October 5, 2025

೨೪ ಗಂಟೆಯೊಳಗೆ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನ ಕಳ್ಳರು ಪತ್ತೆ: ಗ್ರಾಮೀಣ ಠಾಣೆ ಪೊಲೀಸರು ಚುರುಕು

ಚಪ್ಪಲಿ ಗುರುತು-ಬೆರಳಚ್ಚು ಆಧರಿಸಿ ಕಳ್ಳರ ಬಲೆ ಬೀಸಿದ ಗ್ರಾಮೀಣ ಠಾಣೆ ಸಿಪಿಐ ಮಂಜುನಾಥ ಲಿಂಗಾರೆಡ್ಡಿ

ಭಟ್ಕಳ: ತಾಲ್ಲೂಕಿನ ಪ್ರಸಿದ್ಧ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಕೇವಲ ೨೪ ಗಂಟೆಯೊಳಗೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರು ಶಿರಾಲಿಯ ಅಮೀರ್ ಹಸನ್ ಬ್ಯಾರಿ (೨೭) ಹಾಗೂ ಮುಗ್ದ ಕಾಲೋನಿಯ ಮಹ್ಮದ್ ಇಮ್ರಾನ್ ಅಬ್ದುಲ್ ಗಫರ್ (೨೪) ಎಂದು ಗುರುತಿಸಲಾಗಿದೆ.

ಸೋಮವಾರ ರಾತ್ರಿ ದೇವಸ್ಥಾನಕ್ಕೆ ಪ್ರವೇಶಿಸಿದ ಆರೋಪಿಗಳು, ಸಿಸಿಟಿವಿ ಕ್ಯಾಮೆರಾಗಳಿಗೆ ಬಟ್ಟೆ-ಲೋಟ ಮುಚ್ಚಿ ಕುತಂತ್ರದ ಮೂಲಕ ಹುಂಡಿ ಒಡೆದು ಕಾಣಿಕೆ ಹಣ ಕದ್ದೊಯ್ದಿದ್ದರು.
ಈ ಕುರಿತು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರ ದೂರು ಆಧರಿಸಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು.

ತನಿಖೆ ಸಂರ‍್ಭದಲ್ಲಿ ದೊರೆತಿದ್ದ ಚಪ್ಪಲಿ ಗುರುತು ಮತ್ತು ಬೆರಳಚ್ಚುಗಳನ್ನು ಆಧರಿಸಿ ಆರೋಪಿಗಳ ಸುಳಿವು ಪತ್ತೆಯಾಗಿತ್ತು. ಬಳಿಕ ಸಿಪಿಐ ಮಂಜುನಾಥ ಲಿಂಗಾರೆಡ್ಡಿಯ ನೇತೃತ್ವದ ತಂಡವು ಇಬ್ಬರನ್ನೂ ಬಂಧಿಸಿ, ₹೧.೮೦ ಲಕ್ಷ ಮೌಲ್ಯದ ನಗದು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಬೈಕುಗಳನ್ನು ವಶಪಡಿಸಿಕೊಂಡಿದೆ.

ಆರೋಪಿಗಳ ವಿರುದ್ಧ ಸರ‍್ಸಿ ಬನವಾಸಿ ಪ್ರದೇಶದಲ್ಲಿಯೂ ಕಳ್ಳತನ ಪ್ರಕರಣ ದಾಖಲಾಗಿರುವುದು ವಿಚಾರಣೆಯಲ್ಲಿ ಬಹಿರಂಗವಾಗಿದೆ.
ಕರ‍್ಯಚರಣೆ ಯಲ್ಲಿ ಪಿಎಸೈ ರನ್ ಗೌಡ,ಪಿಎಸೈ ಭರಮಪ ಬೆಳಗಲಿ, ಸಿಬ್ಬಂದಿ ಗಳಾದ ಮಂಜುನಾಥ ಜಿ,ಮೋಹನ ಕೆ,ಈರಣ್ಣ ಪೂಜಾರಿ, ಅಶೋಕ ನಾಯ್ಕ,ನಿಂಗನಗೌಡ್ ಪಾಟೀಲ್,ದೇವರಾಜ್ ಮೊಗೇರ್, ಉಪಸ್ಥಿತರಿದ್ದರು.
ಗ್ರಾಮೀಣ ಠಾಣೆ ಪೊಲೀಸರ ಶೀಘ್ರ ಕರ‍್ಯಾಚರಣೆಗೆ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎಫ್.ಕೆ. ಮೊಗೇರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಳೆದ ಆರು ತಿಂಗಳಲ್ಲಿ ಮೂರು ದೇವಸ್ಥಾನ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿದ ಗ್ರಾಮೀಣ ಠಾಣೆ ಪೊಲೀಸರ ಚುರುಕು ಶ್ಲಾಘನೀಯವಾಗಿದೆ.

About The Author

error: Content is protected !!