
ಹೊನ್ನಾವರ : ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ, ಸರ್ವಾಂಗೀಣ ಬೆಳವಣಿಗೆ ಸಾಧಿಸಬೇಕಾಗುತ್ತದೆ ಅದನ್ನು ಸಾಧಿಸಲು ಮಕ್ಕಳಿಗೆ ಮನೆಯಲ್ಲಿಯೇ ಪೌಷ್ಠಿಕಾಂಶ ಹಳೆಯ ಆಹಾರ ಪದ್ದತಿಯನ್ನೇ ಅಳವಡಿಸಿ ಎಂದು ಹೊನ್ನಾವರ ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ಸಿ ಚಂದ್ರಶೇಖರ ಅಭಿಪ್ರಾಯಪಟ್ಟರು.
ಅವರು ಹೊನ್ನಾವರ ಮೂಡಗಣಪತಿ ಸಭಾಭವನದಲ್ಲಿ ವಕೀಲರ ಸಂಘ ಹೊನ್ನಾವರ, ಅಭಿಯೋಜನಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಪೌಷ್ಠಿಕಾಂಶ ದಿನದ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಅಡುಗೆ ಮನೆಯಲ್ಲಿರುವ ಶುಂಠಿ, ಅರಿಶಿಣ, ಜಿರಿಗೆ, ದಾಲ್ಚಿನಿ, ಲವಂಗಗಳೇ ಅಪಾರ ಔಷಧಿಯ ಗುಣಯುಳ್ಳ ವಸ್ತುಗಳು ಎನ್ನುವುದನ್ನು ತಾಯಂದಿರು ಅರಿಯಬೇಕು. ರಸ್ತೆ ಪಕ್ಕದ, ಹೋಟೆಲುಗಳ, ಪಾಸ್ಟಪುಡ್ ಕೇಂದ್ರಗಳ ಆಹಾರ ಪದ್ದತಿಯಿಂದ ಮಕ್ಕಳನ್ನು ದೂರ ಇಡಬೇಕು ಎಂದರು.
ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಅನಿಲ ಜೋನ್ ಸಿಕ್ವೇರಾ ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರ ಬಳಿ ಪ್ರಪಂಚ ಅರಿಯದ ಬಾಲರು ಬೆಳೆಯುತ್ತಾರೆ. ಭಾಷೆಗಳನ್ನು, ನಡಾವಳಿಗಳನ್ನು ಕಲಿಯುತ್ತಾರೆ. ಪ್ರಪಂಚವನ್ನು ನೋಡಲು, ತಿಳಿದುಕೊಳ್ಳಲು ಆರಂಭಿಸುತ್ತಾರೆ. ಆದ್ದರಿಂದ ಅವರನ್ನು ಅಂಗನವಾಡಿ ಶಿಕ್ಷಕರೆಂದು ಕರೆಯಬೇಕಾಗಿದೆ. ಪೌಷ್ಠಿಕಾಂಶದ ಕುರಿತು ವಿಶ್ವದಲ್ಲಿಯೇ ಜಾಗೃತಿ ಆರಂಭವಾಗಿದೆ. 1975 ರಲ್ಲಿ ಅಮೇರಿಕಾದಲ್ಲಿ ಪೌಷ್ಠಿಕ ಆಹಾರದ ಕುರಿತು ಜಾಗ್ರತೆ ಮೂಡಿಸಲು ಅಲ್ಲಿನ ಸಂಘಟನೆಗಳು ಮುಂದಾದವು. 1982 ರಿಂದ ಬಾರತದಲ್ಲಿಯೂ ಸೆಷ್ಟೆಂಬರ 1 ಮತ್ತು 2 ಪೌಷ್ಠಿಕ ಆಹಾರ ದಿನಾಚರಣೆ ಎಂದು ಆಚರಿಸಲಾಯಿತು. ದೇಶದಲ್ಲಿ 42 ಮಿಲಿಯನ್ ಮಕ್ಕಳು ಪೌಷ್ಠಿಕ ಆಹಾರ ಕೊರತೆಯಲ್ಲಿ ಇದ್ದಾರೆ ಎಂದು ಒಂದು ಗಣತಿ ಹೇಳುತ್ತಿದೆ. ದೇಶದ ಪ್ರಗತಿಯನ್ನು ಹೊಂದಬೇಕಾದರೆ, ಅಲ್ಲಿನ ನಾಗರಿಕರು ಸಶಕ್ತÀರು ಆರೋಗ್ಯವಂತರು ಅಗಿರಬೇಕು. ನಾಳಿನ ಸಮಾಜವನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಮನೆಯಲ್ಲಿ ತಾಯಂದಿರು ಮಕ್ಕಳಿಗೆ ಸರ್ವ ಪೌಷ್ಠಿಕಾಂಶ ಉಳ್ಳ ಆಹಾರವನ್ನು ನೀಡಲು ಪ್ರಯತ್ನಿಸಬೇಕು. ಆಧುನಿಕ ಆಹಾರ ಶೈಲಿ ಮಕ್ಕಳ ಆರೋಗ್ಯಕ್ಕೆ ಮಾರಕ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಕ್ಕಳು ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕುಮಾರ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರಕಾರಿ ಅಭಿಯೋಜಕಿ ಸಂಪದಾ ಗುನಗಾ ಪೌಷ್ಠಿಕ ಆಹಾರದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ತಾ.ಪಂ ಕಾರ್ಯನಿರ್ವಣಾಧಿಕಾರಿ ಚೇತನ್ ಕುಮಾರ, ವಕೀಲರ ಸಂಘದ ಅಧ್ಯಕ್ಷ ವಿ.ಎಮ್. ಭಂಡಾರಿ, ಕಾರ್ಯದರ್ಶಿ ಉದಯ ಬಿ ನಾಯ್ಕ ಚಿತ್ತಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪ.ಪಂ ಮುಖ್ಯಾಧಿಕಾರಿ ಯೇಸು ಸುಬ್ರಹ್ಮಣ್ಯ ತಾಯಿ ಮತ್ತು ಮಕ್ಕಳ ಸಂಬAಧದ ಭಾವ ಗೀತೆಯನ್ನು ಹಾಡಿದರು. ಮಕ್ಕಳು ಮತ್ತು ಮಹಿಳಾ ಇಲಾಖೆ ಅಧಿಕಾರಿ ವನಿತಾ ದೇಶಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೊನೆಯಲ್ಲಿ ವಿಜಯಾ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವೇದಿಕೆಯಲ್ಲಿ ಹೊನ್ನಾವರ ಸಿವಿಲ್ ಹಾಗೂ ಪ್ರಿನ್ಸಿಪಲ್ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಧೀಶ ಈರಣ್ಣ ಹುಣಸಿಕಟ್ಟೆ, ಹಿರಿಯ ವಕೀಲರಾದ ಜಿ.ವಿ.ಭಟ್ಟ, ಎಮ್.ಆಯ್. ಹೆಗಡೆ, ಕೆ.ವಿ.ನಾಯ್ಕ, ಎಮ್. ಎನ್. ಸುಬ್ರಹ್ಮಣ್ಯ, ಎಮ್. ಎಸ್. ಭಟ್ಟ ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯುವಜನ ಅಧಿಕಾರಿ ಸುದೇಶ ನಾಯ್ಕ ನಿರೂಪಿಸಿದರು. ತಾಲೂಕಿನ ಅಂಗನವಾಡಿ ಶಿಕ್ಷಕರು ಮಕ್ಕಳ ಪೌಷ್ಠಿಕ ಆಹಾರದ ಕುರಿತು ಜಾಗ್ರತೆ ಮೂಡಿಸಲು ತಾವು ಸಿದ್ದಪಡಿಸಿದ ಪೌಷ್ಠಿಕ ಆಹಾರ, ಪಾರಂಪರಿಕ ಶೈಲಿಯ ವಿವಿಧ ವಯಸ್ಸಿನ ಮಕ್ಕಳಿಗೆ ಸಿದ್ದಪಡಿಸಿದ ಆಹಾರ, ವಿವಿಧ ಸೊಪ್ಪು, ಗೆಣಸು, ಹೂವು, ಚಿಗುರುಗಳಿಂದ ಸಿದ್ದಪಡಿಸಿದ ಆಹಾರಗಳನ್ನು ಪ್ರದರ್ಶಿಸಿದರು.
ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
ಅತಿವೇಗದ ಬಸ್ ಡಿಕ್ಕಿ, ಸ್ಕೂಟಿ ಸವಾರ ಸ್ಥಳದಲ್ಲೇ ದುರ್ಮರಣ
ಭಟ್ಕಳದ ದರ್ಶನ ನಾಯ್ಕ ರಾಜ್ಯಕ್ಕೆ ಪ್ರಥಮ, ರಾಷ್ಟ್ರಮಟ್ಟಕ್ಕೆ ಭಟ್ಕಳದ ಕೀರ್ತಿ
ಕಡಸಲಗದ್ದೆ ಗಾಂಧಿ ಫಾಲ್ಸ್ ಬಳಿ ಮೊಬೈಲ್ ಕಳವು ಯತ್ನ ಇಬ್ಬರು ಬಂಧನ