October 5, 2025

ಭಟ್ಕಳ ಗ್ರಾಮೀಣ ಠಾಣೆ ಮುಂದಾಳತ್ವ ಪ್ರತಿ ದೇವಸ್ಥಾನಕ್ಕೆ ಸಿಸಿ ಕ್ಯಾಮರಾ

ಭಟ್ಕಳ: ದೇವಸ್ಥಾನಗಳಲ್ಲಿ ಹುಂಡಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಪ್ರತಿ ದೇವಸ್ಥಾನಕ್ಕೆ ಸಿಸಿ ಕ್ಯಾಮೆರಾ ಯೋಜನೆಗೆ ಚಾಲನೆ ನೀಡಿದೆ.

ಗ್ರಾಮೀಣ ಠಾಣಾ ಆವರಣದಲ್ಲಿ ನಡೆದ ಸಭೆಯಲ್ಲಿ ಸೂಡಿಗದ್ದೆ, ದುರ್ಗಾ ಪರಮೇಶ್ವರಿ, ಕಂಚಿನ ದುರ್ಗಾ ಪರಮೇಶ್ವರಿ, ಶೇಡಬರಿ ಸೇರಿದಂತೆ ವ್ಯಾಪ್ತಿಯ ಹಲವಾರು ದೇವಸ್ಥಾನಗಳ ಸಮಿತಿ ಸದಸ್ಯರು ಭಾಗವಹಿಸಿದರು.

ಸಭೆಯಲ್ಲಿ ಮಾತನಾಡಿದ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಅವರು, ದೇವಸ್ಥಾನಗಳಲ್ಲಿ ಸಿಸಿ ಕ್ಯಾಮೆರಾ ಕೊರತೆಯಿಂದಾಗಿ ಕಳ್ಳತನ, ದರೋಡೆ ಪ್ರಕರಣಗಳ ಪತ್ತೆಗೆ ಅಡಚಣೆ ಉಂಟಾಗುತ್ತಿದೆ. ಪ್ರತಿಯೊಂದು ದೇವಸ್ಥಾನದಲ್ಲೂ ಸಿಸಿ ಕ್ಯಾಮೆರಾ ಅಳವಡಿಸಿದರೆ ಭದ್ರತೆ ಗಟ್ಟಿಗೊಳ್ಳುವುದರ ಜೊತೆಗೆ ಹುಂಡಿ ಕಳ್ಳತನ ತಡೆಗಟ್ಟಲು ಸಹಾಯಕವಾಗುತ್ತದೆ ಎಂದರು.

ಪೊಲೀಸರ ಈ ಪ್ರಯತ್ನವನ್ನು ದೇವಸ್ಥಾನ ಸಮಿತಿಯ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.ಸಭೆಯಲ್ಲಿ ಪಿಎಸೈಗಳು ರನ್‌ಗೌಡ ಮತ್ತು ಭರಮಪ್ಪ ಬೆಳಗಳಿ ಉಪಸ್ಥಿತರಿದ್ದರು.

About The Author

error: Content is protected !!