ಹೊನ್ನಾವರ : ಸರ್ಕಾರ ಪಡಿತರ ಚೀಟಿ ಪರಿಷ್ಕರಣೆಯ ನಿರ್ಧಾರದಿಂದ ಹೊನ್ನಾವರ ತಾಲೂಕಿನ ಪಿಗ್ಮಿ ಸಂಗ್ರಹಕಾರರ ಬಿ.ಪಿ.ಎಲ್ ಪಡಿತರ ಚೀಟಿಯನ್ನು ರದ್ದು ಮಾಡಿ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ಮಾಡದಂತೆ ಪಿಗ್ಮಿ ಸಂಗ್ರಹಕರು ತಹಶೀಲ್ದಾರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಹೊನ್ನಾವರ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಗ್ಮಿ ಸಂಗ್ರಹಕಾರರು ಪದವಿ, ಮಾಸ್ಟರ್ ಡಿಗ್ರಿಯನ್ನು ಹೊಂದಿದ್ದರೂ ಸೂಕ್ತ ಉದ್ಯೋಗ ಸಿಗದೇ ಜೀವನೋಪಾಯಕ್ಕಾಗಿ ಪಿಗ್ಮಿ ಸಂಗ್ರಹಣೆಯನ್ನು ಮಾಡುತ್ತಿದ್ದಾರೆ. ಕಳೆದ 25-30 ವರ್ಷಗಳಿಂದ ಈ ಕೆಲಸ ಮಾಡಿಕೊಂಡು ಬಂದಿದ್ದರೂ ಬ್ಯಾಂಕುಗಳು ನಮಗೆ ವೇತನವನ್ನು ನೀಡುವುದಿಲ್ಲ. ನಾವು ಸಂಗ್ರಹಿಸಿದ ಹಣದ ಮೇಲೆ ನಮಗೆ ಕಮಿಷನ್ ಮಾತ್ರ ನೀಡುತ್ತದೆ. ಪಿಗ್ಮಿ ಸಂಗ್ರಹ ಮಾಡಿ ಅದರಿಂದ ಬಂದಿರುವ ಕಮಿಷನ್ ನಿಂದ ಕುಟುಂಬದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಅನಾರೋಗ್ಯದ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಇರುವುದರಿಂದ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತಿತ್ತು. ಈಗ ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಾಗುವುದಿಲ್ಲ. ಬ್ಯಾಂಕಿನಿAದಲೂ ಯಾವುದೇ ರೀತಿಯ ಪಿ.ಎಫ್. ಗ್ರಾಜ್ಯುಟಿ, ವೇತನ ಹೀಗೆ ಯಾವುದೇ ರೀತಿಯ ಸೌಲಭ್ಯವೂ ಇರುವುದಿಲ್ಲ.
ನಮಗೆ ಸಿಗುವ ಕಮಿಷನನಿಂದ ನಮ್ಮ ಸಂಸಾರವನ್ನು ನಡೆಸುವುದೇ ಕಷ್ಟ ಆಗಿದೆ. ಹೀಗಿದ್ದಾಗ ಬಡ ಪಿಗ್ಮಿ ಏಜೆಂಟರ್ ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ನಮ್ಮ ಸಂಸಾರ ದಾರಿ ಮೇಲೆ ಬರುತ್ತದೆ. ಮಾನವೀಯ ನೆಲೆಯಿಂದ ಪಿಗ್ಮಿ ಏಜೆಂಟರ್ ಬಿಪಿಎಲ್ ಕಾರ್ಡ್ ರದ್ದು ಮಾಡಬಾರದೆಂದು ಮನವಿಯಲ್ಲಿ ಉಲ್ಲೆಖಿಸಿದ್ದಾರೆ.
ತಹಶೀಲ್ದಾರ ಪ್ರವೀಣ ಕರಾಂಡೆ ಮನವಿ ಸ್ವಿಕರಿಸಿದರು. ಪಿಗ್ಮಿಸಂಗ್ರಾಹಕರರ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ ನಾಯ್ಕ ಮಂಕಿ, ಅಧ್ಯಕ್ಷ ಜುಜೆ ಫರ್ನಾಂಡಿಸ್, ಉಪಾಧ್ಯಕ್ಷ ಉದಯ ನಾಯ್ಕ ಏಜಂಟರಾದ ರಾಘವೇಂದ್ರ ನಾಯ್ಕ ಗಣಪತಿ ನಾಯ್ಕ ಸತೀಶ ನಾಯ್ಕ ಮಾಕ್ಕೋಡ, ರಾಮಕೃಷ್ಣ ಶೆಟ್ಟಿ, ಶೇಖರ ನಾಯ್ಕ ಗಣಪಯ್ಯ ಗೌಡ, ಗಜಾನನ ನಾಯ್ಕ ರಾಜೇಶ್ ಪ್ರಭು, ಶ್ಯಾಮಲಾ ಶೆಟ್ಟಿ, ನಾಗರಾಜ ನಾಯ್ಕ ಕೃಷ್ಣ ಶೆಟ್ಟಿ, ಗಿರೀಶ್ ನಾಯ್ಕ ಶ್ರೀಧರ ನಾಯ್ಕ ಈಶ್ವರ ನಾಯ್ಕ ಇತರ ಪಿಗ್ಮಿ ಸಂಗ್ರಹಕಾರರು ಹಾಜರಿದ್ದರು.
ವರದಿ : ವಿಶ್ವನಾಥ ಸಲ್ಕೋಡ್ ಹೊನ್ನಾವರ

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”