October 6, 2025

ದಾಖಲೆಗಳಿಲ್ಲದೆ 6 ಕ್ವಿಂಟಲ್ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ, ಆರೋಪಿಗಳ ಬಂದನ

ಭಟ್ಕಳ: ಪಡಿತರ ಅಕ್ಕಿಯನ್ನು ದಾಖಲೆಗಳಿಲ್ಲದೆ ,ಅಕ್ರಮವಾಗಿ ಸಾಗಿಸುತ್ತಿದ್ದ ಘಟನೆ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ. ಪುರವರ್ಗ ಭಟ್ಕಳ ನಿವಾಸಿ, 35 ವರ್ಷದ ಚಾಲಕ ಪಹೀಮ್ ಮಹ್ಮದ್ ಓಮಿನಿ ವಾಹನದಲ್ಲಿ ತೆರ್ನಮಕ್ಕಿ ಹತ್ತಿರ ಸುಮಾರು 6 ಕ್ವಿಂಟಲ್ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ವೇಳೆ ಬಂಧನಗೊAಡಿದ್ದಾರೆ.

ಘಟನೆಯ ಬಗ್ಗೆ ಆಹಾರ ನಿರೀಕ್ಷಕ ಉದಯ ತಳವಾರ ಮುರುಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಿಎಸಐ ಹನುಮಂತ ಬಿರಾದಾರ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

About The Author

error: Content is protected !!