November 19, 2025

ಬೀದಿ ದೀಪದ ಮಾಫಿಯಾ ನಡೆಯುತ್ತಿದೆ ಸದಸ್ಯ ಅಜಾದ್ ಅಣ್ಣಿಗೇರಿ ಗಂಭೀರ ಆರೋಪ

ಹೊನ್ನಾವರ ;ಪ.ಪಂ. ಸಭಾಭವನದಲ್ಲಿ ಅಧ್ಯಕ್ಷ ವಿಜಯ ಕಾಮತ್ ಅಧ್ಯಕ್ಷತೆಯಲ್ಲಿ ನಡೆದ ಸಾಮನ್ಯ ಸಭೆಯಲ್ಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಬಗ್ಗೆ ಪ್ರಗತಿ ಪರಿಶೀಲನೆ ಸಮಯದಲ್ಲಿ ಮಾತನಾಡಿದ ಅವರು ಪಟ್ಟಣದ ವಿವಿಧಡೆ ಒಂದೊAದು ಮಾದರಿಯ ಲೈಟ್ ಅಳವಡಿಸಲಾಗುತ್ತಿದೆ. ಪ.ಪಂ.ಅನುದಾನದಲ್ಲಿ ಅಳವಡಿಸಿದ ಬಲ್ಬ ನಾಪತ್ತೆಯಾಗುತ್ತಿದೆ ಈ ಬಗ್ಗೆ ಗಮನಹರಿಸುವಂತೆ ಸೂಚಿಸಿದರು. ಸಭೆಯ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸುವ ಜೊತೆ ಈ ಬಗ್ಗೆ ಗುತ್ತಿಗೆ ಪಡೆದ ಕಂಪನಿಯವರಿಗೆ ಎಚ್ಚರ ವಹಿಸುವಂತೆ ತಿಳಿಸುದಾಗಿ ಮುಖ್ಯಾಧಿಕಾರಿಗಳು ಭರವಸೆ ನೀಡಿದರು.

 ಪ.ಪಂ. ವ್ಯಾಪ್ತಿಯಲ್ಲಿ ವಾರ್ಡ್ ಸದಸ್ಯರ ಗಮನಕ್ಕೆ ತರೆದೇ ಕೆಲಸ ನಡೆಯುತ್ತಿದೆ, ಸದಸ್ಯರ ಗಮನಕ್ಕೆ ತರದೇ ಕೆಲಸ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸದಸ್ಯ ಶ್ರೀಪಾದ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು. ವಾರ್ಡಿನ ವಿವಿಧ ಸಮಸ್ಯೆಗೆ ಹಲವು ವರ್ಷದಿಂದ ಬೇಡಿಕೆ ಇಟ್ಟರೂ ಅನುದಾನದ ಕೊರತೆ ಇದೆ ಎಂದು ಸಬೂಬು ಹೇಳಲಾಗುತ್ತಿದೆ. ವಾರ್ಡ್ ಸದಸ್ಯರ ಗಮನವಿಲ್ಲದೇ , ವಾರ್ಡನಲ್ಲಿ ಬೇರಡೆ ಅನುದಾನ ಹಾಕುವುದು ಸದಸ್ಯರಿಗೆ ಮಾಡುವ ಅವಮಾನವಲ್ಲವೇ? ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯ ಸುಬ್ರಾಯ ಗೌಡ, ಅಜಾದ್ ಅಣ್ಣಿಗೇರಿ ಧ್ವನಿಗೂಡಿಸಿ ವಾರ್ಡ್ ಸದಸ್ಯರ ವಿಶ್ವಾಸಕ್ಕೆ ಪಡೆದು ಗುಣಮಟ್ಟದ ಕಾಮಗಾರಿ ನಡೆಸುವಂತೆ ಒತ್ತಾಯಿಸಿದರು. ಮಧ್ಯ ಪ್ರವೇಶಿಸಿದ ಮುಖ್ಯಾಧಿಕಾರಿಗಳು ಕ್ರೀಯಾಯೋಜನೆ ಅನುಷ್ಠಾನ ಮಾಡುವಾಗ ಸದಸ್ಯರ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

 ಕೃಷಿ ಇಲಾಖೆಯ ಪಕ್ಕದ ರಸ್ತೆ ಬಂದ್ ಆಗಿದೆ. ಬಜಾರ ಮಾರ್ಗದ  ಸಾರ್ವಜನಿಕರು ಹೆದ್ದಾರಿಗೆ ಆಗಮಿಸಲು ಈ ರಸ್ತೆ ಸನಿಹವಾಗಲಿದೆ. ಅಲ್ಲದೇ ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆಯು ಬಗೆಹರಿಯಲಿದೆ ಎಂದು ಸದಸ್ಯರ ಒಕ್ಕೂರಲ ಸಲಹೆಗೆ ಕೂಡಲೇ ಸ್ಪಂದಿಸುವ ಭರವಸೆ ಅಧಿಕಾರಿಗಳು ನೀಡಿದರು. ಪಟ್ಟಣದಲ್ಲಿ 57 ಕಾಮಗಾರಿಗಳಿಗೆ ಕ್ರೀಯಾಯೋಜನೆಯ ವಿಷಯದಲ್ಲಿ ವಿಸ್ತ್ರೀತ ಚರ್ಚೆ ನಡೆಯಿತು. ಸಾರ್ವಜನಿಕರ ಹಣವನ್ನು ದುಂದುವೆಚ್ಚ ಆಗದಂತೆ ಅಧಿಕಾರಿಗಳು ಗಮನಹರಿಸಿ ಎಂದು ಸದಸ್ಯರು ಎಚ್ಚರಿಸಿದರು. 

  ಶರಾವತಿ ಬೋಟಿಂಗ್ ವ್ಯವಸ್ಥೆಗೆ ಈ ಹಿಂದೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಿರ್ಣಯದಂತೆ ಟೋಕನ್ ವ್ಯವಸ್ಥೆ ಮಾಡಬೇಕು. ಇದರಿಂದ ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ ಎಂದು ಸದಸ್ಯ ಶಿವರಾಜ ಮೇಸ್ತ ಒತ್ತಾಯಿಸಿದಾಗ ಹಲವು ಸದಸ್ಯರು ಧ್ವನಿಗೂಡಿಸಿದರು. ಪಟ್ಟಣದ ರಸ್ತೆ, ಬೆಳಕು ಬಳವಡಿಸಿಕೊಳ್ಳುದರಿಂದ ಪ.ಪಂ. ಆದಾಯ ಪಡೆಯಲು ಇರುವ ಅವಕಾಶಗಳ ಬಗ್ಗೆ ಚರ್ಚೆ ಜರುಗಿತು.

ನ್ಯಾಯಲಯದ ಒಳಗಡೆ ಪಾರ್ಕಿಂಗ್ ಪ್ರದೇಶ ಹಾಗೂ ಕ್ಯಾಂಟಿನ್ ಮುಂಭಾಗದ ಇಂಟರ್ ಲಾಕ್ ಅಳವಡಿಕೆಗೆ ಪ.ಪಂ. ಅನುದಾನ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಅಜಾದ್ ಅಣ್ಣಿಗೇರಿ, ಸಾರ್ವಜನಿಕರ ಹಣ ದುಂದುವೆಚ್ಚ ಆಗಲಿದೆ. ಪ.ಪಂ. ವ್ಯಾಪ್ತಿಯಲ್ಲಿ ಹಲವು ರಸ್ತೆ ಗಟಾರ ಸಮಸ್ಯೆ ಇದೆ ಎಂದು ಸಭೆಯ ಗಮನಕ್ಕೆ ತಂದಾಗ, ಸಾರ್ವಜನಿಕರಿಗೆ ಅನೂಕೂಲವಾಗಲಿದೆ ಎಂದು ಅಧಿಕಾರಿಗಳ ಉತ್ತರಕ್ಕೆ ಸದಸ್ಯರು ಗರಂ ಆದರು. ಕೊರ್ಟ್ ಮುಂಭಾಗದ ರಸ್ತೆ, ಗಟಾರ ಪ.ಪಂ.ಅನುದಾನ ಬಳಕೆಯಾಗಲಿ. ಕಂಪೌಡ್ ಒಳಗಡೆ ಬೇರೆ ಇಲಾಖೆ ವ್ಯಾಪ್ತಿಗೆ ಬರಲಿದೆ ಅಲ್ಲಿಂದ ಅನುದಾನ ಹಾಕಲಿ. ಬಂದರು ಪ್ರದೇಶದ ಸಂತೆ ಆಗುವ ಸ್ಥಳದಲ್ಲಿ ಹಲವು ವರ್ಷದಿಂದ ರಸ್ತೆ ಹದಗೆಟ್ಟಿದೆ ಅಲ್ಲಿಯೂ ಸಾರ್ವಜನಿಕರಿಗೆ ಅನೂಕೂಲವಾಗುತ್ತಿತ್ತು. ರಸ್ತೆ ಅಲ್ಲಿ ನಿರ್ಮಿಸಲು ಬೇರೆ ಇಲಾಖೆ ಜಾಗ ಎಂದು ಹೇಳುವಾಗ ಕೊರ್ಟ್ ಆವರಣಕ್ಕೆ ಹಣ ವಿನಿಯೋಗಿಸಲು ಈ ನಿಯಮ ಅನ್ವಯಿಸುದಿಲ್ಲವಾ ಎಂದು ಪ್ರಶ್ನಿಸಿದರು. ಇದೆ ವೇಳೆ ಅಧ್ಯಕ್ಷ ವಿಜಯ ಕಾಮತ್ ವಾರದಲ್ಲಿ ಎರಡು ದಿನ ನಾನು ಕೊರ್ಟಗೆ ಹೋಗುತ್ತೇನೆ ಎಂದಾಗ, ಸದಸ್ಯ ಅಜಾದ್ ಅಣ್ಣಿಗೇರಿ ನಾನು ವಾರದಲ್ಲಿ ಎರಡು ದಿನ ಹೋಗುತ್ತೇನೆ. ನೀವು ಸಂತೆ ಮಾರ್ಕೆಟಗೆ ಹೋಗುದಿಲ್ಲವಾ ಎಂದು ಪ್ರಶ್ನಿಸಿದರು. ಅಂತಿಮವಾಗಿ ಪ.ಪಂ.ಅನುದಾನ ಹಾಕುವುದು ಬೇಡ ಎನ್ನುವ ತಿರ್ಮಾನ ಸಭೆಯಲ್ಲಿ ಕೈಗೊಂಡರು.

 ವಾರ್ಡ್ ನಂಬರ್ 4ರಲ್ಲಿ ಕಂಪೌAಡ್ ನಿರ್ಮಾಣ ಎಂದು ಹಣ ಕ್ರೀಯಾಯೋಜನೆಯಲ್ಲಿ ನಮೊದಾಗಿರುದನ್ನು ಪ್ರಶ್ನಿಸಿದ ಸದಸ್ಯರು, ಪೂರ್ಣ ವಾರ್ಡಿಗೆ ಕಂಪೌAಡ್ ಅಳವಡಿಕೆಯಾ ಎಂದು ಲೇವಡಿ ಮಾಡಿದರು. ಸದಸ್ಯೆ ತಾರಾ ಕುಮಾರಸ್ವಾಮಿ ನಮ್ಮ ವಾರ್ಡಿಗೂ ಕಂಪೌAಡ್ ಅಗತ್ಯವಿದೆ ಅನುದಾನ ಕೊಡಿ ಎಂದು ಒತ್ತಾಯಿಸಿದರು. ಅಧಿಕಾರಿಗಳು ವಾರ್ಡ್ ಸದಸ್ಯರ ಗೊಂದಲದಲ್ಲಿ ಈ ರೀತಿಯಾಗಿದೆ ಎಂದು ಸಬೂಬು ಹೇಳಿ ಸರಿಪಡಿಸುದಾಗಿ ಮುಖ್ಯಾಧಿಕಾರಿಗಳು ಭರವಸೆ ನೀಡಿದರು. ಪಟ್ಟಣದ ವಿವಿಧ ಕಾಮಗಾರಿಗಳ ಬಗ್ಗೆ ಸದಸ್ಯರು ಸಭೆಯ ಗಮನಕ್ಕೆ ತಂದರು.

ಪ.ಪಂ. ಉಪಾಧ್ಯಕ್ಷ ಸುರೇಶ ಹೊನ್ನಾವರ, ಸ್ಥಾಯಿಸಮಿತಿ ಅಧ್ಯಕ್ಷ ಮಹೇಶ ಮೇಸ್ತ, ಮುಖ್ಯಾಧಿಕಾರಿ ಯೇಸು ಬೆಂಗಳೂರು, ಸದಸ್ಯರು ಸಿಬ್ಬಂದಿಗಳು ಚರ್ಚೆಯಲ್ಲಿ ಪಾಲ್ಗೊಂಡರು.
ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!