November 19, 2025

ನಾವು ಧರ್ಮದಲ್ಲಿ ಇದ್ದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ-ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ

ಕುಮಟಾ : ಪುರಸಭೆಯ ರೆವಿನ್ಯೂ ಇನ್ಸ್ಪೆಕ್ಟರ್ ವೆಂಕಟೇಶ್ ಆರ್. ಮತ್ತು ಅವರ ತಾಯಿ ಇವತ್ತು ನಮ್ಮನೆಗೆ ಬಂದು ಕ್ಷಮೆ ಕೇಳಿದ್ದಾರೆ ನಿಮ್ಮ ತಪ್ಪೇನೂ ಇಲ್ಲ ಎಂಬುದರ ಜೊತೆಗೆ, ಆ ದಿನ ಬರೆದ ಪತ್ರದ ಸತ್ಯಾಸತ್ಯತೆಯನ್ನು ಸ್ಪಷ್ಟ ಪಡಿಸಿದ್ದಾರೆ ಎಂದು ಕುಮಟಾ ಹೊನ್ನಾವರ ವಿಧಾನಸಭಾ ಶಾಸಕ ದಿನಕರ ಶೆಟ್ಟಿ ಹೇಳಿದರು.

ನಾವು ಧರ್ಮದಲ್ಲಿ ಇದ್ದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂಬುದಕ್ಕೆ ನಾನೇ ಪ್ರತ್ಯಕ್ಷ ನಿದರ್ಶನ. ಈ ವಿಚಾರವನ್ನು ಧರ್ಮಸ್ಥಳ ಯೋಜನೆಯ ವೇದಿಕೆಯಲ್ಲಿ ಹಂಚಿಕೊಳ್ಳಲು ನನಗೆ ಹೆಮ್ಮೆ ಅನಿಸುತ್ತದೆ” ಎಂದು ಕುಮಟಾ ಹೊನ್ನಾವರ ವಿಧಾನಸಭಾ ಶಾಸಕ ದಿನಕರ ಶೆಟ್ಟಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉತ್ತರ ಕನ್ನಡ ಜಿಲ್ಲೆ ವತಿಯಿಂದ, ಹೊನ್ನಾವರ ತಾಲೂಕಿನ ಮೂಡಗಣಪತಿ ಸಭಾಭವನದಲ್ಲಿ ಗಾಂಧಿ ಸ್ಮೃತಿ ಮತ್ತು ಜನ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾಸಕ ದಿನಕರ ಶೆಟ್ಟಿಯವರು ತಮ್ಮ ಭಾಷಣದಲ್ಲಿ ಈ ವಿಷಯ ಹಂಚಿಕೊAಡಿದ್ದಾರೆ.

“ಕಳೆದ ಒಂದು ವಾರದ ಹಿಂದೆ ಕುಮಟಾ ಪುರಸಭೆಯ ರೆವಿನ್ಯೂ ಇನ್ಸ್ಪೆಕ್ಟರ್ ವೆಂಕಟೇಶ್ ಆರ್. ಅವರು ನನ್ನ ಹೆಸರನ್ನು ಪತ್ರದಲ್ಲಿ ಬರೆದಿಟ್ಟು ಕಣ್ಮರೆಯಾದ ವಿಷಯ ನಿಮಗೆಲ್ಲ ತಿಳಿದೇ ಇದೆ. ನಾನೇನೂ ತಪ್ಪು ಮಾಡದಿದ್ದರೂ ಇಂಥ ಭ್ರಷ್ಟಾಚಾರದ ಆರೋಪ ನನ್ನ ಮೇಲೆ ಬಂತಲ್ಲ ಎಂದು ಮನಸ್ಸಿಗೆ ನೋವಾಗಿತ್ತು. ಆದರೆ ಇಂದು ಧರ್ಮಸ್ಥಳ ಯೋಜನೆಯ ಕಾರ್ಯಕ್ರಮಕೆ ಬರುವ ಪೂರ್ವದಲ್ಲಿ ರೆವಿನ್ಯೂ ಇನ್ಸ್ಪೆಕ್ಟರ್ ವೆಂಕಟೇಶ್ ಮತ್ತು ಅವರ ತಾಯಿ ನಮ್ಮ ಮನೆಗೆ ಬಂದಿದ್ದರು.
ಅವರು ನನ್ನ ಬಳಿ ಹೇಳಿದ್ದು ಹೀಗೆ “ನೀವು ಹಿರಿಯವರು. ನಿಮ್ಮ ಬಗ್ಗೆ ನನಗೆ ಗೌರವ ಇದೆ. ಆದರೆ ಒತ್ತಡದಿಂದ ನಿಮ್ಮ ಹೆಸರನ್ನು ಬರೆಯಬೇಕಾದ ಸಂದರ್ಭ ಬಂತು. ನೀವು ದುಡ್ಡು ಕೇಳಿದ್ದೀರಿ ಅಂತಾ ನಾನು ಪತ್ರದಲ್ಲಿ ಬರೆದಿಲ್ಲ. ಪುರಸಭೆಯ ಮುಖ್ಯಧಿಕಾರಿಗಳು ಒತ್ತಡ ತರುತಿದ್ದರು. ನನಗೆ ನಾಲ್ಕು ಲಕ್ಷ ರೂಪಾಯಿ ಲಾಭ ಆಗುತ್ತದೆ ಅಂತಾ ಹೇಳಿದ್ದರು. ಅದನ್ನು ನಾನು ಪತ್ರದಲ್ಲಿ ಬರೆದಿದ್ದೆ. ನನ್ನಿಂದ ಆದ ತಪ್ಪನ್ನು ಕ್ಷಮಿಸಿ” ಅಂತಾ ತಾಯಿ ಮಗ ಇವತ್ತು ಹೇಳಿದ್ದಾರೆ ಎಂದರು.

ವರದಿ: ನರಸಿಂಹ ನಾಯ್ಕ್ ಹರಡಸೆ.

About The Author

error: Content is protected !!