ಅಂಕೋಲಾ : ಇತ್ತೀಚೆಗಷ್ಟೇ ಸೇವಾ ನಿವೃತ್ತಿಗೊಂಡ ತಾಲ್ಲೂಕಿನ ಅಗಸೂರು ಗ್ರಾಮದಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲಿನ ಪ್ರೌಢ ಶಾಲಾ ವಿಭಾಗದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಂದ್ರ ಪುಂಡಲಿಕ ಕೇಣಿಯವರನ್ನು ಅವರ ಮನೆಯಂಗಳದಲ್ಲಿ “ಕನ್ನಡ ಚಂದ್ರಮ” ಉತ್ತರ ಕನ್ನಡದಿಂದ ಗೌರವಿಸಲಾಯಿತು.
ಅವರಿಗೆ "ವಿದ್ಯಾ ಕಾಯಕ ರಾಜರ್ಷಿ" ಉಪಾದಿಯನ್ನಿತ್ತು ಮಾನಿಸಿದ "ಕನ್ನಡ ಚಂದ್ರಮ"ದ ಸಂಸ್ಥಾಪಕ ಗೌರವಾಧ್ಯಕ್ಷರಾದ ಅಧ್ಯಾಪಕ ಮಂಜುನಾಥ ಗಾಂವ್ಕರ್ ಬರ್ಗಿಯವರು ಮಾತನ್ನಾಡಿ, ಬರ್ಗಿ ಪ್ರೌಢ ಶಾಲೆಯಲ್ಲಿ ಹಿಂದೆ ತಮ್ಮ Àಹೋದ್ಯೋಗಿಯಾಗಿದ್ದ ರಾಜೇಂದ್ರ ಕೇಣಿಯವರು, ತನ್ನ ಸಜ್ಜನಿಕೆಯ ನಡವಳಿಕೆಯಿಂದ ವೃತ್ತಿಬಾಂಧವರಿಗೆ ಮತ್ತು ವಿದ್ಯಾರ್ಥಿಗಳಿಗೆ ಅತ್ಯಾಪ್ತರಾಗಿದ್ದು, ಸಮಾಜ ಮುಖಿಯಾದ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಸಾರ್ವಜನಿಕವಾಗಿ ಗೌರವಕ್ಕೆ ಪಾತ್ರರಾದವರು ಎಂದರು.
“ಕನ್ನಡ ಚಂದ್ರಮ” ಹಾಗೂ ಅಂಕೋಲಾ ತಾಲ್ಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜನಪ್ರಿಯ ಅಧ್ಯಕ್ಷರಾದ ಜಗದೀಶ ನಾಯಕ ಹೊಸ್ಕೇರಿಯವರು, ಎಳವೆಯಿಂದಲೇ ತನಗೆ ಆತ್ಮೀಯರಾಗಿರುವ ರಾಜೇಂದ್ರ ಕೇಣಿಯವರೊಂದಿಗಿನ ದೀರ್ಘಕಾಲದ ಒಡನಾಟದಲ್ಲಿ ಕಂಡುಕೊAಡ ಮುತ್ಸದ್ದಿಕೆ ಹಾಗೂ ಅವರ ಕೌಟುಂಬಿಕವಾದ ಸಂಸ್ಕಾರದ ಕುರಿತು ಎದೆದುಂಬಿ ನುಡಿದು, ಅವರ ವಿಶ್ರಾಂತ ಜೀವನಕ್ಕೆ ಶುಭವನ್ನು ಕೋರಿದರು.
ಅಂಕೋಲಾದ ನವ ಕರ್ನಾಟಕ ಸಂಘ ಹಾಗೂ ಶ್ರೀರಾಮ್ ಸ್ಟಡಿ ಸರ್ಕಲ್ಲಿನ ಪ್ರತಿಷ್ಠಿತ “ಬಾಪು ಸದ್ಭಾವನಾ ಪುರಸ್ಕಾರ ಪುರಸ್ಕೃತ” ಪಿಎಂ ಪ್ರೌಢಶಾಲೆಯ ಹೆಸರಾಂತ ವಿಶ್ರಾಂತ ಮುಖ್ಯಾಧ್ಯಾಪಕರಾದ ರವೀಂದ್ರ ಕೇಣಿಯವರು, ತಮ್ಮ ಮನೆಯಂಗಳದಲ್ಲಿ “ವಾಲ್ಮೀಕಿ ಜಯಂತಿ”ಯ ಸುದಿನದಂದು ತನ್ನ ಅಣ್ಣನ ಮಗನಾದ ರಾಜೇಂದ್ರ ಕೇಣಿಯವರನ್ನು ಗೌರವಿಸುವ ಮೂಲಕ ಕನ್ನಡ ಚಂದ್ರಮವು ಸಾಂಸ್ಕೃತಿಕ ಬದ್ಧತೆಯನ್ನು ಮೆರೆದಿದೆ ಎಂದು ನುಡಿದರು.
ಈ ಸಮಾರಂಭದಲ್ಲಿ ರಾಜೇಂದ್ರ ಕೇಣಿಯವರ ಮಾತೃಶ್ರೀ ಅಕ್ಕಾಬಾಯಿ , ಧರ್ಮಪತ್ನಿ ಶೋಭಾ , ಚಿಕ್ಕಮ್ಮ ಶೀಲಾ ಬಂಟ ಹಾಗೂ ಚಿರಂಜೀವಿ ರಿಷಿಬ್ ಮೊದಲಾದವರಿದ್ದರು.

More Stories
ಪ್ರೌಢ ಶಾಲಾ ಶಿಕ್ಷಕರ ಭಕ್ತಿಗೀತೆ ಸ್ಪರ್ಧೆ, ಮೊದಲ ಮೂರು ಸ್ಥಾನಗಳಲ್ಲಿ ರಾಘವೇಂದ್ರ, ಮಂಜುನಾಥ ಬರ್ಗಿ ಹಾಗೂ ತಸ್ನೀಮ್
ಹಳಿಯಾಳದಲ್ಲಿ ಸಾಕು ನಾಯಿಗೆ ಸೀಮಂತ: ಪ್ರೇಮಾ ಪ್ರಭು ದಂಪತಿಗಳ ಅಪೂರ್ವ ಸಂಪ್ರದಾಯ
ವಿ.ಡಿ.ನಾಯಕರಿಗೆ ಬಾಪು ಸದ್ಭಾವನಾ ಪುರಸ್ಕಾರ ಪ್ರದಾನ