October 5, 2025

ಪೌರಕಾರ್ಮಿಕರ ಆರೋಗ್ಯವೃದ್ದಿಗಾಗಿ ಪುರಾಣ ಪ್ರಸಿದ್ದ ಶ್ರೀ ಕ್ಷೇತ್ರ ಇಡಗುಂಜಿ ದೇವರಲ್ಲಿ ವಿಶೇಷ ಪೂಜೆ

ಹೊನ್ನಾವರ; ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಹೊನ್ನಾವರ ಪಟ್ಟಣ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೌರಕಾರ್ಮಿಕರ ಆರೋಗ್ಯವೃದ್ದಿಗಾಗಿ ಪುರಾಣ ಪ್ರಸಿದ್ದ ಶ್ರೀ ಕ್ಷೇತ್ರ ಇಡಗುಂಜಿ ದೇವರಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ವೇಳೆ ಪ.ಪಂ.ಅಧ್ಯಕ್ಷ ವಿಜಯ ಕಾಮತ್, ಉಪಾಧ್ಯಕ್ಷ ಸುರೇಶ ಹೊನ್ನಾವರ, ಪ.ಪಂ.ಮುಖ್ಯಾಧಿಕಾರಿ ಯೇಸು ಬೆಂಗಳೂರು ಪೌರ ಕಾರ್ಮಿಕರು ಇದ್ದರು. ನಂತರ ಪ.ಪಂ.ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ತಹಶೀಲ್ದಾರ ಪ್ರವೀಣ ಕರಾಂಡೆ, ಸಿಬ್ಬಂದಿಗಳು, ಸದಸ್ಯರು ಇದ್ದರು.
ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!