October 5, 2025

ಲೋಕ್ ಅದಾಲತ್ ಅಲ್ಲಿ ಒಟ್ಟು 312 ಪ್ರಕರಣಗಳು ರಾಜಿ

ಹೊನ್ನಾವರ. ತಾಲೂಕಿನ ನ್ಯಾಯಾಲಯದಲ್ಲಿ ಇಂದು ನಡೆದ ಲೋಕ್ ಅದಾಲತ್ ಅಲ್ಲಿ ಒಟ್ಟು 312 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ ಆದವು.
ಹಿರಿಯ ಸಿವಿಲ್ ಮತ್ತು ಎಂ ಏ ಸಿ ಟಿ ನ್ಯಾಯಾಲಯದಲ್ಲಿ 53 ಕ್ರಿಮಿನಲ್ ಪ್ರಕರಣಗಳು ,10 ಸಿವಿಲ್ ಪ್ರಕರಣಗಳು ಸೇರಿದಂತೆ 63 ಪ್ರಕರಣಗಳು ಇತ್ಯರ್ಥವಾದವು. ನ್ಯಾಯಾಧೀಶ ಬಿ. ಸಿ. ಚಂದ್ರಶೇಖರ್ ಹಾಗೂ ಸಂಧಾನಕಾರರಾಗಿ ವಕೀಲರಾದ ಉದಯ ನಾಯ್ಕ ಪಾಲ್ಗೊಂಡಿದ್ದರು.
ಹೊನ್ನಾವರ ಪ್ರಿನ್ಸಿಪಲ್ ಮತ್ತು ಜೆಎಂ ಏ ಫ್‌ಸಿ ನ್ಯಾಯಾಲಯದಲ್ಲಿ 129 ಕ್ರಿಮಿನಲ್ ಪ್ರಕರಣಗಳು 9 ಸಿವಿಲ್ ಪ್ರಕರಣಗಳು, ಸೇರಿದಂತೆ 138 ಪ್ರಕರಣಗಳು ಇತ್ಯರ್ಥಗೊಂಡವು. ನ್ಯಾಯಾಧೀಶ ಈರಣ್ಣ ಹುಣಸಿಕಟ್ಟಿ ಹಾಗೂ ಸಂಧಾನಕಾರರಾಗಿ ವಕೀಲ ಸೂರಜ್ ನಾಯ್ಕ್ ಉಪಸ್ಥಿತರಿದ್ದರು.
.ಹೆಚ್ಚುವರಿ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ 99 ಕ್ರಿಮಿನಲ್ ಪ್ರಕರಣಗಳು, 12 ಸಿವಿಲ್ ಪ್ರಕರಣಗಳು ಸೇರಿದಂತೆ ಒಟ್ಟು 111 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡವು.
ನ್ಯಾಯಾಧೀಶ ಅನಿಲ್ ಜಾನ್ ಸಿಕ್ವೇರಾ , ಸಂಧನಕಾರರಾಗಿ ವಕೀಲ ಶ್ಯಾಮಲಾ ನಾಯ್ಕ್ ಭಾಗವಹಿಸಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ್

About The Author

error: Content is protected !!