
ಭಟ್ಕಳ : ಸಪ್ಟೆಂಬರ್ ತಿಂಗಳ 10 ಮತ್ತು 11ನೇ ತಾರೀಖಿನಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಬೈಲೂರ್ ನಲ್ಲಿ ನಡೆದ ತಾಲೂಕ ಮಟ್ಟದ ಕ್ರೀಡಾ ಕೂಟದಲ್ಲಿ ಆನಂದ ಆಶ್ರಮ ಪ್ರೌಢಶಾಲೆ ವಿದ್ಯಾರ್ಥಿನಿಯರು ಅತ್ಯುತ್ತಮ ಪ್ರದರ್ಶನ ನೀಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಕುಮಾರಿ ಶ್ರೇಯಾ ನಾಯ್ಕ್-ಗುಂಡು ಎಸೆತ ಮತ್ತು ಜಾವಲಿನ ಎಸೆತ ಪ್ರಥಮ, ಹ್ಯಾಮರ್ ಥ್ರೋ ತೃತೀಯ. ಕುಮಾರಿ ಮೋನಿಷಾ ನಾಯ್ಕ್- ಉದ್ದ ಜಿಗಿತ ಪ್ರಥಮ, ಕುಮಾರಿ ನಿಭಾ ಬೋರ್ಕರ್-ಹ್ಯಾಮರ್ ತ್ರೋ ಪ್ರಥಮ, ಕುಮಾರಿ ಯಶಸ್ವಿನಿ ನಾಯ್ಕ್-ಕರಾಟೆ ಪ್ರಥಮ, ತ್ರಿಪಲ್ ಜಂಪ್ ದ್ವಿತೀಯ. ಇಲಾನ್-ಗುಂಡು ಎಸೆತ ಪ್ರಥಮ, ಶಿವಪ್ರಸಾದ್ ನಾಯ್ಕ್ -ಚೆಸ್ ಪ್ರಥಮ, ಬಿ ವಿ ರಾಹುಲ್- ಕರಾಟೆ ಪ್ರಥಮ, ಯಶಸ್ ಮೊಗೇರ್- ಕರಾಟೆ ಪ್ರಥಮ, 400 ಮೀಟರ್ ಓಟ ತೃತೀಯ. ಕುಮಾರ್ ವಜ್ರ ನಾಯ್ಕ್- ಕರಾಟೆ ಪ್ರಥಮ. ಅನುಮ್-ಕರಾಟೆ ಪ್ರಥಮ.

ತಾಲೂಕು ಮಟ್ಟದ ಗುಂಪು ಆಟಗಳಲ್ಲಿ–ಬಾಲಕರ ಕಬ್ಬಡ್ಡಿ-ಯಶವಂತ ಮತ್ತು ತಂಡದವರು ಪ್ರಥಮ ಸ್ಥಾನ, ಬಾಲಕರ ಬಾಲ್ ಬ್ಯಾಡ್ಮಿಂಟನ್-ಪ್ರಥಮ್ ಮತ್ತು ಸಂಗಡಿಗರು ಪ್ರಥಮ ಸ್ಥಾನ, ಬಾಲಕರ ಶೆಟ್ಟಲ್ ಬ್ಯಾಡ್ಮಿಂಟನ್–ಅಯಾನ್ ಮತ್ತು ಸಂಗಡಿಗರು ಪ್ರಥಮ. ಬಾಲಕರ-ಬಾಲಕೀಯರ ತ್ರೋಬಾಲ್-ದ್ವಿತೀಯ. ಬಾಲಕಿಯರ ವಾಲಿಬಾಲ್ ದ್ವಿತೀಯ. ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ -ದ್ವಿತೀಯ. ಬಾಲಕಿಯರ ಶೆಟ್ಟಲ್ ಬ್ಯಾಡ್ಮಿಂಟನ್-ದ್ವಿತೀಯ.
ವಲಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ವಲಯ ವಿರಾಗ್ರಣಿ ಪ್ರಶಸ್ತಿ ಪಡೆದ, ಕಾನ್ವೆಂಟ್ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕಾ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ವಲಯ ಹಾಗೂ ತಾಲೂಕ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ, ಹಾಗೂ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮತ್ತು ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಶ್ರೀ ಮಹೇಶ್ ನಾಯ್ಕ್ ಇವರಿಗೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಶ್ಲಾಘಿಸಿದೆ.
More Stories
ಮಗ್ದೂಮ್ ಕಾಲನಿಯ ಅರಣ್ಯ ಇಲಾಖೆಯ ಗುಡ್ಡ ಪ್ರದೇಶದಲ್ಲಿ ಜಾನುವಾರುಗಳ ರಾಶಿ ಮೂಳೆ ಪತ್ತೆ ಸ್ಥಳೀಯರಲ್ಲಿ ಆಕ್ರೋಶ
ಸಮಾಜದಲ್ಲಿ ಹೆಚ್ಚಿನ ಗೌರವಕ್ಕೆ ಒಳಪಡುವ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ
ಮೀನುಗಾರಿಕೆಯಲ್ಲಿ ಯುವ ಮೀನುಗಾರನ ಅಕಾಲಿಕ ಸಾವು