October 6, 2025

ಮುಕ್ತಧಾಮದಲ್ಲಿ ಡಾ. ಎನ್. ಆರ್. ನಾಯಕ ಅಂತ್ಯಕ್ರಿಯೆ

ಹೊನ್ನಾವರ : ರವಿವಾರ ನಿಧನರಾದ ಜಾನಪದ ವಿದ್ವಾಂಸರು ನಿವೃತ್ತ ಪ್ರಾಚಾರ್ಯರು, ಹಿರಿಯ ಸಾಹಿತಿ ಡಾ. ಎನ್. ಆರ್. ನಾಯಕ ಇವರ ಅಂತ್ಯಕ್ರಿಯೆ ಸಂಪ್ರದಾಯಕ ವಿಧಿ ವಿಧಾನದಂತೆ ಪಟ್ಟಣದ ಬಂದರು ಪ್ರದೇಶದಲ್ಲಿರುವ ರುದ್ರಭೂಮಿಯಲ್ಲಿ ಜರುಗಿತು.
ಪ್ರಭಾತನಗರದಲ್ಲಿ ಸೋಮವಾರ ಮುಂಜಾನೆ 10 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲ್ಲೆ, ತಾಲೂಕಿನ ಅನೇಕ ಸಾಹಿತಿಗಳು, ವಿವಿಧ ವಿದ್ಯಾ ಸಂಸ್ಥೆಯ ಉಪನ್ಯಾಸಕರು, ರಾಜಕೀಯ ಮುಖಂಡರು, ಉದ್ಯಮಿಗಳು, ಅವರಿಂದ ಕಲಿತ ವಿದ್ಯಾರ್ಥಿಗಳು ಆಗಮಿಸಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.


ಧಾರವಾಡ ವಿಶ್ವ ವಿದ್ಯಾಲಯದ ಕುಲ ಸಚಿವರು ಮೌಲ್ಯ ಮಾಪನ ವಿಭಾಗ ನಿಜಲಿಂಗಪ್ಪ ಮಟ್ಟಿಹಾಳ, ಸಾಹಿತಿ ಕೃಷ್ಣ ನಾಯಕ ಹಿಚಕಡ, ವಿಶ್ರಾಂತ ಉಪನ್ಯಾಸಕರು, ಸಾಹಿತಿ ಡಾ. ಶ್ರೀಪಾದ್ ಶೆಟ್ಟಿ, ಕಸಾಪ ಮಾಜಿ ಅಧ್ಯಕ್ಷ ಅರವಿಂದ ಕರ್ಕಿಕೊಡಿ, ಜೆಡಿಎಸ್ ಮುಖಂಡ ಸೂರಜ್ ಸೋನಿ, ಉದ್ಯಮಿ ಜಿ. ಜಿ. ಶಂಕರ,ಮದನ ನಾಯ್ಕ ಕುಮಟಾ, ಸಾಹಿತಿ ಹೊನ್ನಪ್ಪಯ್ಯ ಗುನಗ, ಕಾಂಗ್ರೆಸ್ ಮುಖಂಡ ಜಗದೀಪ ತೆಂಗೇರಿ, ಕಸಾಪ ತಾಲೂಕಾ ಅಧ್ಯಕ್ಷ ಎಸ್. ಎಚ್. ಗೌಡ, ಹೊನ್ನಾವರ ಉಳಿಸಿ ಬೆಳೆಸಿ ಸಂಘಟನೆಯ ಅಧ್ಯಕ್ಷ ಜಿ. ಎನ್. ಗೌಡ, ಜಿ. ಎಸ್. ಬಿ ಸಮಾಜದ ಉದ್ಯಮಿ ಚಂದನ ಪ್ರಭು, ರಘು ಪೈ, ಜೆ. ಟಿ. ಪೈ ಇನ್ನಿತರರು ಮೃತರ ಅಂತಿಮ ದರ್ಶನ ಪಡೆದರು.
ನಂತರ ಎಸ್.ಡಿ.ಎಂ. ಕಾಲೇಜಿನ ಆಡಳಿತ ಮಂಡಳಿಯವರ ಮನವಿಯಂತೆ ಅವರು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿರುದರಿಂದ ಸಂಸ್ಥೆಯ ಆವಾರಣಕ್ಕೆ ಪಾರ್ಥಿವ ಶರೀರ ತರಲಾಯಿತು. ಆಡಳಿತ ಮಂಡಳಿಯವರು, ಉಪನ್ಯಾಸಕರು ಅಂತಿಮ ನಮನ ಸಲ್ಲಿದರು. ನಂತರ ಪಟ್ಟಣದ ಬಂದರು ಪ್ರದೇಶದಲ್ಲಿರುವ ಮುಕ್ತಿದಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!