October 4, 2025

ಬಾಕಡಕೇರಿ ಬಸ್ತಿಕಾಯ್ಕಿಣಿ ಭಟ್ಕಳದಲ್ಲಿ ಶಾರದೋತ್ಸವ ಸಂಭ್ರಮ

ಭಟ್ಕಳ : ಶ್ರೀ ಶಾರದೋತ್ಸವ ಸೇವಾ ಸಮಿತಿ, ಬಾಕಡಕೇರಿ ಬಸ್ತಿ ಕಾಯ್ಕಿಣಿ ವತಿಯಿಂದ ತೃತೀಯ ವರ್ಷದ ಶಾರದೋತ್ಸವ ಅದ್ದೂರಿಯಾಗಿ ನಡೆಯಿತು. ಬೆಳಿಗ್ಗೆ ದೇವಿಕಾನ ದೇವಸ್ಥಾನದಿಂದ ಶಾರದಾ ಮೂರ್ತಿಯನ್ನು ಚಂಡಿ ವಾದ್ಯದ ಘೋಷದಲ್ಲಿ ಮಹಿಳೆಯರು ಕಲಶ ಹಿಡಿದು ಮೆರವಣಿಗೆಯ ಮೂಲಕ ತರಿಸಲಾಯಿತು. ಬಳಿಕ ಮಹಾಪೂಜೆ, ಮಂಗಳಾರತಿ ನಡೆದು ಭಕ್ತಾದಿಗಳಿಗೆ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ ವಿಸರ್ಜನಾ ಪೂಜೆ ನೆರವೇರಿದ ನಂತರ ಫಲಾವಳಿ ವಸ್ತುಗಳನ್ನು ಏಲಂ ಮಾಡಲಾಯಿತು. ನಂತರ ಯುವಕರು ಚಂಡೆ ವಾದ್ಯಕ್ಕೆ ತಾಳ ಹಿಡಿದು ನಲಿದರು. ಮಹಿಳೆಯರ ಭವ್ಯ ಮೆರವಣಿಗೆಯೊಂದಿಗೆ ಶಾರದಾ ಮೂರ್ತಿಯನ್ನು ದೇವಿಕಾನ ಹೊಳೆಯಲ್ಲಿ ವಿಸರ್ಜಿಸಲಾಯಿತು.

ಈ ಬಾರಿಯ ಮೂರ್ತಿಯನ್ನು ಶ್ರೀ ಲೊಕೇಶ ಮಾದೇವ ಬಾಕಡ ದಾನಿಯಾಗಿ ನೀಡಿದ್ದರು. ನಸುಕು ಶ್ರೀಮ್ ಕ್ಯಾಚ್ ಸದಸ್ಯರಾದ ದೇವೇಂದ್ರ, ತುಳಸಿದಾಸ, ತಿರುಮಲ ಅನ್ನದಾನ ಸೇವೆಯಲ್ಲಿ ತೊಡಗಿಕೊಂಡಿದ್ದರು. ಉತ್ಸವವನ್ನು ಯಶಸ್ವಿಗೊಳಿಸಲು ಅಧ್ಯಕ್ಷರು, ಸದಸ್ಯರು ಹಾಗೂ ಊರಿನ ಜನ ಸಮಿತಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

About The Author

error: Content is protected !!