October 5, 2025

ಅಖಿಲ ಕರ್ನಾಟಕ ನಾಟಕ ಲೇಖಕರ ಸಂಘ” ಗದಗ” ಉತ್ತರಕನ್ನಡ ಜಿಲ್ಲಾ ಘಟಕ ಉದ್ಘಾಟನೆ

ಹೊನ್ನಾವರ: ಕಾರವಾರ ತಾಲೂಕಿನ ಅಮದಳ್ಳಿ ಬಾಲವೀರಗಣಪತಿ ಸಭಾಭವನದಲ್ಲಿ ಅಖಿಲ ಕರ್ನಾಟಕ ನಾಟಕ ಲೇಖಕರ ಸಂಘ” ಗದಗ” ಉತ್ತರಕನ್ನಡ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭ ಮತ್ತು ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಜಿಲ್ಲಾ ಅಧ್ಯಕ್ಷರಾಗಿ ಹೊನ್ನಾವರದ ತಾಲೂಕಿನ ಖರ್ವಾ ಗ್ರಾಮದ ಮೋಹನ ನಾಯ್ಕ ಅಧಿಕಾರ ಸ್ವೀಕರಿಸಿದರು.

ಜಿಲ್ಲಾ ಗೌರವಾಧ್ಯಕ್ಷರಾಗಿ ಕಾರವಾರದ ಕೃಷ್ಣಾನಂದ ನಾಯ್ಕ ಕೋಡಿಬಾಗ, ಕಾರ್ಯಾಧ್ಯಕ್ಷರಾಗಿ ಸಮೀದ ಬಾಂದೇಕರ ಅರ್ಗಾ,ಸಂಘಟನಾ ಕಾರ್ಯದರ್ಶಿಯಾಗಿ ಗಣಪತಿ ಮಹಾಲೆ, ತೋಡೂರ,ಸಂಚಾಲಕರಾಗಿ ಸಮರ್ಥ ನಾಯ್ಕ, ದೇವಳಮಕ್ಕಿ,ನಿರ್ದೇಶಕರಾಗಿ ಶ್ರೀಧರ್ ಗೌಡ ಅಂಕೋಲಾ ಅವರಿಗೆ ಪ್ರಮಾಣಪತ್ರದೊಂದಿಗೆ ಸನ್ಮಾನಿಸುವ ಮೂಲಕ ಪದಗ್ರಹಣ ನೆರವೇರಿಸಲಾಯಿತು.ಕಲಬುರಗಿಯ ಅಖಿಲ ಕರ್ನಾಟಕ ನಾಟಕ ಲೇಖಕರ ಸಂಘದ ರಾಜ್ಯಾಧ್ಯಕ್ಷ ಸಿದ್ಧಲಿಂಗಯ್ಯ ಸ್ವಾಮಿ ಮಲಕೋಡ ಪದಗ್ರಹಣ ಪ್ರಕ್ರಿಯೆ ನಡೆಸಿ ನೂತನ ಪದಾಧಿಕಾರಿಗಳ ಅಭಿನಂದಿಸಿದರು.

ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ನಾಟಕ ಲೇಖಕರ ಸಂಘ’ ಗದಗ’ ಸಂಸ್ಥಾಪಕ ಸಂತೋಷ ನಾಯಕ ಅವರ್ಸಾ,ರಾಜ್ಯ ಉಪಾಧ್ಯಕ್ಷ ಜಿ. ಡಿ ಗೋವಿಂದಕುಮಾರ್,ಸಹಕಾರ್ಯದರ್ಶಿ ಶಿವರುದ್ರಯ್ಯ ಹಿರೇಮಠ, ಕಾರವಾರ ತಾಲೂಕು ರಂಗಭೂಮಿ ಕಲಾವಿದರ ವೇದಿಕೆ ಅಧ್ಯಕ್ಷ ಜ್ಞಾನೇಶ್ವರ ನಾಯ್ಕ,ಉಪಾಧ್ಯಕ್ಷ ಸುರೇಶ ನಾಯ್ಕ, ನಿರ್ದೇಶಕ ಸಾತು ಗೌಡ ಬಡಗೇರಿ,ತಾಲೂಕಾ ರಂಗಭೂಮಿ ವೇದಿಕೆ,ಅಂಕೋಲಾ ಮಾಜಿ ಅಧ್ಯಕ್ಷ ನಾಗರಾಜ ಜಾಂಬಳೇಕರ ಮುದಗಾ ಉಪಸ್ಥಿತರಿದ್ದರು.

ಅಮದಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಪುರುಷೋತ್ತಮ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ನಾಗೇಂದ್ರ ಅಂಚೇಕರ ನಿರೂಪಿಸಿದರು. ಪ್ರಶಾಂತ ಮಹಾಲೆ ವಂದಿಸಿದರು.
ವರದಿ: ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!