October 7, 2025

ವಿ.ಸೀತಾರಾಮಯ್ಯ ಒಂದು ಪಟ್ಟಾಂಗ ಎನ್ನುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ

ಹೊನ್ನಾವರ: ಎಸ್.ಡಿ.ಎಂ.ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಅ. 9 ಮತ್ತು 10 ರಂದು ವಿ.ಸೀತಾರಾಮಯ್ಯ ಒಂದು ಪಟ್ಟಾಂಗ ಎನ್ನುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಡಿ.ಎಲ್. ಹೆಬ್ಬಾರ್ ಮಾಹಿತಿ ನೀಡಿದರು.
ಎಸ್.ಡಿ.ಎಂ. ಕಾಲೇಜಿನ ಆವರಣದಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಎಂ.ಪಿ.ಇ ಸೊಸೈಟಿಯ ಎಸ್.ಡಿ.ಎಂ.ಪದವಿ ಕಾಲೇಜು ಕನ್ನಡ ಸಂಘ ,ಐಕ್ಯೂಎಸಿ ಹಾಗೂ ಅಭಿನವ ಬೆಂಗಳೂರು, ವಿ.ಸೀ.ಸಂಪದ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜೀವ ಕಾರುಣ್ಯ ಪರಂಪರೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ವಿ.ಸೀ ಅವರ ಗ್ರಂಥಾಲಯ ಅನಾವರಣ ಮತ್ತು ಕೃತಿ ಲೋಕಾರ್ಪಣೆಯನ್ನು ಚಿಂತಕರಾದ ಡಾ.ನರಹರಿ ಬಾಲಸುಬ್ರಹ್ಮಣ್ಯ ಇವರು ನೆರವೇರಿಸುವರು. ಎಂ.ಪಿ.ಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ, ಕಾಲೇಜಿನ ಪ್ರಾಚಾರ್ಯ ಡಾ. ಡಿ.ಎಲ್. ಹೆಬ್ಬಾರ್, ಡಾ.ನರಸಿಂಹ ಪಂಡಿತ್ , ನಾಗರಾಜ್ ಹೆಗಡೆ ಅಪಗಾಲ, ಅಭಿನವ ಬೆಂಗಳೂರು ಇದರ ನ.ರವಿಕುಮಾರ್, ಎಂ.ವಿ.ವೆAಕಟೇಶ್ ಮೂರ್ತಿ, ವಿ.ಸೀ.ಸಂಪದ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


ವಿ.ಸೀ.ಅವರ ಜೀವನ ಒಡನಾಟ ಮತ್ತು ನೆನಪು, ಜೀವಕಾರುಣ್ಯ ಪರಂಪರೆ ಮತ್ತು ವಿ.ಸೀ, ಇದರ ಕುರಿತು ನಾಡಿನ ಸಾಹಿತಿಗಳು ಮಾತನಾಡಲಿದ್ದಾರೆ. ಕನ್ನಡ ಕಾವ್ಯ ಗಾಯನಗಳು ಹೆಸರಾಂತ ಕಲಾವಿದರುಗಳಿಂದ ಮತ್ತು ಸಾಹಿತಿಗಳಿಂದ ನೆರವೇರಲಿದೆ.


ರಾಷ್ಟ್ರೀಯ ವಿಚಾರ ಸಂಕಿರಣದ ಎರಡನೇ ದಿನ ವಿವಿಧ ಸಾಹಿತಿಗಳಿಂದ ವಿ.ಸೀ ಅವರ ಬದುಕು ಬರಹ , ವ್ಯಕ್ತಿತ್ವ , ವಿ.ಸೀ ಕಂಡ ಸಮಾಜದ ಆಶಯ ಮೊದಲಾದ ವಿಷಯಗಳು ಮಂಡನೆ ಆಗಲಿದೆ. ಗೋಪಾಲಕೃಷ್ಣ ಅಡಿಗ , ವಿ.ಸೀ ಅವರ ಕಾವ್ಯ ಗಾಯನ, ಮೊದಲಾದ ಕವಿಗಳ ಕಾವ್ಯ ಗಾಯನ ನಾಡಿನ ಖ್ಯಾತ ಸಂಗೀತ ಕಲಾವಿದರುಗಳಿಂದ ಜರುಗಲಿದೆ. ನಾಗರಾಜ ಹೆಗಡೆ ಅಪಗಾಲ್ ಇವರ “ಗತಿಚಿತ್ರ” , ಡಾ.ಸುರೇಶ್ ತಾಂಡೇಲ್ ಇವರ “ಹೊನ್ನಾವರ ಒಂದು ಸ್ಥೂಲ ನೋಟ” ಸೆಮಿನಾರ್ ನಲ್ಲಿ ಮಂಡನೆಯಾದ ವಿಷಯಗಳನ್ನು ಪುಸ್ತಕರೂಪದಲ್ಲಿ ತೋರಿಸುವ “ಜೀವಕಾರುಣ್ಯ ಪರಂಪರೆ ಮತ್ತು ವಿ.ಸೀ” ಈ ಮೂರು ಪುಸ್ತಕಗಳು ಬಿಡುಗಡೆಯಾಗಲಿದೆ.


ಪತ್ರಿಕಾಗೊಷ್ಠಿಯಲ್ಲಿ ಕಾಲೇಜಿನ ಉಪಪ್ರಾಚಾರ್ಯ ಡಾ.ಜಿ.ಎನ್.ಭಟ್, ಐಕ್ಯೂಎಸಿ ಕೋ-ಆರ್ಡಿನೇಟರ್ ಡಾ.ಸುರೇಶ್ ಎಸ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ.ಎಂ.ಜಿ.ಹೆಗಡೆ, ಕನ್ನಡ ವಿಭಾಗದ ಮುಖ್ಯಸ್ಥರಾದ ನಾಗರಾಜ ಹೆಗಡೆ ಅಪಗಾಲ, ಉಪನ್ಯಾಸಕ ಪ್ರಶಾಂತ ಹೆಗಡೆ ಮೂಡಲಮನೆ, ಉಪನ್ಯಾಸಕರಾದ ವಿದ್ಯಾಧರ ಕಡತೋಕ, ಮಂಜುನಾಥ ಭಂಡಾರಿ ಮತ್ತಿತರಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!