October 6, 2025

ಶ್ರೀನಾರಾಯಣಗುರು ಜಯಂತ್ಯೋತ್ಸವ ಅಂಗವಾಗಿ ಪ್ರಬಂಧ ಸ್ಪರ್ಧೆ

ಭಟ್ಕಳ : ಸೆಪ್ಟಂಬರ 28 ರಂದು ಭಟ್ಕಳದ ಸಾರದಹೊಳೆಯ ನಾಮಧಾರಿ ಸಭಾ ಭವನದಲ್ಲಿ ನಡೆಯುವ 171 ನೇ ಶ್ರೀನಾರಾಯಣಗುರು ಜಯಂತ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯಲ್ಲಿ ಭಟ್ಕಳ ನ್ಯೂ ಇಂಗ್ಲೀಷ್ ಕಾಲೇಜಿನ ವಿದ್ಯಾರ್ಥಿನಿ ಯಾಮಿನಿ ಭಾಸ್ಕರ ನಾಯ್ಕ ಪ್ರಥಮ ಸ್ಥಾನ ಪಡೆದಿದ್ದಾಳೆ. ದ್ವಿತೀಯ ಸ್ಥಾನವನ್ನು ಮುರುಡೇಶ್ವರದ ಆರ್.ಎನ್.ಎಸ್. ಪಿ.ಯು ಕಾಲೇಜಿನ ವಿದ್ಯಾರ್ಥಿನಿ ಮಾನಸ ಈಶ್ವರ ನಾಯ್ಕ ದ್ವಿತೀಯ ಸ್ಥಾನವನ್ನು ಹಾಗೂ ತೃತೀಯ ಸ್ಥಾನವನ್ನು ಭಟ್ಕಳದ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನ ಕವನ ಕೇಶವ ಮೊಗೇರ ಪಡೆದಿದ್ದಾಳೆ.ಸಮಾಧಾನಕರ ಬಹುಮಾನವನ್ನು ಚಿತ್ರಾಪುರದ ಶ್ರೀವಲ್ಲಿ ಪಿ.ಯು. ಕಾಲೇಜಿನ ಚಿಂತನಾ ನಾಗಪ್ಪ ನಾಯ್ಕ, ಹಾಗೂ ಆರ್.ಎನ್.ಎಸ್. ಕಾಲೇಜಿನ ಪ್ರತೀಕ್ಷಾ ಎಂ.ಭಟ್ ಪಡೆದಿದ್ದಾಳೆ.ಇಲ್ಲಿನ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನಲ್ಲಿ ನಡೆದ ಪ್ರಭಂದ ಸ್ಪರ್ದೇಯಲ್ಲಿ ನಿರ್ಣಾಯಕರಾಗಿ ಶಿಕ್ಷಕ ನಾರಾಯಣ ನಾಯ್ಕ ಹಾಗೂ ಪತ್ರಕರ್ತ ಈಶ್ವರ ನಾಯ್ಕ ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಶ್ರೀ ನಾರಾಯನಗುರು ಸಮಿತಿಯ ಅಧ್ಯಕ್ಷ ಮನಮೋಹನ ನಾಯ್ಕ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ನಾಯಾಯಣಗುರು ಸಮಿತಿಯ ಕಾರ್ಯದರ್ಶಿ ದೀಪಕ ನಾಯ್ಕ . ಸಹಕರಿಸಿದರು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಗಂಗಾಧರ ನಾಯ್ಕ ವಂದಿಸಿದರು.

About The Author

error: Content is protected !!