
94ಸಿ, ಕುಮ್ಕಿ, ಬಗರ್ ಹುಕುಂ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಶೀಘ್ರ ಇನ್ನೊಂದು ಹೋರಾಟದ ಎಚ್ಚರಿಕೆ ನೀಡಿದ ಶಾಸಕ ಗುರುರಾಜ್ ಗಂಟಿಹೊಳೆ
ಬೈAದೂರು: ಬೈಂದೂರು ಪಟ್ಟಣ ಪಂಚಾಯತಿ ಅವೈಜ್ಞಾನಿಕತೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿ ಬೈಂದೂರು ಮಂಡಲ ಬಿಜೆಪಿ ವತಿಯಿಂದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ನೇತೃತ್ವದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಉಪ್ಪುಂದ ಶಾಸಕರ ಕಚೇರಿಯಿಂದ ಹೊರಟ ಬೈಕ್ ಜಾಥವು ಬೈಂದೂರಿನ ಸೇನೇಶ್ವರ ದೇವಸ್ಥಾನದ ಪರಿಸರದಲ್ಲಿ ಸೇರಿ ಅಲ್ಲಿಂದ ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ರೈತರು ಒಟ್ಟಾಗಿ ಕಾಲ್ನಡಿಗೆ ಮೂಲಕ ತಾಲೂಕು ಕಚೇರಿಗೆ ಸಾಗಿ, ಅವೈಜ್ಞಾನಿಕ ಪಟ್ಟಣ ಪಂಚಾಯಿತಿಯ ವ್ಯವಸ್ಥೆಗಳ ಬಗ್ಗೆಘೋಷಣೆಯನ್ನು ಕೂಗಿ ಪಟ್ಟಣ ಪಂಚಾಯತಿ ಅವೈಜ್ಞಾನಿಕತೆಯನ್ನು ತಕ್ಷಣವೇ ಸರಿಪಡಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಮಾತನಾಡಿ, ಪಟ್ಟಣ ಪಂಚಾಯತಿ ಅವೈಜ್ಞಾನಿಕತೆ ರದ್ದುಪಡಿಸುವಂತೆ ಆಗ್ರಹಿಸಿ ಹಿಂದಿನಿAತೂ ಒತ್ತಡ ಹೇರುತ್ತಲೇ ಬಂದಿದ್ದೇವೆ. ಪಟ್ಟಣ ಪಂಚಾಯತಿ ವ್ಯಾಪ್ತಿಯ ಗ್ರಾಮೀಣ ಭಾಗದ ರೈತರು ಸಹಿತ ಎಲ್ಲರಿಗೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಅವೈಜ್ಞಾನಿಕತೆಯನ್ನು ಕೂಡಲೇ ರದ್ದು ಮಾಡಬೇಕು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಜನರ ಸಮಸ್ಯೆ, ರೈತರ ಸಮಸ್ಯೆ ಬಗೆಹರಿಯಬೇಕು ಎಂದರು.

ಮುAದಿನ ದಿನಗಳಲ್ಲಿ ಕ್ಷೇತ್ರದ 94ಸಿ, ಕುಮ್ಕಿ ಹಾಗೂ ಬಗರ್ ಹುಕುಂ ಸಮಸ್ಯೆಯ ವಿರುದ್ಧವೂ ಇನ್ನಷ್ಟು ಹೋರಾಟ ನಡೆಸಲಿದ್ದೇವೆ. ಕಾನೂನಾತ್ಮಕವಾಗಿ ಯಾವ ರೀತಿಯ ಪರಿಹಾರ ಕಂಡುಕೊಳ್ಳಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆಸುತ್ತಿದ್ದೇವೆ ಎಂದರು . ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ. ಮಾತನಾಡಿ , ಬಿಜೆಪಿ ಜನಪರ, ರೈತರ ಪರವಾಗಿ ಸದಾ ಇರುತ್ತದೆ. ಪಟ್ಟಣ ಪಂಚಾಯತಿ ಅವೈಜ್ಞಾನಿಕತೆ ರದ್ದತಿ ಸಂಬAಧ ನಮ್ಮ ನಿಲುವು ಹೋರಾಟ ಮೂಲಕ ಪ್ರಕಟಿಸಿದ್ದೇವೆ. ಕಾಂಗ್ರೆಸ್ ನಿಲುವು ಏನು ಎಂದು ಪ್ರಶ್ನಿಸಿದರು.
ತಾಲೂಕು ಆಡಳಿತ ಸೌಧದಲ್ಲಿ ಬೈಂದೂರು ತಹಶೀಲ್ದಾರ ಎಸ್.ರಾಮಚಂದ್ರಪ್ಪ ರವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂದರ್ಭದಲ್ಲಿ ಹಿರಿಯ ಕುಮ್ಮಿ ಹೋರಾಟಗಾರ ಎಮ್.ಪಿ ಸತ್ಯನಾರಾಯಣ ಭಟ್, ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ, ಪ್ರಮುಖರಾದ ಕೆ.ಶಿವರಾಜ ಪೂಜಾರಿ, ಗೋಪಾಲ ಪೂಜಾರಿ ವಸ್ತ್ರ, ಬೈಂದೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗಜೇಂದ್ರ ಬೇಲೆಮನೆ, ಜೈಸನ್ ಮದ್ದೋಡಿ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು. ರೈತಮೋರ್ಚದ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿಗಳಾದ ಕರಣ್ ಪೂಜಾರಿ ವಂದಿಸಿದರು.
ವರದಿ : ಸುಶಾಂತ ಆಚಾರ್, ಬೈಂದೂರು.91136 74698
More Stories
ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ.ಇವರ UK PEARL MART ಆಭರಣ ಮಳಿಗೆಯ ಉದ್ಘಾಟನಾ ಸಮಾರಂಭದ ಪೋಸ್ಟರ್ ಬಿಡುಗಡೆ
ಕಾರ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ
ಕಾರ್ಕಳದಲ್ಲಿ ಶಾಶ್ವತ ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯವಾದ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್