October 5, 2025

ತೂದಳ್ಳಿಯಲ್ಲಿ ಆಟೋ ಬೈಕ್ ಡಿಕ್ಕಿ : ಬೈಕ್ ಸವಾರ ಗಾಯ

ಭಟ್ಕಳ: ಮುರ್ಡೇಶ್ವರ ಸಮೀಪ ತೂದಳ್ಳಿ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಒಬ್ಬರಿಗೆ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ. ಪ್ಯಾಸೆಂಜರ್ ಆಟೋ ರಿಕ್ಷಾವನ್ನು ವೆಂಕಟೇಶ ಮಾದೇವ ನಾಯ್ಕ ಅವರು ದುಡುಕಿನಿಂದ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ ಪರಿಣಾಮ, ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ಬೈಲೂರದ ಉಲ್ಲಾಸ ನಾರಾಯಣ ದೇವಡಿಗ ಗಾಯಗೊಂಡಿದ್ದು, ಅವರ ಬಲ ಪಾದಕ್ಕೆ ಪೆಟ್ಟಾಗಿರುವುದರಿಂದ ಸ್ಥಳೀಯರು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಗಾಯಗೊಂಡವರ ಸಂಬAಧಿ ರಾಘವೇಂದ್ರ ಅಣ್ಣಪ್ಪಯ್ಯ ದೇವಡಿಗ ಮುರುಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

About The Author

error: Content is protected !!