October 6, 2025

ಗುರುಕೃಪಾ ಪತ್ತಿನ ಸಂಘಕ್ಕೆ 60 ಲಕ್ಷ ನಿವ್ವಳ ಲಾಭ

ಭಟ್ಕಳ: ಭಟ್ಕಳದ ಗುರುಕೃಪಾ ಸಹಕಾರಿ ಪತ್ತಿನ ಸಂಘ 2024-25ನೇ ಸಾಲಿನಲ್ಲಿ 60 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸಂಘವು ಆರ್ಥಿಕವಾಗಿ ಸದೃಢವಾಗಿದೆ ಎಂದು ಸಂಘದ ಅಧ್ಯಕ್ಷ ಮೋಹನ ನಾಯ್ಕ ಹೇಳಿದರು. ಪಟ್ಟದ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ನಡೆದ ಸಂಘದ 27ನೇ ವರ್ಷದ ವಾರ್ಷಿಕ ಶೇರುದಾರರ ಸಭೆಯಲ್ಲಿ ಮಾತನಾಡಿದ ಅವರು, 2024-25ನೇ ಸಾಲಿನ ಅಂತ್ಯಕ್ಕೆ ಸಂಘದ ಶೇರು 2.66 ಕೋಟಿ ತಲುಪಿದ್ದು, 5.91 ಕೋಟಿ ಸ್ವಂತ ಬಂಡವಾಳ ಹೊಂದಿದೆ ಎಂದು ವಿವರಿಸಿದರು. ಕಳೆದ ಸಾಲಿನಲ್ಲಿ 45.53 ಕೋಟಿ ಠೇವಣಿ ಸಂಗ್ರಹಿಸಿ, 47.98 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಸಂಘವು ಒಟ್ಟು 60 ಕೋಟಿಯ ದುಡಿಯುವ ಬಂಡವಾಳ ಹೊಂದಿದ್ದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆರು ಶಾಖೆಗಳೂ ಲಾಭದ ಹಾದಿಯಲ್ಲಿ ಸಾಗುತ್ತಿದೆ ಎಂದರು.

ಸದಸ್ಯರ ಸಹಕಾರವೇ ಸಂಘದ ಪ್ರಗತಿಗೆ ಮೂಲ ಕಾರಣವಾಗಿದೆ ಎಂದು ಹೇಳಿದರು. ಕಳೆದ ಸಾಲಿನಲ್ಲಿ ಪ್ರಧಾನ ಕಚೇರಿಗೆ ಸ್ವಂತ ಕಟ್ಟಡವನ್ನು ಖರೀದಿಸಿರುವುದಾಗಿ ತಿಳಿಸಿ, ಈ ಸಾಲಿನಲ್ಲಿ ಸಂಘದ ಅಗತ್ಯಕ್ಕಾಗಿ ನಾಲ್ಕು ಚಕ್ರದ ವಾಹನವನ್ನು ಖರೀದಿ ಮಾಡುವ ಯೋಜನೆ ಇದೆ ಎಂದರು. ಶೇರುದಾರರಿಗೆ ಶೇಕಡಾ 6ರಷ್ಟು ಲಾಭಾಂಶ ಘೋಷಣೆ ಮಾಡಲಾಯಿತು. ಸಭೆಯಲ್ಲಿ ಸದಸ್ಯರು ಸಂಘದ ವ್ಯವಹಾರ ಸಂಬAಧಿಸಿದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕುಮಾರ ನಾಯ್ಕ, ನಿರ್ದೇಶಕರಾದ ಸುರೇಶ ನಾಯ್ಕ, ವೆಂಕಟೇಶ ನಾಯ್ಕ, ರಾಜೇಶ್ ನಾಯ್ಕ, ಶಬರೀಶ ನಾಯ್ಕ, ಹರೀಶ ನಾಯ್ಕ, ಸತೀಶ ನಾಯ್ಕ, ಸುರೇಶ ಮೊಗೇರ, ಜಯಂತ ಗೊಂಡ, ವಿಜಯಾ ನಾಯ್ಕ, ಭಾರತಿ ನಾಯ್ಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ವಾಸು ನಾಯ್ಕ ಹಾಜರಿದ್ದರು.

About The Author

error: Content is protected !!