
ಹಲವು ಗದ್ದಲದ ನಡುವೆ ಮೂರು ಟೆಂಡರ್ ನಡೆದು ಇನ್ನುಳಿದ ಮೂರು ಟೆಂಡರ್ ಪಕ್ರಿಯೆ ಹರಾಜು ನಡೆಯದೆ ಮರು ಟೆಂಡರ್ ಹಂತಕ್ಕೆ ತಲುಪಿದ ಘಟನೆ ಶುಕ್ರವಾರ ಸಂಭವಿಸಿದೆ.
ಹೊನ್ನಾವರ : ಕಾಸರಕೋಡ್ ಇಕೋ ಬೀಚ್, ಹಾಗೂ ಕಾಂಡ್ಲವನದಲ್ಲಿರುವ ಅಂಗಡಿ ಹಾಗೂ ಪಾರ್ಕಿಂಗ್ ಜಾಗ ಸೇರಿದಂತೆ 6 ಬಗೆಯ ಟೆಂಡರ್ ಕರೆಯಲು ಗ್ರಾಮ ಅರಣ್ಯ ಸಮಿತಿ ಮೂಲಕ ನಿರ್ಣಯಿಸಿ ಟೆಂಡರ್ ಕರೆಯಲು ಮುಂದಾಗಿ ಟೆಂಡರ್ ನಿಯಮಾವಳಿ ಓದಿ ಹೇಳಲಾಯಿತು. ಸಾರ್ವಜನಿಕರಿಗೆ ತೊಂದರೆಯಾಗದAತೆ ಸ್ವಚ್ಚತೆ ಕಡೆ ಗಮನಹರಿಸಬೇಕು. ಕರ್ತವ್ಯದಲ್ಲಿದ್ದಾಗ ಅನಾಹುತ ಸಂಭವಿಸಿದರೆ ಟೆಂಡರ್ ಪಡೆದವರೆ ಹೊಣೆ ಎಂದಾಗ ಆಕ್ಷೇಪ ವ್ಯಕ್ತವಾಯಿತು.
ನಟೇಶ ತಾಂಡೇಲ್ ಮಾತನಾಡಿ ಕಾಂಡ್ಲವನದ ಸಮೀಪ ವಿ. ಆರ್ ಗೇಮ್ ಎಂದು ಟೆಂಡರ್ ಪಡೆಯದೇ ಸುರಕ್ಷತಾ ಕ್ರಮ ಗಾಳಿಗೆ ತೂರಿ ನಡೆಸುತ್ತಿದ್ದಾರೆ. ಇತ್ತಿಚೀಗೆ 60 ವಯಸ್ಸಿನ ಮಹಿಳೆಯೊರ್ವರು ಈ ಗೇಮ್ ಆಡುವಾಗ ಆಕಸ್ಮಿಕವಾಗಿ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಗರ್ಭಿಣೆ ಮಹಿಳೆಯರು, ಚಿಕ್ಕ ಮಕ್ಕಳಿಗೂ ಇದೆ ರೀತಿ ಮಾಡಿದರೆ ಅನಾಹುತ ಸಂಭವಿಸಿದರೆ ಊರಿಗೆ ಕೆಟ್ಟ ಹೆಸರು ಬರಲಿದೆ. ಟೆಂಡರ್ ಪಡೆಯದೇ ಇದನ್ನು ಆರಂಭಿಸಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮಹಿಳೆಯರು ಆಡುವಾಗ ಮಹಿಳಾ ಸಿಬ್ಬಂದಿ ಇರುವುದಿಲ್ಲ ಅನಾಹುತ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳುವಂತೆ ಸಲಹೆ ನೀಡಿದಾಗ ಎಸಿಎಫ್ ಈ ಬಗ್ಗೆ ಗಮನಹರಿಸುವ ಭರವಸೆ ನೀಡಿ ಒರ್ವರೆ ಅರ್ಜಿ ಹಾಕಿರುದರಿಂದ ಟೆಂಡರ್ ನೀಡಲಾಗಿದೆ ಎಂದು ಸಮಜಾಯಿಸಿ ನೀಡಿದರು.
ಕಾಂಡ್ಲವನಕ್ಕೆ ತೆರಳುವ ಮುಖ್ಯರಸ್ತೆ ಪಕ್ಕದಲ್ಲಿ ವಾಹನ ನಿಲ್ಲಿಸಿ ಹೋಗುವರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುವ ಬಗ್ಗೆ ಸ್ಥಳಿಯರು ಸಭೆಯ ಗಮನಕ್ಕೆ ತಂದಾಗ, ವಾರಂತ್ಯದಲ್ಲಿ ಸಿಬ್ಬಂದಿ ನಿಯೋಜಿಸುವ ಭರವಸೆ ಅಧಿಕಾರಿಗಳು ನೀಡಿದರು.
ಮುಚ್ಚಿದ ಲಕೋಟೆ ಟೆಂಡರ್ ಹಾಗೂ ಬಹಿರಂಗ ಟೆಂಡರ್ ಆರಂಭವಾದಾಗ ಸರ್ಕಾರಿ ದರ ಹೆಚ್ಚಿರುವ ಬಗ್ಗೆ ಹಾಜರಿದ್ದ ಸಮಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಹಂತದಲ್ಲಿ ಅಧಿಕಾರಿಗಳು ಹಾಗೂ ಸದಸ್ಯರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಇಕೋ ಬೀಚ್ ಸಮೀಪ ಬೇಲಿ ಕಿತ್ತು ಬಿದ್ದು ಮೂರು ತಿಂಗಳು ಕಳೆದಿದೆ. ಈ ಹಿಂದೆ ಟೆಂಡರ್ ಪಡೆದವರಿಗೆ ನಷ್ಟ ಉಂಟಾಗಿದೆ. ಹೊಸದಾಗಿ ಬೇಲಿ ನಿರ್ಮಿಸಿ, ವ್ಯವಸ್ಥೆ ಸರಿಪಡಿಸಿ ಆಮೇಲೆ ಟೆಂಡರ್ ಕರೆಯಿರಿ. ಇದೆಲ್ಲ ನೋಡಿದರೆ ಇಲಾಖೆಯವರು ಹಣ ಮಾಡುವ ಉದ್ದೇಶ ಹೊಂದಿದ್ದೀರಾ ಎಂದು ಪ್ರಶ್ನಿಸಿದಾಗ, ಅಗಸ್ಟ ತಿಂಗಳಿನಲ್ಲಿ ಬೇಲಿ ಮುರಿದು ಬಿದ್ದಿದೆ. ಕೆಲವೇ ದಿನದಲ್ಲಿ ಸರಿ ಪಡಿಸಲಾಗುವುದು. ಕಳೆದ ವರ್ಷ ಬೇಲಿ ಹಾಗೂ ಶೌಚಾಲಯ ನಿರ್ಮಿಸಲಾಗಿದೆ ಎನ್ನುತ್ತಿದ್ದಂತೆ, ಶೌಚಾಲಯ ನಿರ್ಮಾಣದ ವಿಷಯ ಚರ್ಚೆಗೆ ಕಾರಣವಾಯಿತು. ಟೆಂಡರ್ ಕರೆಯದೇ ಹೇಗೆ ನಿರ್ಮಿಸಿದ್ದೀರಿ, ಖರ್ಚು ವೆಚ್ಚದ ಮಾಹಿತಿ ನೀಡಿ ಎಂದು ಪಟ್ಟು ಹಿಡಿದಾಗ, ಮತ್ತೆ ಸಭೆಯು ಗದ್ದಲಕ್ಕೆ ಕಾರಣವಾಯಿತು. ಅಧಿಕಾರಿಗಳು ಮಾಹಿತಿ ನೀಡಲು ಹಿಂದೇಟು ಹಾಕಿ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಪಡೆಯುವಂತೆ ಸೂಚಿಸಿದಾಗ ಸಮಿತಿ ಅಧ್ಯಕ್ಷರು ಜನರಲ್ ಮಿಟಿಂಗನಲ್ಲಿ ಮಾಹಿತಿ ನೀಡುವ ಭರವಸೆ ನೀಡಿದರು.
ಮೂರು ವಿಭಾಗದ ಟೆಂಡರ್ ಮಾಡಿ ಇನ್ನು ಉಳಿದ ಮೂರು ವಿಭಾಗಕ್ಕೆ ಟೆಂಡರ್ ಸರ್ಕಾರಿ ದರ ಹೆಚ್ಚಿದೆ ಎಂದು ಟೆಂಡರ್ ಕರೆಯದೇ ಇರುದರಿಂದ ತಿಂಗಳ ಅಂತ್ಯದೊಳಗೆ ಪರಿಸ್ಕ್ರತ ದರದೊಂದಿಗೆ ಟೆಂಡರ್ ನಡೆಸುವ ಭರವಸೆ ಆರ್.ಎಫ್.ಓ ಸವಿತಾ ದೇವಾಡಿಗ ನೀಡಿದರು.
ಹೊರಗಡೆಯ ಐಸ್ ಕ್ರೀಂ ಸೇರಿದಂತೆ ನೀರಿನ ಬಾಟಲಿ ನಿರ್ಭಂದದ ಬಗ್ಗೆ ಇರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದಾಗ ಸ್ವಚ್ಚತೆಗೆ ಆದ್ಯತೆ ನೀಡಲು ಈ ನಿಯಮ ತರಲಾಗಿದೆ ಎಂದು ಅಧಿಕಾರಿಗಳು ಸಮಜಾಯಿಸಿ ನೀಡಲು ಮುಂದಾದರು. ಈ ವೇಳೆ ನಿಮ್ಮ ನೀರಿನ ಬಾಟಲಿ ಸಂಪೂರ್ಣ ವಿವರ ಬಾಟಲಿ ಮೇಲೆ ಮುದ್ರಿಸಬೇಕು, ಚಿಕ್ಕ ಬಾಟಲಿಯು ಅದರಲ್ಲಿ ಇರಲಿ ಎನ್ನುವ ಸಲಹೆಗೆ ಅಧಿಕಾರಿಗಳು ಮುಂಬರುವ ದಿನದಲ್ಲಿ ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದರು.
ಎ.ಸಿ ಎಫ್ ಲೋಹಿತ್ ಮಾತನಾಡಿ ಸ್ವಚ್ಚತೆ ಹಾಗೂ ಉತ್ತಮ ಪರಿಸರವಿದ್ದಲ್ಲಿ ಪ್ರವಾಸಿಗರು ಸಂತಸಪಟ್ಟು ಆಗಮಿಸುತ್ತಾರೆ. ಇದರಿಂದ ಗ್ರಾಮ ಅರಣ್ಯ ಸಮಿತಿಯವರಿಗೆ ಆದಾಯ ಬರುವ ಜೊತೆ ಸುತ್ತಮುತ್ತಲಿನ ಪರಿಸರವು ಸ್ವಚ್ಚವಾಗಲಿದೆ. ನಿಸರ್ಗದ ವರದಾನವಾಗಿರುವ ಈ ಪರಿಸರವನ್ನು ಗ್ರಾಮ ಅರಣ್ಯ ಸಮಿತಿ ಸದ್ಬಳಕೆ ಮಾಡಿಕೊಳ್ಳಬೇಕು. ಅಧಿಕಾರಿಗಳು ಇಂದು ಬರುತ್ತಾರೆ ನಾಳೆ ಹೋಗುತ್ತಾರೆ. ಶಾಶ್ವತವಾಗಿ ಈ ಊರಿನಲ್ಲಿ ಇರುವವರು ನೀವಾಗಿರುತ್ತೀರಿ. ಸ್ವಚ್ಚ ಪರಿಸರದ ಜೊತೆ ಟೆಂಡರ್ ಪಡೆದು ಸ್ವುದ್ಯೋಗ ಮೂಲಕಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಟೆಂಡರ್ ಪ್ರಕ್ರಿಯೆಯಲ್ಲಿ ಎ ಸಿ ಎಫ್ ಲೋಹಿತ್, ಆರ್ ಎಫ್ ಓ ಸವಿತಾ ದೇವಾಡಿಗ, ಗ್ರಾಮೀಣ ಸಮಿತಿ ಅಧ್ಯಕ್ಷ ಗೋವಿಂದ ತಾಂಡೇಲ್, ಅಧಿಕಾರಿಗಳಾದ ಮಂಜುನಾಥ್ ನಾಯ್ಕ, ರಾಘವೇಂದ್ರ ನಾಯ್ಕ ಇದ್ದರು.
ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
ಭಟ್ಕಳದ ದರ್ಶನ ನಾಯ್ಕ ರಾಜ್ಯಕ್ಕೆ ಪ್ರಥಮ, ರಾಷ್ಟ್ರಮಟ್ಟಕ್ಕೆ ಭಟ್ಕಳದ ಕೀರ್ತಿ
ಕಡಸಲಗದ್ದೆ ಗಾಂಧಿ ಫಾಲ್ಸ್ ಬಳಿ ಮೊಬೈಲ್ ಕಳವು ಯತ್ನ ಇಬ್ಬರು ಬಂಧನ
ಮುರುಡೇಶ್ವರಲ್ಲಿ ನಾಲ್ವರು ಪ್ರವಾಸಿಗರ ಜೀವ ರಕ್ಷಣೆ – ಜೀವರಕ್ಷಕ ದಳದ ಸಾಹಸಕ್ಕೆ ಮೆಚ್ಚುಗೆ