October 6, 2025

ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಇವರ ಸ್ಮರಣಾರ್ಥ ರಕ್ತದಾನ ಶಿಬಿರ

ಬಂಜರು ಭೂಮಿಯನ್ನು ಬಂಗಾರದ ಭೂಮಿಯನ್ನಾಗಿ ರೂಪಿಸಿದ ಕೀರ್ತಿ ಸರ್.ಎಂ. ವಿಶ್ವೇಶ್ವರಯ್ಯನವರಿಗೆ ಸಲ್ಲುತ್ತದೆ ಎಂದು ಮಾತೃಛಾಯಾ ಟ್ರಸ್ಟ ಅಧ್ಯಕ್ಷರಾದ ಅಶೋಕ ಕಾಸರಕೋಡ ಅವರು ಈ ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಹೊನ್ನಾವರ: ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಇವರ ಸ್ಮರಣಾರ್ಥ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಇವರ ಆಶ್ರಯದಲ್ಲಿ ಕಾಸರಕೋಡ ಟೊಂಕಾದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರ ಉದ್ದೇಶಿಸಿ ಮಾತನಾಡಿದ ಅವರು ಆಣಿಕಟ್ಟು ನಿರ್ಮಾಣದ ಮೂಲಕ ವಿದ್ಯುತ್, ಕುಡಿಯುವ ನೀರು, ಕೃಷಿಗೆ ನೀರಿನ ಕೊರತೆ ಆಗದ ರೀತಿಯಲ್ಲಿ ನೋಡಿಕೊಂಡ ಮಹಾನ್ ಸಾಧಕರು. ಅವರ ಜನ್ಮದಿನವನ್ನು ಇಂಜನಿಯರ್ ಡೇ ಎಂದು ಹೆಮ್ಮೆಯಿಂದ ಆಚರಿಸುತ್ತೇವೆ. ಅದೇ ರೀತಿ ಜಿ.ವಿ.ಪಿ.ಆರ್ ಹಾಗೂ ಪೊರ್ಟ್ ಪ್ರೈವೆಟ್ ಲಿಮಿಟೆಡ್ ವತಿಯಿಂದ ತಾಲೂಕಿನಲ್ಲಿ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಸಮಾಜಕ್ಕೆ ನೆರವಾಗುತ್ತಿದ್ದೇವೆ. ಮನುಷ್ಯನ ಹೊರತಾಗಿ ಬೇರೆ ಯಾವುದೇ ಯಂತ್ರ ಬಳಸಿ ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ. ತುರ್ತು ಸಂದರ್ಭದಲ್ಲಿ ಮನುಷ್ಯನಿಗೆ ಅಗತ್ಯವಿರವಲ್ಲಿ ರಕ್ತ ದೊರೆತರೆ, ಜೀವ ಉಳಿಸಬಹುದು ಎಂದರು.

ಡಾ. ಬಾಲಚಂದ್ರ ಮಾತನಾಡಿ ರಕ್ತದ ಬೇಡಿಕೆ ಬಹಳಷ್ಟಿದ್ದು, ರಕ್ತದಾನ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ವಿವಿದ ಸಂಘಟನೆಯವರು ಇದೆ ರೀತಿ ಶಿಬಿರದ ಮೂಲಕ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ. ಒರ್ವ ರಕ್ತದಾನ ಮಾಡಿದಾಗ ಕೆಂಪು ರಕ್ತಕಣ, ಬಿಳಿ ರಕ್ತಕಣ, ಪ್ಲಾಸ್ಮಾ ಮೂಲಕ ಮೂರು ಜನರಿಗೆ ನೆರವಾಗಬಹುದು. ಒಮ್ಮೆ ರಕ್ತ ಉತ್ಪತ್ತಿಯಾದರೆ 125 ದಿನದಲ್ಲಿ ಅದು ಸಾಯುತ್ತದೆ. ಒಳಗಡೆ ಸಾಯುದಕ್ಕಿಂತ ದಾನ ಮಾಡಿದಾಗ ಬೇರೆಯವರಿಗೆ ಸಹಕಾರಿಯಾಗುವ ಜೊತೆ, ಮತ್ತೆ ಉತ್ಪತ್ತಿಯಾಗಲಿದೆ. ಇದರಿಂದ  ಶರೀರದ ಸಮತೋಲನದ ಜೊತೆ, ಬುದ್ದಿಶಕ್ತಿಯು ಹೆಚ್ಚಲಿದೆ ಎಂದರು.
ಅಧಿಕಾರಿ ನೀಲಂ ಪಾಯ್ದೆ ಮಾತನಾಡಿ ನಮ್ಮ ದೇಶದ ಅಭಿವೃದ್ದಿಗೆ ಇಂಜನಿಯರ್ ಕೊಡುಗೆಯು ಇದೆ. ಅವರ ಸೇವೆ ಸ್ಮರಿಸಲು ಈ ದಿನ ಇಂಜನಿಯರ್ ದಿನವಾಗಿ ಅಸಚರಿಸಲಾಗುತ್ತಿದೆ ಎಂದರು. ಉತ್ತರ ಕನ್ನಡ ಬ್ಲಡ್ ಬ್ಯಾಂಕ್ ಮತ್ತು ಹೆಲ್ತ್ ಸರ್ವಿಸಸ್, ಸೊಸೈಟಿ ಇವರ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿದವು.

ಈ ಸಂದರ್ಭದಲ್ಲಿ ಅಧಿಕಾರಿಗಳಾದ ಮುರುಳಿ ನಾಯ್ಡ, ಕೃಷ್ಣ ನಾಯ್ಕ, ಮುರಾರಿ, ಮಾಜಿ ಸೈನಿಕ ವಿನಾಯಕ ಸುಬಿದಾರ, ನಾರಾಯಣ ಗಾವಡಿ, ಇಂಜನಿಯರಗಳು, ಕಂಪನಿಯ ಸಿಬ್ಬಂದಿಗಳು ರಕ್ತದಾನ ಮಾಡುವ ಮೂಲಕ ಯಶ್ವಸಿಗೆ ಸಹಕರಿಸಿದರು.

ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!