November 19, 2025

ಅಂಕೋಲಾ ಪುರಸಭೆಯಲ್ಲಿ ಕರ್ತವ್ಯ ಲೋಪ ಅಧಿಕಾರ ದುರುಪಯೋಗಪಡಿಸಿದ ಅಧ್ಯಕ್ಷರು ಮತ್ತು ಅದಕ್ಕೆ ಸಹಕರಿಸಿದ ಸದಸ್ಯರ ಮೇಲೆ ಮಾನ್ಯ ಲೋಕಾಯುಕ್ತರಲ್ಲಿ ದೂರು: ಮಂಜುನಾಥ ನಾಯ್ಕ

ಅಂಕೋಲಾ : ಪುರಸಭೆಯಲ್ಲಿ ದಿನಾಂಕ 22-4-2025 ರ ನಂತರದಲ್ಲಿ ಅಂದರೆ ಸುಮಾರು 6 ತಿಂಗಳು ಸಮೀಪಿಸುತ್ತಿದ್ದರು ಯಾವುದೇ ಸಭೆ ನಡೆದಿದ್ದು ಇರುವುದಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿದ್ದು, ಈ ಬಗ್ಗೆ ವಿಚಾರಿಸಲಾಗಿ ಇವರು ಕೆಲವು ಇತರ ಸದಸ್ಯರಿಗೆ ತಪ್ಪು ಮಾಹಿತಿ ನೀಡಿ ಅಭಿವೃದ್ಧಿ ಕೆಲಸಗಳನ್ನು ಕುಂಠಿತವಾಗುವAತೆ ಮಾಡಿದ್ದಾರೆ.

ದಲಿತ ಮಹಿಳಾ ಮುಖ್ಯಾಧಿಕಾರಿಗಳು ಮತ್ತು ಮಹಿಳಾ ಇಂಜಿನಿಯರ್ ಮೇಲೆ ಆಪಾದನೆಗಳ ಮೇಲೆ ಆಪಾದನೆಗಳನ್ನು ಹೋರಿಸುತ್ತಾ ದೂರುಗಳನ್ನು ನೀಡುತ್ತಾ ಅನಗತ್ಯ ಕಾಲ ಹರಣ ಮಾಡಿದ್ದಾರೆ. ಅಧಿಕಾರಿಗಳು ಕರ್ತವ್ಯ ಲೋಪ ಅಧಿಕಾರ ದುರುಪಯೋಗ ಮಾಡಿದ್ದರೆ ಅದಕ್ಕೆ ಸಂಬAಧಪಟ್ಟ ದಾಖಲೆಗಳೊಂದಿಗೆ ದೂರು ನೀಡಿ ಅದನ್ನು ಸಾಬೀತುಪಡಿಸಿ ಅವರನ್ನು ಶಿಕ್ಷೆಗೊಳಪಡಿಸಬೇಕಾಗಿದ್ದನ್ನು ಬಿಟ್ಟು, ಅನಗತ್ಯ ಕಿರುಕುಳ ತೊಂದರೆಗಳನ್ನು ನೀಡಿ, ಅಧ್ಯಕ್ಷ ಪದವಿಯ ಕರ್ತವ್ಯ ಲೋಪ ಅಧಿಕಾರ ದುರುಪಯೋಗ ಮಾಡಿದ್ದಾರೆ.

ಸದ್ರಿ ಅಧಿಕಾರಿಗಳು ಅಮಾನತ್ತಿನ ಆದೇಶಕ್ಕೆ ಮಾನ್ಯ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು, ಆದರೆ ಇವರು ಪತ್ರಿಕಾ ಪ್ರಕಟಣೆ ನೀಡಿ, ದಲಿತ ಮಹಿಳಾ ಮುಖ್ಯಾಧಿಕಾರಿಗಳಿಗೆ ಮತ್ತು ಮಹಿಳಾ ಇಂಜಿನಿಯರ್ ಅವರಿಗೆ ಕಿರುಕುಳ ನೀಡುತ್ತಿರುವುದು ಕಂಡುಬರುತ್ತದೆ. ಆದ್ದರಿಂದ ಈ ಬಗ್ಗೆ ಮಹಿಳಾ ಆಯೋಗ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಮತ್ತು ಕಾಂಗ್ರೆಸ್ ಮುಖಂಡರು ಆದ ಮಂಜುನಾಥ ನಾಯ್ಕ ಆಗ್ರಹಿಸಿದ್ದಾರೆ. ಅಲ್ಲದೆ ಮಹಿಳಾ ಆಯೋಗದ ಅಧ್ಯಕ್ಷರಲ್ಲೂ ಈ ಬಗ್ಗೆ ದೂರು ಸಲ್ಲಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ಪುರಸಭೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅನೇಕ ಸಮಸ್ಯೆಗಳಿದ್ದು ಆ ಬಗ್ಗೆ ಗಮನಕೊಡದೆ ತಮ್ಮ ವೈಯಕ್ತಿಕ ಹಿತಾಸಕ್ತಿಯ ಮುಖಾಂತರ ಆಡಳಿತ ನಡೆಸುತ್ತಿರುವುದು ಕಂಡು ಬರುತ್ತಿದೆ.

ಸುಮಾರು ಆರು ತಿಂಗಳಿAದ ಯಾವುದೇ ಸಭೆಯನ್ನು ನಡೆಸದೇ ಎಸ್ಸಿ ಎಸ್ಟಿ ಅನುದಾನದ ವೈಯಕ್ತಿಕ ಕಾರ್ಯಕ್ರಮ ಹಾಗೂ ಕಾಮಗಾರಿಯನ್ನು ನಿರ್ವಹಿಸಿ ಅನುದಾನವನ್ನು ಬಳಕೆ ಮಾಡಿಕೊಳ್ಳದೆ ವಿಫಲರಾಗಿದ್ದಾರೆ. ಆಶ್ರಯ ಮನೆಗಳಿಗೆ ಕಟ್ಟಡ ಪೂರ್ಣಗೊಂಡರು ಇವರಿಗೆ ಅನುದಾನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳದೆ ಅಂತ ಫಲಾನುಭವಿಗಳಿಗೆ ತೊಂದರೆಯನ್ನುAಟು ಮಾಡಿದ್ದಾರೆ.

ಪುರಸಭೆಯ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸಗಳ ರಾಶಿ ಇದ್ದು ಅದನ್ನು ತ್ವರಿತವಾಗಿ ವಿಲೇವಾರಿಯಾಗದೆ ಪೂರ್ಣ ನಗರ ಕಸದಿಂದ ಕೂಡಿರುತ್ತದೆ. ಕಸದ ಗಾಡಿಗಳು ಕೆಟ್ಟು ಪುರಸಭೆ ಮುಂದೆ ನಿಂತಿದ್ದು ಅದನ್ನು ಈವರೆಗೂ ರಿಪೇರಿ ಮಾಡದೇ ಸಾರ್ವಜನಿಕ ಕಸ ವಿಲೆವಾರಿಗೆ ಬಳಕೆ ಆಗದ ರೀತಿಯಲ್ಲಿ ಇರುತ್ತದೆ ಇದರ ಬಗ್ಗೆ ಪುರಸಭೆ ಈವರೆಗೂ ರಿಪೇರಿ ಮಾಡಿರುವುದಿಲ್ಲ. ಅಧ್ಯಕ್ಷರು ನಗರದ ಅಭಿವೃದ್ಧಿಗಾಗಿ ಸರಕಾರದ ಅನುದಾನ ತರುವ ಬದಲು ಇರುವ ಅನುದಾನವನ್ನೇ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೆ ಕರ್ತವ್ಯ ಲೋಪ ಅಧಿಕಾರ ದುರುಪಯೋಗ ಮಾಡಿದ್ದಾರೆ.

ಅಂಕೋಲಾಪುರ ಸಭೆಯಲ್ಲಿ 3 ಇಂಜಿನಿಯರ್ ಗಳ ಹುದ್ದೆಯಿದ್ದು, ಕೇವಲ ಒಬ್ಬ ಮಹಿಳಾ ಇಂಜಿನಿಯರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಖಾಲಿ ಇರುವ ಎರಡು ಇಂಜಿನಿಯರ್ ಹುದ್ದೆಗೆ ಭರ್ತಿ ಮಾಡಲು ಪ್ರಯತ್ನ ಪಡುವುದನ್ನು ಬಿಟ್ಟು, ಇರುವ ಒಬ್ಬ ಮಹಿಳಾ ಇಂಜಿನಿಯರ್ ನ್ನು
ಕಿರುಕುಳ ನೀಡಿ ಅವರ ಕರ್ತವ್ಯಕ್ಕೂ ಅಡ್ಡಪಡಿಸುತ್ತಿದ್ದಾರೆ. ಈಗಾಗಲೇ ಈ ಬಗ್ಗೆ ದಾಖಲೆಗಳನ್ನು ಸಂಗ್ರಹಿಸುತ್ತಿದ್ದು, ನನ್ನ ಆತ್ಮೀಯ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ, ನನ್ನ ಆತ್ಮೀಯ ವಕೀಲರೊಂದಿಗೆ ಚರ್ಚಿಸಿ ಅಧ್ಯಕ್ಷರು ಮತ್ತು ಅವರಿಗೆ ಸಹಕರಿಸಿದ ಸದಸ್ಯರ ಮೇಲೆ ಮಾನ್ಯ ಲೋಕಾಯುಕ್ತರಲ್ಲಿ, ಸರ್ಕಾರದ ಹಿರಿಯ ಅಧಿಕಾರಿಗಳಲ್ಲಿ ಮತ್ತು ಮಾನ್ಯ ಸಚಿವರಲ್ಲಿ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಲಿದ್ದೇನೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಸೂಕ್ತ ನ್ಯಾಯಾಲಯದಲ್ಲಿಯೂ ಸಹ ಪ್ರಕರಣ ದಾಖಲಿಸಿ ನ್ಯಾಯ ಕೇಳಲಿದ್ದೇನೆಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಹೊರತಂದಿರುವ ನಗರಾಡಳಿತದಲ್ಲಿ ಕೌನ್ಸಿಲ್ ಗಳ ಕರ್ತವ್ಯಗಳ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರಲ್ಲಿ ಅಧ್ಯಕ್ಷರು ಸದಸ್ಯರು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕಾದರೆ ಕಾನೂನಿನ ಬಗ್ಗೆ ಜ್ಞಾನ ಆಡಳಿತ ಕುಶಲತೆ ಮತ್ತು ಕರ್ತವ್ಯ ಮನೋಭಾವಗಳನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸುತ್ತದೆ. ಅಲ್ಲದೆ ಕರ್ತವ್ಯ ನಿಷ್ಠೆ ಮತ್ತು ಕರ್ತವ್ಯ ಭ್ರಷ್ಟತೆಗಳ ಬಗ್ಗೆ ಸ್ಪಷ್ಟ ಅರಿವು ಅಗತ್ಯ, ಸಂವಿಧಾನ ಮತ್ತು ಕಾನೂನುಗಳು ನೀಡಿದ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಮತ್ತು ದಕ್ಷತೆಯಿಂದ ನಿರ್ವಹಿಸುವುದು ಕರ್ತವ್ಯನಿಷ್ಠತೆ, ಅದೇ ರೀತಿ ಅಲಕ್ಷ ಮತ್ತು ಅಹಂಕಾರದಿAದ ಕರ್ತವ್ಯ ನಿರ್ವಹಿಸದಿರುವುದು ಹಾಗೂ ಸಂವಿಧಾನ ಮತ್ತು ಕಾನೂನುಗಳು ನಿಷೇಧಿಸಿದ ಕಾರ್ಯಗಳನ್ನು ಮಾಡುವುದು ಕರ್ತವ್ಯ ಭ್ರಷ್ಟತೆ ಎಂದು ತಿಳಿಸುತ್ತದೆ.

ಅಧ್ಯಕ್ಷರು ಮತ್ತು ಪುರಸಭೆಯ ಕೆಲವು ಸದಸ್ಯರು ಈ ಎಲ್ಲಾ ನಿಯಮವನ್ನು ಗಾಳಿಗೆ ತೂರಿ ಅಧಿಕಾರ ದುರುಪಯೋಗ ಕರ್ತವ್ಯ ಲೋಕ ಮಾಡಿದ್ದು ಇರುತ್ತದೆ. ಅಲ್ಲದೇ ಮಾರ್ಗಸೂಚಿಯಲ್ಲಿ ಅಧ್ಯಕ್ಷರು ಸದಸ್ಯರು ತನ್ನ ಸ್ಥಾನದ ಕರ್ತವ್ಯಗಳನ್ನು ಪರಿಪೂರ್ಣತೆಯಿಂದ ಪರಿಣಾಮಕಾರಿಯಾಗಿ ನಿರ್ವಹಿಸಲು ಸತ್ಯಶೋಧನೆ ಮತ್ತು ನ್ಯಾಯ ಪರಿಪಾಲನೆ ಎಂಬ ಎರಡು ಮೂಲ ಉದ್ದೇಶಗಳನ್ನು ಸದಾ ಕಾಲ ಗಮನದಲ್ಲಿಡಬೇಕು. ಯಾವುದೇ ವಿಷಯದ ಬಗ್ಗೆ ಚರ್ಚಿಸುವಾಗ ಮತ್ತು ತೀರ್ಮಾನ ಕೈಗೊಳ್ಳುವಾಗ ಆ ವಿಷಯಕ್ಕೆ ಸಂಬAಧಿಸಿದ ಎಲ್ಲಾ ಸತ್ಯಾಂಶಗಳನ್ನು ಮತ್ತು ವಾಸ್ತವಂಶಗಳನ್ನು ಸಂಗ್ರಹಿಸಿ ಕಾನೂನಿನ ಉಲ್ಲೇಖಗಳನ್ನು ಪರಿಶೀಲಿಸಿ ರಾಗ ದ್ವೇಷವಿಲ್ಲದೆ ಭಯ ಪಕ್ಷಪಾತವಿಲ್ಲದೆ ಕ್ರಮ ಕೈಗೊಳ್ಳುವುದು ಅತ್ಯಾವಶ್ಯಕ ಎಂದು ತಿಳಿಸುತ್ತದೆ. ಅಧ್ಯಕ್ಷರು ಮತ್ತು ಕೆಲವು ಸದಸ್ಯರು ಈ ಎಲ್ಲವನ್ನು ಗಾಳಿಗೆ ತೂರಿ ಅಧಿಕಾರ ದುರುಪಯೋಗ ಮತ್ತು ಕರ್ತವ್ಯ ಲೋಪ ಮಾಡಿದ್ದು ಇರುತ್ತದೆ ಎಂದು ಮಂಜುನಾಥ ನಾಯ್ಕ ತಿಳಿಸಿದ್ದಾರೆ.

1976ರ ಕರ್ನಾಟಕ ಪೌರ ನಿಗಮಗಳ ಅಧಿನಿಯಮದ ಪ್ರಕರಣ 496 ರಲ್ಲಿ ಮತ್ತು 1964 ಕರ್ನಾಟಕ ಪೌರಸಭೆಗಳ ಅಧಿನಿಯಮದ ಪ್ರಕರಣ 79 ರಲ್ಲಿ ಪ್ರತಿಯೊಬ್ಬ ಸದಸ್ಯರು ಭಾರತ ದಂಡ ಸಹಿತ 21ನೇ ಪ್ರಕರಣದ ಅರ್ಥ ವ್ಯಾಪ್ತಿಯಲ್ಲಿ ಲೋಕ ನೌಕರನೆಂಬುದಾಗಿ ಭಾವಿಸತಕ್ಕದ್ದು ಎಂದು ನಮೂದಿಸಲಾಗಿದೆ. ಆದ್ದರಿಂದ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಕರ್ತವ್ಯ ಲೋಕ ಅಧಿಕಾರ ದುರುಪಯೋಗ ಪಡಿಸಿದ ಎಲ್ಲರೂ ಮೇಲು ಈ ಮೇಲೆ ತಿಳಿಸಿದಂತೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಪೌರಾಡಳಿತ ಸಚಿವರಲ್ಲಿ ಮತ್ತು ಸಂಬAಧಪಟ್ಟ ಹಿರಿಯ ಅಧಿಕಾರಿಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!