November 19, 2025

ರೈತ ಸಂಘ ಬೈಂದೂರು ಇದರ ವತಿಯಿಂದ ತಾಲೂಕು ಆಡಳಿತ ಸೌಧದ ಎದುರುಗಡೆ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ೩೩ ದಿನ.

ಭಾವನಾ ಸುದ್ದಿ ಬೈಂದೂರು : ಜಿಲ್ಲಾಡಳಿತ ಸರಕಾರದ ಸಮರ್ಪಕ ಸ್ಪಂಧನೆ ನೀಡುತ್ತಿಲ್ಲ ಎಂದು ಆಕ್ರೋಶಗೊಂಡ ರೈತರು ಹತ್ತಾರು ಜೊತೆ ಕೋಣಗಳ ಜೊತೆಗೆ ಬೈಂದೂರು ಪಟ್ಟಣ ಪಂಚಾಯತ್ ಮತ್ತು ತಾಲೂಕು ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರಿಗೆ ತೊಂದರೆಯಾದರೆ ಜಿಲ್ಲಾಡಳಿತ ಹೊಣೆ: ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಕಳೆದ ಒಂದೂವರೆ ತಿಂಗಳಿAದ ಕೃಷಿ ಕಾರ್ಯ ಕೆಲಸ ಬಿಟ್ಟು ನ್ಯಾಯಕ್ಕಾಗಿ ಧರಣಿ ಕುಳಿತಿದ್ದಾರೆ. ಸೌಜನ್ಯಕ್ಕಾದರು ಜಿಲ್ಲಾಮಟ್ಟದ ಅಧಿಕಾರಿಗಳು ಬೇಟಿ ಮಾಡಿಲ್ಲ. ರೈತ ಮುಖಂಡರ ಜೊತೆ ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿಲ್ಲ. ಸರಕಾರದಿಂದ ನ್ಯಾಯ ಸಿಗುವ ನಿರೀಕ್ಷೆ ಇರುವ ಕಾರಣ ಶಾಂತ ಪ್ರತಿಭಟನೆ ನಡೆಸುತ್ತಿದ್ದು, ಸೋಮವಾರದಿಂದ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದರು.

ಎAದರು.ಜನಸಾಮಾನ್ಯವಾಗಿ ರೈತರು ಧರಣಿ ನಿರತರಾದರೆ ಆಡಳಿತ ಜನನಾಯಕರು, ಅಧಿಕಾರಿಗಳು ಸ್ಪಂಧಿಸದಿರುವ ಕುರಿತು ರೈತರು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು, ಮಾಜಿ ಶಾಸಕರು , ಸಂಸದರು, ಉಸ್ತುವಾರಿ ಸಚಿವರು ರೈತರನ್ನು ಬೇಟಿ ಮಾಡಿ ಸರಕಾರದ ಗಮನಸೆಳೆಯಬೇಕು ಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ ರೈತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದ್ದು ಉಸ್ತುವಾರಿ ಸಚಿವರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಮಂತ್ರಿಗಳ ಗಮನಕ್ಕೆ ತರಲಾಗಿದ್ದು ಕಡತ ವಿಲೇವಾರಿ ಪ್ರಕ್ರಿಯೆ ನಡೆಯುತ್ತಿದೆ.ಸರಕಾರದಿಂದ ನ್ಯಾಯ ದೊರಕಿಸಿಕೊಡುವ ಭರವಸೆಯಿದೆ ಎಂದರು.

ಬೈAದೂರು ತಾಲೂಕು ಕಂಬಳ ಸಮಿತಿ ವತಿಯಿಂದ ಬ್ರಹತ್ ಜಾಥಾ : ಬೈಂದೂರು ತಾಲೂಕು ಕಂಬಳ ಸಮಿತಿ ಶುಕ್ರವಾರದ ಧರಣಿ ನೇತ್ರತ್ವ ವಹಿಸಿದ್ದರು. ಸುಮಾರು ಹತ್ತು ಜೊತೆ ಕೋಣಗಳ ಜೊತೆ ಬೈಂದೂರು ಪಟ್ಟಣ ವ್ಯಾಪ್ತಿ ಜಾಥಾ ನಡೆಸಿದರು.ಪಟ್ಟಣ ಪಂಚಾಯತ್ ಹಾಗೂ ತಾಲೂಕು ಆಡಳಿತ ಸೌಧದ ಎದುರು ಕೋಣಗಳನ್ನು ಕಟ್ಟಿ ನ್ಯಾಯಕ್ಕಾಗಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷ ಮಂಜುನಾಥ ಪೂಜಾರಿ ಸಸಿಹಿತ್ಯು, ಜಿಲ್ಲಾ ಸಮಿತಿ ಸದಸ್ಯವಿಕ್ರಮ ಪೂಜಾರಿ ಸಸಿಹಿತ್ತು, ಕಂಬಳ ಸಮಿತಿ ಸದಸ್ಯರು ಹಾಗೂ ರಘುರಾಮ್ ಕೆ ಪೂಜಾರಿ ಬಪ್ಪನ ಬೈಲ್ ಶಿರೂರು, ಸುಭಾಷ್ ಗಂಗಾನಾಡು, ಮ್ಯಾಥ್ಯ ಕೆ. ಎಸ್, ಕೃಷ್ಣ ದೇವಾಡಿಗ, ಗ್ರಾಮೀಣ ಭಾಗದ ರೈತರು ಭಾಗವಹಿಸಿದ್ದರು.

ವರದಿ : ಎಚ್ ಸುಶಾಂತ್ ಆಚಾರ್ ಬೈಂದೂರು

About The Author

error: Content is protected !!