
ಹೊನ್ನಾವರ : ತಾಲೂಕಿನ ಸರ್ಕಾರಿ ನೌಕರರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ರಾಜ್ಯದಲ್ಲೆ ಮಾದರಿಯಾಗಿ ಸಂಘವನ್ನು ಮುನ್ನಡೆಯುತ್ತಿದ್ದಾರೆ ಎಂದು ತಹಶೀಲ್ದಾರ ಪ್ರವೀಣ ಕರಾಂಡೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಭವನದಲ್ಲಿ ಹಮ್ಮಿಕೊಂಡ 2024-25 ನೇ ಸಾಲಿನ ಹೊನ್ನಾವರ ತಾಲೂಕ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿ ಮಾತನಾಡಿದರು.
ಅನೇಕ ಒತ್ತಡ ನಡುವೆ ತಾಲೂಕಿನ ಸರ್ಕಾರಿ ನೌಕರರಿಗೆ ಮನೊರಂಜನೆಯ ಜೊತೆ ವಿವಿಧ ಕಾರ್ಯಕ್ರಮವನ್ನು ಸಂಘವು ಆಯೋಜಿಸುವ ಮೂಲಕ ನಾವೆಲ್ಲರೂ ಒಂದೇ ಕುಟುಂಬದAತೆ ಕರ್ತವ್ಯ ನಿರ್ವಹಿಸುತ್ತಾ ಬಂದಿದೆ. ತಾಲೂಕು ಆಡಳಿತ ಸರ್ಕಾರಿ ನೌಕರರ ಪರವಾಗಿ ಇರಲಿದೆ. ಸಾರ್ವಜನಿಕರಿಗೆ ಸಕಾಲದಲ್ಲಿ ಸರ್ಕಾರದ ಸೌಲಭ್ಯ ವಿತರಿಸುವ ಮೂಲಕ ಜನಸ್ನೇಹಿಯಾಗಿ ಮುನ್ನಡೆಯೋಣ ಎಂದರು.
ಪಿ.ಡ್ಲಬು ಇಲಾಖೆಯ ಅಧಿಕಾರಿ ಎಂ.ಎಸ್.ನಾಯ್ಕ ಮಾತನಾಡಿ ಸರ್ಕಾರಿ ನೌಕರರ ಸೇವೆಯು ಕಛೇರಿಯ ಗೋಡೆಯೊಳಗೆ ಮಾತ್ರ ಸಿಮೀತವಾಗಿಲ್ಲ. ನೌಕರರು ಸಂಬಳಕ್ಕೆ ಮಾತ್ರ ಮಿಸಲಾಗಿಡದೇ, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ನಿವೃತ್ತಿಯ ನಂತರ ಸಮಾಜದಲ್ಲಿ ತಮ್ಮ ಸೇವಾನುಭವದ ಮೂಲಕ ಮುನ್ನಡೆಯೋಣ ಎಂದು ಸಲಹೆ ನೀಡಿದರು.
90% ಅಂಕ ಪಡೆದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ಮೂಲಕ ಗೌರವಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ನಿವೃತರಾದ ನೌಕರರನ್ನು, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರನ್ನು ವರ್ಗಾವಣೆಯಾದ ಸರ್ಕಾರಿ ನೌಕರರನ್ನು, ಪದೊನ್ನತಿ ಹೊಂದಿದ ಅಧಿಕಾರಿ ಎಂ.ಎಸ್.ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾ.ಪಂ. ಇ.ಓ ಚೇತನಕುಮಾರ ಮಾತನಾಡಿ ರಾಜ್ಯದ ಆರು ಕೋಟಿಯ ಜನಸಂಖ್ಯೆಗೆ 12 ಸಾವಿರ ಸರ್ಕಾರಿ ನೌಕರರು ಸೇವೆ ಸಲ್ಲಿಸುತ್ತಿದ್ದೇವೆ. ನೌಕರರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯವು ಸಂಘವು ಮಾಡುತ್ತಾ ಬಂದಿದೆ. ಸಂಘಟನೆಯ ಕಾರ್ಯವು ಹೀಗೆಯೇ ಮುಂದುವರೆಯಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕ ಸಂಘದ ಅಧ್ಯಕ್ಷ ಅಣ್ಣಪ್ಪ ಮುಕ್ರಿ ಮಾತನಾಡಿ ಎಲ್ಲಾ ನೌಕರರ ಬೆಂಬಲದಿAದ ಸಂಘವು ಯಶ್ವಸಿಯಾಗಿ ಮುನ್ನಡೆಯುತ್ತಿದೆ. ಎಲ್ಲರೂ ನಿರಂತರ ಪ್ರಯತ್ನದಿಂದ ಮುನ್ನಡೆದರೆ ಸಾಧನೆ ಮಾಡಿ ಗುರಿ ತಲುಪಬಹುದು. ಸಂಘಟನೆಯ ಮೂಲಕ ವಿವಿಧ ಸೌಲಭ್ಯ ದೊರೆತಿದೆ. ಮುಂದಿನ ದಿನದಲ್ಲಿಯೂ ಹಲವು ಬೇಡಿಕೆಯು ಸಂಘಟನೆ ಮೂಲಕ ಈಡೇರಲಿದೆ ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಬಿ.ಇ.ಓ ವಿನಾಯಕ ಅವಧಾನಿ, ಸಂಘದ ಗೌರವಾಧ್ಯಕ್ಷ ಆರ್.ಪಿ.ಭಟ್, ನಿಕಟಪೂರ್ವ ಅಧ್ಯಕ್ಷ ಆರ್.ಟಿ.ನಾಯ್ಕ, ನ್ಯೂ ಎಜುಕೇಶನ್ ಸೊಸೈಟಿ ಅಧ್ಯಕ್ಷ ರಘು ಪೈ, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ಪಿ.ಆರ್.ನಾಯ್ಕ, ಅಧಿಕಾರಿಗಳಾದ ರಾಘವೇಂದ್ರ ನಾಯ್ಕ, ರಘುನಾಥ ನಾಯ್ಕ, ಚಂದ್ರಶೇಖರ ಕಳಸ, ಸುಧೀಶ ನಾಯ್ಕ, ಎಂ.ಜಿ.ನಾಯ್ಕ, ವೈಭವಿ ಭಂಡಾರಿ ಇದ್ದರು.
ತಾ.ಪಂ. ನರೇಗಾ ಸಹಾಯಕ ನಿರ್ದೆಶಕರಾದ ಕಿರಣಕುಮಾರ ಸ್ವಾಗತಿಸಿ, ರಾಜ್ಯ ಪ್ರಶಸ್ತಿ ಪುರಸ್ಕ್ರತ ಶಿಕ್ಷಕ ಪ್ರಕಾಶ ನಾಯ್ಕ, ಪ್ರೇರಣಾ ನುಡಿಗಳನ್ನಾಡಿದರು. ಶಿಕ್ಷಕ ಗಣಪಯ್ಯ ಗೌಡ ವಂದಿಸಿದರು.
ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
ಅತಿವೇಗದ ಬಸ್ ಡಿಕ್ಕಿ, ಸ್ಕೂಟಿ ಸವಾರ ಸ್ಥಳದಲ್ಲೇ ದುರ್ಮರಣ
ಭಟ್ಕಳದ ದರ್ಶನ ನಾಯ್ಕ ರಾಜ್ಯಕ್ಕೆ ಪ್ರಥಮ, ರಾಷ್ಟ್ರಮಟ್ಟಕ್ಕೆ ಭಟ್ಕಳದ ಕೀರ್ತಿ
ಕಡಸಲಗದ್ದೆ ಗಾಂಧಿ ಫಾಲ್ಸ್ ಬಳಿ ಮೊಬೈಲ್ ಕಳವು ಯತ್ನ ಇಬ್ಬರು ಬಂಧನ