
ಹೊನ್ನಾವರ : ಮಲೇಷ್ಯಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಏಷ್ಯನ್ ಪೆಸಿಫಿಕ್ ಯೋಗಾಸನ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ ಬಾಲಕ ಮಾಣಿಕ್ಯ ಸುಬ್ರಾಯ್ ಗೌಡ ಅವರನ್ನು ಹೊನ್ನಾವರ ಪಟ್ಟಣದ ಶರಾವತಿ ವೃತ್ತದಲ್ಲಿ ವಿಜೃಂಭಣೆಯಿAದ ಸ್ವಾಗತಿಸಿದರು.
ಮಾಣಿಕ್ಯ ಇತನು ಹೊನ್ನಾವರ ತಾಲೂಕು ಖರ್ವಾ ಗ್ರಾಮದ ಸಿಂಧೂರಿನ ಸುಬ್ರಾಯ ಗೌಡ,ಪದ್ಮಾವತಿ ಗೌಡ ದಂಪತಿಯ ಪುತ್ರನಾಗಿದ್ದಾನೆ. ಸಿಂಧೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೫ನೇ ತರಗತಿ ವ್ಯಾಸಂಗದಲ್ಲಿದ್ದಾನೆ. ಚೈತನ್ಯ ವಿಕಸನ ಯೋಗ ಕೇಂದ್ರ ಹೊನ್ನಾವರದಲ್ಲಿ ರಾಜೇಶ್ವರಿ ಹೆಗಡೆ ಇವರಿಂದ ನಾಲ್ಕನೇ ತರಗತಿಯಿಂದಲೇ ಯೋಗಭ್ಯಾಸ ಮಾಡುತ್ತಿದ್ದು ತನ್ನ ಯೋಗ , ಗುರು ಮಾತೆಯಾದ ಅಂತರಾಷ್ಟ್ರೀಯ ಮಟ್ಟದ ಯೋಗ ತೀರ್ಪುಗಾರರಾದ ರಾಜೇಶ್ವರಿ ಹೆಗಡೆ ಅವರೊಂದಿಗೆ ಯೋಗಸ್ಪರ್ಧೆಗಾಗಿ ಮಲೇಷ್ಯಾಕ್ಕೆ ತೆರಳಿದ್ದ.ಅಕ್ಟೋಬರ್ ೧೩ ರಿಂದ ೧೬ರ ವರೆಗೆ ಯೋಗಾಸನ ಸ್ಪರ್ಧೆ ನಡೆದಿತ್ತು.೫ರಿಂದ೯ ವರ್ಷ ವಯೋಮಾನದ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿದ್ದಾನೆ. ತನ್ನ ಅತಿ ಚಿಕ್ಕ ವಯಸ್ಸಿನಲ್ಲಿ ಯೋಗದಲ್ಲಿ ಸಾಧನೆಗೈದು ಅಂತರಾಷ್ಟ್ರ ಮಟ್ಟದಲ್ಲಿ ತನ್ನ ಚಾಪನ್ನು ಮೂಡಿಸಿರುವುದು ತಾಲೂಕಿಗೆ ಹಿರಿಮೆಯಾಗಿದೆ.ಇನ್ನು ಮಾಣಿಕ್ಯ ಗೌಡ ಹಾಗೂ ಯೋಗಗುರು ರಾಜೇಶ್ವರಿ ಹೆಗಡೆ ಅವರನ್ನು ಶರಾವತಿ ವೃತ್ತದಲ್ಲಿ ಸಾರ್ವಜನಿಕರು,ವಿವಿಧ ಸಂಘಟನೆಯ ಪ್ರಮುಖರು ಸನ್ಮಾನಿಸಿದರು.ಈ ವೇಳೆ ಆಗಮಿಸಿದ್ದ ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ ಯೋಗಸಾಧಕ ಬಾಲಕನಿಗೆ ಅಭಿನಂಧಿಸಿ ಬಾಲಕನ ಸಾಧನೆ ಎಲ್ಲರು ಹೆಮ್ಮೆ ಪಡುವ ವಿಷಯ.ಮಂದೆಯು ಇನ್ನಷ್ಟು ಸಾಧನೆ ಮಾಡುವಂತಾಗಲಿ.ನಾವೆಲ್ಲರೂ ಹೀಗೇಯೆ ಪ್ರೋತ್ಸಾಹಿಸೋಣ ಎಂದು ಹಾರೈಸಿದರು.
ಖರ್ವಾ ಗ್ರಾಪಂ ಅಧ್ಯಕ್ಷ ಶ್ರೀಧರ ನಾಯ್ಕ ಮಾತನಾಡಿ, ಬಾಲಕ ಮಾಣಿಕ್ಯನ ಸಾಧನೆ ಖರ್ವಾ ಗ್ರಾಮಕ್ಕೆ ಮಾತ್ರವಲ್ಲ ರಾಜ್ಯಕ್ಕೆ ಹೆಮ್ಮೆಯಾಗಿದೆ.ಖರ್ವಾ ಪಂಚಾಯತ ವತಿಯಿಂದಲು ಸನ್ಮಾನಿಸುತ್ತೇವೆ ಎಂದರು.

ಇನ್ನು ಯೋಗಾಸನದಲ್ಲಿ ಸಾಧನೆಗೈದ ಬಾಲಕ ಮಾಣಿಕ್ಯ ಗೌಡ ಮಾತನಾಡಿ, ಪ್ರತಿ ನಿತ್ಯ ಬೆಳಿಗ್ಗೆ ಹಾಗೂ ಸಾಯಂಕಾಲದ ವೇಳೆಗೆ ಯೋಗಗುರು ರಾಜೇಶ್ವರಿ ಹೆಗಡೆಯವರ ಮಾರ್ಗದರ್ಶನದಲ್ಲಿ ಯೋಗಾಸನ ತರಬೇತಿ ಪಡೆದಿರುವೆ.ತಂದೆ-ತಾಯಿ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ ಎಂದರು. ಮಾಣಿಕ್ಯನಂತಹ ಅನೇಕ ಯೋಗಪಟು ವಿದ್ಯಾರ್ಥಿಗಳಿಗೆ ಯೋಗಗುರುವಾಗಿ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದ ಕೀರ್ತಿ ಹೊಂದಿರುವ ಚೈತನ್ಯ ವಿಕಸನ ಯೋಗಕೇಂದ್ರದ ಯೋಗಶಿಕ್ಷಕಿ ರಾಜೇಶ್ವರಿ ಹೆಗಡೆ ಮಾತನಾಡಿ, ೯ನೇ ವಯಸ್ಸಿನಲ್ಲೇ ಅಂತರಾಷ್ಟ್ರೀಯ ಮಟ್ಟದ ಯೋಗಸ್ಪರ್ಧೆಯಲ್ಲಿ ಸಾಧನೆಗೈದಿರುವುದು ಇದೇ ಪ್ರಥಮವಾಗಿದೆ.ಮಾಣಿಕ್ಯ ಗೌಡ ಈ ಮೂಲಕ ರಾಷ್ಟ್ರಕ್ಕೆ,ರಾಜ್ಯಕ್ಕೆ ಹುಟ್ಟೂರಿಗೆ ಕೀರ್ತಿ ತಂದಿದ್ದಾನೆ.ಮುAದಿನ ದಿನಗಳಲ್ಲಿ ಬಾಲಕ ಬಂಗಾರದ ಪದಕ ತರಲು ಇನ್ನಷ್ಟು ಶ್ರಮ ವಹಿಸುತ್ತೇನೆ ಎಂದರು.
ಈ ವೇಳೆ ಕಸಾಪ ಜಿಲ್ಲಾ ಗೌರವಕಾರ್ಯದರ್ಶಿ ಪಿಆರ್ ನಾಯ್ಕ,ತಾಲೂಕಾಧ್ಯಕ್ಷ ಎಸ್ ಎಚ್ ಗೌಡ,ರೋಟರಿ ಕ್ಲಬ್ ಅಧ್ಯಕ್ಷ ರಾಜು ಮಾಳಗಿಮನಿ,ಕರವೇ ತಾಲೂಕಾಧ್ಯಕ್ಷ ಮಂಜುನಾಥ ಗೌಡ,ಖರ್ವಾ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”