November 19, 2025

ರೈತ ಸಂಘ ಬೈಂದೂರು ನೇತ್ರತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಸಚಿವ ಮಂಕಾಳ ಎಸ್ ವೈದ್ಯ ಬೇಟಿ.

ಬೈಂದೂರು : ಈಗಿರುವ ಪಟ್ಟಣ ಪಂಚಾಯತಿನಿAದ ಗ್ರಾಮೀಣ ಪ್ರದೇಶಗಳನ್ನು ಬೇರ್ಪಡಿಸಿ ಗ್ರಾಮ ಪಂಚಾಯತಿ ರಚನೆ ಮಾಡಬೇಕೆಂದು ಆಗ್ರಹಿಸಿ ರೈತ ಸಂಘ ಬೈಂದೂರು ಇದರ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ನೇತ್ರತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ 17ನೇ ದಿನಕ್ಕೆ ಕಾಲಿಟ್ಟಿದೆ.

ಮೀನುಗಾರಿಕಾ, ಬಂದರು, ಒಳನಾಡು ಹಾಗೂ ಜಲಸಾರಿಗೆ ಸಚಿವ ಎಸ್. ಮಂಕಾಳ ವೈದ್ಯ ಬುಧವಾರ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿ ರೈತರನ್ನು ಭೇಟಿ ಮಾಡಿ ಬಳಿಕ ರೈತರನ್ನುದ್ದೇಶಿಸಿ ಮಾತನಾಡಿದ ಆವರು ಬೈಂದೂರು ತಾಲೂಕಾಗಿ ರಚನೆಗೊಂಡಿರುವಾಗ ಪಟ್ಟಣ ಪಂಚಾಯತ್ ಇಲ್ಲದೇ ಇರುವುದು ಸರಿಯಲ್ಲ. ಈಗಾಗಲೇ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಯವರು ಈ ಕುರಿತು ವಿಷಯವನ್ನು ತಿಳಿಸಿದ್ದಾರೆ. ರೈತರ ಹೋರಾಟ ನ್ಯಾಯ ಸಮ್ಮತವಾಗಿದೆ. ಜಿಲ್ಲಾಧಿಕಾರಿಗಳು ಕಳಿಸಿರುವ ವರದಿಯನ್ನು ಆಧರಿಸಿ ಸಂಬAಧಪಟ್ಟ ಸಚಿವರ ಜೊತೆ ಮಾತನಾಡಿ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಖಂಡಿತ ನ್ಯಾಯ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿ ಧರಣಿಯನ್ನು ಕೈಬಿಡಲು ಕೇಳಿಕೊಂಡರು.

ಇದಕ್ಕೆ ಪ್ರತಿಕ್ರಯಿಸಿದ ರೈತರು ಸಚಿವಾಲಯ, ಸರಕಾರ ಹಾಗೂ ಜಿಲ್ಲಾಡಳಿತದಿಂದ ಲಿಖಿತ ಉತ್ತರ ದೊರಕಿದರೆ ಧರಣಿ ಕೈಬಿಡಲು ಸಿದ್ದರಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಶಿರೂರು ರೈತ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ, ಹರೀಶ್ ತೋಳಾರ್, ರಘುರಾಮ ಕೆ.ಪೂಜಾರಿ, ಸುಭಾಷ ಗಂಗನಾಡು, ಮ್ಯಾಥ್ಯ ಕೆ.ಎಸ್, ರವೀಂದ್ರ ಶೆಟ್ಟಿ ಪಟೇಲ್, ಹೆರಿಯ ಪೂಜಾರಿ, ಚಿಕ್ಕು ಪೂಜಾರಿ, ಪದ್ಮಾಕ್ಷ ಗೋಳಿಬೇರು, ಕೃಷ್ಣ ದೇವಾಡಿಗ, ಸುರ್ ಪೂಜಾರಿ, ದೊಟ್ಟಯ್ಯ ಪೂಜಾರಿ,ವೆಂಕಟ ಪೂಜಾರಿ ಶಿರೂರು ಮೊದಲಾದವರು ಇದ್ದರು.

ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೀರಭದ್ರ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.
ವರದಿ : ಎಚ್ ಸುಶಾಂತ್ ಆಚಾರ್ ಬೈಂದೂರು

About The Author

error: Content is protected !!