October 6, 2025

ಸಚಿವರ ಜನಸ್ಪಂದನ ಸಭೆ ನೂರಾರು ಜನರ ಅಹವಾಲು ಸ್ವೀಕರಣೆ

ಭಟ್ಕಳ: ತಾಲೂಕಿನ ಬೆಳ್ಕೆ ಹೊನ್ನೆಮಿಡಿ ಪ್ರೌಢಶಾಲೆಗೆ ತರಗತಿ ಕೊಠಡಿ ಹಾಗೂ ಶಾಲಾ ಕಂಪೌAಡ್ ನಿರ್ಮಿಸಿಕೊಡಬೇಕೆಂದು ಶಾಲಾ ಮುಖ್ಯೋಪಾಧ್ಯಾಯರು ಭಾನುವಾರ ನಡೆದ ಜನಸ್ಪಂದನ ಸಭೆಯಲ್ಲಿ ಸಚಿವ ಮಂಕಾಳ ವೈದ್ಯರಿಗೆ ಮನವಿ ಸಲ್ಲಿಸಿದರು. ಸಚಿವರು ಶಾಲೆಯ ಅಭಿವೃದ್ದಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡುತ್ತಾ, ಕ್ರಮ ಕೈಗೊಳ್ಳಲು ಆಪ್ತಸಹಾಯಕ ನಾಗರಾಜ ನಾಯ್ಕ ಅವರಿಗೆ ಸೂಚನೆ ನೀಡಿದರು.

ಕುಮಟಾದ ಮೀನುಗಾರ ಮಹಿಳೆಯರ ಸಹಕಾರಿ ಸಂಘದ ಮನವಿಗೆ ಸ್ಪಂದಿಸಿದ ಸಚಿವರು, ಮೀನು ಮಾರುಕಟ್ಟೆ ಹಿಂದುಗಡೆ 100 ಮೀಟರ್ ಜಟ್ಟಿ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ತೆಂಗಿನಗುAಡಿ ಪ್ರೌಢಶಾಲೆಯ ಕೊಠಡಿ ದುರಸ್ತಿ ಹಾಗೂ ಬಣ್ಣ ಹಚ್ಚುವ ಕಾರ್ಯಕ್ಕೂ ನೆರವು ನೀಡುವುದಾಗಿ ಭರವಸೆ ನೀಡಿದರು.

ಅನಾರೋಗ್ಯ, ಮದುವೆ, ಮನೆ ರಿಪೇರಿ, ಮಕ್ಕಳ ವಿದ್ಯಾಭ್ಯಾಸ ಮುಂತಾದ ಕಾರಣಗಳಿಗೆ ಬಂದ ಮನವಿಗಳಿಗೆ ಸಚಿವರು ಸ್ಥಳದಲ್ಲಿಯೇ ಧನಸಹಾಯ ಮಾಡಿ, ಸರ್ಕಾರದಿಂದಲೂ ನೆರವು ದೊರಕುವಂತೆ ನೋಡಿಕೊಳ್ಳುವುದಾಗಿ ಹೇಳಿದರು. ಈ ಬಾರಿ ನಡೆದ ಜನಸ್ಪಂದನ ಸಭೆಗೆ ಸಾವಿರಾರು ಜನರು ಆಗಮಿಸಿದ್ದು, ಸಚಿವರು ರಾತ್ರಿ 10 ಗಂಟೆಯವರೆಗೆ ಜನರ ಅಹವಾಲುಗಳನ್ನು ಆಲಿಸಿ, ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದರು. ಉಳಿದ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ನಿರ್ವಹಿಸುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಸಚಿವರ ಪುತ್ರಿ ಬೀನಾ ವೈದ್ಯ ಕೂಡ ಹಾಜರಿದ್ದು, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಸ್ಥಳೀಯ ಸಮಸ್ಯೆಗಳ ಪರಿಹಾರ ಸೂಚಿಸಿದರು. ಆಪ್ತ ಕಾರ್ಯದರ್ಶಿ ನಾಗರಾಜ ನಾಯ್ಕ, ನಾಗೇಂದ್ರ ಮೊಗೇರ, ಕಾರ್ಯದರ್ಶಿ ಸುರೇಶ ನಾಯ್ಕ, ವೆಂಕಟ್ರಮಣ ಮೊಗೇರ, ಮಂಜಪ್ಪ ನಾಯ್ಕ, ಮಂಜುನಾಥ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

error: Content is protected !!