October 7, 2025

ಚತುಷ್ಪದ ಹೆದ್ದಾರಿಯ ಅವ್ಯವಸ್ಥೆಯನ್ನು ಸರಿಪಡಿಸಲು ಒತ್ತಾಯಿಸಿ ಪ್ರೊಜೆಕ್ಟ್ ಡೈರೆಕ್ಟರ್ ಶಿವಕುಮಾರ ಅವರನ್ನು ಭೇಟಿ

ಹೊನ್ನಾವರ : ಪಟ್ಟಣದ ಚತುಷ್ಪದ ಹೆದ್ದಾರಿಯ ಅವ್ಯವಸ್ಥೆಯನ್ನು ಸರಿಪಡಿಸಲು ಒತ್ತಾಯಿಸಿ ಹೊನ್ನಾವರ ಪಟ್ಟಣ ಮೇಲುಸೇತುವೆ ಹೋರಾಟ ಸಮಿತಿ ಪದಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರೊಜೆಕ್ಟ್ ಡೈರೆಕ್ಟರ್ ಶಿವಕುಮಾರ ಅವರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸಿದರು.

ಪಟ್ಟಣದಲ್ಲಿ ಹಾದುಹೋದ ಹೆದ್ದಾರಿ ಅಸಮರ್ಪಕ, ವಿಳಂಭ, ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರು ತೀವೃ ಸಂಕಷ್ಟಕ್ಕೆ ಒಳಗಾಗಿದ್ದು. ತಕ್ಷಣ ಅದನ್ನು ಸರಿಪಡಿಸಬೇಕು, ಕಾಮಗಾರಿ ಪೂರ್ಣಗೊಳಿಸಬೇಕು. ತಪ್ಪಿದ್ದಲ್ಲಿ ಸಾರ್ವಜನಿಕ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

2016 ರಿಂದ ಹೆದ್ದಾರಿ ಪ್ರಾಧಿಕಾರವು ಕಾಮಗಾರಿ ಆರಂಭಿಸಿದ ದಿನದಿಂದ ಮೇಲು ಸೇತುವೆ ಬೇಕೆಂದು ಸಾರ್ವಜನಿಕರು ಪಟ್ಟಣದಲ್ಲಿ ಒತ್ತಾಯಿಸಿ ಹೋರಾಟವನ್ನು ನಡೆಸಿದ್ದರು. ಮೇಲುಸೇತುವೆಗಾಗಿ ಭೂಮಿಯ ಧಾರಣಾ ಸಾಮರ್ಥ್ಯವನ್ನು ಕೂಡ ಗುತ್ತಿಗೆ ಕಂಪನಿ ಪರಿಶಿಲಿಸಿತ್ತು. ಅದಕ್ಕಾಗಿಯೇ ಹೆಚ್ಚುವರಿ 40 ಮೀ. ಭೂಮಿಯನ್ನು ಕೂಡ ವಶಪಡಿಸಿಕೊಂಡು ನಂತರ ವಿನಾಃ ಕಾರಣ 40 ಮೀ. ಸ್ವಾಧಿನಗೊಂಡ ಭೂಮಿಯನ್ನು 30 ಮೀ. ಕಡಿತಗೊಳಿಸಿ ಮೇಲುಸೇತುವೆ ಮತ್ತು ಸರ್ವಿಸ್ ರಸ್ತೆಯನ್ನು ಯೋಜನೆಯಿಂದ ಕೈಬಿಟ್ಟಿತ್ತು.

ಈ ಹಿನ್ನಲೆಯಲ್ಲಿ ಮೇಲುಸೇತುವೆ ಹೋರಾಟ ಸಮಿತಿ ಸತತ ಹೋರಾಟ ನಡೆಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಗಮನಕ್ಕೂ ತರಲಾಗಿತ್ತು. ಸಂಸದರು ಸ್ವತಃ ಸ್ಥಳಕ್ಕೆ ಭೇಟಿನೀಡಿ, ಅಧಿಕಾರಿಗಳೊಂದಿಗೆ ಮತ್ತು ಹೋರಾಟಗಾರೊಂದಿಗೆ ಚರ್ಚಿಸಿದ್ದರು. ಸಾರ್ವಜನಿಕರಿಗೆ, ವಾಹನ ಸವಾರರಿಗೆ ತಾತ್ಕಾಲಿಕವಾಗಿ ಅನುಕೂಲವಾಗಲು ರಸ್ತೆಯ ಕಾಮಗಾರಿಗೆ ಸಹಕರಿಸಲು ಸಾರ್ವಜನಿಕರನ್ನು, ಹೋರಾಟಗಾರರನ್ನು ವಿನಂತಿಸಿಕೊAಡಿದ್ದರು. ಮುಂದಿನ ದಿನದಲ್ಲಿ ಮೇಲುಸೇತುವೆಗಾಗಿ ಹೊಸಯೋಜನೆ ರೂಪಿಸುವ ಷರತ್ತಿನೊಂದಿಗೆ ಗುತ್ತಿಗೆದಾರರಿಗೆ ರಸ್ತೆ ಮಾಡಲು ಆತಂಕಮಾಡದAತೆ ಸಾರ್ವಜನಿಕರಲ್ಲಿ ಕೋರಿದ್ದರು.

ಸಂಸದರ ಎದುರು ಆಶ್ವಾಸನೇ ನೀಡಿ ಹಲವು ತಿಂಗಳಾದರೂ ಹೆದ್ದಾರಿ ಗುತ್ತಗೆ ಕಂಪನಿ ಕ್ಯಾರೇ ಮಾಡದೇ ರಸ್ತೆ ಕಾಮಗಾರಿ ವಿಳಂಭಿಸಿದ್ದರಿAದ, ನಿತ್ಯವು ಉಂಟಾಗುತ್ತಿದ್ದ ವಾಹನ ದಟ್ಟಣೆ, ಟ್ರಾಪಿಕ್ ಜಾಮ್ ಅಪಘಾತವನ್ನು ಪರಿಗಣಿಸಿ ಮೇಲುಸೇತುವೆ ಹೋರಾಟ ಸಮಿತಿ ಪದಾಧಿಕಾರಿಗಳು ಹೆದ್ದಾರಿ ಪ್ರಧಿಕಾರದ ಅಧಿಕಾರಿಯನ್ನು ಭೇಟಿಯಾಗಿ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿದರು. ತಪ್ಪಿದರೆ ಸಾರ್ವಜನಿಕ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

 ಮನವಿ ಸ್ವೀಕರಿಸಿ ಪ್ರತಿಕ್ರಯಿಸಿದ ಎನ್.ಹೆಚ್.ಎ.ಐ ಅಧಿಕಾರಿ ಶೀಘೃವಾಗಿ ರಸ್ತೆ ಅಭಿವೃದ್ಧಿಗೆ ಇರುವ ಆತಂಕವನ್ನು ನಿವಾರಿಸಲಾಗುತ್ತದೆ. ಗುತ್ತಿಗೆ ಕಂಪನಿಗೆ ಪುನಃ ನೋಟಿಸ್ ನೀಡಿ ನಿಗಧಿತ ಅವಧಿಯಲ್ಲಿ ಕೆಲಸ ಮುಗಿಸಲು ಎಚ್ಚರಿಕೆ ನೀಡಲಾಗುತ್ತದೆ. ಹೆದ್ದಾರಿಗೆ ಮೇಲುಸೇತುವೆ ಅವಶ್ಯ ಎನ್ನುವ ಅರಿವು ಇದ್ದು, ಅದಕ್ಕೆ ಸಮಯಾವಕಾಶ ಬೇಕು, ಭೂಮಿಯನ್ನು ವಶಪಡಿಸಿಕೊಂಡು ಪರಿಹಾರ ನೀಡಿದ ನಂತರ ಮೇಲುಸೇತುವೆ ಕಾಮಗಾರಿ ನಡೆಯಲಿದೆ. ಈ ಕುರಿತು ಪ್ರಸ್ಥಾವನೇ ಮೇಲಾಧಿಕಾರಿಗಳಿಗೆ ರವಾನಿಸಲಾಗಿದೆ ಎಂದರು.

ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!