
ಹೊನ್ನಾವರ ತಾಲೂಕಿನ ಸುಬ್ರಹ್ಮಣ್ಯದ ರಾಘವೇಂದ್ರ ಸಂಸ್ಕೃತ ಪಾಠ ಶಾಲೆಯ ಸಭಾಂಗಣದಲ್ಲಿ ತಾಲೂಕಾ ಪಂಚಾಯತ, ಮುಗ್ವಾ ಗ್ರಾಮ ಪಂಚಾಯತ ಆಶ್ರಯದಲ್ಲಿ ನಡೆದ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ನಡೆದ ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬರೂ ತನ್ನೊಳಗಿನ ಅಹಂಕಾರ ಕಳೆದುಕೊಂಡು, ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಸ್ವಚ್ಛತೆ ಕೆಲಸ ಮಾಡಿ ಶಿಕ್ಷಣ ಸಂಸ್ಥೆ, ಅನಾಥಾಶ್ರಮ ಇನ್ನಿತರ ಅನೇಕ ಸಂಸ್ಥೆ ಹುಟ್ಟು ಹಾಕಿದ್ದಾರೆ. ಸಂತ ಅನಿಸಿಕೊಂಡವನು ಕಸ ತೆಗೆಯುವದರ ಮಹಾತ್ಮಾ ಎನಿಸಿಕೊಂಡಿದ್ದಾರೆ. ಪ್ಲಾಸ್ಟಿಕ್ ತುಂಬಾ ಅಪಾಯಕಾರಿಯಾಗಿದ್ದು, ಇದು ನಮಗೆ ಅರಿವಾಗದೇ ಮಾನವನ ದೇಹ ಪ್ರವೇಶ ಮಾಡುತ್ತದೆ. ಪ್ಲಾಸ್ಟಿಕ್ ನಿಂದ ನಾನಾ ರೀತಿಯ ರೋಗ ಹುಟ್ಟಿಕೊಳ್ಳುತ್ತದೆ. ಪ್ಲಾಸ್ಟಿಕ್ ನಿಷೇದದ ಕಾನೂನು ಕಟ್ಟುನಿಟ್ಟಾಗಿ ಜಾರಿ ಆಗಬೇಕು ಎಂದರು.

ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಚೇತನಕುಮಾರ ಮಾತನಾಡಿ ಇಂದಿನಿAದ ಗಾಂಧಿ ಜಯಂತಿವರೆಗೆ ಕೇಂದ್ರ ಸರಕಾರದ ಮಹಾತ್ಮಾಕಾಂಕ್ಷಿ ಯೋಜನೆಯಾದ ಸ್ವಚ್ಛತಾ ಕಾರ್ಯಕ್ರಮ ಪ್ರತಿ ಪಂಚಾಯತ ವ್ಯಾಪ್ತಿಯಲ್ಲಿ ನಡೆಯಲಿದೆ. ಪ್ರತಿಯೊಬ್ಬರು ಸ್ವಚ್ಛತಾ ಕೆಲಸದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾ ಪಂ. ಅಧ್ಯಕ್ಷ ಅಯ್. ವಿ. ನಾಯ್ಕ ಮಾತನಾಡಿ ಮೂರು ವರ್ಷದ ಹಿಂದೆ ಕಸ ವಿಲೇವಾರಿ ಘಟಕ ಮಾಡಲು ಹೊರಟಾಗ ಸ್ಥಳೀಯರ ವಿರೋಧ ವ್ಯಕ್ತವಾಯಿತು, ಆದರು ಬಾಡಿಗೆ ಕಟ್ಟಡ ಪಡೆದು ಘಟಕ ಸ್ಥಾಪನೆ ಮಾಡಿದ್ದೇವೆ. ಸರಕಾರದ ಯೋಜನೆ ಒಳ್ಳೆದಿದೆ, ಅದಕ್ಕೆ ಹಣದ ಕೊರತೆಯೂ ಇದೆ. ಇದೆಲ್ಲವನ್ನು ನಿಭಾಯಿಸಿ ಕಸ ವಿಲೇವಾರಿ ಕೆಲಸ ಮಾಡುತ್ತಿದ್ದೇವೆ. ಸಂಗ್ರಹ ಆಗಿರುವ ಕಸ ಖಾಲಿ ಮಾಡುವುದು ಸಮಸ್ಯೆ ಆಗಿ ಕಾಡುತ್ತಿದೆ ಎಂದರು.
ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಯೋಜಕ ಗಣೇಶ ಕಾಮತ, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಕಿರಣಕುಮಾರ್ ಮಾತನಾಡಿದರು. ಬಾಲಚಂದ್ರ ನಾಯ್ಕ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ಪಿ ಡಿ ಓ ಸವಿತಾ ಗೌಡ ವಂದಿಸಿದರು. ವೇದಿಕೆಯಲ್ಲಿ ಮುಗ್ವಾ ಗ್ರಾ. ಪಂ. ಉಪಾಧ್ಯಕ್ಷೆ ವಿದ್ಯಾ ಮೇಸ್ತ, ಗ್ರಾ. ಪಂ. ಸದಸ್ಯರಾದ ರಾಮ ಗೌಡ, ನಾರಾಯಣ ಗೌಡ ಇದ್ದರು. ಕಾರ್ಯಕ್ರಮದ ನಂತರ ಹೆದ್ದಾರಿ ಪಕ್ಕದಲ್ಲಿ ಸ್ವಚ್ಚತಾ ಕಾರ್ಯಕ್ರಮ ನೇರವೇರಿತು.
ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
ಭಟ್ಕಳದ ದರ್ಶನ ನಾಯ್ಕ ರಾಜ್ಯಕ್ಕೆ ಪ್ರಥಮ, ರಾಷ್ಟ್ರಮಟ್ಟಕ್ಕೆ ಭಟ್ಕಳದ ಕೀರ್ತಿ
ಕಡಸಲಗದ್ದೆ ಗಾಂಧಿ ಫಾಲ್ಸ್ ಬಳಿ ಮೊಬೈಲ್ ಕಳವು ಯತ್ನ ಇಬ್ಬರು ಬಂಧನ
ಮುರುಡೇಶ್ವರಲ್ಲಿ ನಾಲ್ವರು ಪ್ರವಾಸಿಗರ ಜೀವ ರಕ್ಷಣೆ – ಜೀವರಕ್ಷಕ ದಳದ ಸಾಹಸಕ್ಕೆ ಮೆಚ್ಚುಗೆ