March 2, 2026

ಭಟ್ಕಳ ತೆಂಗಿನಗು0ಡಿ ಕ್ರಾಸ್‌ನಲ್ಲಿ ಭೀಕರ ರಸ್ತೆ ಅಪಘಾತ: ಪಿಯುಸಿ ವಿದ್ಯಾರ್ಥಿ ಸ್ಥಳದಲ್ಲೇ ದುರ್ಮರಣ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ-66 ರ ತೆಂಗಿನಗುAಡಿ ಕ್ರಾಸ್ ಹತ್ತಿರ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪಿಯುಸಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮೃತನನ್ನು ಪಿರದೋಸನಗರ ನಿವಾಸಿ ಮಹ್ಮದ್ (18), ತಂದೆ ಮಹ್ಮದ್ ಅನಿಸ್ ಮೊತಶ್ಯಾಮ್ ಎಂದು ಗುರುತಿಸಲಾಗಿದ್ದು, ಆತ ಅಲಿ ಪಬ್ಲಿಕ್ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಕುಂದಾಪುರ ದಿಕ್ಕಿನಿಂದ ಭಟ್ಕಳ ಕಡೆಗೆ ಅತಿವೇಗದಲ್ಲಿ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಕೇರಳ ಮೂಲದ ಲಾರಿ, ತೆಂಗಿನಗುAಡಿ ಕ್ರಾಸ್ ಬಳಿ ಮುಂದೆ ಸಾಗುತ್ತಿದ್ದ ಸುಜುಕಿ ಬರ್ಗಮನ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸ್ಕೂಟರ್‌ನ್ನು ಚಲಾಯಿಸುತ್ತಿದ್ದ ಮಹ್ಮದ್ ರಸ್ತೆ ಬದಿಗೆ ಬಿದ್ದು, ಲಾರಿಯ ಹಿಂಬದಿ ಚಕ್ರ ತಲೆಯ ಮೇಲೆ ಹತ್ತಿ ತಕ್ಷಣವೇ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಅಪಘಾತಕ್ಕೆ ಕಾರಣವಾದ ಲಾರಿಯನ್ನು ಕೇರಳ ಮೂಲದ ಅಭಿಲಾಶ್ ಕುಮಾರ (ತಂದೆ ಬಾಲಕೃಷ್ಣ ಪಿಲೈ) ಎಂಬಾತ ಚಲಾಯಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬAಧ ಮೃತನ ಸಂಬAಧಿ ನವೀದ್ ಅಹ್ಮದ್ ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

About The Author

error: Content is protected !!