October 4, 2025

ತಾರಾ ಭಟ್ ತಂಡಗಳಿ0ದ ನಿತ್ಯ ನವರಾತ್ರಿ ಭಜನೆ ಸೇವೆ

ಹೊನ್ನಾವರದ 66 ಗೃಹಿಣಿಯರು ಒಟ್ಟಾಗಿ 6 ಭಜನಾ ತಂಡವನ್ನು ಶ್ರೀಮತಿ ತಾರಾ ಭಟ್ ಇವರ ಮಾರ್ಗದರ್ಶನದಲ್ಲಿ ರಚಿಸಿಕೊಂಡಿದ್ದು ಪ್ರಥಮ ನವರಾತ್ರಿಯಿಂದ ಹುಣ್ಣಿಮೆಯವರೆಗೆ ನಿತ್ಯ ವಿವಿಧ ದೇವಸ್ಥಾನಗಳಲ್ಲಿ ಭಜನಾ ಕಾರ್ಯಕ್ರಮ ನಿಗದಿಯಾಗಿದೆ. ವಿವಿಧ ಸಮಾಜದ ಗೃಹಿಣಿಯರು ಈ ಭಜನಾ ಮಂಡಳಿಗಳಲ್ಲಿ ನಿಸ್ವಾರ್ಥವಾಗಿ ದೇವರ ಭಜನಾ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಹಿಮ್ಮೇಳ ಮತ್ತು ವಾಹನದ ವೆಚ್ಚದ ಹೊರತಾಗಿ ಸದಸ್ಯರು ಪ್ರಸಾದದ ಹೊರತಾಗಿ ಇನ್ನೇನನ್ನೂ ಸ್ವೀಕರಿಸುವುದಿಲ್ಲ.

ತಾಲೂಕಿನ ಮಹಾಕಾಳಮ್ಮ, ಕರಿಕಾನಮ್ಮ, ಆದಿಶಕ್ತಿ, ಶಾಂತಾದುರ್ಗಾ ಮತ್ತು ಭಟ್ಕಳದ ಕಡವಿನಕಟ್ಟ ದುರ್ಗಾಪರಮೇಶ್ವರಿ, ಕುಮಟಾದ ಶಾಂತೇರಿ ಕಾಮಾಕ್ಷಿ ಸಹಿತ 25 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ.. ವಿದ್ಯಾ ಭಟ್ಟ್ ಭಟ್ಕಳ, ವೀಣಾ, ಅನಸೂಯಾ, ನಮಿತಾ, ಮಧುಮತಿ ಪೂಜಾರಿ, ಸುಕನ್ಯಾ, ಶಿಲ್ಪಾ, ಪ್ರೇರಣಾ, ನಿಧಿ, ಛಾಯಾ, ಸೀಮಾ, ಜ್ಯೋತಿ ಮೊದಲಾದ ಗೃಹಿಣಿಯರು ತಮ್ಮ ಪರಿಚಿತರೊಂದಿಗೆ ನಿದಿತ ಸಮಯಕ್ಕೆ ಹಾಜರಾಗಿ ಕಾರ್ಯಕ್ರಮ ನೀಡುತ್ತಿದ್ದಾರೆ. ಪ್ರಕಾಶ ಹೆಗಡೆ ತಬಲಾ ಸಾಥ್ ನೀಡುತ್ತಾರೆ. ದೇವಾಲಯ ಸಮಿತಿಯವರು ಪೂರ್ವ ನಿಗದಿತವಾಗಿ ಕಾರ್ಯಕ್ರಮ ನಿಶ್ಚಯಿಸಿಕೊಂಡು ಇವರನ್ನು ಆಮಂತ್ರಿಸಿ ಕೊನೆಯಲ್ಲಿ ಪ್ರಸಾದ ನೀಡಿ ಬೀಳ್ಕೊಡುತ್ತಾರೆ. 

ನಮ್ಮ ಬದುಕಿನ ಚೈತನ್ಯಕ್ಕೆ ಭಜನೆ ಕಾರಣವಾಗಿದ್ದು ದೇವಾಲಯದಲ್ಲಿ ಭಜನೆಯನ್ನು ಕೇಳಿದವರು ನಾವು ಧನ್ಯತಾಭಾವ ಅನುಭವಿಸಿದ್ದೇವೆ ಎಂದು ಸಂತೋಷದಿAದ ಹೇಳುತ್ತಾರೆ. ಇದೇ ನಮ್ಮ ಮಂಡಳಿಗೆ ಶಕ್ತಿ ಎಂದು ಸಂಯೋಜಕಿ ತಾರಾ ಭಟ್ ಹೇಳುತ್ತಿದ್ದಾರೆ. ಮಧ್ಯ ವಯಸ್ಸಿನ ಗೃಹಿಣಿಯರು ಈ ಭಜನಾ ಸೇವೆಯಲ್ಲಿ ತೊಡಗಿಕೊಂಡಿದ್ದು ದೇವಾಲಯಗಳ ಹಾಗೂ ಭಕ್ತರ ಗಮನ ಸೆಳೆದಿದೆ. ಗಣೇಶ ಚೌತಿ, ಶ್ರಾವಣ, ನವರಾತ್ರಿ, ಕಾರ್ತಿಕ ಮಾಸದಲ್ಲಿ ಈ ತಂಡಗಳು ತಾಲೂಕು ಹಾಗೂ ನೆರೆ ತಾಲೂಕುಗಳ ವಿವಿಧ ದೇವಾಲಯದಲ್ಲಿ ನಿರಂತರ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.
ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!