October 7, 2025

ಹೆಲ್ಮೆಟ್ ಧರಿಸಿ ಜೀವ ಕಾಪಾಡಿ! ಬೈಕ್ ರ‍್ಯಾಲಿ ಮೂಲಕ ಜಾಗೃತಿ ಮೂಡಿಸಿದ ಭಟ್ಕಳ ಪೋಲಿಸ್ ಅಧಿಕಾರಿಗಳು

ಭಟ್ಕಳ: ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ನಗರ ಹಾಗೂ ಗ್ರಾಮೀಣ ಪೋಲೀಸ್ ಠಾಣೆಗಳ ವತಿಯಿಂದ ಹೆಲ್ಮೆಟ್ ಜಾಗೃತಿ ರ‍್ಯಾಲಿ ಮತ್ತು ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ಚಾಲನೆ ನೀಡಿದರು.

ಪ್ರತಿವರ್ಷ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇರುವ ಹಿನ್ನಲೆ ಪ್ರತಿಯೊಬ್ಬರೂ ತಮ್ಮ ಜೀವದ ಮೌಲ್ಯ ತಿಳಿದುಕೊಂಡು ಹೆಲ್ಮೆಟ್ ಧರಿಸಬೇಕು ಎಂದು ಅವರು ಕರೆ ನೀಡಿದರು. ಪೊಲೀಸರು ಹಿಡಿದು ದಂಡ ವಿಧಿಸುವುದಕ್ಕಿಂತ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ನಿಯಮ ಪಾಲನೆ ಮಾಡಿದರೆ ಸಮಾಜ ಸುರಕ್ಷಿತವಾಗುತ್ತದೆ. ಮನೆಯಲ್ಲಿ ಹೋದ ಯಾರಾದರೂ ಹೆಲ್ಮೆಟ್ ಇಲ್ಲದೆ ವಾಹನ ಓಡಿಸಿದರೆ ಎಚ್ಚರಿಸುವುದು ಯುವಕರ ಕರ್ತವ್ಯ ಎಂದು ಅವರು ಹೇಳಿದರು.
ಡಿವೈಎಸ್ಪಿ ಮಹೇಶ್ ಎಂ.ಕೆ ಮಾತನಾಡಿ, ಹೆಲ್ಮೆಟ್ ಧರಿಸದವರನ್ನು ಹಿಡಿದು ದಂಡ ಹಾಕುವುದು ಪೊಲೀಸರ ಉದ್ದೇಶವಲ್ಲ. ಜನರ ಅಮೂಲ್ಯ ಜೀವ ಉಳಿಯಲಿ ಎಂಬುದೇ ನಮ್ಮ ಆಶಯ. ಅಪ್ರಾಪ್ತರಿಗೆ ವಾಹನ ಕೊಡುವ ಪಾಲಕರಿಗೂ ದಂಡ ವಿಧಿಸಲಾಗುವುದು” ಎಂದು ಸ್ಪಷ್ಟಪಡಿಸಿದರು.
ನಗರ ಠಾಣೆ ಸಿಪಿಐ ದಿವಾಕರ ಹೇಳಿದರು: ಅಪಘಾತವಾದಾಗ ಕೈ ಕಾಲುಗಳಿಗೆ ಗಾಯವಾದರೂ ಉಳಿಯುವ ಸಾಧ್ಯತೆ ಇದೆ, ಆದರೆ ತಲೆಗೆ ಪೆಟ್ಟು ಬಿದ್ದರೆ ಜೀವ ಉಳಿಯುವುದು ಕಷ್ಟ. ಆದ್ದರಿಂದ ಹೆಲ್ಮೆಟ್ ಜೀವದ ಕವಚ.
ಗ್ರಾಮಿ?ಣ ಠಾಣೆ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಹೇಳಿದರು: ದ್ವಿಚಕ್ರ ವಾಹನಗಳ ಅಪಘಾತಗಳಲ್ಲಿ ಹೆಚ್ಚಿನವರು ಹೆಲ್ಮೆಟ್ ಇಲ್ಲದೆ ಸಾವನ್ನಪ್ಪಿರುವುದು ಕಂಡುಬAದಿದೆ. ನಿಮ್ಮ ಮನೆಯವರಿಗಾಗಿ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ.
ನಂತರ ಅಧಿಕಾರಿಗಳು ನಗರದ ವಿವಿಧ ಬೀದಿಗಳಲ್ಲಿ ಬೈಕ್ ರ‍್ಯಾಲಿ ನಡೆಸಿ ಪ್ರಯಾಣಿಕರಿಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಪಿಎಸೈಗಳಾದ ನವೀನ್ ನಾಯ್ಕ, ತಿಮ್ಮಪ್ಪ ಮೊಗೇರ್, ರನ ಗೌಡ, ಭರಮಪ್ಪ ಬೆಳಗಲಿ ಮತ್ತಿತರರು ಉಪಸ್ಥಿತರಿದ್ದರು.

About The Author

error: Content is protected !!