October 6, 2025

ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ: ಪುರಸಭೆ ಮುಖ್ಯಾಧಿಕಾರಿಯಿಂದ ದೂರು

ಭಟ್ಕಳ: ಭಟ್ಕಳದ ಮುಗ್ದುಂ ಕಾಲೋನಿಯಲ್ಲಿ ಜಾನುವಾರುಗಳ ಮೂಳೆಗಳು ಬಿದ್ದಿವೆ ಎಂಬ ಸುಳ್ಳು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಡಿದ ಅಜ್ಞಾತರ ವಿರುದ್ಧ ಪುರಸಭೆ ಮುಖ್ಯಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಬೈಂದೂರು ಸೋಮೇಶ್ವರ ರಸ್ತೆಯ ನಿವಾಸಿ ವೆಂಕಟೇಶ ನಾವಡಾ ಪ್ರಭಾರ ಪುರಸಭೆ ಮುಖ್ಯಾಧಿಕಾರಿಯಾಗಿದ್ದು ದೂರು ನೀಡಿದ್ದಾರೆ.

ಸೆ.9ರಂದು ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಅಜ್ಞಾತ ಆರೋಪಿತರು ಸೋಶಿಯಲ್ ಮೀಡಿಯಾದಲ್ಲಿ ಭಟ್ಕಳದ ಮುಗ್ದುಂ ಕಾಲೋನಿಯ ತೆರೆದ ಗುಡ್ಡ ಪ್ರದೇಶದಲ್ಲಿ ಜಾನುವಾರುಗಳ ಮೂಳೆಗಳ ರಾಶಿ ಬಿದ್ದಿವೆ ಎಂಬ ಫೋಟೋ ಹಾಗೂ ವೀಡಿಯೊಗಳನ್ನು ಹಂಚಿಕೊAಡಿದ್ದಾರೆ. ಈ ಮೂಲಕ ಸುಳ್ಳು ಸುದ್ದಿ ಹರಡಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ ಶಾಂತಿ ಭಂಗ ಉಂಟು ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿತರ ಪತ್ತೆ ಹಚ್ಚಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ತನಿಖೆ ಆರಂಭಿಸಿದ್ದಾರೆ.

About The Author

error: Content is protected !!