October 5, 2025

ನಾಣಿಕಟ್ಟಾದಲ್ಲಿ ವಿಜೃಂಭಿಸಿದ ಗಾನ ಚಿತ್ರ ವೈಭವ

ಸಿದ್ದಾಪುರ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾದಲ್ಲಿ ವೇದಮೂರ್ತಿ ಶ್ರೀಯುತ ವಿನಾಯಕ ಸುಬ್ರಾಯ ಭಟ್ ಮತ್ತೀಹಳ್ಳಿ ಅವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾ (ಶ್ರೀ ನಟರಾಜ ಎಂ ಹೆಗಡೆ ಮಿತ್ರ ಬಳಗ) ಸಿದ್ದಾಪುರ ಉ.ಕ. ಇವರ ದಕ್ಷ ಸಂಘಟನೆ & ಸಂಯೋಜನೆಯಲ್ಲಿ (93 ನೆಯ ಹೆಜ್ಜೆ ) ಯಶಸ್ವಿ ಅದ್ಧೂರಿ ಯಕ್ಷ – ಚಿತ್ರ. – ಗಾನ – ಹಿಮ್ಮೇಳ ವೈಭವ.. ರಾಮ ರಾಘವರ ಸಮಾಗಮ. ಯಕ್ಷ ಚಿತ್ರ ಕಲಾಕಾರರಾದ ಪೂಜ್ಯ ಶಿಕ್ಷಕರಾದ ಸತೀಶ್ ಹೆಗಡೆ ಯಲ್ಲಾಪುರ ಅವರಿಗೆ “ಗುರು ವಂದನೆ” ವಿಜೃಂಭಣೆಯಿAದ ನಡೆಯಿತು….

ಉತ್ತರಕರ್ನಾಟದ ಸಾಂಸ್ಕೃತಿಕ ಕಲೆ ಬೇರೆ. ಉತ್ತರ ಕನ್ನಡದ್ದು ಬೇರೆ. ಉತ್ತರಕನ್ನಡದಲ್ಲಿ ಕಲೆ ಎನ್ನುವುದು ಜೀವಂತವಾಗಿದೆ. ಕಲೆ ಜೀವಂತವಾಗಿರಲು ಎಲ್ಲ ಸಹೃದಯೀ ಸಂಘಟಕರ, ಪ್ರೇಕ್ಷಕರ ಸಹಕಾರದಿಂದ ಸಾಧ್ಯವಾಗಿದೆ ಎಂದು ಮುಖ್ಯ ಅಥಿತಿಗಳಾಗಿ ಆಗಮಿಸಿದ ಉತ್ತರ ಕನ್ನಡ ಪೊಲೀಸ್ ಶಿರಸಿ ವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್ ಹೇಳಿದರು.

ಇಂದಿನ ಕಾಲದಲ್ಲಿ ಶಿಕ್ಷಕರು ಅವರಿಗೆ ನೀಡಿದ ವಿಷಯವನ್ನು ಕಲಿಸಿ ಹೋದರೆ ಸಾಕು ಎನ್ನುವ ತಲೆಯಲ್ಲಿಯೇ ಇರುತ್ತಾರೆ. ಆದರೆ ಇಂತಹ ಕಾರ್ಯಕ್ರಮದಿಂದಾಗಿ ಕಲೆ, ಸಾಹಿತ್ಯ, ಸಂಸ್ಕೃತಿ ಜೀವಂತವಾಗಿರಲು ಸಾಧ್ಯ. ತಾಯಂದಿರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಒಳ್ಳೆಯ ಸಂಸ್ಕಾರ ಅಭ್ಯಾಸ ಬೆಳೆಸುವುದರಿಂದ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಉಪಯೋಗವಾಗುತ್ತದೆ. ಶ್ರೀ ಗಣೇಶ ಹಬ್ಬದಲ್ಲಿ ಡಿಜೆ ಬಳಸದಂತೆ ಆದೇಶ ನೀಡಿದರೂ ಕೆಲವೆಡೆ ಡಿಜೆ ಬಳಸುತ್ತಾರೆ. ಇದು ನಮ್ಮ ಸಂಸ್ಕೃತಿಯಲ್ಲ. ಅದರ ಬದಲಾಗಿ ಯಕ್ಷಗಾನ, ಜಾನಪದ ಕಾರ್ಯಕ್ರಮವನ್ನು ಆಯೋಜನೆ ಮಾಡುವುದರಿಂದ ಕಲೆ ಜೀವಂತವಾಗಿರಲು ಸಾಧ್ಯ ಎಂದರು.

ಮುಖ್ಯ ಅತಿಗಳಾಗಿ ಆಗಮಿಸಿದ ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಸಿರಸಿ ಮಾತನಾಡಿ, ಕಲಾವಿದರಿಗೆ, ಸಂಘಟಕರಿಗೆ ನಮ್ಮ ಟ್ರಸ್ಟ್ ವತಿಯಿಂದ ಯಾವತ್ತೂ ಸಹಾಯ ಮಾಡಲಾಗುತ್ತಿದೆ. ಮುಂದೆಯೂ ಕೂಡ ನಾವು ನಮ್ಮ ಗಂಡುಕಲೆ ಯಕ್ಷಗಾನಕ್ಕೆ ಪ್ರೋತ್ಸಾಹ ಮಾಡುತ್ತೇವೆ, ಇಲ್ಲಿನ ಚಂಡೆ ಮತ್ತು ಮೃದಂಗ ವಾದ ಕೇಳಿದಾಕ್ಷಣ ಜಾಕಿರ್ ಹುಸೇನ ನೆನಪಾದರು. ಮೃದಂಗ ವಾದಕನಿಗೆ ಮುಂದೆ ಉಜ್ವಲ ಭವಿಷ್ಯವಿದೆ. ಯಕ್ಷಗಾನ ಸಂಘಟಕರಿಗೆ , ಕಲಾವಿದರಿಗೆ ನಮ್ಮ ಸಹಕಾರ ಎಂದಿಗೂ ಇರುತ್ತದೆ ಎಂದರು.
ಇನ್ನೋರ್ವ ಮುಖ್ಯ ಅಥಿತಿಗಳಾಗಿ ಆಗಮಿಸಿದ ಕದಂಬ ಕನ್ನಡ ಜಿಲ್ಲೆ ಹೋರಾಟ ಸಮಿತಿ ಮುಖ್ಯಸ್ಥ,ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಮಾತನಾಡಿ, ನಶಿಸುತ್ತಿತುರುವ ಕಲೆ, ಸಂಸ್ಕೃತಿ ಉಳಿಯಬೇಕು ಅಂದರೆ ನಟರಾಜ ಹೆಗಡೆ ಅವರಂತಹ ದಕ್ಷ ಸಂಘಟಕರಿAದ ಮಾತ್ರ ಸಾಧ್ಯ. ಅಂತವರಿಗೆ ಅವರ ತಂಡಕ್ಕೆ,ಸಮಿತಿಗೆ ನಮ್ಮ ಪ್ರೋತ್ಸಾಹ ಎಂದಿಗೂ ಇರುತ್ತದೆ ಎಂದರು. ಸಂಘಟಕರು ಸಂಘಟನೆ ಮಾಡಿದರೆ ಮಾತ್ರ, ನಮ್ಮ ಸಂಸ್ಕೃತಿ ಉಳಿಯಲು, ಬೆಳೆಯಲು ಸಾಧ್ಯ. ಹಾಗಾಗಿ ಕಲಾವಿದರ ಜೊತೆಗೆ ನಾವು ಸಂಘಟಕರನ್ನೂ ಗುರುತಿಸಿ, ಗೌರವಿಸಬೇಕಿದೆ ಎಂದರು.

“ಗುರುವಂದನೆ” ಗೌರವ ನಾಗರೀಕ ಸನ್ಮಾನ ಸ್ವೀಕರಿಸಿದ ಚಿತ್ರಕಲಾಕಾರರಾದ ಶಿಕ್ಷಕರಾದ ಸತೀಶ್ ಯಲ್ಲಾಪುರ ಮಾತನಾಡಿ, ವೃತ್ತಿಯಲ್ಲಿ ತೃಪ್ತಿ ಸಿಗುವವರೆಗೂ ಬಿಡಬೇಡಿ. ನಾಣಿಕಟ್ಟಾದಲ್ಲಿ ಅನೇಕ ವರ್ಷಗಳ ಕಾಲ ಇದ್ದೇನೆ. ಇಲ್ಲಿಯ ಜನ ನನ್ನನ್ನು ಅವರ ಮನೆಯ ಮನುಷ್ಯನ ರೀತಿ ನೋಡಿಕೊಂಡಿದ್ದಾರೆ. ಇದನ್ನು ಎಂದಿಗೂ ಮರೆಯುವುದಿಲ್ಲ ಎಂದರು. ಇದೇ ಸಂಧರ್ಭದಲ್ಲಿ ನಮ್ಮ ಉತ್ತರಕನ್ನಡ ಪೊಲೀಸ್ ಸಿರಸಿ ವಿಭಾಗದ ದಕ್ಷ ಡಿಎಸ್ಪಿ ಸನ್ಮಾನ್ಯ ಗೀತಾ ಪಾಟೀಲ್ ಅವರನ್ನು ಸಮಿತಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು..

ಕಾರ್ಯಕ್ರಮದಲ್ಲಿ ಖ್ಯಾತ ಯಕ್ಷಗಾನ ಭಾಗವತರಾದ ಗಾನ ಸಾಮ್ರಾಟ ರಾಘವೇಂದ್ರ ಆಚಾರ್ಯ ಜನ್ಸಾಲೆ, ಗಾನ ಸಿರಿ ರಾಮಕೃಷ್ಣ ಹೆಗಡೆ ಹಿಲ್ಲೂರು ಇವರ ಸುಮಧುರ ಗಾನ ವೈಭವ, ಶಶಾಂಕ್ ಆಚಾರ್ಯ ಕಿರುಮಂಜೇಶ್ವರ ಮದ್ದಳೆಯ ನುಡಿತ , ಪ್ರಜ್ವಲ್ ಕುಮಾರ್ ಮುಂಡಾಡಿ ಚಂಡೆಯ ಜಲಕ್, ಅದಕ್ಕೆ ಸಮಾನವಾಗಿ ಪ್ರಸಿದ್ದ ಚಿತ್ರ ಕಲಾಕಾರರಾದ ಸತೀಶ್ ಹೆಗಡೆ ಯಲ್ಲಾಪುರ,&ಅವರ ಗುರುಗಳಾದ ಗಣಪತಿ ಹೆಗಡೆ ನೀರನಳ್ಳಿ ಮನಮೋಹಕ ಚಿತ್ರ ವರ್ಣಿಕೆ ನೆರೆದ ಪ್ರೇಕ್ಷಕರ ಮನ ತಣಿಸಿತು.

ಕಾರ್ಯಕ್ರಮದಲ್ಲಿ ನಾಣಿಕಟ್ಟಾದ ತ್ಯಾಗಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎನ್.ಬಿ.ಹೆಗಡೆ ಮತ್ತೀಹಳ್ಳಿ, ಟಿಎಂಎಸ್ ಶಿರಸಿ ನಿರ್ದೇಶಕರಾದ ಮತ್ತು ಅಜ್ಜೀಬಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಮ್.ಎನ್.ಭಟ್ಟ ಬಿಸ್ಲಕೊಪ್ಪ, ತ್ಯಾಗಲಿ ಪಂಚಾಯತ ಸದಸ್ಯರಾದ ಗಣಪತಿ ಅಣ್ಣಪ್ಪ ಹೆಗಡೆ ತ್ಯಾಗಲಿ, ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ಮುಖ್ಯಸ್ಥರಾದ ಎಂ ಎಂ ಹೆಗಡೆ ಹಂಗಾರಖAಡ , ಪ್ರಭಾಕರ ಗಣೇಶ ಹೆಗಡೆ ಸೂರನ್ , ಅಗ್ರಗಣ್ಯ ರೈತ ಒಕ್ಕೂಟ ನಾಣಿಕಟ್ಟಾದ ಉಪಾಧ್ಯಕ್ಷರಾದ ಸಚ್ಚಿದಾನಂದ ಜಿ ಹೆಗಡೆ ಬೆಳಗದ್ದೆ, ಹಿಂದೂ ಮುಖಂಡ ಹರೀಶ್ ಆರ್ ನಾಯ್ಕ ಹಂಗಾರಖAಡ, ಮಂಜುನಾಥ ಎಂ ಗೌಡ ನಾಣಿಕಟ್ಟ, ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖ್ಯಸ್ಥರು, ಅನೇಕ ವಿದ್ವಾಂಸರು,ಹಿರಿಯ ವೈದಿಕರು, ಗಣ್ಯಮಹನೀಯರು,ಮಾತೆಯರು ಐನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನಾನಾ ಕಡೆಗಳಿಂದ ಆಗಮಿಸಿದ ಕಲಾಪ್ರೇಮಿಗಳು ಉಪಸ್ಥಿತರಿದ್ದು ಯಶಸ್ವಿ ಸಮಾರಂಭಕ್ಕೆ ಸಾಕ್ಷಿಯಾದರು.

ಪ್ರಾರಂಭದಲ್ಲಿ ಗಣಪತಿ ಸ್ತುತಿ ಸ್ವಾಗತ ಪದ್ಯವನ್ನು ಶ್ರೀಮತಿ ವಾಣಿ ರವೀಂದ್ರ ಹೆಗಡೆ ಮತ್ತು ಕುಮಾರಿ ಅರ್ಚನಾ ರವೀಂದ್ರ ಹೆಗಡೆ ಸುಂದರವಾಗಿ ಹಾಡಿದರೇ ಪ್ರಸ್ತಾವಿಕ &ಸ್ವಾಗತ ಭಾಷಣವನ್ನು ಸಮಾರಂಭದ ಸಂಘಟಕರಾದ ನಟರಾಜ ಎಂ ಹೆಗಡೆ ಹಂಗಾರಖAಡ , ಸಮಿತಿಯ ಕ್ರಿಯಾಶೀಲ ಕಾರ್ಯಕರ್ತರು ತ್ಯಾಗಲಿ ಸೊಸೈಟಿಯ ನಿರ್ದೇಶಕರಾದ ನಾಗರಾಜ ರಾಮ ನಾಯ್ಕ ಹಂಗಾರಖAಡ ಅವರು ವಂದಿಸಿದರು, ಸಮಿತಿಯ ಕ್ರಿಯಾಶೀಲ ಕಾರ್ಯದರ್ಶಿ ರಮೇಶ್ ಟಿ ನಾಯ್ಕ ಹಂಗಾರಖAಡ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು.. .

About The Author

error: Content is protected !!