ಭಟ್ಕಳ : ಶೇಡಬರಿ ಅರೇಕಲ್ ಜಟಕಾ ಮಹಾಸತಿ ದೇವಸ್ಥಾನಗಳಲ್ಲಿ ಹುಂಡಿ ಕಳ್ಳತನ ಹೆಬಳೆ ಮಾರ್ಗದಲ್ಲಿ ತಾಮ್ರದ ಹಂಡೆ ಪತ್ತೆ, ಸಿಸಿಟಿವಿಗೆ ಬಟ್ಟೆ, ಲೋಟ ಮುಚ್ಚಿದ ಖದೀಮ ಕಳ್ಳರು, ಹಂಡೆಯ ಮೇಲೆ ಮಹಿಳೆಯ ಹೆಸರು; ತನಿಖೆ ಚುರುಕು
ಭಟ್ಕಳ ತಾಲ್ಲೂಕಿನ ಪ್ರಸಿದ್ಧ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದಲ್ಲಿ ಅಜ್ಞಾತ ಕಳ್ಳರು ಹುಂಡಿ ಒಡೆದು ಒಳಗಿದ್ದ ಹಣ ಕದ್ದೊಯ್ದ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ. ಕಳ್ಳರು ಸಿಸಿಟಿವಿ ಕ್ಯಾಮರಾಗಳಿಗೆ ಬಟ್ಟೆ ಹಾಗೂ ನೀರಿನ ಲೋಟ ಮುಚ್ಚಿ ಕುತಂತ್ರದ ಮೂಲಕ ದುಷ್ಕೃತ್ಯ ಎಸಗಿದ್ದು, ಹುಂಡಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಇದರ ಅರ್ಧ ಕಿ.ಮೀ. ದೂರದಲ್ಲಿರುವ ಅರೇಕಲ್ ಜಟಕಾ ಮಹಾಸತಿ ದೇವಸ್ಥಾನಕ್ಕೂ ಕಳ್ಳರು ನುಗ್ಗಿ ಅಲ್ಲಿ ಸಹ ಹುಂಡಿ ಕದ್ದೊಯ್ದಿದ್ದಾರೆ. ಹಿಂದಿನ ಕಳ್ಳತನದ ತನಿಖೆ ಇನ್ನೂ ಮುಗಿಯುವ ಮುನ್ನವೇ ಮತ್ತೊಂದು ಕೃತ್ಯ ನಡೆದಿರುವುದರಿಂದ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆಯ ಪರಿಶೀಲನೆಗೆ ಪೋಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಸಹಾಯ ಪಡೆದುಕೊಂಡು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಈ ಮಧ್ಯೆ ಹೆಬಳೆ ಕುಕ್ಕನೀರ್ ವೆಂಕಟಾಪುರ ಮಾರ್ಗದಲ್ಲಿ ತಾಮ್ರದ ಹಂಡೆ ಪತ್ತೆಯಾದ ಬೆಳವಣಿಗೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಹಂಡೆಯ ಮೇಲೆ ಈರಮ್ಮ ಮಾಸ್ತಿ ಮೊಗೇರ ಎಂಬ ಹೆಸರು ಕೆತ್ತಲಾಗಿದ್ದು, ಇದು ದೇವಾಲಯ ಕಳ್ಳತನಕ್ಕೆ ಸಂಬAಧಿಸಿರಬಹುದೆAಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಹಂಡೆಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದು, ಶೀಘ್ರದಲ್ಲೇ ಕಳ್ಳರನ್ನು ಪತ್ತೆ ಹಚ್ಚುವ ಭರವಸೆಯನ್ನು ನೀಡಿದ್ದಾರೆ.

More Stories
ಭಟ್ಕಳ ತಲಾಂದ ಶಾಲೆಯಲ್ಲಿ ಉತ್ಸಾಹಭರಿತ ಪ್ರತಿಭಾ ಕಾರಂಜಿ, ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಸಡಗರ
ಭಟ್ಕಳದಲ್ಲಿ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ
ವ್ಯವಹಾರಿಕ ಜ್ಞಾನಕ್ಕೆ ಪಾಠ ಕಲಿಸಿದ ಮಕ್ಕಳ ಸಂತೆ