಕೈಬಿಡಲು ಮತ್ತು ಅಲ್ಲಿನ ಮೀನುಗಾರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಒತ್ತಾಯಪಡಿಸಿದೆ. ಅವರು ಈ ಸಂದರ್ಭದಲ್ಲಿ ಸ್ವತಂತ್ರ ತನಿಖಾ ಸಮಿತಿಯ ವರದಿಯ ಶಿಫಾರಸು ಸಹಿತ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿ ಮುಖ್ಯಮಂತ್ರಿಗಳ ಮದ್ಯಪ್ರವೇಶಕ್ಕೆ ವಿನಂತಿಸಿದೆ. ನಂತರ ಮುಖ್ಯಕಾರ್ಯದರ್ಶಿಗಳನ್ನು ಭೇಟಿ ಮಾಡಿ ತಮ್ಮ ಅಹವಾಲನ್ನು ದಾಖಲಿಸಿದ ವಿದ್ಯಮಾನ ವರದಿಯಾಗಿದೆ. ಹೊನ್ನಾವರವು ಶರಾವತಿ ನದಿ ಮತ್ತು ಅರಬ್ಬಿ ಸಮುದ್ರದ ನಡುವೆ ಇದ್ದು, ಆಲಿವ್ ರಿಡ್ಲೆ ಆಮೆಗಳಂತಹ ಅಪರೂಪದ ಜೀವಿಗಳ ನಿವಾಸ ಸ್ಥಾನವಾಗಿದೆ. ಇಲ್ಲಿನ ಜನರ ಬದುಕು ಸಾಂಪ್ರದಾಯಿಕ ಮೀನುಗಾರಿಕೆ ಆರ್ಥಿಕತೆಯನ್ನು ಅವಲಂಬಿಸಿದೆ.2010 ರಲ್ಲಿ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ (ಊPPಐ) ಕಂಪನಿಗೆ ವಾಣಿಜ್ಯ ಬಂದರು ನಿರ್ಮಿಸಲು ಅನುಮತಿ ನೀಡಿದಾಗಿನಿಂದ ಈ ಪ್ರದೇಶದಲ್ಲಿ ಆತಂಕ ಮತ್ತು ವಿರೋಧ ಹೆಚ್ಚಿದೆ. ಈ ಯೋಜನೆಯು ಐದು ಮೀನುಗಾರಿಕೆ ಗ್ರಾಮಗಳಿಗೆ ಸೇರಿದ 44 ಹೆಕ್ಟೇರ್ ಭೂಮಿಯಲ್ಲಿ ಸಮುದಾಯದ ಒಪ್ಪಿಗೆ ಇಲ್ಲದೆ ಮತ್ತು ಸಂವಿಧಾನಾತ್ಮಕ ಪರಿಸರ ನಿಯಮಗಳನ್ನು ಉಲ್ಲಂಘಿಸಿ... - [ಕಲಾಸಿರಿ ಪ್ರಶಸ್ತಿಯು ಬದುಕಿನ ಸಾರ್ಥಕತೆಯ ಜ್ಞಾನದ ಬೆಳಕು ಬೆಳಗಲು ಸಾಧ್ಯ. :ಪಿ. ಆರ್. ನಾಯ್ಕ.](https://bhavanatv.com/2025/1819/): ಭಟ್ಕಳ : ಒಂದು ಹಣತೆಯಿಂದ ಹಲವು ಹಣತೆಗಳು ಬೆಳಗುವಂತೆ, ಕಲಾಸಿರಿಯು ಬದುಕಿನ ಸಾರ್ಥಕತೆಯ ಜ್ಞಾನದ ಬೆಳಕು ಇತರರ ಬದುಕಿನಲ್ಲೂ ಸದಾ ಬೆಳಗಲು ಸಾಧ್ಯ ಎಂದು ಕಲಾಸಿರಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ. ಆರ್. ನಾಯ್ಕ ಹೇಳಿದರು. ಇತ್ತೀಚೆಗೆ ಶಿರಾಲಿ, ಚಿತ್ರಾಪುರದ ಸಾಹಿತಿ ಶ್ರೀಧರ್ ಶೇಟ್ ರವರ ಮನೆ ‘ಕಲಾಸಿರಿ’ಯಲ್ಲಿ ಜಿಲ್ಲಾ ಮತ್ತು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಲಾಸಿರಿ ಪ್ರತಿಷ್ಠಾನದಿಂದ ನಡೆದ ‘ಕಲಾಸಿರಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಕಲಾಸಿರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಓರ್ವ ಶಿಕ್ಷಕ ದಂಪತಿಗಳು ಇನ್ನೊಂದು ಶಿಕ್ಷಕನಿಗೆ ಕಲಾಸಿರಿ ಪ್ರಶಸ್ತಿ ನೀಡಿ ಗೌರವಿಸಿರುವುದು ಅವರ ವಿಶಾಲ ಹೃದಯವಂತಿಕೆಗೆ ಸಾಕ್ಷಿ ಎಂದರು. ಸತ್ಯಕ್ಕೆ ವಿವಾದದ ಅಗತ್ಯವಿಲ್ಲ. ಅದು ಸ್ವಯಂಪ್ರಕಾಶನ. ಕಲಾಸಿರಿ ಶ್ರೀಧರ್ ಶೇಟ್ ರವರ ಸ್ವಯಂ ಪ್ರೇರಿತ ಸಂಘಟನಾ ಶಕ್ತಿಯ ಪ್ರತೀಕದಂತೆ. ಇಂತಹ ನಿರ್ಮಲ ಜ್ಯೋತಿ ನಾಡಿನ ತುಂಬೆಲ್ಲ ಪಸರಿಸಲಿ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಸಾಹಿತಿ ಶಂಭು ಹೆಗಡೆ ಮಾತನಾಡಿ, ಮನೆಯಂಗಳದಲ್ಲರಳಿದ ಕಲಾಸಿರಿ ನಾಡಿನ ತುಂಬೆಲ್ಲ ತನ್ನ ಛಾಪು... - [ಸೌತ್ ಕೆನರಾ ಫೋಟೋಗ್ರಾಫರ್ ಅಶೋಷಿಯನ್ ವತಿಯಿಂದ 70ನೇ ವರ್ಷದ ಕನ್ನಡ ರಾಜ್ಯೋತ್ಸವ](https://bhavanatv.com/2025/1816/): ಕಾರ್ಕಳ,; ಕಾರ್ಕಳ ವಲಯದ ವತಿಯಿಂದ ಕಾರ್ಕಳ ತಾಲೂಕಿನ ಮುಟ್ಲುಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ 70ನೇ ವರ್ಷದ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ವಲಯದ ಅಧ್ಯಕ್ಷರಾದ ಪ್ರಮೋದ್ ಪೈ ಇವರ ಅಧ್ಯಕ್ಷತೆಯಲ್ಲಿ ಬಹಳ ವಿಜ್ರಂಭಣೆಯಿAದ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆಯ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಅತಿಥಿಗಳಿಂದ ಪುಷ್ಪಾರ್ಚನೆ ಮಾಡಲಾಯಿತು. ಮುಖ್ಯ ಅತಿಥಿ ಸಾಮಾಜಿಕ ಕಾರ್ಯಕರ್ತ ಸಮೃದ್ ಶೆಟ್ಟಿ ಮಾತನಾಡಿದ ಅವರು ನಾವು ಕನ್ನಡ ಶಾಲೆಗಳನ್ನು ಉಳಿಸಿದರೆ ಕನ್ನಡಕ್ಕೆ ಉಳಿಗಾಲವಿದೆ. ನಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಿ ಕನ್ನಡವನ್ನು ಉಳಿಸಬೇಕು ಹಾಗೂ ಬೆಳೆಸಬೇಕು ಎಂದು ಹೇಳಿದರು. ಮುಖ್ಯ ಶಿಕ್ಷಕಿ ಶ್ರೀಮತಿ ನಂದಿನಿ ಕುಮಾರಿ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ವಿವರಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ನಂತರ ಮಾತನಾಡಿದ ನಿವೃತ್ತ ಶಾಲಾ ಮುಖ್ಯ ಶಿಕ್ಷಕರಾದ ಚಂದ್ರಕಾAತ್ ಅಂಡರು ಮಾತನಾಡಿದ ಅವರು ಇಂಥ ಕುಗ್ರಾಮದಲ್ಲಿರುವ ಏಕೈಕ ಕನ್ನಡ ಶಾಲೆಯಲ್ಲಿ ಫೋಟೋಗ್ರಾಫರ್ಸ್ ಎಸೋಸಿಯೇಷನ್ ಅವರು ಕನ್ನಡ ರಾಜ್ಯೋತ್ಸವವನ್ನು ಇಷ್ಟು ಅದ್ದೂರಿಯಾಗಿ... - [ಮುಂಬೈನಿ0ದ ಭಟ್ಕಳಕ್ಕೆ ಅಕ್ರಮ ನಗದು ಚಿನ್ನ ಸಾಗಾಟ ಪತ್ತೆ!](https://bhavanatv.com/2025/1813/): ಖಚಿತ ಮಾಹಿತಿಯ ಮೇರೆಗೆ ಪೊಲೀಸರ ದಾಳಿ ರೂ, 50 ಲಕ್ಷ ರೂ. ನಗದು,401 ಗ್ರಾಂ ಚಿನ್ನ ವಶ ಭಟ್ಕಳ: ಖಚಿತ ಮಾಹಿತಿಯ ಮೇರೆಗೆ ಭಟ್ಕಳ ಶಹರ ಠಾಣೆ ಪೊಲೀಸರು ವಿ.ಆರ್.ಎಲ್ ಖಾಸಗಿ ಬಸ್‌ನಲ್ಲಿ ನಡೆದ ಅಚ್ಚರಿಯ ಕಳ್ಳ ಸಾಗಾಣಿಕೆಯನ್ನು ಪತ್ತೆಹಚ್ಚಿದ್ದಾರೆ. ಮುಂಬೈಯಿAದ ಭಟ್ಕಳಕ್ಕೆ ಪಾರ್ಸೆಲ್ ರೂಪದಲ್ಲಿ ಕಳುಹಿಸಲ್ಪಟ್ಟ ನೀಲಿಬಣ್ಣದ ಸೂಟ್‌ಕೇಸ್‌ನೊಳಗೆ ಲಕ್ಷಾಂತರ ಮೌಲ್ಯದ ನಗದು ಮತ್ತು ಬಂಗಾರದ ಆಭರಣಗಳು ಪತ್ತೆಯಾದ ಘಟನೆ ಸಂಚಲನ ಸೃಷ್ಟಿಸಿದೆ. ಮುಂಬೈಯಿAದ ಭಟ್ಕಳ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ವಿ.ಆರ್.ಎಲ್ ಬಸ್‌ನಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ಭಟ್ಕಳದಲ್ಲಿ ಇರ್ಫಾನ್ ಎಂಬವರು ತೆಗೆದುಕೊಳ್ಳುತ್ತಾರೆ ಎಂದು ಹೇಳಿ ನೀಲಿ ಸೂಟ್‌ಕೇಸ್‌ನ್ನು ಪಾರ್ಸೆಲ್ ರೂಪದಲ್ಲಿ ನೀಡಿದ್ದರು. ಈ ಮಾಹಿತಿಯನ್ನು ಮೊತ್ತಮೊದಲು ಪಡೆದಿದ್ದ ಸಿಪಿಐ ದಿವಾಕರ್ ಹಾಗೂ ಪಿಎಸ್‌ಐ ನವೀನ ನಾಯ್ಕ ಅವರ ನೇತೃತ್ವದ ಪೊಲೀಸರು ಶಂಶುದ್ದೀನ್ ಸರ್ಕಲ್ ಬಳಿ ಬಸ್ ತಪಾಸಣೆ ನಡೆಸಿ ಪಾರ್ಸೆಲ್ ತೆರೆಯಲು ಮುಂದಾದಾಗ ರೂ. 49,98,400 ನಗದು, 401.04 ಗ್ರಾಂ ತೂಕದ 32 ಬಂಗಾರದ ಬಳೆಗಳು, ಮೊಬೈಲ್ ಹಾಗೂ ಪೆನ್‌ಡ್ರೈವ್... - [ರೂರಲ್ ಐಟಿ ಕ್ವಿಜ್ ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ](https://bhavanatv.com/2025/1810/): ಹೊನ್ನಾವರ: ತಾಲೂಕಿನ ಅರೇಅಂಗಡಿಯ ಶ್ರೀ ಸತ್ಯಸಾಯಿ ಕರಿಕಾನ ಪರಮೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳು ರೂರಲ್ ಐಟಿ ಕ್ವಿಜ್ ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ. - [ಭಟ್ಕಳದಲ್ಲಿ ಟ್ರಾಫಿಕ್ ನಿಯಂತ್ರಣ ತರಬೇತಿ: ಪೊಲೀಸರಿಗೆ ವಿಶೇಷ ಮಾರ್ಗದರ್ಶನ](https://bhavanatv.com/2025/1808/): ಸಂಚಾರ ನಿಯಂತ್ರಣ ಬಲಪಡಿಸಲು ಮುಂದಾದ ಪೊಲೀಸ್ ಇಲಾಖೆಸಂಚಾರ ಶಿಸ್ತು ಸುರಕ್ಷತೆ ಬಲಪಡಿಸಲು ಕಾರ್ಯೋನ್ಮುಖ ಪೊಲೀಸರು ಭಟ್ಕಳ: ತಾಲೂಕಿನೊಳಗೆ ವಾಹನ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಸ್ತೆ ಅಪಘಾತಗಳ ಪ್ರಮಾಣ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಉದ್ದೇಶದಿಂದ ಭಟ್ಕಳ ನಗರ ಪೊಲೀಸ್ ಠಾಣೆಯ ವತಿಯಿಂದ ವಿಶೇಷ ಟ್ರಾಫಿಕ್ ತರಬೇತಿ ಕಾರ್ಯಕ್ರಮ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರ ನಿರ್ದೇಶನದ ಮೇರೆಗೆ, ಡಿವೈಎಸ್‌ಪಿ ಮಹೇಶ್ ಎಂ.ಕೆ. ಅವರ ಮಾರ್ಗದರ್ಶನದಲ್ಲಿ, ಸಿಪಿಐ ದಿವಾಕರ್ ಪಿ.ಎಂ. ಮತ್ತು ಪಿಎಸ್‌ಐ ನವೀನ್ ನಾಯ್ಕ ಅವರ ನೇತೃತ್ವದಲ್ಲಿ ಹತ್ತು ಮಂದಿ ಪೊಲೀಸ್ ಸಿಬ್ಬಂದಿಗೆ ಹೊಸ ಟ್ರಾಫಿಕ್ ಸಮವಸ್ತ್ರದಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಯಿತು. ಈ ತರಬೇತಿ ಸಂಶುದ್ದೀನ್ ಸರ್ಕಲ್, ಪ್ರವಾಸಿ ಮಂದಿರ ಮತ್ತು ಪಿ.ಎಲ್.ಡಿ. ಬ್ಯಾಂಕ್ ಮುಂಭಾಗದಲ್ಲಿ ನಡೆಯಿತು. ಪಿಎಸ್‌ಐ ನವೀನ್ ನಾಯ್ಕ ಅವರು ಸಂಚಾರ ನಿಯಂತ್ರಣದ ತಾಂತ್ರಿಕ ವಿಧಾನಗಳು, ಟ್ರಾಫಿಕ್ ಶಿಸ್ತು, ಅಪಘಾತ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳು ಹಾಗೂ ಜನರ ಜೀವ ಸುರಕ್ಷತೆಯ ದೃಷ್ಟಿಯಿಂದ... - [ಮಂಗಳಮುಖಿಯರ ನಾಟಕ! ಯುವಕನ ಸರ ಕಿತ್ತು ಪರಾರಿಯಾಗಿದ್ದ ನಾಲ್ವರ ಬಂಧನ](https://bhavanatv.com/2025/1804/): ಭಟ್ಕಳ/ಮುರ್ಡೇಶ್ವರ: ರಾತ್ರಿ ವೇಳೆ ಮನೆಗೆ ತೆರಳುತ್ತಿದ್ದ ಯುವಕನಿಗೆ ನಾಲ್ವರು ಮಂಗಳಮುಖಿಯರು ತಡೆದು ಅಸಭ್ಯವಾಗಿ ವರ್ತಿಸಿ, ಕುತ್ತಿಗೆಯಲ್ಲಿದ್ದ ಬಂಗಾರದ ಸರ ಕಿತ್ತು ಪರಾರಿಯಾದ ಘಟನೆ ಮುರ್ಡೇಶ್ವರ ರೈಲ್ವೆ ನಿಲ್ದಾಣದ ಹತ್ತಿರ ಭಾನುವಾರ ರಾತ್ರಿ ನಡೆದಿದೆ. ಮಾವಳ್ಳಿ 2, ಗುಮ್ಮನಕ್ಕಲ್ ನಿವಾಸಿ ಆರುಣ ಕುಮಾರ ಭಾಸ್ಕರ ನಾಯ್ಕ ಎಂಬವರು ಈ ಸಂಬAಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ರಾತ್ರಿ ಪೆಟ್ರೋಲ್ ತುಂಬಿಸಿಕೊAಡು ಸ್ಕೂಟರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯ ಮೂಲಕ ರೈಲ್ವೆ ನಿಲ್ದಾಣದ ಕಡೆ ತೆರಳುತ್ತಿದ್ದಾಗ ಇಬ್ಬರು ಮಂಗಳಮುಖಿಯರು ಕೈ ಮಾಡಿ ವಾಹನ ನಿಲ್ಲಿಸಿದರು. ಮಾತನಾಡುವ ವೇಳೆ ರೈಲ್ವೆ ನಿಲ್ದಾಣದ ದಿಕ್ಕಿನಿಂದ ಮತ್ತಿಬ್ಬರು ಬಂದು ಯುವಕನ ಮೇಲೆ ಕೈ ಹಾಕಿ ಮುತ್ತು ಕೊಡಲು ಯತ್ನಿಸಿದರೆಂದು ದೂರು ಹೇಳುತ್ತದೆ. ಯುವಕ ವಿರೋಧ ವ್ಯಕ್ತಪಡಿಸಿದಾಗ ನಿನ್ನ ಹತ್ತಿರ ಎಷ್ಟು ಹಣ ಇದೆ? ಎಂದು ಕೇಳಿ, ಹಣ ಇಲ್ಲವೆಂದ ಬಳಿಕ ನಾಲ್ವರೂ ಸೇರಿ ಕೈ ಹಿಡಿದು ಅಸಭ್ಯವಾಗಿ ವರ್ತಿಸಿದರೆಂದು ಹೇಳಲಾಗಿದೆ. ಈ... - [ಅಂಕಿತಾ ಶ್ರೀಧರ ಭಟ್, ಸಿ.ಎ ಪರೀಕ್ಷೆ ತೆರ್ಗಡೆ](https://bhavanatv.com/2025/1801/): ಹೊನ್ನಾವರ: ತಾಲೂಕಿನ ಹೊಸಾಕುಳಿಯ ಅಂಕಿತಾ ಶ್ರೀಧರ ಭಟ್ ಪ್ರಥಮ ಪ್ರಯತ್ನದಲ್ಲಿಯೇ ಸಿ.ಎ ಪರೀಕ್ಷೆ ತೆರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ ಸಾಧನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. - [ಸುಳೆಮುರ್ಕಿಯಲ್ಲಿ ಶನಿವಾರ ಸಂಜೆ ಸಂಭವಿಸಿದ ಕೆ.ಎಸ್.ಆರ್.ಟಿ.ಸಿ ಬಸ್-ಕಾರು ಅಪಘಾತದಲ್ಲಿ ಒಬ್ಬ ಮೃತಪಟ್ಟಿದ್ದು 64 ಜನರು ಗಾಯಗೊಂಡಿದ್ದಾರೆ.](https://bhavanatv.com/2025/1794/): ಹೊನ್ನಾವರ : ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗೋವಾದ ಉಮೇಶ ಶ್ರೀಧರ ಮೌಸ್ಕಾರ ( 22) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡವರನ್ನು ಕುಂದಾಪುರದ ಆದರ್ಶ, ಮಣಿಪಾಲ, ಕಾರವಾರ ಆಸ್ಪತ್ರೆಗಳಿಗೆ ದಾಖಲಿಸಿದ್ದು, ಉಳಿದವರಿಗೆ ಹೊನ್ನಾವರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ರಾತ್ರಿ ಸಮಯದಲ್ಲಿ ಸಂಭವಿಸಿದ ತಕ್ಷಣ ಕೂಡಲೆ ಹೊನ್ನಾವರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಆ ವೇಳೆಗೆ ಸ್ಥಳಿಯರು ಪೊಲೀಸರು ಬಸ್ಸಿನಲ್ಲಿದ್ದವರನ್ನು ಸುರಕ್ಷೀತವಾಗಿ ಮೆಲಕ್ಕೆ ತರುವ ಕಾರ್ಯದಲ್ಲಿ ತೊಡಗಿದರು. ತಾಲೂಕಿನ ಹಾಗೂ ಸಿದ್ದಾಪುರದ ಅಂಬುಲೆನ್ಸ್ ಚಾಲಕರು ರಾತ್ರಿ ಇಡೀ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲು ಶ್ರಮಿಸಿರುದಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಮಣಿಪಾಲ ಆಸ್ಪತ್ರೆಗೆ ಕೊಂಡ್ಯೊದರು. ತಾಲೂಕ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ರೋಗಿಗಳ ಆರೈಕೆಗೆ ಮುತುವರ್ಜಿ ವಹಿಸಿ ರಾತ್ರಿ ಇಡಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದರು. ತಹಶೀಲ್ದಾರ ಪ್ರವೀಣ ಕರಾಂಡೆ ತಾಲೂಕಿನ ವಿವಿಧ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರು ಸಹಕಾರ ನೀಡುವ ಮೂಲಕ ಮಾನವೀಯತೆ ಮೆರೆದರು.ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ - [ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಿ.ಆರ್.ನಾಯ್ಕರನ್ನರಸಿ ಬಂದು ಪ್ರಶಸ್ತಿಯು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ ಎಂದು ಫಾದರ್ ಸಾಲ್ವಾದೋರ ಗೊನ್ಸಾಲ್ವಿಸ್ ಹೇಳಿದರು.](https://bhavanatv.com/2025/1790/): ಹೊನ್ನಾವರ : ಪಟ್ಟಣದ ನಂಬರ್ ಎರಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮದಂದು ಎಸ್. ಡಿ.ಎಂ. ಸಿ. ಮತ್ತು ಸಾನ್ ಸಾಲ್ವಾದೋರ್ ಚರ್ಚ್ , ಪೂರ್ವ ವಿದ್ಯಾರ್ಥಿ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ.ಆರ್. ನಾಯ್ಕರನ್ನು ಸನ್ಮಾನಿಸಿ ಮಾತನಾಡಿದರು. ಪ್ರಶಸ್ತಿಗಾಗಿ ಎಂದೂ ಹಾತೊರೆಯದೇ, ಪ್ರಶಸ್ತಿ ಸಿಕ್ಕಿದೆ ಎಂದು ಹಿಗ್ಗದೆ ತನ್ನ ಕೆಲಸವನ್ನು ಪ್ರಾಮಾಣಿಕತನದಿಂದ, ನಮ್ರತೆಯಿಂದ, ವಿದೇಯತೆಯಿಂದ ವಿಶ್ವಾಸದಿಂದ ಮಾಡಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರಿಗೆ ಒಲಿದ ಪ್ರಶಸ್ತಿಯು ನಮ್ಮೆಲ್ಲರಿಗೂ ಪ್ರಶಸ್ತಿ ಗರಿ ಮೂಡಿದಂತಾಗಿದೆ. ಮಕ್ಕಳಿಗೆ ಕಲಿಸಿದ ಕಲಿಕೆಯು ಅವರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೋ ಅದು ಶಿಕ್ಷಕರ ಪಾಲಿನ ಶಾಶ್ವತ ಪ್ರಶಸ್ತಿಯಾಗುತ್ತದೆ. ಇಂಥ ಶಿಕ್ಷಕರ ಪಾಲಿಗೆ ಒಲಿದು ಬಂದಿರುವ ಪ್ರಶಸ್ತಿ ಇಡೀ ತಾಲೂಕಿನ ಹೆಮ್ಮೆಯಾಗಿದೆ.ತಾಲೂಕಿನ ಸಮಸ್ತ ನಾಗರಿಕರ ಪರವಾಗಿ ಅಭಿನಂದಿಸಿ ಶುಭ ಹಾರೈಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ ಶೇಟ್ ಮಾತನಾಡಿ, ನಮ್ಮ ತಾಲೂಕಿನಲ್ಲಿ ಅವರು ಸಲ್ಲಿಸಿದ ಸೇವೆ ಅನುಪಮವಾದದ್ದು.ಅವರನ್ನರಸಿ ಬಂದಿರುವ ಪ್ರಶಸ್ತಿ ಶಿಕ್ಷಣ ಇಲಾಖೆಯ ಹಿರಿಮೆ ಹೆಚ್ಚಿಸಿದೆ... - [ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘಕ್ಕೆ ತಮಿಳುನಾಡು ರಾಜ್ಯದ ಇಲಾಖಾ ಲೆಕ್ಕಪರಿಶೋಧಕರ ಅಧ್ಯಯನ ತಂಡ ಭೇಟಿ.](https://bhavanatv.com/2025/1787/): ಬೈಂದೂರು : ದಿನಾಂಕ 30/10/2025 ರಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಉಪ್ಪುಂದದ ಪ್ರಧಾನ ಕಛೇರಿಗೆ ತಮಿಳುನಾಡು ರಾಜ್ಯದ ಇಲಾಖಾ 25 ಲೆಕ್ಕಪರಿಶೋಧಕರ ಅಧ್ಯಯನ ತಂಡ ಭೇಟಿ ನೀಡಿದರು. ಸಂಘದ ವ್ಯವಹಾರ ಚಟುವಟಿಕೆಗಳ ವೈವಿದ್ದೀಕರಣ, ಕ್ರೆಡಿಟ್ ಮೊನಿಟರಿಂಗ್, ಕೃಷಿ ಸಾಲ, ವ್ಯವಹಾರಿಕ ಸಾಲ, ಸದಸ್ಯರೊಂದಿಗಿರುವ ವ್ಯವಹಾರಿಕ ವಿನಿಮಯ ಇನ್ನಿತರ ಕಾರ್ಯಚಟುವಟಿಕೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು ಹಾಗೂ ಸಂಘದ ಮುಂದಿನ ಯೋಜನೆಗಳ ಕಾರ್ಯವೈಕರಿಗಳ ಮಾಹಿತಿ ಪಡೆದುಕೊಂಡರು. ಸAಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಇವರು ಮಾತನಾಡಿ, ಸಂಘವು ಸಾವಿರ ಕೋಟಿಗೂ ಮಿಕ್ಕಿ ವಹಿವಾಟು ನಡೆಸುತ್ತಿದ್ದು ಸಂಘದ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಉತ್ತಮ ರೀತಿಯ ಸೇವೆಯನ್ನು ನೀಡುತ್ತಾ ಬಂದಿದೆ. ಸಂಘವು ಆರ್ಥಿಕ ವಹಿವಾಟಿನ ಜೊತೆಗೆ ರೈತರಿಗೆ ಬಲತುಂಬುವ ನಿಟ್ಟಿನಲ್ಲಿ ಹಾಗೂ ಯುವ ರೈತರನ್ನು ಹುಟ್ಟುಹಾಕುವ ನೆಲೆಯಲ್ಲಿ ಅವರ ಅಪೇಕ್ಷೆಯಂತೆ ಮಾಹಿತಿ ಕಾರ್ಯಗಾರ, ಪ್ರಾತ್ಯಕ್ಷಿತೆ, ಕೃಷಿ ಪೂರಕ ಉತ್ಪನ್ನಗಳು ಹಾಗೂ ಸಲಕರಣೆಗಳ ಒದಗಿಸುವಿಕೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಂಘದ ಸದಸ್ಯರಿಗೆ ಹಾಗೂ ಗ್ರಾಹಕರಿಗೆ... - [ಹಳೆಯ ವೈಷಮ್ಯಕ್ಕೆ ನಶೆಯ ನಂಟಿನಲ್ಲಿ ಚಾಕು ದಾಳಿ : ಯುವಕನಿಗೆ ಗಂಭೀರ ಗಾಯ](https://bhavanatv.com/2025/1784/): ಭಟ್ಕಳ : ನಶೆಯ ನಂಟಿನಲ್ಲಿ ಉಗ್ರನಾದ ಯುವಕನೊಬ್ಬ ಹಳೆಯ ವೈಷಮ್ಯದ ಹಿನ್ನಲೆಯಲ್ಲಿ ಮತ್ತೊಬ್ಬನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಭಟ್ಕಳ ಸಂಶುದ್ದೀನ್ ಸರ್ಕಲ್‌ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಮಂಜುನಾಥ ಮಾಸ್ತಪ್ಪ ನಾಯ್ಕ (34) ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಡಿ.ಪಿ. ಕಾಲೋನಿಯ ನಗೀನಕುಮಾರ ಶೆಟ್ಟಿ ಎನ್ನುವಾತನು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಶೆಯ ತೀವ್ರತೆಯಲ್ಲಿ ನಗೀನಕುಮಾರ, ಹಣ ಕೇಳಿದ್ರೆ ಬೈಯ್ದು ಕಳಿಸಿದ್ದಿಯಾ, ಇವತ್ತು ನಿನ್ನನ್ನ ಬಿಡೋದಿಲ್ಲ ಎಂದು ಬೈಯುತ್ತಾ ಮಂಜುನಾಥನ ಮೇಲೆ ಚಾಕು ಬೀಸಿದ್ದಾನೆ ಎನ್ನಲಾಗಿದೆ.ಈ ವೇಳೆ ಮಂಜುನಾಥನ ಎಡ ಕಂಕಳ, ಕುತ್ತಿಗೆ, ಹೊಟ್ಟೆ, ಕಿವಿಯ ಹತ್ತಿರ ಹಾಗೂ ತಲೆಯ ಭಾಗಕ್ಕೆ ಇರಿತದ ಗಾಯಗಳು ಉಂಟಾಗಿವೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಸಿಪಿಐ ದಿವಾಕರ ಪಿ.ಎಂ. ಮತ್ತು ಪಿಎಸ್‌ಐ ನವೀನ್ ನಾಯ್ಕ ನೇತೃತ್ವದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ.ಗಾಯಗೊAಡ ಮಂಜುನಾಥನನ್ನು ಮೊದಲು ಭಟ್ಕಳ ಸರ್ಕಾರಿ ಆಸ್ಪತ್ರೆಗೆ, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸ್ಥಳಾಂತರಿಸಲಾಗಿದೆ.ಈ ಸಂಬAಧ ಗಣೇಶ... - [ಭಟ್ಕಳದಲ್ಲಿ ವೈಟ್‌ಬೋರ್ಡ್ ವಾಹನಗಳ ಅಕ್ರಮ ಓಡಾಟಕ್ಕೆ ಟ್ಯಾಕ್ಸಿ ಚಾಲಕರ ಕಿಡಿ, ಸರ್ಪನಕಟ್ಟೆ ಚೆಕ್‌ಪೋಸ್ಟ್ನಲ್ಲಿ ಅಕ್ರಮ ವಾಹನ ತಡೆದು ಪೊಲೀಸರಿಗೆ ಹಸ್ತಾಂತರ.](https://bhavanatv.com/2025/1780/): ಭಟ್ಕಳ: ಮಂಗಳೂರು, ಗೋವಾ ಸೇರಿದಂತೆ ವಿವಿಧ ಪ್ರದೇಶಗಳಿಂದ ಬಾಡಿಗೆಯ ಆಧಾರದಲ್ಲಿ ಪ್ರಯಾಣಿಕರನ್ನು ಹೊತ್ತು ತರುತ್ತಿರುವ ಖಾಸಗಿ ವೈಟ್‌ಬೋರ್ಡ್ ವಾಹನಗಳ ಅಕ್ರಮ ಓಡಾಟದ ವಿರುದ್ಧ ಭಟ್ಕಳ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಪನಕಟ್ಟೆ ಚೆಕ್‌ಪೋಸ್ಟ್ನಲ್ಲಿ ಅಕ್ರಮವಾಗಿ ಪ್ರಯಾಣಿಕರನ್ನು ಕರೆತರುತ್ತಿದ್ದ ಖಾಸಗಿ ವಾಹನವನ್ನು ಪೋಲಿಸ್ ಸಮ್ಮುಖದಲ್ಲಿ ತಡೆದು ಪೊಲೀಸರ ವಶಕ್ಕೆ ನೀಡಿದ್ದಾರೆ. ಬಾಡಿಗೆಯ ಆಧಾರದಲ್ಲಿ ವಾಹನ ಚಲಾಯಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ಸಾವಿರಾರು ರೂಪಾಯಿ ತೆರಿಗೆ ಪಾವತಿಸುತ್ತಿದ್ದೇವೆ. ನಾವು ಎಲ್ಲರೂ ಈ ವೃತ್ತಿಯನ್ನೇ ಜೀವನೋಪಾಯವನ್ನಾಗಿಸಿಕೊಂಡಿದ್ದೇವೆ. ಆದರೆ ವೈಟ್‌ಬೋರ್ಡ್ ವಾಹನಗಳು ಯಾವುದೇ ತೆರಿಗೆ ಇಲ್ಲದೇ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿರುವುದು ಕಾನೂನುಬಾಹಿರ ಎಂದು ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಭಟ್ಕಳ ಹಾಗೂ ಸುತ್ತಮುತ್ತ ಅನೇಕ ಖಾಸಗಿ ವಾಹನಗಳು ಇದೇ ರೀತಿಯಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ. ಸರ್ಕಾರದ ತೆರಿಗೆ ತಪ್ಪಿಸಿ ದಂಧೆ ನಡೆಸುತ್ತಿದ್ದಾರೆ. ಆರ್‌ಟಿಓ ಮತ್ತು ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ನಾವು ಸ್ವತಃ ಇಂತಹ ವಾಹನಗಳನ್ನು ತಡೆದು ನಿಲ್ಲಿಸುತ್ತೇವೆ ಎಂದು... - [ಭಟ್ಕಳದಲ್ಲಿ ಓ.ಸಿ. ಮಟಕಾ ಜೂಜಾಟದ ಇಬ್ಬರು ಬಂಧನ, ಸಾರ್ವಜನಿಕ ಸ್ಥಳದಲ್ಲೇ ಚಟುವಟಿಕೆ;](https://bhavanatv.com/2025/1777/): ಭಟ್ಕಳ: ನಗರದ ಹಳೆಯ ಬಸ್ ನಿಲ್ದಾಣದ ಹತ್ತಿರದ ಹಳೆಯ ಮೀನು ಮಾರುಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲೇ ಓ.ಸಿ. ಮಟಕಾ ಜೂಜಾಟ ನಡೆಸುತ್ತಿದ್ದ ಇಬ್ಬರನ್ನು ಭಟ್ಕಳ ನಗರ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ಸಾಗರ ರಸ್ತೆಯ ಕಂಡೆಕೊಡ್ಲು ಮೂಲದ ಶಶಿಕಾಂತ ರಾಮಚಂದ್ರ ಶೆಟ್ಟಿ ಹಾಗೂ ಉಪ್ಪುಂದ ಬೈಂದೂರಿನ ವೆಂಕಟಾದ್ರಿ ನಾರಾಯಣ ಖಾರ್ವಿ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಸಾರ್ವಜನಿಕರಿಂದ ಹಣ ಪಡೆದು ತಮ್ಮ ಲಾಭಕ್ಕಾಗಿ ಓ.ಸಿ. ಮಟಕಾ ಜೂಜಾಟ ನಡೆಸುತ್ತಿದ್ದ ವೇಳೆ ಪಿ.ಎಸ್.ಐ. ತಿಮ್ಮಪ್ಪ ಮೊಗೇರ್ ಹಾಗೂ ನವೀನ್ ಎಸ್. ನಾಯ್ಕ ಅವರ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ದಾಳಿ ನಡೆಸಿ ಬಂಧಿಸಿತು. ಘಟನಾಸ್ಥಳದಿಂದ ಶಶಿಕಾಂತನಿAದ ರೂ,700 ಹಾಗೂ ವೆಂಕಟಾದ್ರಿಯಿAದ ರೂ.780 ನಗದು ಹಣ ಮತ್ತು ಜೂಜಾಟದ ಸಲಕರಣೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [ಪರ್ಮಿಟ್ ಇಲ್ಲದೇ ಅಕ್ರಮವಾಗಿ ಮರಳು ಸಾಗಾಟ, ಶಿರಾಲಿ ಜಂಕ್ಷನ್ ಬಳಿ ಟಿಪ್ಪರ್ ವಶ ಚಾಲಕನ ವಿರುದ್ಧ ಪ್ರಕರಣ](https://bhavanatv.com/2025/1774/): ಭಟ್ಕಳ: ಪಾಸ್ ಅಥವಾ ಪರ್ಮಿಟ್ ಇಲ್ಲದೇ ಮರಳು ಸಾಗಾಟ ನಡೆಸುತ್ತಿದ್ದ ಚಾಲಕನ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ಕಾಜಿಮನೆ ನಿವಾಸಿ ನಾಗರಾಜ ಮಂಜುನಾಥ ನಾಯ್ಕ, ಎಂಬಾತನು ಸರ್ಕಾರದ ಅನುಮತಿ ಪಡೆಯದೇ ಸ್ವಂತ ಲಾಭಕ್ಕಾಗಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದಾನೆಂಬ ಮಾಹಿತಿ ಮೇರೆಗೆ ಪೊಲೀಸರು ಶಿರಾಲಿ ಜಂಕ್ಷನ್ ಹತ್ತಿರ ವಾಹನ ತಡೆದು ತಪಾಸಣೆ ನಡೆಸಿದರು. ಈ ವೇಳೆ ಸುಮಾರು ರೂ.10,000 ಮೌಲ್ಯದ 2.5 ಯುನಿಟ್ ಮರಳನ್ನು ಒಳಗೊಂಡ ಟಿಪ್ಪರ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಅಕ್ರಮ ಮರಳು ಸಾಗಾಟದ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಹಿನ್ನೆಲೆಯಲ್ಲಿ ಪಿಎಸೈ ಭರಮಪ್ಪ ಬೆಳಗಲಿ ಅವರ ದೂರು ಮೇರೆಗೆ ಆರೋಪಿತ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. - [ಲೈಫ್ ಕೇರ್ ಆಸ್ಪತ್ರೆಗೆ ಕಳಂಕ ತರುವ ಯತ್ನ ವೈದ್ಯರಿಗೆ ಜೀವ ಬೆದರಿಕೆ:ಪ್ರಕರಣ ದಾಖಲು](https://bhavanatv.com/2025/1771/): ಭಟ್ಕಳ: ಸ್ಥಳೀಯ ಲೈಫ್ ಕೇರ್ ಆಸ್ಪತ್ರೆಗೆ ಕಳಂಕ ತರುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪುಪ್ರಚಾರ ನಡೆಸಿ, ಕರ್ತವ್ಯದಲ್ಲಿದ್ದ ವೈದ್ಯರಿಗೆ ಜೀವ ಬೆದರಿಕೆ ಹಾಕಿದ ಘಟನೆ ಹೊರಬಿದ್ದಿದೆ. ಮೂರು ವರ್ಷದ ಬಾಲಕ ಬಿಸಿ ನೀರಿನಿಂದ ಗಂಭೀರವಾಗಿ ಸುಟ್ಟ ಪರಿಣಾಮ ಗಾಯಗೊಂಡಿದ್ದನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಕಾಲ ಆಸ್ಪತ್ರೆಯ ವೈದ್ಯರು ಹಾಗೂ ಹೊರಗಿನಿಂದ ಕರೆಯಿಸಿಕೊಂಡ ತಜ್ಞರು ಚಿಕಿತ್ಸೆ ನೀಡುತ್ತಿದ್ದರು. ಈ ನಡುವೆ ಬಾಲಕನ ಪಾಲಕರು “ಚಿಕಿತ್ಸೆ ಸರಿಯಾಗಿ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ವೈದ್ಯರಿಗೆ ಬೆದರಿಕೆ ಹಾಕಿದ್ದಾರೆ ಎಂಬುದು ದೂರುನಿವೇದನೆ. ಆರೋಪಿತನು ಭಟ್ಕಳ ಕ್ರಿಕೆಟ್ ಗ್ರೂಪ್ ಸೇರಿದಂತೆ ಹಲವಾರು ವಾಟ್ಸಾಪ್ ಗುಂಪುಗಳಲ್ಲಿ ಸುಳ್ಳು ವಿಡಿಯೋ ಹಾಗೂ ಸಂದೇಶಗಳನ್ನು ಹಂಚಿಕೊAಡಿದ್ದು, ಆಸ್ಪತ್ರೆಯ ಗೌರವ ಹಾಳು ಮಾಡುವ ಉದ್ದೇಶ ಸ್ಪಷ್ಟವಾಗಿದೆ ಎಂದು ಆಡಳಿತಾಧಿಕಾರಿ ಸಲ್ಮಾನ್ ಅಹ್ಮದ್ ನಗರ ಠಾಣೆಗೆ ದೂರು ನೀಡಿದ್ದಾರೆ. ಮೊದಲು ಎನ್.ಸಿ. ಪ್ರಕರಣ ದಾಖಲಿಸಲ್ಪಟ್ಟಿದ್ದು, ಇದೀಗ ನ್ಯಾಯಾಲಯದ ಅನುಮತಿಯೊಂದಿಗೆ ಪೂರ್ಣ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಡಳಿತಾಧಿಕಾರಿ... - [ಸ.ಹಿ.ಪ್ರಾ.ಶಾಲೆ ತೊರ್ಕೆಯಲ್ಲಿ ಸಮುದಾಯ ದತ್ತ ಕಾರ್ಯಕ್ರಮ](https://bhavanatv.com/2025/1768/): ಕುಮಟಾ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೊರ್ಕೆಯಲ್ಲಿ 2025-26ನೇ ಸಾಲಿನ ಪ್ರಥಮ ಸಮುದಾಯದತ್ತ ಶಾಲಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮಾರ್ಗದರ್ಶಕರಾಗಿ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯ ಶಿಕ್ಷಕರಾದ ಶ್ರೀ ಎನ್. ರಾಮು ಹಿರೇಗುತ್ತಿ ರವರು ಆಗಮಿಸಿದ್ದರು. ಅವರು ಶಾಲೆಯ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಚಟುವಟಿಕೆಗಳನ್ನು ಪರಿಶೀಲಿಸಿ, ಶಾಲೆಯ ಅಭಿವೃದ್ಧಿ ಮತ್ತು ಪರಿಸರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಊರಿನ ದಾನಿಗಳ ಸಹಕಾರದಿಂದ ಮೂವರು ಶಿಕ್ಷಕರ ನೇಮಕವಾಗಿದ್ದು, ದಾನಿಗಳಿಂದ ನಿರ್ಮಿತ ಅomಠಿuಣeಡಿ ಐಚಿb ಮತ್ತು ಊoಟಿesಣಥಿ Shoಠಿ ವೀಕ್ಷಿಸಿದ ಮಾರ್ಗದರ್ಶಕರು ಹರ್ಷ ವ್ಯಕ್ತಪಡಿಸಿ, ಎಲ್ಲ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಅಪರಾಹ್ನ 2:30 ಗಂಟೆಗೆ ನಡೆದ S.ಆ.ಒ.ಅ / ಪಾಲಕ ಪೋಷಕರ ಸಭೆಯಲ್ಲಿ ಎಲ್ಲಾ ಪಾಲಕರು ಹಾಜರಿದ್ದು, ವಿದ್ಯಾರ್ಥಿಗಳ S.ಂ 1 ಪರೀಕ್ಷೆಯ ಉತ್ತರಪತ್ರಿಕೆಗಳನ್ನು ವೀಕ್ಷಿಸಿದರು. ಈ ಸಭೆಯಲ್ಲಿ ತೊರ್ಕೆ ಗ್ರಾಮ ಪಂಚಾಯತದ ಅಧ್ಯಕ್ಷರಾದ ಶ್ರೀ ಆನಂದ ನಾಗಪ್ಪ ಕವರಿ ಅವರು ಉಪಸ್ಥಿತರಿದ್ದು, ಸಮುದಾಯ ದತ್ತ ಶಾಲಾ ಕಾರ್ಯಕ್ರಮ ಒಂದು ಒಳ್ಳೆಯ ಪ್ರಯತ್ನ. ಈ... - [ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಯುವಕ ಬಂಧನ](https://bhavanatv.com/2025/1765/): ಭಟ್ಕಳ: ನಗರದ ಸಂತೆ ಮಾರ್ಕೆಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ವ್ಯಕ್ತಿಯನ್ನು ಭಟ್ಕಳ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತನನ್ನು ಹನೀಫಾಬಾದ್ ನಿವಾಸಿ ಸೈಯ್ಯದ ಮೂಸಾ (ತಂದೆ ಸೈಯ್ಯದ ಅಹ್ಮದ) ಎಂದು ಗುರುತಿಸಲಾಗಿದೆ. ಸಂತೆ ಮಾರ್ಕೆಟ್ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಈತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಗಾಂಜಾ ಸೇವಿಸಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ನAತರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಸಂಬAಧ ಸರ್ಕಾರದ ಪರವಾಗಿ ಪಿಎಸ್‌ಐ ತಿಮ್ಮಪ್ಪ ಎಸ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. - [ಭಟ್ಕಳ ವ್ಯಾಪಾರಿಗೆ ನಕಲಿ ಟೆಂಡರ್ ಉರುಲು: ಲಾಭದಾಸೆ ತೋರಿಸಿ 21 ಲಕ್ಷ ರೂ. ವಂಚನೆ ಪ್ರಕರಣ ದಾಖಲು](https://bhavanatv.com/2025/1762/): ಭಟ್ಕಳ: ಟೆಂಡರ್ ನನ್ನ ಹೆಸರಿಗೆ ಬಂದಿದೆ. ಹೂಡಿಕೆ ಮಾಡಿದರೆ ಮೂರರಷ್ಟು ಲಾಭ ಸಿಗುತ್ತದೆ ಎಂದು ನಂಬಿಸಿ ವ್ಯಾಪಾರಿಯೊಬ್ಬರಿಂದ 21 ಲಕ್ಷ ರೂ. ವಂಚಿಸಿದ ಪ್ರಕರಣ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ. ಸುಲ್ತಾನ್ ಸ್ಟ್ರೀಟ್‌ನ ಕರಿಕಲ್ ಹೌಸ್ ನಿವಾಸಿ ಫಿಯಾದಿ ಮೊಹಮ್ಮದ ಶಬೀ ತಂದೆ ಅಬ್ದುಲ್ ಖಾಧೀರ್ ಕಾಡ್ಲಿ, ಭಟ್ಕಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಬಂದರ ರಸ್ತೆ 1ನೇ ಕ್ರಾಸ್ ನಿವಾಸಿ ಅಸೀಫ್ ಇಕ್ಬಾಲ್ ತಂದೆ ಜಫರುಲ್ಲಾ ಇಕ್ಕೇರಿ, ಬಂದರ ರಸ್ತೆ 1ನೇ ಕ್ರಾಸ್,ಇವರು ಒeಣಡಿo Iಟಿಜಿoಣeಛಿh Pvಣ. ಐಣಜ. ಎಂಬ ಕಂಪನಿಯ ನಕಲಿ ದಾಖಲೆ ತೋರಿಸಿ, 2025ರಲ್ಲಿ ಪ್ರಾಜೆಕ್ಟ್ ಆರಂಭವಾಗಲಿದೆ. 25 ಲಕ್ಷ ರೂ. ಹೂಡಿಕೆ ಮಾಡಿದರೆ ಮೂರರಷ್ಟು ಹಣ ಮರಳುತ್ತದೆ ಎಂದು ನಂಬಿಸಿದ್ದಾನೆ. ಆರೋಪಿಯು ಮೊದಲು 5 ಲಕ್ಷ, ಬಳಿಕ 2023ರ ಜೂನ್ 19ರಂದು ರೈಲ್ವೇ ನಿಲ್ದಾಣ ಹತ್ತಿರ 13 ಲಕ್ಷ, ನಂತರ 1 ಲಕ್ಷ ಹಾಗೂ 2 ಲಕ್ಷ ರೂ. ಪಡೆದು ಒಟ್ಟು 21 ಲಕ್ಷ... - [ಭಟ್ಕಳದಲ್ಲಿ ಮಾದಕ ವಸ್ತು ವಿರೋಧಿ, ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮ](https://bhavanatv.com/2025/1758/): ಭಟ್ಕಳ: ಅಂಜುಮನ್ ಕಾಲೇಜು ಸಭಾಂಗಣದಲ್ಲಿ ಬುಧವಾರ ಮಾದಕ ವಸ್ತು ವಿರೋಧಿ ಹಾಗೂ ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಜೀವನದಲ್ಲಿ ಆಸಕ್ತಿ ಕಳೆದುಕೊಂಡಾಗ ಮನುಷ್ಯನು ನಶಾಭ್ಯಾಸದತ್ತ ಸೆಳೆಯಲ್ಪಡುತ್ತಾನೆ. ಸಿಗರೇಟು, ಮದ್ಯ, ಗಾಂಜಾ ಮೊದಲಿಗೆ ಹಾನಿರಹಿತವೆಂದು ಕಾಣಿಸಿದರೂ, ಅದು ವ್ಯಕ್ತಿಯನ್ನು ಕ್ರಮೇಣ ನಾಶದತ್ತ ಕೊಂಡೊಯ್ಯುತ್ತದೆ. ಯುವಕರು ಒಳ್ಳೆಯ ಸ್ನೇಹಿತರನ್ನು ಆರಿಸಿಕೊಳ್ಳಬೇಕು. ಶಿಸ್ತು ಯಶಸ್ಸಿನ ಮೊದಲ ಹೆಜ್ಜೆ, ಎಂದು ಅವರು ಹೇಳಿದರು. ಸೈಬರ್ ಅಪರಾಧಗಳ ಏರಿಕೆಯನ್ನು ಉಲ್ಲೇಖಿಸಿ, ಅಪರಾಧಿಗಳು ಕೃತಕ ಗುರುತುಗಳಿಂದ ಸ್ನೇಹ ಬೆಸಿ ಹಣ ವಂಚಿಸುತ್ತಿದ್ದಾರೆ. ನೈಜ ಘಟನೆಗಳಿಂದ ಪಾಠ ಪಡೆದು ಎಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಸಿದರು. ಅತಿಥಿ ಜಮಾಅತ್-ಉಲ್-ಮುಸ್ಲಿಮೀನ್ ಉಪ ಕಾಜಿ ಮೌಲಾನಾ ಅನ್ಸಾರ್ ಖತೀಬ್ ಮದನೀ ಮಾತನಾಡಿ, ಮಾದಕ ವಸ್ತು ಪ್ರತಿಯೊಂದೂ ಆರೋಗ್ಯಕ್ಕೆ ಹಾನಿಕಾರಕ. ನಾವು ಮೌನವಾಗಿದ್ದರೆ ಸಮಾಜ ಇನ್ನಷ್ಟು ಹಾಳಾಗುತ್ತದೆ. ಬೆಂಕಿ ಹೊತ್ತಿಕೊಂಡಿದೆ, ಅದನ್ನು ಆರಿಸುವ ಹೊತ್ತಾಗಿದೆ ಎಂದು ಕರೆ ನೀಡಿದರು.... - [ಆಂಬ್ಯುಲೆನ್ಸ್ ಡಿಕ್ಕಿ ದುರಂತ : ಭಟ್ಕಳದ ದಂಪತಿ ಬೆಂಗಳೂರಿನಲ್ಲಿ ದುರಂತ ಸಾವು,](https://bhavanatv.com/2025/1753/): ವೇಗದ ಅಜಾಗರೂಕತೆಗೆ ಬಲಿಯಾದ ಒಂದು ಕುಟುಂಬ, ಮೂವರು ಮಕ್ಕಳು ತಂದೆ-ತಾಯಿಯಿಲ್ಲದ ಮೌನದಲ್ಲಿ. ಬೆಂಗಳೂರು/ಭಟ್ಕಳ: ಆಂಬ್ಯುಲೆನ್ಸ್ ಅಪಘಾತದಿಂದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ಶಾಂತಿನಗರದ ಕೆ. ಹೆಚ್. ರಸ್ತೆಯ ಸಂಗೀತಾ ಸಿಗ್ನಲ್ ಬಳಿ ಸಂಭವಿಸಿದೆ. ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವ ಆರೋಪ ಕೇಳಿಬಂದಿದ್ದು, ದ್ವಿಚಕ್ರ ವಾಹನದಲ್ಲಿದ್ದ ಮೃತರನ್ನು ಇಸ್ಮಾಯಿಲ್ ನಾಥರ್ ದಾಬಾಪು (40) ಮತ್ತು ಅವರ ಪತ್ನಿ ಸಮೀನ್ ಬಾನು ಎಂದು ಗುರುತಿಸಲಾಗಿದೆ. ಇವರು ಭಟ್ಕಳದ ಬಂಡರ್ ರೋಡ್ 2ನೇ ಕ್ರಾಸ್ ಹಾಗೂ 5ನೇ ಕ್ರಾಸ್ ನಿವಾಸಿಗಳಾಗಿದ್ದರು. ರಿಚ್ಮಂಡ್ ರಸ್ತೆಯ ಕಡೆಯಿಂದ ವೇಗವಾಗಿ ಬಂದ ಆಂಬ್ಯುಲೆನ್ಸ್ ಚಾಲಕ, ಊರ್ವಶಿ ಚಿತ್ರಮಂದಿರ ಕಡೆಯಿಂದ ವಿಲ್ಸನ್ ಗಾರ್ಡನ್ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪಘಾತವೆಸಗಿದ್ದಾನೆ. ಅಲ್ಲದೆ ಆಂಬ್ಯುಲೆನ್ಸ್ ಕೆಳಗೆ ಸಿಲುಕಿದ್ದ ದ್ವಿಚಕ್ರ ವಾಹನವನ್ನು 20- 30 ಮೀಟರ್ ಎಳೆದುಕೊಂಡು ಚಲಾಯಿಸಿದ್ದಾನೆ. ಬಳಿಕ ಟ್ರಾಫಿಕ್ ಪೊಲೀಸ್ ಚೌಕಿಗೆ ಗುದ್ದಿ ಆಂಬ್ಯುಲೆನ್ಸ್ ನಿಲ್ಲಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಬಂದು ಆಂಬ್ಯುಲೆನ್ಸ್ ಪಲ್ಟಿ... - [ಐಡಿಯಲ್ ಪ್ಲೇ ಅಬಾಕಸ್ ಹೊನ್ನಾವರ, ಭಟ್ಕಳ, ಮುರ್ಡೇಶ್ವರ ಮತ್ತು ಶಿರಾಲಿ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಸಾಧನೆ](https://bhavanatv.com/2025/1748/): ಹೊನ್ನಾವರ : ಐಡಿಯಲ್ ಪ್ಲೇ ಅಬಾಕಸ್(Idel Play Abacus) ಕಂಪನಿಯಿAದ ನಡೆದ 20ನೇ ಕರ್ನಾಟಕ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಕಾಂಪಿಟೇಷನ್ ದಿನಾಂಕ : 26-10-2025 ರಂದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸುಮಾರು 2500 ವಿದ್ಯಾರ್ಥಿಗಳು ಭಾಗವಹಿಸಿದ್ದು ಐಡಿಯಲ್ ಪ್ಲೇ ಅಬಾಕಸ್ ಸಂಸ್ಥೆಯಾದ ಹೊನ್ನಾವರ, ಭಟ್ಕಳ, ಮುರ್ಡೇಶ್ವರ, ಶಿರಾಲಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ವಿನ್ನರ್, ಪಸ್ಟ್ ರನ್ನರ್ ಸೆಕೆಂಡ್ ರನ್ನರ್ ಅಫ್, ತೃತೀಯ, ಚತುರ್ಥ, ಪಂಚಮ ರ‍್ಯಾಂಕ್ ಅನ್ನು ವಿದ್ಯಾರ್ಥಿಗಳಾದ ನಿಹಾರಿಕಾ ವಿನೋದ ಗೌಡ, ರಿದೇಶ್ ಪ್ರಮೋದ ನಾಯ್ಕ, ಆರ್ಯನ್ ನವೀನ ನಾಯ್ಕ, ಮನ್ವಿತ್ ಶಂಕರ ನಾಯ್ಕ, ರೋನಿತ್ ಜಗದೀಶ ಖಾರ್ವಿ, ರಯಾನ್ ಎಮ್. ಅತ್ತರ್, ವಿಂದ್ಯಾ ರಾಜು ನಾಯ್ಕ, ಯಜತ್ ರಮೇಶ ನಾಯ್ಕ, ರೇಹಾ ಲೋಪಿಸ್, ಸ್ವಸ್ತಿಕ್ ವಿನೋದ ಗೌಡ, ಆಯುಷ್ ಪಿ. ರಾಥೋಡ್. ಆರಾಧ್ಯಾ ಎನ್. ನಾಯ್ಕ, ನತಾಲಿ ಎಸ್. ಸಾರಂಗ, ಗೌರವ ಆರ್ ನಾಯ್ಕ, ಜಾಹ್ನವಿ ಮೋಗೇರ, ರಿಷಬ್ ಆರ್. ನಾಯ್ಕ, ಅದ್ರಿಕಾ... - [ಭಟ್ಕಳದ ಹಿರಿಯ ಪತ್ರಕರ್ತ ಇನಾಯತುಲ್ಲಾ ಗವಾಯಿಯವರಿಗೆ ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ](https://bhavanatv.com/2025/1744/): ಭಟ್ಕಳ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ದೀರ್ಘಕಾಲದಿಂದ ನಿಷ್ಠೆ, ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ಭಟ್ಕಳದ ಹಿರಿಯ ಪತ್ರಕರ್ತ ಹಾಗೂ ಸಾಹಿಲ್ ಆನ್‌ಲೈನ್ ಸಂಪಾದಕರಾದ ಇನಾಯತುಲ್ಲಾ ಗವಾಯಿ ಅವರಿಗೆ ಈ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ಪತ್ರಿಕೋದ್ಯಮವನ್ನು ಕೇವಲ ವೃತ್ತಿಯನ್ನಾಗಿ ಅಲ್ಲದೆ, ಜನಸೇವೆಯ ವೇದಿಕೆಯಾಗಿ ಪರಿಗಣಿಸಿ ಸಾಮಾಜಿಕ ಬದ್ಧತೆಯ ವರದಿಗಳ ಮೂಲಕ ಸಾರ್ವಜನಿಕ ಸಮಸ್ಯೆಗಳನ್ನು ಬೆಳಕಿಗೆ ತಂದು ಪರಿಹಾರದ ದಾರಿಗೆ ಮುನ್ನಡೆಸಿದ ಗವಾಯಿ ಅವರ ಕಾರ್ಯ ರಾಜ್ಯಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ನಾಳೆ(1-11-2025) ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯೋತ್ಸವ ಸಮಾರಂಭದಲ್ಲಿ ತಾಲ್ಲೂಕು ಆಡಳಿತದಿಂದ ಗವಾಯಿ ಅವರಿಗೆ ಸನ್ಮಾನ ಮಾಡಲಾಗುತ್ತದೆ. ಗವಾಯಿ ಅವರ ಈ ಸಾಧನೆಗೆ ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಮತ್ತು ಸದಸ್ಯರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಟ್ಟ್, ಮಾಜಿ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ ಹಾಗೂ ಭಟ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಆರ್. ಮಾನ್ವಿ, ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು, ಸಾಹಿತ್ಯಾಸಕ್ತರು ಹಾಗೂ... - [ಗ್ರಾಮೀಣ ಉದ್ಯೋಗಾಕಾಂಕ್ಷಿಗಳ ಉಜ್ವಲ ಭವಿತವ್ಯಕ್ಕೆ ಆಪ್ತ ಸಮಾಲೋಚನಾ ಶಿಬಿರ ನೆರವಾಗಲಿ- ಇ ಓ](https://bhavanatv.com/2025/1739/): ಹೊನ್ನಾವರ: ವ್ಯಕ್ತಿ ಉದ್ಯೋಗ ಕೈಗೊಳ್ಳುವುದರ ಮೂಲಕ ಸಮಾಜದಲ್ಲಿ ಗೌರವ ಸ್ಥಾನಮಾನ, ಆದಾಯ ಗಳಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೊನ್ನಾವರ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚೇತನ್ ಕುಮಾರ್ ಪಿ ರವರು ತಾಲೂಕಿನ ಉದ್ಯೋಗಾಕಾಂಕ್ಷಿಗಳಿಗೆ ಕರೆ ನೀಡಿದರು. ದಿನಾಂಕ 28-10-2025 ರಂದು ಹೊನ್ನಾವರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ತಾಲೂಕ ಪಂಚಾಯತ್ ಹೊನ್ನಾವರ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹೊನ್ನಾವರ ಹಾಗೂ ಸಂಜೀವಿನಿ ತಾಲೂಕ ಅಭಿಯಾನ ನಿರ್ವಹಣಾ ಘಟಕದ ಆಶ್ರಯದಲ್ಲಿ ಗ್ರಾಮೀಣ ಯುವ ಜನತೆಗೆ ಆಯೋಜಿಸಿದ ಆಪ್ತ ಸಮಾಲೋಚನಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಣ್ಣಪ್ಪ ನಾಯಕ್ ರವರು ಎನ್ ಆರ್ ಎಲ್ ಎಂ ಯೋಜನೆಯಡಿ ಆಯೋಜಿಸಿದ ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಆಪ್ತ ಸಮಾಲೋಚನಾ ಶಿಬಿರ ಅತ್ಯಂತ ಅರ್ಥಪೂರ್ಣವಾಗಿದ್ದು, ತಾಲೂಕಿನ ಯುವ ಜನತೆ ತಮ್ಮ ಅರ್ಹತೆಗಳಿಗೆ ಅನುಗುಣವಾಗಿ ಬಂದಿರುವ ಯೋಜನ ಅನುಷ್ಠಾನ... - [ನರೇಗಾ ಸಕ್ರಿಯ ಕೂಲಿಕಾರರ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ ; ಡಾ. ದಿಲೀಷ್ ಶಶಿ](https://bhavanatv.com/2025/1736/): ಭಟ್ಕಳ:– ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಕ್ರಿಯ ಕೂಲಿಕಾರರ ಇ-ಕೆವೈಸಿ ಪ್ರಕ್ರಿಯೆಯನ್ನು ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ನಿರ್ದೇಶನದಂತೆ ಅಕ್ಟೋಬರ್ 31 ರ ಒಳಗೆ ಕಡ್ಡಾಯವಾಗಿ ಶೇ.100 ರಷ್ಟು ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಸೂಚನೆ ನೀಡಿದರು. ಅವರು ಭಟ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಆದೇಶ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಸೂಚನೆಯಂತೆ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೋಂದಾಯಿತ ಸಕ್ರಿಯ ಕೂಲಿಕಾರರ ಜಾಬ್ ಕಾರ್ಡ್ ಗಳನ್ನು ಇ-ಕೆವೈಸಿ ಮೂಲಕ ಮೌಲ್ಯೀಕರಿಸುತ್ತಿದ್ದು, ಎಲ್ಲಾ ಗ್ರಾಮ ಪಂಚಾಯಿತಿಗಳ ಸಕ್ರಿಯ ಕೂಲಿಕಾರರ ಇಕೆವೈಸಿಯನ್ನು ಅಭಿಯಾನದ ಮಾದರಿಯಲ್ಲಿ ಅತೀ ತುರ್ತಾಗಿ ಪೂರ್ಣಗೊಳಿಸಬೇಕು ಎಂದರು. ಗ್ರಾಮ ಪಂಚಾಯತ್ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಕರ ಸಂಗ್ರಹಕ್ಕೆ ವಾಣಿಜ್ಯ ಮಳಿಗೆ, ಅಂಗಡಿ ಮುಂಗಟ್ಟು ಮತ್ತು ಮನೆಗಳಿಗೆ... - [ಶಿಲ್ಪಿ ಅಣ್ಣಪ್ಪ ನಾಯ್ಕ ನಿಧನ](https://bhavanatv.com/2025/1733/): ಹೊನ್ನಾವರ: ಶಿಲಾಮಯ ದೇವಸ್ಥಾನಗಳ ಶಿಲ್ಪಿ ಕೊಡ್ಸುಳು ಅಣ್ಣಪ್ಪ ನಾಯ್ಕ (47) ನಿಧನರಾಗಿದ್ದಾರೆ. ಅವರಿಗೆ ಪತ್ನಿ ಕುಸುಮಾ ಅಣ್ಣಪ್ಪ ನಾಯ್ಕ, ಪುತ್ರರಾದ ಶಶಾಂಕ, ಧನುಷ್, ಪುತ್ರಿ ನಮಿತಾ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ. 1990 ರಿಂದ ಅವರು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಹಲವಾರು ಶಿಲಾಮಯ ದೇವಸ್ಥಾನ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಹೊನ್ನಾವರದ ಶ್ರೀ ಶಾರದಾಂಬಾ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ, ಶಿರಾಲಿಯ ಶ್ರೀ ಅನ್ನಪೂರ್ಣ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಶಿಲಾಮಯ ಕಟ್ಟಡವು ಆಕರ್ಷಕವಾಗಿ ನಿರ್ಮಿಸಿದ್ದರು.ವರದಿ : ವಿಶ್ವನಾಥ ಸಾಲ್ಕೋಡ್, ಹೊನ್ನಾವರ - [ನಗುವಿನ ಒಡೆಯ, ಕರ್ನಾಟಕ ರತ್ನ, ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವು ಪಟ್ಟಣದಲ್ಲಿ ಇಂದು ಅರ್ಥಪೂರ್ಣವಾಗಿ ನಡೆಯಿತು.](https://bhavanatv.com/2025/1730/): ಕೆ ಆರ್ ಪೇಟೆ : ಮೈಸೂರಿನ ಜೂನಿಯರ್ ಪುನೀತ್ ರಾಜಕುಮಾರ್, ಯುವ ದಸರಾದಲ್ಲಿ ತಮ್ಮ ನೃತ್ಯದ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಸ್ಟಾರ್ ಪುಣ್ಯ, ಪ್ರಗತಿಪರ ಕೃಷಿಕ ವಡಕಹಳ್ಳಿ ಮಂಜೇಗೌಡ, ಮಾತೃ ಭೂಮಿ ಅನಾಥಾಶ್ರಮದ ವ್ಯವಸ್ಥಾಪಕ ಜೈಹಿಂದ್ ನಾಗಣ್ಣ ಹಾಗೂ ಸಾವಿರಾರು ಪುನೀತ್ ಅಭಿಮಾನಿಗಳು ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿರುವ ಪುನೀತ್ ರಾಜಕುಮಾರ್ ಅವರ ಪುತ್ತಳಿಗೆ ವಿಶೇಷ ಪೂಜೆ ಸಲ್ಲಿಸಿ, ಅಪ್ಪು ಯುವ ಸಮಾಜ ಸೇವಾ ಟ್ರಸ್ಟ್ ಆಯೋಜಿಸಿದ್ದ ಸಮಾಜ ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಜೂನಿಯರ್ ಪುನೀತ್ ರಾಜಕುಮಾರ್ ನೆರೆದಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ ತಮ್ಮ ಸಮಾಜ ಸೇವ ಕಾರ್ಯ ಚಟುವಟಿಕೆಗಳ ಮೂಲಕ ನಾಡಿನಾದ್ಯಂತ ಮನೆ ಮಾತಾಗಿದ್ದ ಪುನೀತ್ ರಾಜಕುಮಾರ್ ಒಬ್ಬ ಆದರ್ಶ ವ್ಯಕ್ತಿಯಾಗಿದ್ದು, ಯುವಜನರ ಸಾಧನಾ ಕಾರ್ಯಕ್ಕೆ ಪ್ರೇರಕ ಶಕ್ತಿಯಾಗಿದ್ದಾರೆ. ಸಮಾಜದಲ್ಲಿ ವಾಸಿಸುವ ನೊಂದವರು ಹಾಗೂ ತುಳಿತಕ್ಕೊಳಗಾದ ಬಡ ಜನರಿಗೆ ಕೈಲಾದ ಸಹಾಯ ಮಾಡುವ ಮೂಲಕ ಭಗವಂತನನ್ನು ಕಾಣುವ ಪ್ರಯತ್ನ ಮಾಡಬೇಕು ಎಂಬ ಸಂದೇಶವನ್ನು ನಾಡಿಗೆ ನೀಡಿದ ಪುನೀತ್... - [ಪದವೀಧರರ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಆಹ್ವಾನ](https://bhavanatv.com/2025/1727/): ಭಟ್ಕಳ: ಪಶ್ಚಿಮ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಅವಧಿ 2026ರ ನವೆಂಬರ್ 31ರಂದು ಮುಗಿಯಲಿದ್ದು, ಹೊಸ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. 2025ರ ನವೆಂಬರ್ 1 ಅನ್ನು ಅರ್ಹತಾ ದಿನಾಂಕವೆAದು ನಿಗದಿ ಮಾಡಲಾಗಿದೆ. ಆ ದಿನಾಂಕಕ್ಕೆ ಕನಿಷ್ಠ ಮೂರು ವರ್ಷಗಳ ಹಿಂದೆ ಪದವಿ ಪಡೆದಿರುವ ಹಾಗೂ ಕ್ಷೇತ್ರದೊಳಗೆ ವಾಸಿಸುತ್ತಿರುವ ಪದವೀಧರರು ತಮ್ಮ ಹೆಸರು ಸೇರಿಸಿಕೊಳ್ಳಲು ಅವಕಾಶವಿದೆ. ಹೆಸರು ಸೇರಿಸಿಕೊಳ್ಳಲು ನಮೂನೆ-18 ಹಾಗೂ ಮೂರನೇ ಅನುಸೂಚಿಯ ನಮೂನೆಗಳನ್ನು ತುಂಬಿ ಅಗತ್ಯ ದಾಖಲೆಗಳೊಂದಿಗೆ ನವೆಂಬರ್ 6ರೊಳಗೆ ಸಲ್ಲಿಸಬೇಕಿದೆ. ಅರ್ಜಿಯೊಂದಿಗೆ ಪದವಿ ಪ್ರಮಾಣಪತ್ರದ ಪ್ರತಿಯ ಜೊತೆಗೆ ಆಧಾರ್, ಮತದಾರರ ಗುರುತಿನ ಚೀಟಿ ಹಾಗೂ ವಾಸಸ್ಥಳದ ದಾಖಲೆ ಕಡ್ಡಾಯವಾಗಿದೆ. ಈ ದಾಖಲೆಗಳನ್ನು ತಹಶೀಲ್ದಾರ್, ಕಾಲೇಜು ಪ್ರಾಂಶುಪಾಲರು, ಜಂಟಿ ಅಭಿವೃದ್ಧಿ ಅಧಿಕಾರಿಗಳು, ಪುರಸಭೆ ಕಾರ್ಯನಿರ್ವಾಹಕ ಅಧಿಕಾರಿಗಳು, ಗಜೆಟೆಡ್ ಅಧಿಕಾರಿಗಳು ಅಥವಾ ನೋಟರಿ ಪಬ್ಲಿಕ್ ಅವರಿಂದ ದೃಢೀಕರಿಸಬೇಕು. ಭಟ್ಕಳ ತಾಲೂಕಿನಲ್ಲಿ ತಹಶೀಲ್ದಾರ್ ಕಚೇರಿ (ದೂರವಾಣಿ: 08385-226422) ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಗಳ ಕಚೇರಿ (ದೂರವಾಣಿ:... - [ನೂತನ ಅಧ್ಯಕ್ಷರಾಗಿ ಶಿವರಾಮ ಕೃಷ್ಣ ಸಂಗುಮನೆ ಉಪಾಧ್ಯಕ್ಷರಾಗಿ ಹರೀಶ ತಿಮ್ಮಪ್ಪ ಗೌಡ](https://bhavanatv.com/2025/1724/): ಹೊನ್ನಾವರ: ಇಲ್ಲಿನ ಪ್ರತಿಷ್ಠಿತ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಶಿವರಾಮ ಕೃಷ್ಣ ಸಂಗುಮನೆ ಉಪಾಧ್ಯಕ್ಷರಾಗಿ ಹರೀಶ ತಿಮ್ಮಪ್ಪ ಗೌಡ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಅಧಿಕಾರ ಸ್ವೀಕರಿಸಿದ ಶಿವರಾಮ ಕೃಷ್ಣ ಸಂಗುಮನೆ ಮಾತನಾಡಿ ಕೃಷಿಕ, ಗ್ರಾಹಕರ ಹಿತಕಾಯುವುದರ ಜೊತೆ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರ ಸಹಕಾರ ಪಡೆದು ರಾಜ್ಯದಲ್ಲೇ ಮಾದರಿ ಬ್ಯಾಂಕ ಆಗಿಸಲು ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಚಿವ ಮಂಕಾಳ ವೈದ್ಯ, ನಿರ್ದೆಶಕರುಗಳು, ಸಿಬ್ಬಂದಿಗಳು ಅಭಿನಂದಿಸಿದರು. ಚುನಾವಣಾ ಅಧಿಕಾರಿ ಸುಮನಾ ಎಮ್ ನಾಯ್ಕ ಚುನಾವಣಾ ಪ್ರಕ್ರಿಯೆ ನಡೆಸಿದರು.ಆಡಳಿತ ಮಂಡಳಿಯ ಎಲ್ಲ ನಿರ್ದೇಶಕ ರು, ಪ್ರಧಾನ ವ್ಯವಸ್ಥಾಪಕ ಎಂ.ಡಿ.ಮುಕ್ರಿ ಉಪಸ್ಥಿತರಿದ್ದರು.ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ - [ಭಟ್ಕಳ ಗ್ರಾಮೀಣ ಪೊಲೀಸ್ ಬಲೆಗೆ ಬಿದ್ದ ಇಬ್ಬರು ಓ.ಸಿ. ಬುಕ್ಕಿಗಳು: ಪ್ರಕರಣ ದಾಖಲು](https://bhavanatv.com/2025/1721/): ಭಟ್ಕಳ: ತಾಲೂಕಿನ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ನಡೆದ ದಾಳಿಯಲ್ಲಿ ಇಬ್ಬರು ಓ.ಸಿ. ಮಟಕಾ ಬುಕ್ಕಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮೊದಲು ಘಟನೆಯಲ್ಲಿ ಸರ್ಪನಕಟ್ಟಾ ಕೋಣಾರ ರಸ್ತೆಯಲ್ಲಿರುವ ಮಾಡರ್ನ್ ಪೇಂಟಿAಗ್ ಅಂಗಡಿ ಎದುರು ಸಾರ್ವಜನಿಕ ಸ್ಥಳದಲ್ಲಿ ಓ.ಸಿ. ಜೂಜಾಟ ನಡೆಸುತ್ತಿದ್ದ ಗಣಪತಿ ತಂದೆ ದೇವೇಂದ್ರ ನಾಯ್ಕ ತಲಾಂದ ಹಾಗೂ ಬುಕ್ಕಿ ಅಶೋಕ ತಂದೆ ನಾರಾಯಣ ನಾಯ್ಕ ಯಲ್ವಡಿಕವೂರ ಬಂಧಿತರಾಗಿದ್ದಾರೆ. ಅವರಿಂದ ರೂ.640 ನಗದು ಹಾಗೂ ಓ.ಸಿ. ಚೀಟಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನೊಂದು ಘಟನೆಯಲ್ಲಿ ಶಿರಾಲಿ ಜಂಕ್ಷನ್ ರಸ್ತೆಯಲ್ಲಿ ಇದೇ ರೀತಿಯ ಜೂಜಾಟ ನಡೆಸುತ್ತಿದ್ದ ಜಯರಾಜ ತಂದೆ ಮಂಜುನಾಥ ಮೊಗೇರ್ (ಶಿರಾಲಿ ಅಳ್ವೆಕೊಡಿ) ಹಾಗೂ ಬುಕ್ಕಿ ದೇವೇಂದ್ರ ತಂದೆ ಮಂಜುನಾಥ ನಾಯ್ಕ (ಶಿರಾಲಿ ಅಳ್ವೆಕೊಡಿ) ಬಂಧಿತರಾಗಿದ್ದು, ಅವರಿಂದ ರೂ. 440 ನಗದು ಹಾಗೂ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.ಬಂಧಿತರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯ ಸಿಪಿಐ ಮಂಜುನಾಥ ಅಂಗಾರೆಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. - [ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ, ವ್ಯಕ್ತಿ ಬಂಧನ](https://bhavanatv.com/2025/1718/): ಮುರ್ಡೇಶ್ವರ: ಭಟ್ಕಳ: ಮುರ್ಡೇಶ್ವರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಬಂಧಿತನನ್ನು ಮಾದೇವ (ತಂದೆ ಈರಯ್ಯ ದೇವಾಡಿಗ), ಕೋಕ್ತಿ ಬೇಂಗ್ರೆ 02 ನಿವಾಸಿ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿ ಕಾಯ್ಕಿಣಿ ಗ್ರಾಮದ ದೇವಿಕಾನ ರಸ್ತೆಯಲ್ಲಿದ್ದ ಸಾರ್ವಜನಿಕ ಸ್ಥಳದಲ್ಲಿ ಹಣ ಪಡೆದು, ಮಟ್ಕಾ ಜೂಜಾಟ ನಡೆಸುತ್ತಿದ್ದನು. ಮಾಹಿತಿ ದೊರಕುತ್ತಿದ್ದಂತೆ ಮುರ್ಡೇಶ್ವರ ಠಾಣೆಯ ಪಿಎಸ್‌ಐ ಹನುಮಂತ ಬಿರಾದಾರ ಅವರ ನೇತೃತ್ವದ ತಂಡ ಸ್ಥಳಕ್ಕೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.. ಬAಧಿತನ ಬಳಿಯಿಂದ ರೂ.960 ನಗದು ಮತ್ತು ಜೂಜಾಟಕ್ಕೆ ಬಳಸಿದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬAಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. - [ವಿದ್ಯುತ್ ಅವಗಡದಿಂದ ಮೃತಪಟ್ಟ ಕುಟುಂಬಕ್ಕೆ ಸಚಿವ ಮಂಕಾಳ್ ವೈದ್ಯರಿಂದ ಸರಕಾರದ ಪರಿಹಾರ ಮತ್ತು ವ್ಯಯಕ್ತಿಕ ಸಹಾಯ.](https://bhavanatv.com/2025/1714/): ಹೊನ್ನಾವರ : ಇತ್ತೀಚೆಗೆ ಮನೆ ಸಮೀಪ ಹರಿದುಬಿದ್ದ ವಿದ್ಯುತ್ ಲೈನ್ ಸ್ಪರ್ಶಿಸಿ ಮೃತಪಟ್ಟಿದ್ದ ಕಾಸರಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಬಟ್ಟೆವಿನಾಯಕಕೇರಿಯ ದಂಪತಿಗಳ ಮನೆಗೆ ಬುಧವಾರ ಸಚಿವ ಮಂಕಾಳ್ ವೈದ್ಯರವರು ತೆರಳಿ ಸರಕಾರದ ಪರಿಹಾರ ಮತ್ತು ವಯಕ್ತಿಕ ಸಹಾಯ ನೀಡಿದರು. ಮನೆಯ ಬಳಿಯಿಂದ ಹಾದು ಹೋಗಿದ್ದ ವಿದ್ಯುತ್ ಲೈನ್ ಹರಿದು ಬಿದ್ದ ಪರಿಣಾಮ ಸಂತೋಷ ಗೌಡ ಎನ್ನುವವರು ಮೃತಪಟ್ಟಿದ್ದು ಅವರ ರಕ್ಷಣೆಗೆಂದು ಹೋದ ಪತ್ನಿ ಸೀತು ಗೌಡ ಇವರಿಗೂ ವಿದ್ಯುತ್ ತಗುಲಿ ಇಬ್ಬರು ದಾರುಣವಾಗಿ ಮೃತಪಟ್ಟಿದ್ದರು.ಘಟನೆಗೆ ಸಂಭAದ ಅವರ ಮನೆಗೆ ಭೇಟಿ ನೀಡಿದ ಸಚಿವ ಮಂಕಾಳ ವೈದ್ಯರವರು ಕುಟುಂಬಸ್ಥರನ್ನು ಭೇಟಿ ಮಾಡಿ ಮಕ್ಕಳ ಆರೋಗ್ಯ ವಿಚಾರಿಸಿ ಅಪಘಾತದಲ್ಲಿ ಮೃತ ಪಟ್ಟವರ ಕುಟುಂಬಕ್ಕೆ ಸರಕಾರದಿಂದ ತಲಾ ಐದು ಲಕ್ಷದಂತೆ ರೂ 10 ಲಕ್ಷ ರೂಪಾಯಿಯ ಪರಿಹಾರದ ಚೆಕ್‌ನ್ನು ಹಸ್ತಾಂತರಿಸಿ, ಮಕ್ಳಳ ವಿದ್ಯಾಭ್ಯಾಸಕ್ಕಾಗಿ ವಯಕ್ತಿಕ ರೂ 5 ಲಕ್ಷ ರೂಪಾಯಿ ಸಹಾಯ ನೀಡುವುದರ ಜೊತೆಗೆ ನಿಮ್ಮೊಂದಿಗೆ ನಾನು ಇದ್ದೇನೆ ಎಂದು ಮಕ್ಕಳಿಗೆ ಧೈರ್ಯ ತುಂಬಿ ಮುಂದೆ... - [ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟ: ವ್ಯಕ್ತಿ ವಿರುದ್ಧ ಪ್ರಕರಣ](https://bhavanatv.com/2025/1711/): ಭಟ್ಕಳ: ತಾಲೂಕಿನ ಬಸ್ತಿಮಕ್ಕಿ ನ್ಯಾಷನಲ್ ಕಾಲೋನಿ ಮಾರ್ಗದ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ವ್ಯಕ್ತಿ ವಿರುದ್ಧ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಈಶ್ವರ ದುರ್ಗಪ್ಪ ನಾಯ್ಕ (ದೊಡ್ಡಬಲಸೆ, ಬೈಲೂರ) ನಿವಾಸಿ ಎಂದು ಗುರುತಿಸಲಾಗಿದ್ದು, ಪೊಲೀಸರು ನಡೆಸಿದ ದಾಳಿಯಲ್ಲಿ ಹೇಯ್ವರ್ಡ್ಸ್ ಚಿಯರ್ಸ್ ವಿಸ್ಕಿ 10 ಪ್ಯಾಕೇಟ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಈ ಪ್ರಕರಣ ಸಂಬAಧ ಪಿಎಸ್‌ಐ ಹಣುಮಂತ ಬಿರಾದಾರ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. - [ಭಟ್ಕಳ ತಾಲೂಕಾ ಮಡಿವಾಳ ಮಾಚಿದೇವ ಸಂಘ ಅಸ್ತಿತ್ವಕ್ಕೆ](https://bhavanatv.com/2025/1707/): ಭಟ್ಕಳ: ತಾಲೂಕಿನ ಮಡಿವಾಳ ಸಮಾಜದ ಹಿರಿಯರ ಉಪಸ್ಥಿತಿ ಹಾಗೂ ಸಾಹಿತಿ- ಶಿಕ್ಷಕರಾದ ಶ್ರೀಧರ ಶೇಟರವರ ಮಾರ್ಗದರ್ಶನದಲ್ಲಿ ಭಟ್ಕಳ ತಾಲೂಕಾ ಮಡಿವಾಳ ಮಾಚಿದೇವ ಸಂಘ ಅಸ್ತಿತ್ವಕ್ಕೆ ಬಂದಿದೆ. ಗೌರವಾಧ್ಯಕ್ಷರಾಗಿ ವೆಂಕಟೇಶ ನಾರಾಯಣ ಮಡಿವಾಳ,ಅಧ್ಯಕ್ಷರಾಗಿ ರಮೇಶ ದೇವಪ್ಪ ಮಡಿವಾಳ ಶಿರಾಲಿ, ಉಪಾಧ್ಯಕ್ಷರಾಗಿ ವಿಶ್ವನಾಥ ಮಡಿವಾಳ , ಕೆ ಬಿ. ಮಡಿವಾಳ, ಶ್ರೀಮತಿ ಮಮತಾ ಭಟ್ಕಳ, ರಾಘವೇಂದ್ರ ಮಡಿವಾಳ ಮತ್ತು ಕೃಷ್ಣಾನಂದ ಶಿರಾಲಿಯವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನಿತ್ಯಾನಂದ ಟಿ.ಎಸ್.,ಸಹ ಕಾರ್ಯದರ್ಶಿಯಾಗಿ ಸಂತೋಷ ಪಿ. ಮಡಿವಾಳ, ಖಜಾಂಚಿಯಾಗಿ ರಾಜೇಶ ವಿ. ಮಡಿವಾಳ,ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ ಮಡಿವಾಳ ಮತ್ತು ಸದಸ್ಯರಾಗಿ ಸುಬ್ರಹ್ಮಣ್ಯ ಮಡಿವಾಳ ಬಸ್ತಿ, ಗೋವಿಂದರಾಯ ಮಡಿವಾಳ ಭಟ್ಕಳ, ರಮೇಶ ಭೋಮಕರ, ವಿಜಯಕುಮಾರ ಆರ್. ಮಡಿವಾಳ ಶಿರಾಲಿ, ಮಂಜುನಾಥ ಮಡಿವಾಳ ಅಗ್ಲೋಳೆ, ಗಣಪತಿ ಮಡಿವಾಳ ಮಾವಿನಕಟ್ಟೆ,ಮಂಜುನಾಥ ಮಡಿವಾಳ ಭಟ್ಕಳ, ಶಂಕರ ನಾರಾಯಣ ಮಡಿವಾಳ ಶಿರಾಲಿ, ಪ್ರದೀಪ ಗಣಪತಿ ಮಡಿವಾಳ, ಗಜಾನನ ಮಡಿವಾಳ ಬೈಲೂರ,ವಸಂತ ಮಡಿವಾಳ ಭಟ್ಕಳ, ಬಾಲಕೃಷ್ಣ ಮಡಿವಾಳ ಭಟ್ಕಳ ಹಾಗೂ ಮಾರ್ಗದರ್ಶಕರಾಗಿ ಮಂಜುನಾಥ ನಾಗಪ್ಪ ಮಡಿವಾಳ ಕೆರೆಮನೆಯವರನ್ನು... - [ಮಾದಕ ವ್ಯಸನಿಗಳಿಗೆ ಶಾಕ್ ನೀಡಿದ ಗ್ರಾಮೀಣ ಠಾಣೆ ಪೊಲೀಸರು: ಮೂವರ ಬಂಧನ](https://bhavanatv.com/2025/1704/): ಭಟ್ಕಳ: ತಾಲೂಕಿನ ವೆಂಕಟಾಪುರ ಮೈದಾನ ಹಾಗೂ ಪೆಟ್ರೋಲ್ ಬಂಕ ಹತ್ತಿರ ಗಾಂಜಾ ಸೇವನೆ ಮಾಡಿದ ಅಮಲಿನಲ್ಲಿ ಸಾರ್ವಜನಿಕವಾಗಿ ಅಸಹಜವಾಗಿ ವರ್ತಿಸುತ್ತಿದ್ದ ಮೂವರು ಯುವಕರು ಭಟ್ಕಳ ಗ್ರಾಮೀಣ ಪೊಲೀಸರ ಬಲೆಗೆ ಸಿಕ್ಕಿದ್ದಾರೆ. ಮಾದಕ ವಸ್ತು ಸೇವನೆ ಮಾಡುತ್ತಿದ್ದ ಆರೋಪಿಗಳೆಂದರೆ ಅಸ್ಲಾಂ ಬೆಟಗೇರಿ ತಂದೆ ಅಬ್ದುಲ್ ಸತ್ತಾರ,ಜಾಲಿ ಶಿರಕುಳಿ ಹೊಂಡ,ಜಾವಿದ್ ತಂದೆ ಮೆಹಬೂಬ್ ಅಲಿ,ಜಾಲಿ ದೇವಿನಗರ,ಮೊಹಮ್ಮದ್ ಆಬೀದ್ ತಂದೆ ಸೈಯದ್ ರಸೀದ್ ಬಿಳಲಖಂಡ ಗುಳ್ಮೆ ಎಂದು ಗುರುತ್ತಿಸಲಾಗಿದೆ.ಇವರು ಮೂವರೂ ವಿಭಿನ್ನ ಸಮಯಗಳಲ್ಲಿ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ವಿಚಾರಣೆ ವೇಳೆ ಮೂವರೂ ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲೂ ಗಾಂಜಾ ಸೇವನೆ ದೃಢಪಟ್ಟಿದೆ.ಈ ಹಿನ್ನೆಲೆಯಲ್ಲಿ ಭಟ್ಕಳ ಗ್ರಾಮೀಣ ಠಾಣೆಯ ಸಿ.ಪಿ.ಐ ಮಂಜುನಾಥ ಅಂಗಾರೆಡ್ಡಿ ಹಾಗೂ ಪಿಎಸೈ ಭರಮಪ್ಪ ಬೆಳಗಲಿ ಸರ್ಕಾರದ ಪರವಾಗಿ ಪ್ರಕರಣ ದಾಖಲಿಸಿದ್ದಾರೆ. - [ಕಾರ್ತೀಕ ದೀಪೋತ್ಸವ ದಿನಾಂಕ 5/11/2025 ರಂದು](https://bhavanatv.com/2025/1701/): ಕಾರ್ಕಳ: ಅತ್ತೂರು ಕೈಲಾಜೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಂಪ್ರತಿ ನಡೆಯುವ ಕಾರ್ತೀಕ ದೀಪೋತ್ಸವ ದಿನಾಂಕ 5/11/2025 ರಂದು ಬೆಳಿಗ್ಗೆ ಧಾತ್ರಿ ಹೋಮ ಮದ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ ರಾತ್ರಿ ಪಲ್ಲಕೀ ಉತ್ಸವ . ತಾವೆಲ್ಲರೂ ಬಂದು ದೇವರ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿ.ವರದಿ : ಅರುಣ ಭಟ್ ಕಾರ್ಕಳ - [ಕಾರ್ಕಳ ದೇವಳದಲ್ಲಿ ಭಜನ್ ಸಂಧ್ಯಾ ಕಾರ್ಯಕ್ರಮ.](https://bhavanatv.com/2025/1698/): ಕಾರ್ಕಳ : ಪಡುತಿರುಪತಿ ಕೀರ್ತಿಯ ಕಾರ್ಕಳ ಶ್ರೀ ವೆಂಕಟರಮಣ ದೇವಳದಲ್ಲಿ ವೆಂಕಟರಮಣ ಭಜನಾ ಮಂಡಳಿಯ ಸಹಯೋಗದಲ್ಲಿ ಭಜನ್ ಸಂಧ್ಯಾ ಕಾರ್ಯಕ್ರಮವು ಸೋಮವಾರ ಸಂಜೆ ನಡೆಯಿತು. ಮಂಗಳೂರಿನ ಖ್ಯಾತ ಯುವ ಸಂಗೀತ ಕಲಾವಿದರಾದ ಗುರುದಾಸ್ ಚೂರ್ಯ ಅವರು ಈ ಭಕ್ತಿ ಸಂಗೀತದ ವಿಶೇಷವಾದ ಕಾರ್ಯಕ್ರಮವನ್ನು ಅತ್ಯಂತ ಸುಂದರವಾಗಿ ನಡೆಸಿಕೊಟ್ಟರು. ಕಾಶಿ ಮಠಾಧೀಶರಾದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ನಡೆದ ಈ ಕಾರ್ಯಕ್ರಮವನ್ನು ದೇವಳದ ಪುರಾಣಿಕರಾದ ರವೀಂದ್ರ ಪುರಾಣಿಕ್, ದೇವಳದ ಪ್ರಥಮ ಮೊಕ್ತೇಸರರಾದ ಜಯರಾಮ್ ಪ್ರಭು ಮತ್ತು ಡಾಕ್ಟರ್ ಮಂಜುನಾಥ್ ಕಿಣಿ ಅವರು ಜೊತೆಯಾಗಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಸುಮಾರು ಎರಡು ಘಂಟೆಗಳ ಕಾಲ ನಡೆದ ಈ ಭಕ್ತಿ ಸಂಗೀತದ ಕಾರ್ಯಕ್ರಮದಲ್ಲಿ ಹಿನ್ನೆಲೆ ಕಲಾವಿದರಾಗಿ ಹಾರ್ಮೋನಿಯಂನಲ್ಲಿ ಮಣೆಲ್ ನಾಗೇಶ್ ಶೆಣೈ, ತಬ್ಲಾದಲ್ಲಿ ದತ್ತ ಪ್ರಭು, ಪಕ್ವಾಜನಲ್ಲಿ ಉಪೇಂದ್ರ ಮಲ್ಯಾ, ಕೊಳಲಿನಲ್ಲಿ ಉಡುಪಿ ಚೇತನ್ ನಾಯಕ್, ತಾಳದಲ್ಲಿ ರಾಮನಾಥ್ ಕಿಣಿ ಅವರು ಸಹಕರಿದರು. ವೆಂಕಟರಮಣ ಭಜನಾ ಮಂಡಳಿಯ ಗೌರವ ಅಧ್ಯಕ್ಷರಾದ... - [ಒಂದೇ ದಿನ ಪತಿ ಪತ್ನಿಯ ಸಾವು.. ಸಾವಿನಲ್ಲೂ ಒಂದಾದ ದಂಪತಿಗಳು.. ಬೂಕನಕೆರೆ ಗ್ರಾಮದಲ್ಲಿ ನಡೆದಿರುವ ಘಟನೆ..](https://bhavanatv.com/2025/1695/): ಕೃಷ್ಣರಾಜಪೇಟೆ: ಗಂಡ, ಹೆಂಡತಿ ಇಬ್ಬರೂ ಒಂದೇ ದಿನ ನಿಧನ ಹೊಂದಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಗ್ರಾಮದಲ್ಲಿ ನಡೆದಿದೆ. ಬೂಕನಕೆರೆ ಗ್ರಾಮದ ಗೌರಮ್ಮ ಎಂಬುವವರು ಭಾನುವಾರ ನಿಧನ ಹೊಂದಿದ್ದರು. ಗೌರಮ್ಮ ಅವರ ಅಂತ್ಯಸAಸ್ಕಾರಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿರುವಾಗ ಅವರ ಪತಿ ಲಿಂಗರಾಜನಾಯಕ ಅವರು ಪತ್ನಿಯ ಶವಕ್ಕೆ ಪೂಜೆ ಸಲ್ಲಿಸುವ ವೇಳೆ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಕಳೆದ 46ವರ್ಷಗಳ ಹಿಂದೆ ವಿವಾಹವಾಗಿದ್ದ ಗೌರಮ್ನ ಮತ್ತು ನಿಂಗರಾಜನಾಯಕ ಅವರು ವಿವಾಹವಾಗಿದ್ದರು. ಕಳೆದ 46ವರ್ಷಗಳಿಂದ ಜೊತೆಯಲ್ಲಿ ಜೀವನ ನಡೆಸಿದ್ದ ದಂಪತಿಗಳಿಬ್ಬರೂ ಎಲ್ಲಿಗೆ ಹೋದರೂ ಜೊತೆಯಲ್ಲಿಯೇ ಹೋಗಿ ಬರುತ್ತಿದ್ದರು. ಈ ದಂಪತಿಗಳಿಗೆ ಜಗದೀಶ್ ಮತ್ತು ವಿಜಯ್ ಕುಮಾರ್ ಎಂಬ ಇಬ್ಬರು ಪುತ್ರರಿದ್ದರು. ಗೌರಮ್ಮ ಭಾನುವಾರ ಬೆಳಿಗ್ಗೆ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಗೌರಮ್ಮ ಅವರ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಂಡು, ಮೃತ ಗೌರಮ್ಮ ಅವರ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸುವ ಸಮಯದಲ್ಲಿ ಅವರ ಪತಿ ನಿಂಗರಾಜನಾಯಕ ಅವರು ಪೂಜೆ ಸಲ್ಲಿಸುವುದಕ್ಕೂ ಮುನ್ನವೇ ಅಸ್ವಸ್ಥಗೊಂಡು ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ. ನಂತರ ಇಬ್ಬರಿಗೂ... - [ಪಾತ್ರಾಭಿನಯ ಸ್ಪರ್ದೆಯಲ್ಲಿ ಇಡಗುಂಜಿ ಪ್ರೌಢಶಾಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ](https://bhavanatv.com/2025/1686/): ಹೊನ್ನಾವರ : ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ದಿನಾಂಕ25-10-2025ರAದು ಕುಮಟಾದ ಸರಕಾರಿ ಉರ್ದು ಪ್ರೌಢಶಾಲೆಯಲ್ಲಿ ಡಯಟ್ ಪ್ರಾಯೋಜಕತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಪಾತ್ರಾಭಿನಯ ಸ್ಪರ್ದೆಯಲ್ಲಿ ಸರಕಾರಿ ಪ್ರೌಢಶಾಲೆ ಇಡಗುಂಜಿ ತಾ|| ಹೊನ್ನಾವರ ಇಲ್ಲಿಯ ವಿದ್ಯಾರ್ಥಿಗಳು ಪ್ರಥಮ ಸ್ಥಾನಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರು ಹಾಗೂ ಉಪನ್ಯಾಸಕರ ಸಮರ್ಥ ಮಾರ್ಗದರ್ಶನದಲ್ಲಿ ಶಾಲೆಯ ಶಿಕ್ಷಕರಾದ ಆನಂದ ನಾಯ್ಕ ಅವರ ರಚನೆ ಮತ್ತು ನಿರ್ದೇಶನದಲ್ಲಿ ಶಾಲೆಯ ಉಪಪ್ರಾಚಾರ್ಯರಾದ ಶ್ರೀಮತಿ ಆಶಾ ವಿ ಪೈ ಹಾಗೂ ಎಲ್ಲ ಶಿಕ್ಷಕರ ಸಹಕಾರದೊಂದಿಗೆ ವಿದ್ಯಾರ್ಥಿಗಳಾದ ಗಣೇಶ ಮಂಜುನಾಥ ನಾಯ್ಕ, ಧನ್ಯ ಕಲಾಧರ ಅಂಬಿಗ, ಚಂದ್ರಕಾAತ ಬಾಬು ಮರಾಠಿ, ಜಯಂತಿ ನಾರಾಯಣ ಮರಾಠಿ ಮತ್ತು ಪ್ರಜ್ವಲ ಶಿವಾನಂದ ನಾಯ್ಕ ಅವರ ಮನೋಜ್ಞ್ ಅಭಿನಯದ ಮೂಲಕ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳು ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.. ವಿದ್ಯಾರ್ಥಿಗಳ ಈ ಅಮೋಘ ಸಾಧನೆಯನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಲತಾ ನಾಯ್ಕ ಉಪನಿರ್ದೇಶಕರು(ಅಭಿವೃದ್ದಿ)... - [ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ಮತಗಟ್ಟೆಗಳ ಪರಿಶೀಲನೆ](https://bhavanatv.com/2025/1678/): ಹೊನ್ನಾವರ : ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ಇವರು ಹೊನ್ನಾವರ ತಾಲೂಕಿನ ಮಂಕಿ ಪಟ್ಟಣ ಪಂಚಾಯತ್ ಚುನಾವಣೆಯ ಪೂರ್ವ ಸಿದ್ಧತೆಗೆ ಸಂಬAಧಿಸಿದAತೆ ಮತಗಟ್ಟೆಗಳ ಪರಿಶೀಲನೆ ನಡೆಸಿದರು. ಅಲ್ಲದೇ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು. ಇದೇ ವೇಳೆ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಸಲಹೆ ಸೂಚನೆಗಳನ್ನು ನೀಡಿದರು. ಬಿಸಿಎಂ ವಸತಿ ನಿಲಯ ಮಂಕಿಗೆ ಭೇಟಿ ನೀಡಿ ಆಹಾರದ ಗುಣಮಟ್ಟವನ್ನು ಹಾಗೂ ವಿದ್ಯಾರ್ಥಿಗಳಿಗೆ ನೀಡಿರುವ ಸೌಲಭ್ಯಗಳ ಕುರಿತು ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಪ್ರವೀಣ ಕರಾಂಡೆ, ಕ್ಷೇತ್ರ ಶಿಕ್ಷಣಾಧಿಕಾರಿ ವಿನಾಯಕ ಅವಧಾನಿ ಹೊ ಕಂದಾಯ ನಿರೀಕ್ಷಕ ಹೊನ್ನಾವರ, ಗ್ರಾಮ ಆಡಳಿತ ಅಧಿಕಾರಿ ಮಂಕಿ, ಪಟ್ಟಣ ಪಂಚಾಯತ್ ಮಂಕಿಯ ಸಿಬ್ಬಂದಿಗಳು ಹಾಜರಿದ್ದರು.ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ - ["ಬೀನಾ ವೈದ್ಯ ಶಾಲೆಯ ವಿದ್ಯಾರ್ಥಿಳಿಂದ ಅಬಾಕಸ್ ಸ್ಪರ್ಧೆಯಲ್ಲಿ ಸಾಧನೆ"](https://bhavanatv.com/2025/1671/): ಭಟ್ಕಳ : ಇಲ್ಲಿನ ಬೀನಾ ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ದಿನಾಂಕ 26.10.2025 ಭಾನುವಾರದಂದು ಮೂಡಬೀದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರಾಜ್ಯಮಟ್ಟದ ಅಬಾಕಾಸ್ ಮೆಂಟಲ್ ಅರ್ಥ್ಮೆಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿದ ಇಲ್ಲಿನ ವಿದ್ಯಾರ್ಥಿಗಳಾದ 7 ನೇ ತರತಿಯ ಕುಮಾರಿ.ಯಶಿಕ ಆರ್ ನಾಯ್ಕ ಇವರು ತೃತೀಯ ಸ್ಥಾನವನ್ನು ಪಡೆದಿದ್ದು, 4 ನೇ ತರಗತಿಯ ಕುಮಾರ ರಿಷಭ್ ಆರ್ ನಾಯ್ಕ ಪ್ರಥಮ ಸ್ಥಾನ ಹಾಗೂ 5 ನೇ ತರಗತಿಯ ವಿದ್ಯಾರ್ಥಿಯಾದ ಪ್ರಥಮ್ ಈಶ್ವರ ನಾಯ್ಕ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಮಾನ್ಯ ಸಚಿವರು ಮೀನುಗಾರಿಗೆ, ಬಂದರು ಒಳನಾಡು ಜಲಸಾರಿಗೆ ಇಲಾಖೆ ಕರ್ನಾಟಕ ಸರ್ಕಾರ ಹಾಗೂ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಆದ ಶ್ರೀ ಮಂಕಾಳ್ ಎಸ್ ವೈದ್ಯರವರು, ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ, ಆಡಳಿತ ನಿರ್ದೇಶಕಿಯವರಾದ ಡಾ.ಪುಷ್ಪಲತಾ ಮಂಕಾಳ್ ವೈದ್ಯರವರು, ಬೀನಾ ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರು,... - [ಮಳೆಯಲ್ಲೆ ಸಾವಿರಾರು ಸ್ವಯಂ ಸೇವಕರಿಂದ ಹೊನ್ನಾವರದಲ್ಲಿ ನಡೆದ ಪಥ ಸಂಚಲನ](https://bhavanatv.com/2025/1665/): ಹೊನ್ನಾವರ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷದ ಅಂಗವಾಗಿ ಹೊನ್ನಾವರದಲ್ಲಿ ಸಹಸ್ರಾರು ಗಣವೇಷಧಾರಿ ಸ್ವಯಂ ಸೇವಕರು ಪಥ ಸಂಚಲನ ನಡೆಸಿ ಗಮನ ಸೆಳೆದರು. ಪಥ ಸಂಚಲನ ನೋಡಲು ಮಹಿಳೆಯರು, ಮಕ್ಕಳು ಹಾಗೂ ಯುವಕರು ರಸ್ತೆ ಎರಡು ಬದಿಗಳಲ್ಲಿ ಜಮಾಯಿಸಿದ್ದರು. ಹಲವು ಕಡೆ ಸಾರ್ವಜನಿಕರು ಹೂವುಗಳನ್ನು ಸ್ವಯಂ ಸೇವಕರ ಮೇಲೆ, ಭಗವಾಧ್ವಜ, ಹಾಗೂ ಭಾರತ ಮಾತೆಗೆ, ಡಾ.ಗುರೂಜಿ, ಡಾ.ಹೆಡ್ಗೆವಾರ್ ಅವರ ಭಾವಚಿತ್ರಕ್ಕೆ ಹೂವು ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ಮೆರವಣಿಗೆಯಲ್ಲಿ ಭಾರತ ಮಾತಾ ಕೀ ಜೈ ಸೇರಿ ಮಹಾಪುರುಷರ ಘೋಷಣೆಗಳು ಮೊಳಗಿದವು. ಜೆ ಸಿ ಬಿ ಮೂಲಕ ಪುಷ್ಪರ್ಚನೆ ಮಾಡಿದ್ದು ವಿಶೇಷ ವಾಗಿತ್ತು. ಕೊನೆಯಲ್ಲಿ ಶನಿ ದೇವಸ್ಥಾನದ ಎದುರು ಸಂಪನ್ನ ಗೊಂಡಿತು. ಪಥ ಸಂಚಲನ ಸಾಗುವ ರಸ್ತೆಗಳು ಕೇಸರಿ ಪತಾಕೆಯಿಂದ ಅಲಂಕರಿಸಲಾಗಿತ್ತು. ಅಲ್ಲಲ್ಲಿ ಭಾರತಾಂಬೆಯ ಭಾವಚಿತ್ರಗಳನ್ನಿಟ್ಟು ಪೂಜಿಸುವುದು ಕಂಡುಬAತು. ಮನೆಗಳ ಮುಂದೆ ರಂಗೋಲಿ ಬಿಡಿಸಿ ಅಂದ ಹೆಚ್ಚಿಸಿದ್ದರು. ಸಂಚಲನದಲ್ಲಿ ವಿಭಾಗ ಸಂಘ ಚಾಲಕರಾದ ರಾಮಚಂದ್ರ ಕಾಮತ, ಪ್ರಚಾರಕರಾದ ಗಣೇಶ ಜಿ... - [ದಿ. ಬಂಗಾರಪ್ಪನರ 93 ನೇ ಜನ್ಮದಿನದ ಸಂಭ್ರಮ :](https://bhavanatv.com/2025/1662/): ಸಾಮಾಜಿಕ ನ್ಯಾಯದ ಪ್ರತಿಪಾದನೇಯ ದಿಮಂತ ನಾಯಕ- ರವೀಂದ್ರ ನಾಯ್ಕ ಶಿರಸಿ : ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ಸಾಮಾಜಿಕ ನ್ಯಾಯದ ಪ್ರತಿಪಾದಕರಾದ ದಿಮಂತ ನಾಯಕರಾದ ದಿ. ಬಂಗಾರಪ್ಪನವರ 93 ನೇ ಹುಟ್ಟು ಹಬ್ಬವು ಜಿಲ್ಲಾದ್ಯಂತ ಅವರ ಸಾಧನೆಯ ಕಾರ್ಯ ಸಂಭ್ರಮಿಸುವ ದಿನಗಳಾಗಿವೆ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಹೇಳಿದರು. ಅವರು ದಿವಂಗತ ಬಂಗಾರಪ್ಪನವರ 93 ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ಸಾಮಾಜಿಕ ಕಳಕಳಿ, ಭೂಮಿ ಹೋರಾಟ ಮತ್ತು ಸಾಮಾಜಿಕ ನ್ಯಾಯದ ಕಾರ್ಯವನ್ನು ನೆನಪಿಸುತ್ತಾ ಅವರ ಹುಟ್ಟು ಹಬ್ಬದ ದಿನದಂದು ಅವರ ಸಾಧನೆಯನ್ನು ಸ್ಮರಿಸಿದರು.ಮುಖ್ಯಮಂತ್ರಿ ಇರುವಾಗ ಕಾರವಾರಕ್ಕೆ ಬಂದ ಸಂದರ್ಭದಲ್ಲಿ ಕೋಮಾರಪಂತ, ಹಿಂದುಳಿದ ವರ್ಗಗಳ ಚೆನ್ನಪ್ಪ ರೆಡ್ಡಿ ಆಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಿಂದುಳಿದ ಮೀಸಲಾತಿ ಪಟ್ಟಿಯಿಂದ ತಪ್ಪಿರುವ ಪಡ್ತಿ, ಗುಣಗಿ, ಕುಳವಾಡಿ ಮರಾಠಿ, ಶೇರುಗಾರ ಜಾತಿಗಳಿಗೆ ಮೀಸಲಾತಿ ವಂಚಿತವಾಗಿರುವುದನ್ನು ಅವರ ಗಮನಕ್ಕೆ ತಂದಾಗ, ತಕ್ಷಣ ಜಿಲ್ಲೆಯಿಂದ ಮೀಸಲಾತಿ ವಂಚಿತ ಜಾತಿಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿರುವ ಕಾರ್ಯ ವಿಶೇಷವೆಂದು ಅವರು... - [ಅಯೋಧ್ಯೆಯಲ್ಲಿ ಪರ್ತಗಾಳಿ ಮಠದ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ](https://bhavanatv.com/2025/1659/): ಭಟ್ಕಳ: ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷದ ಅಂಗವಾಗಿ ಶ್ರೀ ಕ್ಷೇತ್ರ ಬದರಿಯಿಂದ ಆರಂಭವಾದ ಶ್ರೀರಾಮ ದಿಗ್ವಿಜಯ ರಥಯಾತ್ರೆ ಅಯೋಧ್ಯಾ ತಲುಪಿದ್ದು, ಶ್ರೀರಾಮನ ಜನ್ಮಸ್ಥಳದಲ್ಲಿ ಭರ್ಜರಿ ಸ್ವಾಗತ ದೊರೆತಿದೆ. ಅ.19ರಂದು ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಪೂಜೆಯೊಂದಿಗೆ ಬದರಿಯಲ್ಲಿ ಚಾಲನೆಗೊಂಡ ರಥಯಾತ್ರೆ, ದೆಹಲಿ ಮೂಲಕ ಅ.23ರಂದು ಅಯೋಧ್ಯಾಧಾಮ ಪ್ರವೇಶಿಸಿತು. ಅಯೋಧ್ಯೆಯಲ್ಲಿ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಸ್ಥಳೀಯ ಶಾಸಕ ವೇದ ಪ್ರಕಾಶ ಗುಪ್ತಾ, ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಗೋಪಾಲ ಜಿ ಸೇರಿದಂತೆ ಗಣ್ಯರು ಅದ್ದೂರಿ ಸ್ವಾಗತ ನೀಡಿದರು. ಮಠದ ಇತಿಹಾಸದಲ್ಲೇ ಮೊದಲ ಬಾರಿಗೆ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದರು ಶ್ರೀರಾಮ ಮಂದಿರದ ರಾಮ ದರ್ಬಾರ ಹಾಲಿನಲ್ಲಿ ಆರಾಧ್ಯ ದೇವರಾದ ರಾಮದೇವ ವೀರವಿಠ್ಠಲ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಶ್ರೀರಾಮ ನಾಮ ತಾರಕ ಮಹಾಮಂತ್ರ ಜಪಾಭಿಯಾನ ಜರುಗಿತು. ಇದೇ ವೇಳೆ ಶ್ರೀಗಳು ಶ್ರೀರಾಮಲಲ್ಲಾನಿಗೆ ರಾಮದರ್ಬಾರದ ಚಿತ್ರ ಅಚ್ಚಿನ ಬಂಗಾರದ ಆಭರಣವನ್ನು ಅರ್ಪಿಸಿದರು. ಈ ಮಹೋತ್ಸವಕ್ಕೆ... - [ಕಲಾವಿದರ ಬದುಕು ಹಸನಾಗಲಿ- ಮೂಡಲಮನೆ](https://bhavanatv.com/2025/1655/): ಕಲೆಗೆ ಮತ್ತು ಕಲಾವಿದರಿಗೆ ಸಮಾಜ ಆಸರೆಯಾದಾಗ ಮಾತ್ರ ಕಲಾವಿದರ ಬದುಕು ಹಸನಾಗುತ್ತದೆ ಎಂದು ಉಪನ್ಯಾಸಕ ಪ್ರಶಾಂತ ಮೂಡಲಮನೆ ಅಭಿಪ್ರಾಯಪಟ್ಟರು. ಹೊನ್ನಾವರ: ನೃತ್ಯ ಸಂವೇದನಾ ಟ್ರಸ್ಟ್(ರಿ.) ಹೊನ್ನಾವರ ಇವರು ಕೆರೆಮನೆ ಶಿವರಾಮ ಹೆಗಡೆ ರಂಗಮAದಿರ ಗುಣವಂತೆಯಲ್ಲಿ ಆಯೋಜಿಸಿದ ‘ನೃತ್ಯಪಲ್ಲವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರಿಗೆ ಸಂತೋಷವನ್ನು ಕೊಡುವುದೇ ನಿಜವಾದ ಈಶ್ವರ ಪೂಜೆ. ಹತ್ತಾರು ವರ್ಷಗಳ ಕಠಿಣ ಪರಿಶ್ರಮದಿಂದ ಕಲಾವಿದರಾಗಿ ರೂಪುಗೊಂಡು, ತನ್ನ ಕಲೆಯ ಮೂಲಕ ಜನಸಮುದಾಯಕ್ಕೆ ಆನಂದ ಕೊಡುವ ಕಲಾವಿದರ ಬದುಕು ಇಂದು ಕಷ್ಟದಲ್ಲಿದೆ. ನಾಡಿನ ತುಂಬಾ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸಿ 60 ಜನ ವಿದುಷಿಯರನ್ನು ಸಿದ್ಧಪಡಿಸಿದ ಡಾ. ಸಹನಾ ಭಟ್ಟರ ಸಾಧನೆ ದೊಡ್ಡದು. ಅವರ ಶಿಷ್ಯೆ ವಿದುಷಿ ಪೂಜಾ ಹೆಗಡೆ ತನ್ನ ಗುರುವಿನ ಹಾದಿಯಲ್ಲೇ ಮುನ್ನಡೆಯುತ್ತಿದ್ದಾರೆ. ತಾಲೂಕಿನ ನಾಲ್ಕಾರು ಕಡೆ ಭರತನಾಟ್ಯದ ಶಾಲೆ ತೆರೆದಿದ್ದಾರೆ. ಇಂಥವರ ಮೂಲಕ ನಮ್ಮ ಶ್ರೀಮಂತ ಕಲೆ ಸಂಸ್ಕೃತಿ ಪರಂಪರೆ ಉಳಿಯಲಿ ಎಂದರು. ನಂತರ ನೃತ್ಯ ಸಂವೇದನಾ ಟ್ರಸ್ಟ್ ನ ಕಲಿಕಾ ವಿದ್ಯಾರ್ಥಿಗಳಿಂದ ಆಕರ್ಷಕವಾದ ಭರತನಾಟ್ಯ... - [ವೆಂಕ್ಲಾಪುರ ಕ್ರಾಸ್ ಬಳಿ ಮರಳು ಸಾಗಾಟ ತಡೆ ಚಾಲಕನ ವಿರುದ್ಧ ಪ್ರಕರಣ](https://bhavanatv.com/2025/1653/): ಭಟ್ಕಳ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ವೆಂಕ್ಲಾಪುರ ಕ್ರಾಸ್ ಬಳಿ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ವಾಹನವನ್ನು ಭಟ್ಕಳ ಗ್ರಾಮೀಣ ಠಾಣೆ ಪಿಎಸ್‌ಐ ಭರಮಪ್ಪ ಬೆಳಗಲಿ ಪತ್ತೆಹಚ್ಚಿ ಪ್ರಕರಣ ದಾಖಲಿಸಿದ್ದಾರೆ. ಟಾಟಾ 407 ವಾಹನದಲ್ಲಿ ಸುಮಾರು ರೂ.5,000 ಮೌಲ್ಯದ 1.5 ಯುನಿಟ್ ಮರಳು ಸಾಗಿಸುತ್ತಿದ್ದ ವೇಳೆ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಚಾಲಕ ಫೈರೋಜ್ ಖಾನ್ (ತಂದೆ ರೆಹಮಾನ್ ಖಾನ್, ಗುಳ್ಮೇ ಸುನ್ನಿ ಮಸೀದಿ ಹತ್ತಿರ)ನನ್ನು ಬಂಧಿಸಿ, ಮರಳು ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಯಾವುದೇ ಪಾಸ್ ಅಥವಾ ಪರವಾನಗಿ ಇಲ್ಲದೆ ಮರಳು ಸಾಗಾಟ ನಡೆಸಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುವುದರ ಜೊತೆಗೆ ಪರಿಸರಕ್ಕೂ ಹಾನಿ ಉಂಟಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯ ಕುರಿತು ಭಟ್ಕಳ ಗ್ರಾಮೀಣ ಠಾಣೆಯ ಪಿಎಸ್‌ಐ ಭರಮಪ್ಪ ಬೆಳಗಲಿ ಸರಕಾರದ ಪರವಾಗಿ ದೂರು ನೀಡಿದ್ದಾರೆ. - [ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲೋಕೇಶ್ ಹೃದಯಾಘಾತದಿಂದ ನಿಧನ ..](https://bhavanatv.com/2025/1649/): ಕೆ ಆರ್ ಪೇಟೆ : ಹೇಮಾವತಿ ಬಡಾವಣೆಯಲ್ಲಿರುವ ಅವರ ಸ್ವಗೃಹದಲ್ಲಿ ವೀರಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಶಾಸಕರು ಹಾಗೂ ಸಾರ್ವಜನಿಕರು.. ಮುಗಿಲು ಮುಟ್ಟಿದ ಆಕ್ರಂದನ.. ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗಮಂಗಲ ತಾಲೂಕಿನ ಮೈಲಾರಪಟ್ಟಣದ ಲೋಕೇಶ್ ಅವರು ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಪಂಜಾಬ್ ರಾಜ್ಯದ ಪಠಾಣ್ ಕೋಠ’ನಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತಂದು, ಬೆಂಗಳೂರಿನಿAದ ಸಕಲ ಸರ್ಕಾರಿ ಗೌರವಗಳೊಂದಿಗೆ ಪಾರ್ಥಿವ ಶರೀರವನ್ನು ಗಡಿ ಭದ್ರತಾ ಪಡೆಯ ವಾಹನದಲ್ಲಿ ಕೃಷ್ಣರಾಜಪೇಟೆ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ವಾಸವಾಗಿದ್ದ ಮನೆಯ ಬಳಿಗೆ ತಂದು ಸಾರ್ವಜನಿಕರ ದರ್ಶನದ ನಂತರ ಮೈಲಾರಪಟ್ಟಣಕ್ಕೆ ಕೊಂಡೊಯ್ಯಲಾಯಿತು. ಕಳೆದ 25 ವರ್ಷಗಳಿಂದ ಭಾರತೀಯ ಸೇನೆಯ ಗಡಿ ಭದ್ರತಾ ಪಡೆಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲೋಕೇಶ್ ಅವರು ಕೆ.ಆರ್. ಪೇಟೆ ಪಟ್ಟಣದ ನಿವಾಸಿಗಳಾದ ಜಯಮ್ಮ,ರಾಮೇಗೌಡ ಅವರ ಪುತ್ರಿ ಆಶಾ ಅವರನ್ನು ವಿವಾಹವಾಗಿದ್ದು, ಪತ್ನಿ ಹಾಗೂ ಹರ್ಷಿಣಿ(12), ಹರಿಣಿ(7) ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸುಖೀ ದಾಂಪತ್ಯ ಜೀವನವನ್ನು... - [ಪಥ ಸಂಚಲನದಲ್ಲಿ ಗಣವೇಶಧಾರಿಯಾಗಿ ಕೈಯಲ್ಲಿ ದಂಡ ಹಿಡಿದು, ಹೆಜ್ಜೆ ಹಾಕಿ ಮಿಂಚಿದ ಮಾಜಿ ಸಚಿವ ಡಾ. ನಾರಾಯಣಗೌಡ..](https://bhavanatv.com/2025/1646/): ಕೃಷ್ಣರಾಜಪೇಟೆ : ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ಥಾಪನೆಯಾಗಿ ಶತಮಾನೋತ್ಸವ ಸಂಪೂರ್ಣವಾಗಿರುವುದರಿAದ ಕೃಷ್ಣರಾಜಪೇಟೆ ಪಟ್ಟಣದಲ್ಲಿ ರಾಜ್ಯದ ಮಾಜಿ ಸಚಿವರಾದ ಡಾ. ನಾರಾಯಣಗೌಡ ಅವರ ನೇತೃತ್ವದಲ್ಲಿ ಶತಮಾನೋತ್ಸವ ಪಥ ಸಂಚಲನವು ಅದ್ದೂರಿಯಾಗಿ ನಡೆಯಿತು.ಭಾರತ್ ಮಾತಾ ಕೀ ಜಯ್ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಜಯವಾಗಲಿ ಎಂಬ ಜಯಗೋಷಗಳೊಂದಿಗೆ ಕೆ ಆರ್ ಪೇಟೆ ಪಟ್ಟಣದಲ್ಲಿ 500ಕ್ಕೂ ಹೆಚ್ಚು ಗಣವೇಶ ದಾರಿಗಳು ಶಿಸ್ತು ಬದ್ಧವಾಗಿ ಶತಮಾನೋತ್ಸವದ ಪಥಸಂಚಲನ ನಡೆಸಿ ಗಮನ ಸೆಳೆದರು. ಕರ್ನಾಟಕ ರಾಜ್ಯದ ಮಾಜಿ ಸಚಿವರು ಹಾಗೂ ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಡಾ. ನಾರಾಯಣ ಗೌಡ ಅವರು ಗಣವೇಶವನ್ನು ಧರಿಸಿ ಕೈಯಲ್ಲಿ ದಂಡವನ್ನು ಹಿಡಿದು, ಕೃಷ್ಣರಾಜಪೇಟೆ ಪಟ್ಟಣದ ಉದ್ದಕ್ಕೂ ಸುರಿಯುವ ಮಳೆಯ ನಡುವೆಯೇ ಪಥ ಸಂಚಲನ ನಡೆಸಿದ್ದು ವಿಶೇಷವಾಗಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯ ವಾಹ ರವಿ ಗಣೇಶಗೌಡ, ಮಂಡ್ಯ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕೆ.ಜೆ. ವಿಜಯಕುಮಾರ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ... - [ತಾಲೂಕ ಆಡಳಿತ ಸೌದಕ್ಕೆ ಶಾಸಕ ದಿನಕರ ಶೆಟ್ಟಿ ಭೇಟಿ](https://bhavanatv.com/2025/1643/): ಹೊನ್ನಾವರ; ತಾಲೂಕಿನ ಆಡಳಿತಸೌದಕ್ಕೆ ಸೋಮವಾರ ಶಾಸಕ ದಿನಕರ ಶೆಟ್ಟಿ ದಿಡೀರ್ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಕಂದಾಯ ಇಲಾಖೆಯ ಕಾರ್ಯ ನಿಮಿತ್ತ ಆಗಮಿಸಿದ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ತ್ವರಿತವಾಗಿ ಸೇವೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಆಡಳಿತಸೌದದ ಸಭಾಂಗಣದಲ್ಲಿ ತಾಲೂಕಿನ ವಿವಿಧ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರು. ಹೆಸ್ಕಾಂ ಇಲಾಖೆಯ ಅಧಿಕಾರಿಗಳ ಜೊತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯದ ಕುರಿತು ಚರ್ಚೆಯ ವೇಳೆ ಸಾಲ್ಕೋಡ್ ಹೊಸಾಕುಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ರಾತ್ರಿ ವೇಳೆ ವಿದ್ಯುತ್ ಕಡಿತ ಮಾಡುವುದನ್ನು ಪ್ರಶ್ನಿಸಿದರು. ಕೂಡಲೇ ಸಮಸ್ಯೆ ಬಗೆಹರಿಸಬೇಕು. ನೆಟವರ್ಕ್ ವಂಚಿತ ಪ್ರದೇಶವಾದ ಕೆರೆಕೋಣ, ಕಾನಕ್ಕಿ, ದರ್ಬೆಜಡ್ಡಿ, ತೊಳಸಾಣಿ ಭಾಗದಲ್ಲಿ ಸಮಸ್ಯೆ ಉಂಟಾಗಲಿದೆ. ಈ ಬಗ್ಗೆ ಇಂದೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು. ಸಮರ್ಪಕ ವಿದ್ಯುತ್ ಪೂರೈಕೆ ಮಾಡುವ ಮೂಲಕ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗದAತೆ ನೋಡಿಕೊಳ್ಳಿ. ಸಾರ್ವಜನಿಕರು ಸರ್ಕಾರಿ ಕಛೇರಿಗೆ ಆಗಮಿಸಿದಾಗ ಗೌರವದಿಂದ ನಡೆದುಕೊಳ್ಳಿ. ಅವರಿಗೆ ತ್ವರಿತ... - [ಭಟ್ಕಳದ ಜಯ್ ಡಿ. ಚಿತ್ರರಂಗದ ಹಾದಿಯಲ್ಲಿ ಗುರುತು ಮೂಡಿಸಿದ ಯುವ ಪ್ರತಿಭೆ,ಮಣ್ಕುಳಿಯಿಂದ ಸ್ಯಾಂಡಲ್‌ವುಡ್‌ಗೆ ಜಯ್ ಡಿ. ಭಟ್ಕಳ ಸಿನಿ ಕನಸು ಸಾಕಾರ](https://bhavanatv.com/2025/1640/): ಭಟ್ಕಳ: ಭಟ್ಕಳ ಮೂಲದ ಯುವ ಪ್ರತಿಭೆ ಜಯ್ ಡಿ. ಭಟ್ಕಳ (ಜಗ್ಗು ನಾಯ್ಕ) ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಗುರುತು ಮೂಡಿಸಿಕೊಂಡಿದ್ದಾನೆ. 2018 ರಲ್ಲಿ ಕುಸುಮ ಕಲಾ ಸಿನಿಮಾದಲ್ಲಿ ಸಹಾಯಕ ಬರಹಗಾರರಾಗಿ ಮೊದಲ ಹೆಜ್ಜೆ ಇಟ್ಟ ಜಯ್.ಡಿ., 2021ರಲ್ಲಿ ಬಿಡುಗಡೆಯಾದ ಮಚ್ಚಾ ನೀನ್ ಬದ್ದುಬ್ಬೇಕ ಟೆಲಿಫಿಲ್ಮ್ ಮೂಲಕ ನಿರ್ದೇಶಕ ಮತ್ತು ನಟನಾಗಿ ತನ್ನ ಸಾಮರ್ಥ್ಯವನ್ನು ತೋರಿದ್ದಾನೆ.ಮಣ್ಕುಳಿಯ ಮೂಲದ ಜಯ್.ಡಿ. ಪ್ರಸ್ತುತ ಬೆಂಗಳೂರಿನ ಜಿ.ಕೆ.ಡಬ್ಲ್ಯೂ ಲೇಔಟ್‌ನಲ್ಲಿ ವಾಸವಿದ್ದು, ಸಿನಿಮಾ ಲೋಕದ ಮೇಲಿನ ತನ್ನ ಆಸಕ್ತಿಯನ್ನು ಕಾಪಾಡಿಕೊಂಡಿದ್ದಾನೆ. ಇದುವರೆಗೆ ಜಾರುಬಂಡೆ (2021), ರಂಗಿನ ರಾಟೆ (2022), ಬ್ಲ್ಯಾಕ್ ಶೀಪ್ (2022), ಥಾಣೆ (2023), ಸಿ (2023), ತದ್ವಿರುದ್ಧ (2024), ರಾವೆನ್ (2024-2026), ಮಾಸ್ಕ್ (2025-2026) ಸೇರಿ ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕ ಹಾಗೂ ತಾಂತ್ರಿಕ ತಂಡದ ಸದಸ್ಯನಾಗಿ ಕೆಲಸ ಮಾಡಿದ್ದಾರೆ. ಮಾಸ್ಕ್, ರಾವೆನ್ ಮತ್ತು ತದ್ವಿರುದ್ಧ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶನದ ಜೊತೆಗೆ ಅಭಿನಯವೂ ಮಾಡಿದ್ದಾರೆ, ಇನ್ನಷ್ಟೇ ಬಿಡುಗಡೆ ಆಗಬೇಕಿದೆ..ಇತ್ತೀಚೆಗೆ ಖ್ಯಾತ ನಿರ್ದೇಶಕ ಶಶಾಂಕ್ ಅವರ... - [ಯಮುನಾ ನಾಯ್ಕ ಕೊಲೆ ಪ್ರಕರಣ ಮರುತನಿಖೆ : ಶ್ರೀರಾಮ ಸೇನೆ ಮನವಿ, ಇಲ್ಲದಿದ್ದರೆ ಹೋರಾಟ ಎಚ್ಚರಿಕೆ](https://bhavanatv.com/2025/1636/): ಭಟ್ಕಳ : ಮುರುಡೇಶ್ವರದಲ್ಲಿ ೨೦೧೦ರಲ್ಲಿ ನಡೆದ ಯಮುನಾ ನಾಯ್ಕಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಕೋರ್ಟ್ ಆದೇಶದಂತೆ ತಕ್ಷಣ ಮರುತನಿಖೆ ಪೂರ್ಣಗೊಳಿಸಿ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ಒತ್ತಾಯಿಸಿ, ಶ್ರೀರಾಮ ಸೇನೆಯವರು ಭಟ್ಕಳ ಡಿವೈಎಸ್ಪಿ ಮಹೇಶ್ ಕೆ. ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮ ಸೇನೆ ಉತ್ತರ ಪ್ರಾಂತ್ಯ ಉಪಾಧ್ಯಕ್ಷ ಜಯಂತ ನಾಯ್ಕ, “ಯಮುನಾ ನಾಯ್ಕ ಕೊಲೆ ಪ್ರಕರಣ ನಡೆದಿದ್ದು ೧೫ ವರ್ಷ ಕಳೆದರೂ ನ್ಯಾಯ ಸಿಗದ ಸ್ಥಿತಿ. ಈ ಪ್ರಕರಣದಲ್ಲಿ ಅಮಾಯಕ ವೆಂಕಟೇಶ ಹರಿಕಾಂತನನ್ನು ಸಿಲುಕಿಸಿ ಏಳು ವರ್ಷ ಜೈಲು ಜೀವನ ಅನುಭವಿಸಲು ಮಾಡಲಾಯಿತು. ನಂತರ ಜಿಲ್ಲಾ ನ್ಯಾಯಾಲಯವು ಅವರನ್ನು ಆರೋಪಮುಕ್ತಗೊಳಿಸಿ ಬಿಡುಗಡೆ ಮಾಡಿದ್ದು, ಮರುತನಿಖೆಗೆ ಆದೇಶ ನೀಡಿತ್ತು. ಆದರೆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಡಿವೈಎಸ್ಪಿ ಮಹೇಶ್ ತನಿಖೆ ಅಂತಿಮ ಹಂತದಲ್ಲಿದೆ ಎಂದು ಭರವಸೆ ನೀಡಿದ್ದಾರೆ. ಆದರೆ ನಾವು ಇನ್ನೂ ಕಾಯಲು ಸಾಧ್ಯವಿಲ್ಲ. ಶೀಘ್ರದಲ್ಲೇ ನ್ಯಾಯ ಒದಗಿಸದಿದ್ದರೆ ದೊಡ್ಡ ಮಟ್ಟದ ಹೋರಾಟಕ್ಕೆ ವೇದಿಕೆ... - [ಕಾರ್ಕಳ ತಾಲೂಕು ಕಚೇರಿಯಲ್ಲಿ ದೀಪಾವಳಿಯ ಪ್ರಯುಕ್ತ ಲಕ್ಷ್ಮೀ ಪೂಜೆ ಮತ್ತು ಆಯುಧ ಪೂಜೆ](https://bhavanatv.com/2025/1632/): ಕಾರ್ಕಳ : ದೀಪಾವಳಿಯ ಪ್ರಯುಕ್ತ ಲಕ್ಷ್ಮಿ ಪೂಜೆ ಮತ್ತು ಆಯುಧ ಪೂಜೆ ಕಾರ್ಕಳ ತಾಲೂಕು ಕಚೇರಿಯಲ್ಲಿ ವಿಜ್ರಂಭಣೆಯಿAದ ನೆರವೇರಿಸಲಾಗಿತ್ತು ಆ ಪ್ರಯುಕ್ತ ತಹಸಿಲ್ದಾರರು ಉಪತಾಶಿಲ್ದಾರರು ಕಚೇರಿಯ ಸಿಬ್ಬಂದಿ ವರ್ಗ ಹಾಗೂ ಗ್ರಾಮ ಆಡಳಿತ ಅಧಿಕಾರಿಯವರು ಗ್ರಾಮ ಸಹಾಯಕರು ಮತ್ತು ಉಪನಂದನಾಧಿಕಾರಿಯ ಕಚೇರಿಯ ಸಿಬ್ಬಂದಿ ವರ್ಗ ಹಾಗೂ ಬಂದಿರುವ ಸಾರ್ವಜನಿಕರು ಎಲ್ಲರೂ ದೇವರ ಕೃಪೆಗೆ ಪಾತ್ರರಾದರು. ವರದಿ : ಅರುಣ ಭಟ್ ಕಾರ್ಕಳ - [ರೈತ ಸಂಘ ಬೈಂದೂರು ಇದರ ವತಿಯಿಂದ ತಾಲೂಕು ಆಡಳಿತ ಸೌಧದ ಎದುರುಗಡೆ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ೩೩ ದಿನ.](https://bhavanatv.com/2025/1629/): ಭಾವನಾ ಸುದ್ದಿ ಬೈಂದೂರು : ಜಿಲ್ಲಾಡಳಿತ ಸರಕಾರದ ಸಮರ್ಪಕ ಸ್ಪಂಧನೆ ನೀಡುತ್ತಿಲ್ಲ ಎಂದು ಆಕ್ರೋಶಗೊಂಡ ರೈತರು ಹತ್ತಾರು ಜೊತೆ ಕೋಣಗಳ ಜೊತೆಗೆ ಬೈಂದೂರು ಪಟ್ಟಣ ಪಂಚಾಯತ್ ಮತ್ತು ತಾಲೂಕು ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರಿಗೆ ತೊಂದರೆಯಾದರೆ ಜಿಲ್ಲಾಡಳಿತ ಹೊಣೆ: ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಕಳೆದ ಒಂದೂವರೆ ತಿಂಗಳಿAದ ಕೃಷಿ ಕಾರ್ಯ ಕೆಲಸ ಬಿಟ್ಟು ನ್ಯಾಯಕ್ಕಾಗಿ ಧರಣಿ ಕುಳಿತಿದ್ದಾರೆ. ಸೌಜನ್ಯಕ್ಕಾದರು ಜಿಲ್ಲಾಮಟ್ಟದ ಅಧಿಕಾರಿಗಳು ಬೇಟಿ ಮಾಡಿಲ್ಲ. ರೈತ ಮುಖಂಡರ ಜೊತೆ ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿಲ್ಲ. ಸರಕಾರದಿಂದ ನ್ಯಾಯ ಸಿಗುವ ನಿರೀಕ್ಷೆ ಇರುವ ಕಾರಣ ಶಾಂತ ಪ್ರತಿಭಟನೆ ನಡೆಸುತ್ತಿದ್ದು, ಸೋಮವಾರದಿಂದ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದರು. ಎAದರು.ಜನಸಾಮಾನ್ಯವಾಗಿ ರೈತರು ಧರಣಿ ನಿರತರಾದರೆ ಆಡಳಿತ ಜನನಾಯಕರು, ಅಧಿಕಾರಿಗಳು ಸ್ಪಂಧಿಸದಿರುವ ಕುರಿತು ರೈತರು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು, ಮಾಜಿ ಶಾಸಕರು , ಸಂಸದರು, ಉಸ್ತುವಾರಿ ಸಚಿವರು ರೈತರನ್ನು ಬೇಟಿ ಮಾಡಿ ಸರಕಾರದ ಗಮನಸೆಳೆಯಬೇಕು ಬೇಕು... - [ಕರ್ನಾಟಕ ರಾಜ್ಯ ವಿಶ್ವಕರ್ಮ ಯುವಕ ಸಮಾಜ (ರಿ.) ಉಡುಪಿ ಜಿಲ್ಲಾಧ್ಯಕ್ಷರಾಗಿ ಎಚ್ ಸುಶಾಂತ್ ಆಚಾರ್ಯ ಬೈಂದೂರು ಆಯ್ಕೆ](https://bhavanatv.com/2025/1626/): ಬೈಂದೂರು : ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜ (ರಿ.) ಬೆಂಗಳೂರು ಇವರ ಅಂಗ ಸಂಸ್ಥೆ ಕರ್ನಾಟಕ ರಾಜ್ಯ ವಿಶ್ವಕರ್ಮ ಯುವಕ ಸಮಾಜ (ರಿ.) ಇದರ ಉಡುಪಿ ಜಿಲ್ಲಾಧ್ಯಕ್ಷರಾಗಿ ಎಚ್ ಸುಶಾಂತ್ ಆಚಾರ್ಯ ಬೈಂದೂರು ಆಯ್ಕೆಗೊಂಡಿದ್ದಾರೆ. ಅಕ್ಟೊಬರ್ ೩೦ರಂದು ಬೆಂಗಳೂರಿನ ಶೇಷಾದ್ರಿಪುರಂ ವಿಶ್ವಕರ್ಮ ಸಮುದಾಯದ ಭವನದಲ್ಲಿ ನಡೆಯುವ ಕರ್ನಾಟಕ ರಾಜ್ಯ ವಿಶ್ವಕರ್ಮ ಯುವಕ ಸಮಾಜದ ರಾಜ್ಯ ಪದಾಧಿಕಾರಿಗಳ ಹಾಗೂ ಜಿಲ್ಲಾಧ್ಯಕ್ಷರಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕೃತ ಪತ್ರ ನೀಡಲಾಗುವುದು ಎಂದು ಸಂಘಟನೆಯವರು ತಿಳಿಸಿದ್ದಾರೆ. - [ಜಯಕರ್ನಾಟಕ ಜನಪರ ವೇದಿಕೆ ಆಶ್ರಯದಲ್ಲಿ ಕನ್ನಡ ರಾಜ್ಯೊತ್ಸವ](https://bhavanatv.com/2025/1623/): ಜಯಕರ್ನಾಟಕ ಜನಪರ ವೇದಿಕೆ ಆಶ್ರಯದಲ್ಲಿ ಕನ್ನಡ ರಾಜ್ಯೊತ್ಸವ, ರಸವಮಂಜರಿ, ಡ್ಯಾನ್ಸ ಧಮಾಕಾ ಕಾರ್ಯಕ್ರಮ ನ. ೧ ರಂದು ರಾತ್ರಿ ೭ ಗಂಟೆಗೆ ಹೊನ್ನಾವರ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯಲಿದೆ ಎಂದು ಸಂಘಟನೆಯ ತಾಲೂಕ ಅಧ್ಯಕ್ಷ ಆರ್.ಕೆ.ಮೇಸ್ತ ಮಾಹಿತಿ ನೀಡಿದರು. ಹೊನ್ನಾವರ: ಪ್ರವಾಸಿ ಮಂದಿರದಲ್ಲಿ ನಡೆದ ಆಮಂತ್ರಣ ಬಿಡುಗಡೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕಳೆದ ಹಲವು ವರ್ಷದಿಂದ ಬೈಕ್ ಜಾಥಾ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸುತ್ತಾ ಬಂದ ಸಂಘಟನೆಯು ಕಳೆದ ವರ್ಷದಿಂದ ಮನೊರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಈ ಬಾರಿಯು ನವೆಂಬರ್ ೧ ರಂದು ಕಾರ್ಯಕ್ರಮ ಆಯೋಜಿಸುತ್ತಿದ್ದು, ಸಾರ್ವಜನಿಕರು ಆಗಮಿಸಿ ಸಹಕಾರ ನೀಡುವಂತೆ ಮನವಿ ಮಾಡಿದರು. ಸಭಾ ಕಾರ್ಯಕ್ರಮದ ನಂತರ ಮಂಗಳೂರಿನ ಗೆಜ್ಜೆನಾದ ತಂಡದಿAದ ರಸಮಂಜರಿ, ಡ್ಯಾನ್ಸ ಧಮಕಾ ನಡೆಯಲಿದೆ ವಿಶೇಷ ಆಕರ್ಷಣೆಯಾಗಿ ಕಾಂತಾರ ಸಿನಿಮಾದ ಚಿಕ್ರಾ ಖ್ಯಾತಿಯ ರಕ್ಷಿತ್ ರಾಮಚಂದ್ರ ಶೆಟ್ಟಿ ಆಗಮಿಸಲಿದ್ದಾರೆ. ಸಭಾ ಕಾರ್ಯಕ್ರಮದ ಮೊದಲು ಸ್ಥಳಿಯ ಪ್ರತಿಭೆಗಳಿಂದ ಮನೊರಂಜನಾ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು.... - [ಯೋಗಾಸನ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ ಬಾಲಕ ಮಾಣಿಕ್ಯ ಸುಬ್ರಾಯ್ ಗೌಡ](https://bhavanatv.com/2025/1620/): ಹೊನ್ನಾವರ : ಮಲೇಷ್ಯಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಏಷ್ಯನ್ ಪೆಸಿಫಿಕ್ ಯೋಗಾಸನ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ ಬಾಲಕ ಮಾಣಿಕ್ಯ ಸುಬ್ರಾಯ್ ಗೌಡ ಅವರನ್ನು ಹೊನ್ನಾವರ ಪಟ್ಟಣದ ಶರಾವತಿ ವೃತ್ತದಲ್ಲಿ ವಿಜೃಂಭಣೆಯಿAದ ಸ್ವಾಗತಿಸಿದರು. ಮಾಣಿಕ್ಯ ಇತನು ಹೊನ್ನಾವರ ತಾಲೂಕು ಖರ್ವಾ ಗ್ರಾಮದ ಸಿಂಧೂರಿನ ಸುಬ್ರಾಯ ಗೌಡ,ಪದ್ಮಾವತಿ ಗೌಡ ದಂಪತಿಯ ಪುತ್ರನಾಗಿದ್ದಾನೆ. ಸಿಂಧೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೫ನೇ ತರಗತಿ ವ್ಯಾಸಂಗದಲ್ಲಿದ್ದಾನೆ. ಚೈತನ್ಯ ವಿಕಸನ ಯೋಗ ಕೇಂದ್ರ ಹೊನ್ನಾವರದಲ್ಲಿ ರಾಜೇಶ್ವರಿ ಹೆಗಡೆ ಇವರಿಂದ ನಾಲ್ಕನೇ ತರಗತಿಯಿಂದಲೇ ಯೋಗಭ್ಯಾಸ ಮಾಡುತ್ತಿದ್ದು ತನ್ನ ಯೋಗ , ಗುರು ಮಾತೆಯಾದ ಅಂತರಾಷ್ಟ್ರೀಯ ಮಟ್ಟದ ಯೋಗ ತೀರ್ಪುಗಾರರಾದ ರಾಜೇಶ್ವರಿ ಹೆಗಡೆ ಅವರೊಂದಿಗೆ ಯೋಗಸ್ಪರ್ಧೆಗಾಗಿ ಮಲೇಷ್ಯಾಕ್ಕೆ ತೆರಳಿದ್ದ.ಅಕ್ಟೋಬರ್ ೧೩ ರಿಂದ ೧೬ರ ವರೆಗೆ ಯೋಗಾಸನ ಸ್ಪರ್ಧೆ ನಡೆದಿತ್ತು.೫ರಿಂದ೯ ವರ್ಷ ವಯೋಮಾನದ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿದ್ದಾನೆ. ತನ್ನ ಅತಿ ಚಿಕ್ಕ ವಯಸ್ಸಿನಲ್ಲಿ ಯೋಗದಲ್ಲಿ ಸಾಧನೆಗೈದು ಅಂತರಾಷ್ಟ್ರ ಮಟ್ಟದಲ್ಲಿ ತನ್ನ ಚಾಪನ್ನು ಮೂಡಿಸಿರುವುದು... - [ಮಾವಳ್ಳಿ1 ರುದ್ರಭೂಮಿಗೆ ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆ](https://bhavanatv.com/2025/1614/): ಭಟ್ಕಳ:ಮುರುಡೇಶ್ವರ ಮಾವಳ್ಳಿ1ರ ಹಿಂದು ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೆ ಬರುವ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೀರು ಬೆಳಕು, ಸ್ವಚ್ಛತೆ ಹಾಗೂ ನೆರಳಿನ ಮರಗಳ ವ್ಯವಸ್ಥೆ ಮಾಡುವಂತೆ ಶ್ರೀರಾಮ ಸೇನೆ ಮುಖಂಡರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಮಾರ್ ಮೊಗೇರ್ ಅವರಿಗೆ ಮನವಿ ಸಲ್ಲಿಸಿದರು. ಮಾವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 1 ಏಕರೆ 20 ಗುಂಟೆ ಜಾಗದಲ್ಲಿರುವ ದೊಡ್ಡ ರುದ್ರಭೂಮಿ 2013ರಲ್ಲಿ ಮುರುಡೇಶ್ವರ ಲಯನ್ಸ್ ಕ್ಲಬ್ ಹಾಗೂ ಪರಿಸರ ಸಂರಕ್ಷಣಾ ಸಮಿತಿಯವರ ಸಹಕಾರದಿಂದ ಚಿತಾಗಾರ ಕಟ್ಟಡ ಮತ್ತು ತಂಗುದಾಣಗಳೊAದಿಗೆ ಸಾರ್ವಜನಿಕರಿಗೆ ಹಸ್ತಾಂತರಗೊAಡಿತ್ತು. ಆದರೆ ಇದೀಗ ನೀರಿನ ನಳವಿದ್ದರೂ ನೀರು ಬರದೇ ಇರುವುದರಿಂದ ಹಾಗೂ ವಿದ್ಯುತ್ ದೀಪಗಳು ಹಾಳಾಗಿರುವುದರಿಂದ ಶವಸಂಸ್ಕಾರಕ್ಕೆ ಬರುವವರಿಗೆ ತೊಂದರೆ ಆಗುತ್ತಿದೆ. ಜೊತೆಗೆ ಸಮಯೋಚಿತ ಸ್ವಚ್ಛತೆ ಕೊರತೆ ಸಮಸ್ಯೆಯನ್ನು ಹೆಚ್ಚಿಸಿದೆ ಎಂದು ಗ್ರಾಮಸ್ಥರು ವಿಷಾದ ವ್ಯಕ್ತಪಡಿಸಿದ್ದಾರೆ. ಸೋಲಾರ್ ದೀಪ ಅಳವಡಿಸಿದರೆ ನಿರಂತರ ಬೆಳಕು ದೊರೆಯುತ್ತದೆ. ಬಿಸಿಲಿನಲ್ಲಿ ನೆರಳಿಗಾಗಿ ಮರಗಳನ್ನು ನೆಡುವುದು ಅವಶ್ಯ. ಸುಟ್ಟ ವಸ್ತುಗಳನ್ನು ಅರೆಬರೆ ಬಿಸಾಡದಂತೆ ಸೂಚನಾ ಫಲಕ ಅಳವಡಿಸಬೇಕು ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.ಮುರುಡೇಶ್ವರ... - [ಅಂಕೋಲಾ ಪುರಸಭೆಯಲ್ಲಿ ಕರ್ತವ್ಯ ಲೋಪ ಅಧಿಕಾರ ದುರುಪಯೋಗಪಡಿಸಿದ ಅಧ್ಯಕ್ಷರು ಮತ್ತು ಅದಕ್ಕೆ ಸಹಕರಿಸಿದ ಸದಸ್ಯರ ಮೇಲೆ ಮಾನ್ಯ ಲೋಕಾಯುಕ್ತರಲ್ಲಿ ದೂರು: ಮಂಜುನಾಥ ನಾಯ್ಕ](https://bhavanatv.com/2025/1611/): ಅಂಕೋಲಾ : ಪುರಸಭೆಯಲ್ಲಿ ದಿನಾಂಕ 22-4-2025 ರ ನಂತರದಲ್ಲಿ ಅಂದರೆ ಸುಮಾರು 6 ತಿಂಗಳು ಸಮೀಪಿಸುತ್ತಿದ್ದರು ಯಾವುದೇ ಸಭೆ ನಡೆದಿದ್ದು ಇರುವುದಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿದ್ದು, ಈ ಬಗ್ಗೆ ವಿಚಾರಿಸಲಾಗಿ ಇವರು ಕೆಲವು ಇತರ ಸದಸ್ಯರಿಗೆ ತಪ್ಪು ಮಾಹಿತಿ ನೀಡಿ ಅಭಿವೃದ್ಧಿ ಕೆಲಸಗಳನ್ನು ಕುಂಠಿತವಾಗುವAತೆ ಮಾಡಿದ್ದಾರೆ. ದಲಿತ ಮಹಿಳಾ ಮುಖ್ಯಾಧಿಕಾರಿಗಳು ಮತ್ತು ಮಹಿಳಾ ಇಂಜಿನಿಯರ್ ಮೇಲೆ ಆಪಾದನೆಗಳ ಮೇಲೆ ಆಪಾದನೆಗಳನ್ನು ಹೋರಿಸುತ್ತಾ ದೂರುಗಳನ್ನು ನೀಡುತ್ತಾ ಅನಗತ್ಯ ಕಾಲ ಹರಣ ಮಾಡಿದ್ದಾರೆ. ಅಧಿಕಾರಿಗಳು ಕರ್ತವ್ಯ ಲೋಪ ಅಧಿಕಾರ ದುರುಪಯೋಗ ಮಾಡಿದ್ದರೆ ಅದಕ್ಕೆ ಸಂಬAಧಪಟ್ಟ ದಾಖಲೆಗಳೊಂದಿಗೆ ದೂರು ನೀಡಿ ಅದನ್ನು ಸಾಬೀತುಪಡಿಸಿ ಅವರನ್ನು ಶಿಕ್ಷೆಗೊಳಪಡಿಸಬೇಕಾಗಿದ್ದನ್ನು ಬಿಟ್ಟು, ಅನಗತ್ಯ ಕಿರುಕುಳ ತೊಂದರೆಗಳನ್ನು ನೀಡಿ, ಅಧ್ಯಕ್ಷ ಪದವಿಯ ಕರ್ತವ್ಯ ಲೋಪ ಅಧಿಕಾರ ದುರುಪಯೋಗ ಮಾಡಿದ್ದಾರೆ. ಸದ್ರಿ ಅಧಿಕಾರಿಗಳು ಅಮಾನತ್ತಿನ ಆದೇಶಕ್ಕೆ ಮಾನ್ಯ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು, ಆದರೆ ಇವರು ಪತ್ರಿಕಾ ಪ್ರಕಟಣೆ ನೀಡಿ, ದಲಿತ ಮಹಿಳಾ ಮುಖ್ಯಾಧಿಕಾರಿಗಳಿಗೆ ಮತ್ತು ಮಹಿಳಾ ಇಂಜಿನಿಯರ್ ಅವರಿಗೆ ಕಿರುಕುಳ ನೀಡುತ್ತಿರುವುದು... - [ನಕಲಿ ಫೇಸ್‌ಬುಕ್ ಖಾತೆ ಬಳಸಿ ಸಚಿವರ ವಿರುದ್ಧ ಅವಹೇಳನ, ಪುರಂದರ ಬಂಧನ](https://bhavanatv.com/2025/1607/): ಭಟ್ಕಳ: ನಕಲಿ ಫೇಸ್‌ಬುಕ್ ಖಾತೆಗಳನ್ನು ಬಳಸಿ ಸಾರ್ವಜನಿಕರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ವಿರುದ್ಧ ಸುಳ್ಳು ಹಾಗೂ ಅವಹೇಳನಕಾರಿ ಪೋಸ್ಟ್ಗಳು ಮತ್ತು ವಿಡಿಯೋ ಹಂಚಿದ ಆರೋಪದ ಮೇಲೆ ಮುರ್ಡೇಶ್ವರ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಮೇ 29, 2025 ರಂದು ಮಂಜುನಾಥ ನಾಯ್ಕ ಎಂಬಾತ ಠಾಣೆಗೆ ಬಂದು, “ತೇಜು ನಾಯ್ಕ ಹೊನ್ನಾವರ” ಎಂಬ ನಕಲಿ ಖಾತೆಯಿಂದ ತನ್ನ ಬಗ್ಗೆ ಅಸಭ್ಯ ಶಬ್ದಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ ಎಂದು ದೂರು ನೀಡಿದ್ದರು. ಇದರ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ಇದೇ ರೀತಿಯಲ್ಲಿ, ಜೂನ್ 6, 2025ರಂದು ನಾಗಪ್ಪ ನಾಯ್ಕ ಅವರು ಠಾಣೆಗೆ ಹಾಜರಾಗಿ, “ತೇಜು ನಾಯ್ಕ ಹೊನ್ನಾವರ” ಮತ್ತು “ವಂದನಾ ಪೂಜಾರಿ” ಎಂಬ ನಕಲಿ ಖಾತೆಗಳ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ವಿರುದ್ಧ 1.29 ನಿಮಿಷಗಳ ಸುಳ್ಳು ಹಾಗೂ ಅವಹೇಳನಕಾರಿ ವಿಡಿಯೋ ಹಂಚಲಾಗಿದ್ದು, ಇದರಿಂದ ಸಚಿವರಿಗೆ ಮುಜುಗರ ಉಂಟಾಗಿದೆ ಎಂದು ದೂರಿದ್ದರು. ಈ ಕುರಿತು ಮತ್ತೊಂದು ಪ್ರಕರಣ ದಾಖಲಾಗಿತ್ತು.... - [ಬಸ್ ನಿಲ್ದಾಣದಲ್ಲೇ ಚಾಲಕನಿಗೆ ಹೃದಯಾಘಾತ; ಸ್ಥಳದಲ್ಲೇ ಸಾವು](https://bhavanatv.com/2025/1604/): ಭಟ್ಕಳ: ತಾಲೂಕಿನ ಮಣ್ಕುಳಿ ಗ್ರಾಮದ ಮೂಲದ ಎ.ಪಿ.ಎಮ್. ಬಸ್ ಚಾಲಕನೊಬ್ಬ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ದುರ್ಘಟನೆ ಭಟ್ಕಳದಲ್ಲಿ ನಡೆದಿದೆ. ಮೃತರನ್ನು ಚಂದ್ರಶೇಖರ ಸುಬ್ಬಣ್ಣ ಪೂಜಾರಿ (64) ಎಂದು ಗುರುತಿಸಲಾಗಿದೆ. ಇವರು ಒಂದು ವರ್ಷದ ಹಿಂದೆ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು, ಬಳಿಕ ಮತ್ತೆ ಆರೋಗ್ಯವಾಗಿದ್ದು, ನಿರಂತರವಾಗಿ ಎ.ಪಿ.ಎಮ್. ಬಸ್ಸಿನಲ್ಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದರು.ಸೋಮವಾರ ಬೆಳಿಗ್ಗೆ ಸುಮಾರು 5 ಗಂಟೆಗೆ ಮನೆಯಿಂದ ಹೊರಟ ಚಂದ್ರಶೇಖರ, ಪೆಟ್ರೋಲ್ ಬಂಕ್ ಹತ್ತಿರ ನಿಲ್ಲಿಸಿದ್ದ ಬಸ್ಸನ್ನು ಚಲಾಯಿಸಿಕೊಂಡು ಬಂದು ಭಟ್ಕಳ ಬಸ್ ನಿಲ್ದಾಣದ ಎದುರಿನ ಖಾಸಗಿ ಬಸ್ ನಿಲುಗಡೆ ಸ್ಥಳದಲ್ಲಿ ಬಸ್ಸನ್ನು ನಿಲ್ಲಿಸಿದರು. ಪ್ರಯಾಣಿಕರಿಗೆ ಕಾಯುತ್ತಾ ನಿಂತಿದ್ದ ವೇಳೆ ಏಕಾಏಕಿ ಹೃದಯಾಘಾತ ಬಂದು ನೆಲಕ್ಕುಸಿದು ಬಿದ್ದು ತಕ್ಷಣವೇ ಮೃತ ಪಟ್ಟಿದ್ದಾರೆ.ಈ ಬಗ್ಗೆ ಮೃತರ ಪುತ್ರ ಯತೀಶ ಪೂಜಾರಿ ಭಟ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ. - [ಬಸ್‌ನಲ್ಲಿ ನಿವೃತ್ತ ಶಿಕ್ಷಕಿಯ ಪರ್ಸ್ ಕಳವು, ಲಕ್ಷಾಂತರ ಮೌಲ್ಯದ ಆಭರಣ ನಾಪತ್ತೆ](https://bhavanatv.com/2025/1601/): ಭಟ್ಕಳ: ಬಸ್ ಪ್ರಯಾಣದ ವೇಳೆ ಮಹಿಳೆಯೊಬ್ಬರ ಪರ್ಸ್ ಕಳವಾಗಿದ್ದು, ಅದರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳ ಜೊತೆಗೆ ನಗದು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಭಟ್ಕಳ ಮೂಲದ ನಿವೃತ್ತ ಶಿಕ್ಷಕಿ ಆಸ್ಮಿನಾಭಾನು ಶೇಖ್ ಕಾಸೀಮ್ (61) ಇವರಿಗೆ ಈ ದುರ್ಘಟನೆ ಸಂಭವಿಸಿದೆ. ಭಟ್ಕಳ ಬಸ್ ನಿಲ್ದಾಣದಿಂದ ಬೆಳಗಾವಿ ಕಡೆಗೆ ಪ್ರಯಾಣಿಸುತ್ತಿದ್ದ ಅವರು, ತಲುಪಿದ ನಂತರ ತಮ್ಮ ಕೈಯಲ್ಲಿದ್ದ ಕೆಂಪು ಬಣ್ಣದ ಪರ್ಸ್ ಕಾಣೆಯಾಗಿರುವುದು ಗಮನಕ್ಕೆ ಬಂತು. ಅದರೊಳಗೆ ಸುಮಾರು 83 ಗ್ರಾಂ ಬಂಗಾರದ ಆಭರಣಗಳು (ಅಂದಾಜು ಮೌಲ್ಯ ರೂ.11.54 ಲಕ್ಷ) ಹಾಗೂ ?3,500 ನಗದು ಇದ್ದು, ಅಜ್ಞಾತ ಕಳ್ಳನು ಕಳವು ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬAಧ ಆಸ್ಮಿನಾಭಾನು ಅವರು ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. - [ಭಟ್ಕಳದಲ್ಲಿ ಸ್ಕೂಟರ್ ಕಳ್ಳತನಕ್ಕೆ ಯತ್ನ: ನಂಬರ್ ಪ್ಲೇಟ್ ಕಿತ್ತುಕೊಂಡು ಹೋದ ಅಪರಿಚಿತರು](https://bhavanatv.com/2025/1597/): ಭಟ್ಕಳ: ಪಟ್ಟಣದ ನಾಗಪ್ಪ ನಾಯ್ಕ ರೋಡ್ 1ನೇ ಕ್ರಾಸ್‌ನಲ್ಲಿ ನಿಲ್ಲಿಸಿದ್ದ ಸ್ಕೂಟರ್‌ನ್ನು ಕಳವು ಮಾಡಲು ಅಪರಿಚಿತರು ಯತ್ನಿಸಿರುವ ಘಟನೆ ಹೊರಬಿದ್ದಿದೆ. ವಕೀಲ ಮನೋಜ ಎಂ. ನಾಯ್ಕ ಅವರು ಭಟ್ಕಳ ನಗರ ಠಾಣೆಯಲ್ಲಿ ನೀಡಿದ ದೂರು ಪ್ರಕಾರ, ತಮ್ಮ ಮನೆಯ ಎದುರುಗಡೆ ನಿಲ್ಲಿಸಿದ್ದ ಬಜಾಜ್ ಚೇತಕ್ ಸ್ಕೂಟರ್ ಕಳ್ಳತನದ ಗುರಿಯಾದರೂ, ವಾಹನವನ್ನು ಕೊಂಡೊಯ್ಯಲು ಸಾಧ್ಯವಾಗದೇ, ಕಳ್ಳರು ನಂಬರ್ ಪ್ಲೇಟ್‌ನ್ನು ಮಾತ್ರ ಕಿತ್ತು ತೆಗೆದುಕೊಂಡು ಹೋಗಿದ್ದಾರೆ. ಘಟನೆಯ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. - [ಯಕ್ಷಗಾನ ಕಲಾವಿದರು, ಹಾಗೂ ಕಲಾಪ್ರೇಮಿಗಳಿಂದ ಸಭೆ, ಯಕ್ಷ ಚಂದ್ರ ಪುಸ್ತಕದ ವಿವಾದ ಚರ್ಚೆ, ಪುಸ್ತಕದಲ್ಲಿ ಬರೆದ ವಿಷಯಕ್ಕೆ ಚರ್ಚೆಗೆ ಬನ್ನಿ, ಸವಾಲು](https://bhavanatv.com/2025/1593/): ಹೊನ್ನಾವರ : ಬಡಗುತಿಟ್ಟಿನ ಶೇಷ್ಠ ಕಲಾವಿರಲ್ಲಿ ಒರ್ವರಾದ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಯಕ್ಷಾನುಭವನ ಕಥನ “ಯಕ್ಷಚಂದ್ರ” ಕೃತಿಯಲ್ಲಿ ಯಕ್ಷಗಾನ ಕಲಾವಿದರಿಗೆ ಅವಮಾನ ಆಗುವ ರೀತಿ ಪ್ರಕಟವಾಗಿದೆ. ಕಾನೂನು ಮೂಲಕ ಹೋರಾಟಕ್ಕೂ ಮೊದಲು, ಪುಸ್ತಕದಲ್ಲಿ ಬರೆದ ವಿಷಯಕ್ಕೆ ಚರ್ಚೆಗೆ ಬನ್ನಿ ಎಂದು ಕಲಾವಿದರು ಕಲಾಪ್ರೇಮಿಗಳು ಸವಾಲು ಹಾಕಿದ್ದಾರೆ. ಹೊನ್ನಾವರ ಪಟ್ಟಣದ ಖಾಸಗಿ ಹೊಟೇಲನಲ್ಲಿ ಯಕ್ಷಗಾನ ಕಲಾವಿದರು, ಹಾಗೂ ಕಲಾಪ್ರೇಮಿಗಳು ಸಭೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಯಕ್ಷಗಾನ ಅಕಾಡೆಮಿಯ ಸದಸ್ಯ ವಿದ್ಯಾಧರ ಜಲವಳ್ಳಿ ಮಾತನಾಡಿ ಕಳೆದ ಒಂದು ತಿಂಗಳಿನಿAದ ಯಕ್ಷ ಚಂದ್ರ ಪುಸ್ತಕದ ವಿವಾದ ಚರ್ಚೆ ಹುಟ್ಟು ಹಾಕಿದೆ. ಕೊಂಡದಕುಳಿಯವರ ವೈಯಕ್ತಿಕ ವಿರೋಧಿಗಳು ನಾವಲ್ಲ. ಆದರೆ ಅವರಿಂದ ಪ್ರಕಟವಾದ ಪುಸ್ತಕದ ವಿಚಾರಕ್ಕೆ ನಮ್ಮ ವಿರೋಧ ಇದೆ. ಜಿಲ್ಲೆಯ ಪ್ರಸುತ್ತ ಯಕ್ಷಾಗನದ ಲೆಜೆಂಡ್ ಬಳ್ಕೂರು ಕೃಷ್ಣಯಾಜಿ, ಕೊಂಡದಕುಳಿ ಅಂದರೆ ತಪ್ಪಾಗಲಾರದು. ಪುಸ್ತಕವು ಮುಂದಿನ ತಲೆಮಾರಿಗೆ ದಾರಿದೀಪವಾಗಬೇಕು. ಈ ಬೆಳವಣೆಗೆಯಿಂದ ಕಲಾ ಪ್ರಪಂಚಕ್ಕೆ ತಪ್ಪು ಸಂದೇಶ ಹೋಗಿದೆ. ನಮ್ಮನ್ನು ಅಗಲಿದ ಮೇರು ಕಲಾವಿದರ ಬಗ್ಗೆ ಬೌದ್ದಿಕ ಮಟ್ಟದ... - [ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ 'ನಾಯಕತ್ವ ವಿಕಸನ ಕಾರ್ಯಾಗಾರ'](https://bhavanatv.com/2025/1590/): ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಮುಂಬಯಿನ ಖ್ಯಾತ ಫ್ರೀಡಂ ಅಫ್ ಫ್ರೀ ಎಂಟರಪ್ರೆöÊಸೆಸ್ ನ ಎಂ.ಆರ್.ಪೈ ಫೌಂಡೇಶನ್ ವತಿಯಿಂದ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ನಾಯಕತ್ವ ವಿಕಸನ ಕಾರ್ಯಾಗಾರವು ಜರುಗಿತು. ಮುಖ್ಯ ತರಬೇತುದಾರರಾದ ರಾಜೀವ ಕುಮಾರ ಮಾತನಾಡಿ “ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರತಿಯೊಂದು ಚಟುವಟಿಕೆಗಳನ್ನು ಅವಕಾಶವಾಗಿ ಸ್ವೀಕರಿಸಬೇಕು, ಆಗಲೇ ಯಶಸ್ಸು ಗಳಿಸಲು ಸಾಧ್ಯ” ಎಂದು ಕಿವಿಮಾತು ಹೇಳಿದರು. ಮತ್ತೋರ್ವ ತರಬೇತಿದಾರರಾದ ಕ್ಲಾರಿಸಾ ಜತನ್ನಾ ಮಾತನಾಡಿ “ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಅಷ್ಟೇ ಶೃದ್ಧೆಯಿಂದ ಪಾಲ್ಗೊಳ್ಳಬೇಕು, ಅದು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ” ಎಂದು ಸೂಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ’ನ ಅಧ್ಯಕ್ಷ ಡಾ. ಸುರೇಶ ನಾಯಕ್ “ವಿದ್ಯಾರ್ಥಿಗಳು ಪದವಿಯ ಮೂರು ವರ್ಷಗಳನ್ನು ಸೂಕ್ತವಾಗಿ ಉಪಯೋಗಿಸಿ, ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಟ್ರಸ್ಟೀ ಮ್ಯಾನೇಜರ್ ರಾಜೇಶ್ ನಾಯಕ ಮಾತನಾಡಿ “ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಸಂವಹನ ಕೌಶಲ್ಯ ಪ್ರಮುಖವಾದುದು,... - [ಬಿ.ಪಿ.ಎಲ್ ಪಡಿತರ ಚೀಟಿಯನ್ನು ರದ್ದು ಮಾಡಿ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ಮಾಡದಂತೆ ಪಿಗ್ಮಿ ಸಂಗ್ರಹಕರಿ0ದ ಮನವಿ](https://bhavanatv.com/2025/1586/): ಹೊನ್ನಾವರ : ಸರ್ಕಾರ ಪಡಿತರ ಚೀಟಿ ಪರಿಷ್ಕರಣೆಯ ನಿರ್ಧಾರದಿಂದ ಹೊನ್ನಾವರ ತಾಲೂಕಿನ ಪಿಗ್ಮಿ ಸಂಗ್ರಹಕಾರರ ಬಿ.ಪಿ.ಎಲ್ ಪಡಿತರ ಚೀಟಿಯನ್ನು ರದ್ದು ಮಾಡಿ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ಮಾಡದಂತೆ ಪಿಗ್ಮಿ ಸಂಗ್ರಹಕರು ತಹಶೀಲ್ದಾರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಹೊನ್ನಾವರ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಗ್ಮಿ ಸಂಗ್ರಹಕಾರರು ಪದವಿ, ಮಾಸ್ಟರ್ ಡಿಗ್ರಿಯನ್ನು ಹೊಂದಿದ್ದರೂ ಸೂಕ್ತ ಉದ್ಯೋಗ ಸಿಗದೇ ಜೀವನೋಪಾಯಕ್ಕಾಗಿ ಪಿಗ್ಮಿ ಸಂಗ್ರಹಣೆಯನ್ನು ಮಾಡುತ್ತಿದ್ದಾರೆ. ಕಳೆದ 25-30 ವರ್ಷಗಳಿಂದ ಈ ಕೆಲಸ ಮಾಡಿಕೊಂಡು ಬಂದಿದ್ದರೂ ಬ್ಯಾಂಕುಗಳು ನಮಗೆ ವೇತನವನ್ನು ನೀಡುವುದಿಲ್ಲ. ನಾವು ಸಂಗ್ರಹಿಸಿದ ಹಣದ ಮೇಲೆ ನಮಗೆ ಕಮಿಷನ್ ಮಾತ್ರ ನೀಡುತ್ತದೆ. ಪಿಗ್ಮಿ ಸಂಗ್ರಹ ಮಾಡಿ ಅದರಿಂದ ಬಂದಿರುವ ಕಮಿಷನ್ ನಿಂದ ಕುಟುಂಬದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ನಮಗೆ ಸಿಗುವ ಕಮಿಷನನಿಂದ ನಮ್ಮ ಸಂಸಾರವನ್ನು ನಡೆಸುವುದೇ ಕಷ್ಟ ಆಗಿದೆ. ಹೀಗಿದ್ದಾಗ ಬಡ ಪಿಗ್ಮಿ ಏಜೆಂಟರ್ ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ನಮ್ಮ ಸಂಸಾರ ದಾರಿ ಮೇಲೆ ಬರುತ್ತದೆ. ಮಾನವೀಯ ನೆಲೆಯಿಂದ ಪಿಗ್ಮಿ ಏಜೆಂಟರ್ ಬಿಪಿಎಲ್... - [ವಿಜೇತ ವಸತಿಯುತ ವಿಶೇಷ ಶಾಲೆಯ ಮಕ್ಕಳಿಂದ ದೀಪಾವಳಿ ಹಣತೆ](https://bhavanatv.com/2025/1583/): ಕಾರ್ಕಳ: ವಿಜೇತ ವಸತಿಯುತ ವಿಶೇಷ ಶಾಲೆ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ರಿ. ಕಾರ್ಕಳ ಅಯ್ಯಪ್ಪನಗರದಲ್ಲಿ ನಡೆಯುತ್ತಿರುವ ವಿಜೇತ ವಸತಿಯುತ ವಿಶೇಷ ಶಾಲೆಯಲ್ಲಿ ಸುಮಾರು 140 ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳು ತರಬೇತಿಯನ್ನು ಪಡೆಯುತ್ತಿದ್ದು ಇದರಲ್ಲಿ ಸುಮಾರು 40 ಮಕ್ಕಳು ಅನಾಥ ವಿಶೇಷ ಚೇತನ ಮಕ್ಕಳು ಕೂಡ ಇದ್ದಾರೆ. 35 ಮಂದಿ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸುತ್ತಿದ್ದು ವಿಶೇಷ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಈ ಸಂಸ್ಥೆಯು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. 25 ವರ್ಷ ಮೇಲ್ಪಟ್ಟ ಮಕ್ಕಳಿಗೆ ವೃತ್ತಿ ತರಬೇತಿ ನೀಡುವ ಮೂಲಕ , ಮಕ್ಕಳು ಸ್ವತಂತ್ರವಾಗಿ ಜೀವನ ನಡೆಸುವ ನಿಟ್ಟಿನಲ್ಲಿ ಮಕ್ಕಳಿಗೆ ಈ ಕರಕುಶಲ ವಸ್ತುಗಳ ತಯಾರಿಕ ತರಬೇತಿಯನ್ನು ನೀಡಲಾಗುತ್ತಿದೆ. ಈ ವರ್ಷ ದಶಮಾನೋತ್ಸವದ ಹೊಸ್ತಿಲಲ್ಲಿದ್ದು ವಿಜೇತ ವಿಶೇಷ ಶಾಲಾ ದೇವರ ಮಕ್ಕಳು ತಯಾರಿಸಿದ ದೀಪಾವಳಿ ಹಣತೆಗಳನ್ನು ಖರೀದಿಸಿ ವಿಶೇಷ ಮಕ್ಕಳನ್ನು ಪ್ರೋತ್ಸಾಹಿಸುವಂತೆ ವಿನಂತಿಸಲಾಗಿದೆ.ಸAಪರ್ಕ ಸಂಖ್ಯೆ. 9449 711 678. 88614 38100 - [ಜಮಖಂಡಿಯ 102 ವರ್ಷದ ಆಂಜನೇಯ ಮೂರ್ತಿ ಮುರ್ಡೇಶ್ವರ ಸಮುದ್ರದಲ್ಲಿ ವಿಸರ್ಜನೆ](https://bhavanatv.com/2025/1579/): ಭಟ್ಕಳ: ಜಮಖಂಡಿಯ ಹಳೆಯ ಆಂಜನೇಯ ದೇವಸ್ಥಾನದ ಮರುಪ್ರತಿಷ್ಠಾಪನೆಯ ಪ್ರಯುಕ್ತ, 102 ವರ್ಷಗಳಿಂದ ಭಕ್ತರ ಆರಾಧನೆಯ ಕೇಂದ್ರವಾಗಿದ್ದ ಆಂಜನೇಯ ಮೂರ್ತಿಯನ್ನು ವಿಧಿ ವಿಧಾನಗಳೊಂದಿಗೆ ವಿಸರ್ಜಿಸಲಾಯಿತು. ಮೂರ್ತಿಯನ್ನು ಮೊದಲು ವಿಶೇಷ ಪೂಜೆ ಸಲ್ಲಿಸಿ ಮುರ್ಡೇಶ್ವರಕ್ಕೆ ಕರೆತರಲಾಯಿತು. ಬಳಿಕ ನೇತ್ರಾಣಿ ಗಣೇಶ್ ಅವರ ಮಾಲಿಕತ್ವದ ಓಶಿಯನ್ ಅಡ್ವೆಂಚರ್ ಬೋಟಿನಲ್ಲಿ ಭಕ್ತರ ಸಮಕ್ಷಮ ನಡು ಸಮುದ್ರಕ್ಕೆ ತೆರಳಿ ಪವಿತ್ರ ಜಲದಲ್ಲಿ ಮೂರ್ತಿಗೆ ಅಂತಿಮ ಪೂಜೆ ಸಲ್ಲಿಸಲಾಯಿತು. ನಂತರ ಮೂರ್ತಿಯನ್ನು ಸಮುದ್ರದಲ್ಲಿ ವಿಸರ್ಜಿಸಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಧರ್ಮಸ್ಥರು, ಸ್ಥಳೀಯ ಭಕ್ತರು ಸಹಯೋಗದೊಂದಿಗೆ ಪೂಜಾ ಕಾರ್ಯಕ್ರಮ ನೆರವೇರಿತು. ಭಕ್ತರ ಭಾವನಾತ್ಮಕ ಹಾಜರಾತಿ ಮಧ್ಯೆ ಹಳೆಯ ಆಂಜನೇಯ ಮೂರ್ತಿಗೆ ಗೌರವಪೂರ್ಣ ವಿದಾಯ ನೀಡಲಾಯಿತು. - [ಭಟ್ಕಳ ತೆಂಗಿನಗು0ಡಿ ಕ್ರಾಸ್‌ನಲ್ಲಿ ಭೀಕರ ರಸ್ತೆ ಅಪಘಾತ: ಪಿಯುಸಿ ವಿದ್ಯಾರ್ಥಿ ಸ್ಥಳದಲ್ಲೇ ದುರ್ಮರಣ](https://bhavanatv.com/2025/1575/): ಭಟ್ಕಳ: ರಾಷ್ಟ್ರೀಯ ಹೆದ್ದಾರಿ-66 ರ ತೆಂಗಿನಗುAಡಿ ಕ್ರಾಸ್ ಹತ್ತಿರ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪಿಯುಸಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮೃತನನ್ನು ಪಿರದೋಸನಗರ ನಿವಾಸಿ ಮಹ್ಮದ್ (18), ತಂದೆ ಮಹ್ಮದ್ ಅನಿಸ್ ಮೊತಶ್ಯಾಮ್ ಎಂದು ಗುರುತಿಸಲಾಗಿದ್ದು, ಆತ ಅಲಿ ಪಬ್ಲಿಕ್ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಕುಂದಾಪುರ ದಿಕ್ಕಿನಿಂದ ಭಟ್ಕಳ ಕಡೆಗೆ ಅತಿವೇಗದಲ್ಲಿ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಕೇರಳ ಮೂಲದ ಲಾರಿ, ತೆಂಗಿನಗುAಡಿ ಕ್ರಾಸ್ ಬಳಿ ಮುಂದೆ ಸಾಗುತ್ತಿದ್ದ ಸುಜುಕಿ ಬರ್ಗಮನ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸ್ಕೂಟರ್‌ನ್ನು ಚಲಾಯಿಸುತ್ತಿದ್ದ ಮಹ್ಮದ್ ರಸ್ತೆ ಬದಿಗೆ ಬಿದ್ದು, ಲಾರಿಯ ಹಿಂಬದಿ ಚಕ್ರ ತಲೆಯ ಮೇಲೆ ಹತ್ತಿ ತಕ್ಷಣವೇ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತಕ್ಕೆ ಕಾರಣವಾದ ಲಾರಿಯನ್ನು ಕೇರಳ ಮೂಲದ ಅಭಿಲಾಶ್ ಕುಮಾರ (ತಂದೆ ಬಾಲಕೃಷ್ಣ ಪಿಲೈ) ಎಂಬಾತ ಚಲಾಯಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬAಧ ಮೃತನ ಸಂಬAಧಿ ನವೀದ್ ಅಹ್ಮದ್ ನಗರ... - [ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಅತ್ಯಾಧುನಿಕ ರೊಬೊಟಿಕ್ ಸರ್ಜರಿ ಸೌಲಭ್ಯದ ಉದ್ಘಾಟನೆ, ಒಲಿಂಪಿಕ್ ಚಾಂಪಿಯನ್ ಸೈನಾ ನೆಹ್ವಾಲ್ ರಿಂದ ಅನಾವರಣ](https://bhavanatv.com/2025/1563/): ಮಣಿಪಾಲ : ಇಂದು ಉಡುಪಿ ಜಿಲ್ಲೆಯ ಆರೋಗ್ಯ ಕ್ಷೆತ್ರದಲ್ಲಿ ಒಂದು ಮೈಲಿಗಲ್ಲು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಇಂದು ತನ್ನ ಸುಧಾರಿತ ರೊಬೊಟಿಕ್ ಸರ್ಜರಿ ಸೌಲಭ್ಯವನ್ನು ಉದ್ಘಾಟಿಸಿತು, ಇದು ಈ ಪ್ರದೇಶದಲ್ಲಿ ಒಂದು ಪರಿವರ್ತನಾ ಅಧ್ಯಾಯವನ್ನು ಗುರುತಿಸುತ್ತದೆ. ಈ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯವನ್ನು ಒಲಿಂಪಿಕ್ ಬ್ಯಾಡ್ಮಿಂಟನ್ ಚಾಂಪಿಯನ್ ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿ ಸೈನಾ ನೆಹ್ವಾಲ್ ಅನಾವರಣಗೊಳಿಸಿದರು. ಶಸ್ತ್ರಚಿಕಿತ್ಸಾ ಆಂಕೊಲಾಜಿ, ಸಾಮಾನ್ಯ ಶಸ್ತ್ರಚಿಕಿತ್ಸೆ, ಜಿಐ ಶಸ್ತ್ರಚಿಕಿತ್ಸೆ, ಒಬಿಜಿ, ಮೂತ್ರಶಾಸ್ತ್ರ ಮತ್ತು ಮೊಣಕಾಲು ಹಾಗೂ ಕೀಲು ಬದಲಿ ಕಾರ್ಯವಿಧಾನಗಳಲ್ಲಿ ನಿಖರತೆಯನ್ನು ಹೆಚ್ಚಿಸುವ ಮತ್ತು ಫಲಿತಾಂಶಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಈ ಸುಧಾರಿತ ತಂತ್ರಜ್ಞಾನವು ರೋಗಿಗಳ ಆರೈಕೆಯಲ್ಲಿ ಕ್ರಾಂತಿಯನ್ನುAಟುಮಾಡಲಿದೆ. ಈ ಉದ್ಘಾಟನೆಯೊಂದಿಗೆ, ಕಸ್ತೂರ್ಬಾ ಆಸ್ಪತ್ರೆ ಉಡುಪಿ ಜಿಲ್ಲೆಯ ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಗಳನ್ನು ನೀಡುವ ಮೊದಲ ಆರೋಗ್ಯ ಸಂಸ್ಥೆಯಾಗಿದೆ. ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಣಿಪಾಲ ಕ್ಲಸ್ಟರ್‌ನ ಸಿ ಓ ಓ ಡಾ. ಸುಧಾಕರ್ ಕಂಟಿಪುಡಿ, ಕಸ್ತೂರ್ಬಾ... - [ಹಬ್ಬ ಹರಿ ದಿನಗಳು ಜಾತ್ರೆ ಉತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ.. ಪ್ರಕಾಶ್ ಗುರೂಜಿ.](https://bhavanatv.com/2025/1560/): ಕೆ.ಆರ್. ಪೇಟೆ : ಜಾತ್ರೆ ಉತ್ಸವಗಳು, ಹಬ್ಬ ಹರಿ ದಿನಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಧಾರ್ಮಿಕ ಪರಂಪರೆಯ ಮೇಲೆ ಬೆಳಕು ಚೆಲ್ಲುವ ವಿಶೇಷವಾದ ಸಮಾರಂಭಗಳಾಗಿವೆ ಎಂದು ಪ್ರಕಾಶ್ ಗುರೂಜಿ ಹೇಳಿದರು. ಅವರು ಕೃಷ್ಣರಾಜಪೇಟೆ ಪಟ್ಟಣದ ಹೊರವಲಯದ ಬಂಡಬೋಯನಹಳ್ಳಿ ಗ್ರಾಮದ ಸಮೀಪದಲ್ಲಿರುವ ಶ್ರೀ ಮಲೈ ಮಹದೇಶ್ವರಸ್ವಾಮಿ ದೇವಾಲಯದಲ್ಲಿ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಶ್ರೀ ಮಲೈಮಹದೇಶ್ವರ ಸ್ವಾಮಿಯವರ ಅದ್ದೂರಿ ಜಾನಪದ ಕಲಾ ತಂಡಗಳ ಭವ್ಯ ಮೆರವಣಿಗೆ ಹಾಗೂ ಮಹದೇಶ್ವರರ ಉತ್ಸವಕ್ಕೆ ಚಾಲನೆ ನೀಡಿ ನೆರೆದಿದ್ದ ಸದ್ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಶ್ರೀ ಮಲೈಮಹದೇಶ್ವರ ಸ್ವಾಮಿಯವರ ಉತ್ಸವದ ಅಂಗವಾಗಿ ನೂರಾರು ಮಕ್ಕಳಿಗೆ ನಾಮಕರಣ ಕಾರ್ಯಕ್ರಮವನ್ನು ನೆರವೇರಿಸಿ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಕಾಶ್ ಗುರೂಜಿಯವರು ಮಲೈ ಮಹದೇಶ್ವರರು ನಮ್ಮ ಜಾನಪದ ಮುಖ್ಯ ಆರಾಧ್ಯ ದೈವ ವಾಗಿದ್ದು ಹುಲಿವಾಹನಧಾರಿಯಾದ ಮಹದೇಶ್ವರ ರ ಬಗ್ಗೆ ಅಪಾರವಾದ ನಂಬಿಕೆ ಹಾಗೂ ಭಕ್ತಿ ವಿಶ್ವಾಸಗಳಿವೆ. ಕೃಷ್ಣರಾಜಪೇಟೆ ತಾಲೂಕಿನಲ್ಲಿ ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣತೀರ್ಥ... - [ಪಾರ್ಕಿಂಗ್ ವಿಷಯದಲ್ಲಿ ನಡು ರಸ್ತೆಯಲ್ಲಿ ಮಾರಾಮಾರಿ-ಎಂಟು ಜನರ ವಿರುದ್ಧ ಪ್ರಕರಣ](https://bhavanatv.com/2025/1557/): ಭಟ್ಕಳ:- ಮದುವೆ ರಿಸಷ್ಷನ್ ಗಾಗಿ ಬಂದ ಯವಕರು ಪಾರ್ಕಿಂಗ್ ವಿಷಯದಲ್ಲಿ ಒಬ್ಬರಿಗೊಬ್ಬರು ಬಡಿದಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹನೀಫಾಬಾದ್ ನ ಕಸ್ನುಮ್ ಮದುವೆ ಹಾಲ್ ಎದುರು ನಡೆದಿದೆ.ಈ ಘಟನೆ ಯಲ್ಲಿ ಐದಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು ಮೊನ್ನೆ ನಡೆದಿದ್ದ ಈ ಘಟನೆ ವಿಡಿಯೋ ವೈರಲ್ ಆಗುತಿದ್ದಂತೆ ಎಂಟು ಜನರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಟ್ಕಳದಲ್ಲಿ ನಡೆದ ಘಟನೆ ಏನು? ಭಟ್ಕಳ ತಾಲೂಕಿನ ಹೆಬಳೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹನೀಫಾಬಾದ್ ನ ಕಸ್ನುಮ್ ಮದುವೆ ಹಾಲ್ ನಲಿ ರಿಸಪ್ಷನ್ ಇದ್ದು ಈವೇಳೆ ಕೆಲವು ಎರಡು ಗುಂಪುಗಳು ಅಲ್ಲಿ ಪಾರ್ಕಿಂಗ್ ಮಾಡುವಾಗ ಮಾತಿಗೆ ಮಾತು ನಡೆದಿದೆ.ಆರೋಪಿತರು ಗುಂಪಾಗಿ ಸೇರಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ,ಬಳಿಕ ಕೈ ಕೈ ಮಿಲಾಯಿಸಿ ಹೊಡೆದಾಟ ನಡೆಸಿದರೆಂಬ ಮಾಹಿತಿ ಲಭಿಸಿದೆ. ಘಟನಾ ಸ್ಥಳಕ್ಕೆ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಲಿಂಗಾರೆಡ್ಡಿ ಸಿಬ್ಬಂದಿಗಳೊAದಿಗೆ ಧಾವಿಸಿ ಜಗಳ ಶಮನಕ್ಕೆ ಮುಂದಾದರೂ,ಆರೋಪಿತರು ಅವರ... - [ವೈದ್ಯಕೀಯ ಪರೀಕ್ಷೆಯ ವೇಳೆ ಪರಾರಿಯಾಗಿದ್ದ ಕುಖ್ಯಾತ ಕಳ್ಳ ಫೌಜಾನ್, ಮಂಡ್ಯದಲ್ಲಿ ಹೆಡೆಮುರಿ ಕಟ್ಟಿ ಬಂಧಿಸಿದ ಕುಮಟಾ ಪೊಲೀಸರು](https://bhavanatv.com/2025/1554/): ಭಟ್ಕಳ : ಕುಮಟಾ ಗಿಬ್ ಸರ್ಕಲ್ ಬಳಿಯ ಬ್ಯಾಟರಿ ಅಂಗಡಿ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವಾಗ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಕುಖ್ಯಾತ ಕಳ್ಳ ಫೌಜಾನ್ ಅಹ್ಮದ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮೂರು ದಿನಗಳ ಬೆನ್ನಟ್ಟಿದ ಅಪರಾಧ ವಿಭಾಗದ ಪಿಎಸ್ ಐ ಮಯೂರ ಪಟ್ಟಣ ಶೆಟ್ಟಿ ತಂಡ, ಮಂಡ್ಯ ಜಿಲ್ಲೆಯ ಮದ್ದೂರು ಸರ್ಕಾರಿ ಆಸ್ಪತ್ರೆಗೆ ನುಗ್ಗಿ ಆರೋಪಿ ಹೆಡೆಮುರಿ ಕಟ್ಟಿ ವಶಕ್ಕೆ ಪಡೆದುಕೊಂಡಿದೆ. ಮೂಲಗಳ ಪ್ರಕಾರ, ಬ್ಯಾಟರಿ ಶಾಪ್ ಕಳ್ಳತನ ಪ್ರಕರಣದಲ್ಲಿ ಫೌಜಾನ್ ಅಹ್ಮದ (ಭಟ್ಕಳ ಬದ್ರಿಯಾ ಕಾಲೋನಿ) ಸೇರಿದಂತೆ ಇನ್ನಿಬ್ಬರನ್ನು ಪೊಲೀಸರು ಕೇವಲ 24 ಗಂಟೆಗೂ ಒಳಗಾಗಿ ಶಿರಸಿಯಲ್ಲಿ ಪತ್ತೆಹಚ್ಚಿ ಬಂಧಿಸಿದ್ದರು. ನ್ಯಾಯಾಲಯಕ್ಕೆ ಹಾಜರು ಮಾಡುವ ಮೊದಲು, ಶುಕ್ರವಾರ ರಾತ್ರಿ ಆರೋಪಿ ಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿತ್ತು. ಪರೀಕ್ಷೆ ಮುಗಿದ ಬಳಿಕ ವಾಪಸ್ ತೆರಳುವ ಸಂದರ್ಭದಲ್ಲಿ, ಕರ್ತವ್ಯ ನಿರತ ಸಿಬ್ಬಂದಿ ಅಜಾಗರೂಕತೆಯಿಂದ ಫೌಜಾನ್ ಕಾಂಪೌAಡ್ ಹಾರಿ ಕತ್ತಲಿನಲ್ಲಿ ಪರಾರಿಯಾಗಿದ್ದನು. ಪರಾರಿಯಾದ ಆರೋಪಿಯನ್ನು... - [ಹೊನ್ನಾವರ ಪಿ ಎಲ್ ಡಿ ಬ್ಯಾಂಕ್ ಫಲಿತಾಂಶ ಪ್ರಕಟ ಕ್ಲೀನ್ ಸ್ವಿಪ್ ಮೂಲಕ ಸಚಿವ ಮಂಕಾಳ ವೈದ್ಯ ಬಣದವರು ಆಯ್ಕೆ](https://bhavanatv.com/2025/1551/): ಹೊನ್ನಾವರ; ಪ್ರತಿಷ್ಠೆಯ ಕಣವಾಗಿದ್ದ ಹೊನ್ನಾವರ ಪಿಎಲ್ ಡಿ ಬ್ಯಾಂಕ್ ಚುನಾವಣೆಯ ಫಲಿತಾಂಶವು ಪ್ರಕಟಗೊಂಡಿದ್ದು ಸಚಿವ ಮಂಕಾಳ ವೈದ್ಯ ಬಣದ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರದಲ್ಲಿಯೂ ಗೆಲುವು ಸಾಧಿಸುವ ಮುಲಕ ಪ್ರಾಬಲ್ಯ ಮೆರೆದಿದೆ. ಮಂಗಳವಾರ ಹೊನ್ನಾವರ ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಭವನದಲ್ಲಿ ನಡೆದ ಮತ ಏಣಿಕೆಯನ್ನು ನಡೆಸಲಾಯಿತು. ಸರಿಸುಮಾರು ಒಂಬತ್ತು ತಿಂಗಳ ಹಿಂದೆ ಜನವರಿಯಲ್ಲಿ ನಡೆದ ಚುನಾವಣೆ ನಡೆದಿತ್ತು. ಕೊರ್ಟ್ ಆದೇಶದ ಬಳಿಕ ಮತ ಏಣಿಕೆ ಕಾರ್ಯ ನಡೆದಿದ್ದು, ನೂತನ ನಿರ್ದೆಶಕರಾಗಿ ಸಾಲಗಾರ ಕ್ಷೇತ್ರದಿಂದ ಗೋವಿಂದ ಸುಬ್ಬ ನಾಯ್ಕ ಗೇರುಸೊಪ್ಪಾ, ಯೋಗೀಶ ರಾಯ್ಕರ್, ರಾಘವೇಂದ್ರ ನಾಯ್ಕ ಗೇರುಸೊಪ್ಪಾ, ವಿ.ಕೆ.ವಿಶಾಲ್ ವಂದೂರು, ಸತೀಶ ತಾಂಡೇಲ್ ಕರ್ಕಿ, ಸಂಜೀವ ನಾಯ್ಕ ಮಂಕಿ, ಹನುಮಂತ ನಾಯ್ಕ ಚಂದಾವರ, ಹರೀಶ ಗೌಡ ಕೆರವಳ್ಳಿ ಆಯ್ಕೆಯಾದರು. ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರದಲ್ಲಿ ಶಿವರಾಮ ಸಂಗುಮಣೆ ಮಂಕಿ, ಹಿಂದುಳಿದ ಅ ವರ್ಗ ಕ್ಷೇತ್ರದಲ್ಲಿ ಕೃಷ್ಣ ಗೌಡ ಮಾವಿನಕುರ್ವಾ ಮಹಿಳಾ ಮೀಸಲು ಕ್ಷೇತ್ರದಲ್ಲಿ ಶ್ರುತಿ ಗುರುದತ್ತ ಭಟ್ ಅಪಗಾಲ, ವಾಸಂತಿ ಅಣ್ಣಯ್ಯ ನಾಯ್ಕ... - [ಕಳ್ಳತನ ತಡೆಗೆ ಹೆಬಳೆ ಗಾಂಧಿನಗರದಲ್ಲಿ ಸಿಸಿಟಿವಿ ಅಳವಡಿಕೆ](https://bhavanatv.com/2025/1548/): ಭಟ್ಕಳ: ಪಟ್ಟಣ ಗ್ರಾಮೀಣ ಪ್ರದೇಶದಲ್ಲಿ ಕಳ್ಳತನ, ಹಲ್ಲೆಯಂತಹ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ಪೊಲೀಸ್ ಇಲಾಖೆಯ ಮುಂದಾಳುತ್ವದಲ್ಲಿ ಸ್ಥಳೀಯ ದಾನಿಗಳ ಸಹಕಾರದೊಂದಿಗೆ ಹೆಬಳೆ ಗಾಂಧಿನಗರದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ವೇಳೆ ಮಾತನಾಡಿದ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಅವರು, ಇತ್ತೀಚಿನ ದಿನಗಳಲ್ಲಿ ಮನೆ, ದೇವಸ್ಥಾನ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಆರೋಪಿಗಳನ್ನು ಪತ್ತೆಹಚ್ಚುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಆಯ್ದ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸುವ ಕಾರ್ಯ ಕೈಗೊಳ್ಳಲಾಗಿದೆ. ಜೊತೆಗೆ ಮನೆಮನೆ ಭೇಟಿ ಕಾರ್ಯಕ್ರಮವನ್ನೂ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಸಹಕರಿಸಿದರೆ ಅಪರಾಧ ನಿಯಂತ್ರಣ ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ. - [ನಾವು ಧರ್ಮದಲ್ಲಿ ಇದ್ದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ-ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ](https://bhavanatv.com/2025/1544/): ಕುಮಟಾ : ಪುರಸಭೆಯ ರೆವಿನ್ಯೂ ಇನ್ಸ್ಪೆಕ್ಟರ್ ವೆಂಕಟೇಶ್ ಆರ್. ಮತ್ತು ಅವರ ತಾಯಿ ಇವತ್ತು ನಮ್ಮನೆಗೆ ಬಂದು ಕ್ಷಮೆ ಕೇಳಿದ್ದಾರೆ ನಿಮ್ಮ ತಪ್ಪೇನೂ ಇಲ್ಲ ಎಂಬುದರ ಜೊತೆಗೆ, ಆ ದಿನ ಬರೆದ ಪತ್ರದ ಸತ್ಯಾಸತ್ಯತೆಯನ್ನು ಸ್ಪಷ್ಟ ಪಡಿಸಿದ್ದಾರೆ ಎಂದು ಕುಮಟಾ ಹೊನ್ನಾವರ ವಿಧಾನಸಭಾ ಶಾಸಕ ದಿನಕರ ಶೆಟ್ಟಿ ಹೇಳಿದರು. ನಾವು ಧರ್ಮದಲ್ಲಿ ಇದ್ದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂಬುದಕ್ಕೆ ನಾನೇ ಪ್ರತ್ಯಕ್ಷ ನಿದರ್ಶನ. ಈ ವಿಚಾರವನ್ನು ಧರ್ಮಸ್ಥಳ ಯೋಜನೆಯ ವೇದಿಕೆಯಲ್ಲಿ ಹಂಚಿಕೊಳ್ಳಲು ನನಗೆ ಹೆಮ್ಮೆ ಅನಿಸುತ್ತದೆ” ಎಂದು ಕುಮಟಾ ಹೊನ್ನಾವರ ವಿಧಾನಸಭಾ ಶಾಸಕ ದಿನಕರ ಶೆಟ್ಟಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉತ್ತರ ಕನ್ನಡ ಜಿಲ್ಲೆ ವತಿಯಿಂದ, ಹೊನ್ನಾವರ ತಾಲೂಕಿನ ಮೂಡಗಣಪತಿ ಸಭಾಭವನದಲ್ಲಿ ಗಾಂಧಿ ಸ್ಮೃತಿ ಮತ್ತು ಜನ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾಸಕ ದಿನಕರ ಶೆಟ್ಟಿಯವರು ತಮ್ಮ ಭಾಷಣದಲ್ಲಿ ಈ ವಿಷಯ... - [ಗಾಂಧಿ ಸ್ಮೃತಿ ಮತ್ತು ಜನ ಜಾಗೃತಿ ಸಮಾವೇಶ](https://bhavanatv.com/2025/1541/): ಹೊನ್ನಾವರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉತ್ತರ ಕನ್ನಡ ಜಿಲ್ಲೆ ವತಿಯಿಂದ, ಹೊನ್ನಾವರ ತಾಲೂಕಿನ ಮೂಡಗಣಪತಿ ಸಭಾಭವನದಲ್ಲಿ ಗಾಂಧಿ ಸ್ಮೃತಿ ಮತ್ತು ಜನ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಹೊನ್ನಾವರ ತಹಶೀಲ್ದಾರ್ ಪ್ರವೀಣ್ ಕರಾಂಡೆ ಅವರು ಜ್ಯೋತಿ ಬೆಳಗಿ ತೆಂಗಿನ ಸಿಂಗಾರ ಅರಳಿಸುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಶ್ರೀ ಮಂಜುನಾಥ ಸ್ವಾಮಿಯ ಭಾವಚಿತ್ರ ಮತ್ತು ಮಹಾತ್ಮಾ ಗಾಂಧಿಯವರ ಭಾವ ಚಿತ್ರಕ್ಕೆ ಗಣ್ಯರೆಲ್ಲ ಪುಷ್ಪಾರ್ಚನೆ ಮಾಡಿದರು. ಕುಡಿತ ಬಿಟ್ಟು ಹೊಸ ಜೀವನ ಸಾಗಿಸುತ್ತಿರುವ ನವಜೀವನ ಸಮಿತಿ ಸದಸ್ಯರುಗಳಿಗೆ, ವೇದಿಕೆಯ ಮೇಲಿದ್ದ ಗಣ್ಯರು ಪುಷ್ಪ ನೀಡಿ ಗೌರವಿಸಿದರು. ಯೋಜನೆಯ ವಿವಿಧ ಜನುಪಯೋಗಿ ಕಾರ್ಯಕ್ರಮಗಳಿಗೆ ಸಂಬAಧಿಸಿದ ಪ್ರಮಾಣ ಪತ್ರ, ವೀಲ್ ಚೇರ್ ಇತ್ಯಾದಿ ಸಲಕರಣೆಗಳನ್ನು ಅರ್ಹ ಪಲಾನುಭವಿಗಳಿಗೆ ವಿತರಿಸಲಾಯಿತು. ಜನಜಾಗೃತಿ ವೇದಿಕೆಯ ಮದ್ಯಪಾನ ವಿರೋಧಿ ಕಾರ್ಯಕ್ರಮಗಳಿಗೆ ಸರಕಾರದ ಸಂಬAಧಿಸಿದ ಇಲಾಖೆಗಳು ಸ್ಪಂದಿಸಬೇಕೆAಬ ಹಕ್ಕೋತ್ತಾಯದ ಠರಾವು ಓದಿ ತಿಳಿಸಲಾಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕುಮಟಾ ಹೊನ್ನಾವರ... - [ಕಾಂತಾರ-ಅಧ್ಯಾಯ 1ರಲ್ಲಿ ಭಟ್ಕಳದ ರಮ್ಯಾ ಕೃಷ್ಣ ನಾಯ್ಕ ನಟನೆ](https://bhavanatv.com/2025/1534/): ಭಟ್ಕಳ: ರಿಷಭ್ ಶೆಟ್ಟಿಯವರ ಸಂಚಲನ ಮೂಡಿಸಿದ ಕಾಂತಾರ ಚಿತ್ರದ ಅಧ್ಯಾಯ-1ರಲ್ಲಿ ಭಟ್ಕಳ ಮೂಲದ ಯುವತಿ ನಟಿಯಾಗಿ ಅವಕಾಶ ಪಡೆದಿರುವುದು ತಾಲೂಕಿನಲ್ಲಿ ಸಂತಸದ ಸಂಗತಿಯಾಗಿದೆ. ಮೂಡಭಟ್ಕಳದ ನಿವಾಸಿ ರಮ್ಯಾ ಕೃಷ್ಣ ನಾಯ್ಕ ಅವರು ಈ ಚಿತ್ರದಲ್ಲಿ ರಾಣಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕೃಷ್ಣ ಲಚ್ಮಯ್ಯ ನಾಯ್ಕ ಕಾಟಿಮನೆ ಹಾಗೂ ಪ್ರಭಾವತಿ ನಾಯ್ಕ ದಂಪತಿಗಳ ಪುತ್ರಿಯಾದ ಅವರು ಪ್ರಾಥಮಿಕ ಶಿಕ್ಷಣವನ್ನು ಆನಂದಾಶ್ರಮ ಹೈಸ್ಕೂಲ್‌ನಲ್ಲಿ ಪೂರ್ಣಗೊಳಿಸಿ, ಪಿಯು ಶಿಕ್ಷಣವನ್ನು ಉಡುಪಿಯ ಎಂ.ಜಿ.ಎ. ಕಾಲೇಜಿನಲ್ಲಿ ಪಡೆದರು. ನಂತರ ಬೆಂಗಳೂರಿನ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಬಿ.ಇ ಪದವಿ ಪಡೆದಿದ್ದಾರೆ. 2016ರಲ್ಲಿ ಬೆಂಗಳೂರಿನಲ್ಲಿ ನಡೆದ ಟಾಪ್ ಮಾದರಿ ಹಂಟ್ ಸ್ಪರ್ಧೆಯಲ್ಲಿ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರೊಂದಿಗೆ ಸ್ಪರ್ಧಿಸಿ ದ್ವಿತೀಯ ಸ್ಥಾನ ಪಡೆದಿದ್ದರು. ನಂತರ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲ್ ಲಿಸ್ಟ್ನಲ್ಲೂ ಸ್ಥಾನ ಪಡೆದರು. ಈ ಹಿಂದೆ ಅವರು ಕನ್ನಡದ ದರಣಿ ಮಂಡಳ ಮಧ್ಯದೊಳಗೆ, ನೋಡಿದವರು ಏನೆಂತಾರೆ, ಲಾಸ್ಟ್ ಆರ್ಡರ್ ಹಾಗೂ ಆಶ್ವಿನಿ ಪುನೀತ್ ರಾಜಕುಮಾರ ನಿರ್ದೇಶಿಸಿದ ದ ಬೆಲ್ ಕಿರುಚಿತ್ರಗಳಲ್ಲಿ ನಟಿಸಿ... ## Pages - [Bhavana Youtube](https://bhavanatv.com/bhavana-youtube/) - [Watch Live](https://bhavanatv.com/watch-live/) [comment]: # (Generated by Hostinger Tools Plugin)