
ಭಟ್ಕಳ: ಹಳೆಯ ಬಸ್ ನಿಲ್ದಾಣದ ರಾಜಾಂಗಣ ಮೀನು ಮಾರುಕಟ್ಟೆಯಲ್ಲಿ ದುರುದ್ದೇಶದಿಂದ ಕಸದ ರಾಶಿ ಹಾಕಿ ಶಾಂತಿ ಭಂಗ ಮಾಡಲು ಯತ್ನಿಸಿದ ಕಿಡಿಗೇಡಿಗಳ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಬೇಕೆಂದು ತಾಲೂಕ ಮೀನುಗಾರರು ಹಾಗೂ ಮೀನು ಮಾರಾಟಗಾರರ ಸಂಘ (ರಿ) ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ್ ಅವರಿಗೆ ಮನವಿ ಸಲ್ಲಿಸಿದರು.
ಸೆಪ್ಟೆಂಬರ್ ೧ರಿಂದ ಹೊಸ ಮೀನು ಮಾರುಕಟ್ಟೆ ಪ್ರಾರಂಭವಾದ ನಂತರ ಕೆಲವರು ಹಳೆಯ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮೂಲಕ ರ‍್ಮಾಧಾರಿತ ಪ್ರಚೋದನೆ ಮತ್ತು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಸಂಘ ಆರೋಪಿಸಿದೆ. ಸೆ.೧೫ರಂದು ಹಳೆಯ ಮಾರುಕಟ್ಟೆ ಆವರಣದಲ್ಲಿ ಕಸದ ರಾಶಿ ಹಾಕಿದ ಘಟನೆ ಸೌಹರ‍್ದತೆ ಹಾಗೂ ಸ್ವಚ್ಛತೆಗೆ ಧಕ್ಕೆ ತಂದಿದ್ದು, ಅದರ ಫೋಟೋ–ವೀಡಿಯೊಗಳನ್ನು ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಮಾರುಕಟ್ಟೆಯ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಲಾಗುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
“ಶತಮಾನಗಳಿಂದ ರ‍್ಮ–ಪಕ್ಷಭೇದವಿಲ್ಲದೆ ಜನಸಾಮಾನ್ಯರು ವ್ಯವಹಾರ ನಡೆಸಿಕೊಂಡು ಬರುತ್ತಿರುವ ಮಾರುಕಟ್ಟೆಯನ್ನು ಕೆಲವರು ಅಶಾಂತಿಯತ್ತ ತಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸದಿದ್ದರೆ ಪುರಸಭೆಯೇ ಕುಮ್ಮಕ್ಕು ನೀಡಿದಂತಾಗುತ್ತದೆ,” ಎಂದು ಸಂಘ ಎಚ್ಚರಿಕೆ ನೀಡಿದೆ.
ಮಾಜಿ ಪುರಸಭಾ ಸದಸ್ಯ ಶ್ರೀಕಾಂತ ನಾಯ್ಕ ಆಕ್ರೋಶ ವ್ಯಕ್ತಪಡಿಸಿ, “ಸ್ವಚ್ಛತೆಯನ್ನು ಹಾಳು ಮಾಡುವವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಸುಪ್ರೀಂ ಕರ‍್ಟ್ ಆದೇಶವಿದ್ದರೂ ಇನ್ನೂ ಕ್ರಮ ಕೈಗೊಳ್ಳದೇ ಪುರಸಭೆ ಮುಖ್ಯಾಧಿಕಾರಿ ಯಾರ ಸೂಚನೆಗಾಗಿ ಕಾಯುತ್ತಿದ್ದಾರೆ?” ಎಂದು ಪ್ರಶ್ನಿಸಿದರು.
ಈ ಸಂರ‍್ಭದಲ್ಲಿ ತಾಲೂಕ ಮೀನುಗಾರರು ಹಾಗೂ ಮೀನು ಮಾರಾಟಗಾರರ ಸಂಘದ ಅಧ್ಯಕ್ಷ ಖಾಜಾ ಹಸನ್, ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಜಯಂತ ನಾಯ್ಕ, ಮೀನು ಮಾರಾಟಗರ‍್ತಿ ಕಲ್ಯಾಣಿ ಸೇರಿದಂತೆ ಅನೇಕ ಮಹಿಳಾ ಮೀನುಗಾರರು ಹಾಜರಿದ್ದರು.
More Stories
ಅತಿವೇಗದ ಬಸ್ ಡಿಕ್ಕಿ, ಸ್ಕೂಟಿ ಸವಾರ ಸ್ಥಳದಲ್ಲೇ ದುರ್ಮರಣ
ಭಟ್ಕಳದ ದರ್ಶನ ನಾಯ್ಕ ರಾಜ್ಯಕ್ಕೆ ಪ್ರಥಮ, ರಾಷ್ಟ್ರಮಟ್ಟಕ್ಕೆ ಭಟ್ಕಳದ ಕೀರ್ತಿ
ಕಡಸಲಗದ್ದೆ ಗಾಂಧಿ ಫಾಲ್ಸ್ ಬಳಿ ಮೊಬೈಲ್ ಕಳವು ಯತ್ನ ಇಬ್ಬರು ಬಂಧನ