November 19, 2025

ಪಥ ಸಂಚಲನದಲ್ಲಿ ಗಣವೇಶಧಾರಿಯಾಗಿ ಕೈಯಲ್ಲಿ ದಂಡ ಹಿಡಿದು, ಹೆಜ್ಜೆ ಹಾಕಿ ಮಿಂಚಿದ ಮಾಜಿ ಸಚಿವ ಡಾ. ನಾರಾಯಣಗೌಡ..

ಕೃಷ್ಣರಾಜಪೇಟೆ : ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ಥಾಪನೆಯಾಗಿ ಶತಮಾನೋತ್ಸವ ಸಂಪೂರ್ಣವಾಗಿರುವುದರಿAದ ಕೃಷ್ಣರಾಜಪೇಟೆ ಪಟ್ಟಣದಲ್ಲಿ ರಾಜ್ಯದ ಮಾಜಿ ಸಚಿವರಾದ ಡಾ. ನಾರಾಯಣಗೌಡ ಅವರ ನೇತೃತ್ವದಲ್ಲಿ ಶತಮಾನೋತ್ಸವ ಪಥ ಸಂಚಲನವು ಅದ್ದೂರಿಯಾಗಿ ನಡೆಯಿತು.
ಭಾರತ್ ಮಾತಾ ಕೀ ಜಯ್ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಜಯವಾಗಲಿ ಎಂಬ ಜಯಗೋಷಗಳೊಂದಿಗೆ ಕೆ ಆರ್ ಪೇಟೆ ಪಟ್ಟಣದಲ್ಲಿ 500ಕ್ಕೂ ಹೆಚ್ಚು ಗಣವೇಶ ದಾರಿಗಳು ಶಿಸ್ತು ಬದ್ಧವಾಗಿ ಶತಮಾನೋತ್ಸವದ ಪಥಸಂಚಲನ ನಡೆಸಿ ಗಮನ ಸೆಳೆದರು.

ಕರ್ನಾಟಕ ರಾಜ್ಯದ ಮಾಜಿ ಸಚಿವರು ಹಾಗೂ ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಡಾ. ನಾರಾಯಣ ಗೌಡ ಅವರು ಗಣವೇಶವನ್ನು ಧರಿಸಿ ಕೈಯಲ್ಲಿ ದಂಡವನ್ನು ಹಿಡಿದು, ಕೃಷ್ಣರಾಜಪೇಟೆ ಪಟ್ಟಣದ ಉದ್ದಕ್ಕೂ ಸುರಿಯುವ ಮಳೆಯ ನಡುವೆಯೇ ಪಥ ಸಂಚಲನ ನಡೆಸಿದ್ದು ವಿಶೇಷವಾಗಿತ್ತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯ ವಾಹ ರವಿ ಗಣೇಶಗೌಡ, ಮಂಡ್ಯ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕೆ.ಜೆ. ವಿಜಯಕುಮಾರ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗರಾಜು, ಪುರಸಭೆ ಮಾಜಿ ಅಧ್ಯಕ್ಷ ನಟರಾಜು ಅವರ ನೇತೃತ್ವದಲ್ಲಿ ಭಾರಿ ಬಿಗಿ ಪೊಲೀಸ್ ಭದ್ರತೆಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಪಥಸಂಚಲನ ಕಾರ್ಯಕ್ರಮವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ನಡೆಯಿತು. ಮೆರವಣಿಗೆ ಯುದ್ಧಕ್ಕೂ ಪುಷ್ಪವೃಷ್ಟಿಯನ್ನು ಸುರಿಸಿದ ಪಟ್ಟಣದ ನಾಗರಿಕರು ಪತ ಸಂಚಲನಕ್ಕೆ ಸಂಭ್ರಮವನ್ನು ತುಂಬಿದರು. ರಾಜಸ್ಥಾನ್ ಸೇವಾ ಸಮಿತಿಯ ನೂರಾರು ಯುವಕರು ಹಾಗೂ ವ್ಯಾಪಾರಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ರಾಜ್ಯದ ಮಾಜಿ ಸಚಿವರಾದ ಡಾ. ನಾರಾಯಣಗೌಡ ಪತ್ರಕರ್ತರೊಂದಿಗೆ ಮಾತನಾಡಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ದೇಶಭಕ್ತಿಯ ಪ್ರತೀಕವಾಗಿದೆ ದೇಶಭಕ್ತಿಯನ್ನು ಹೊರ ಚೆಲ್ಲುವ ಇಂತಹ ಮೆರವಣಿಗೆಯನ್ನು ತಡೆಯಲು ಹೊರಟಿರುವ ರಾಜ್ಯ ಸರ್ಕಾರಕ್ಕೆ ದೇಶಪ್ರೇಮಿಗಳೇ ತಕ್ಕ ಉತ್ತರವನ್ನು ನೀಡುತ್ತಾರೆ ರಾಜ್ಯದ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಸಾಮಾನ್ಯ ಜ್ಞಾನವಿಲ್ಲ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸಬೇಕೆಂದು ರಾಜ್ಯ ಸರ್ಕಾರ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕುತ್ತಿರುವುದು ಅವರ ಬಾಲಿಶ ಮನ ಸ್ಥಿತಿಯನ್ನು ತೋರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಸಚಿವ ಪ್ರಿಯಾಂಕ ಖರ್ಗೆಯವರ ನಾಲಿಗೆಗೆ ಹಾಗು ಅವರ ದೇಶದ್ರೋಹಿ ನಡವಳಿಕೆಗೆ ಲಗಾಮು ಹಾಕಬೇಕು ಎಂದು ಆಗ್ರಹಿಸಿದರು. ಮಂಡ್ಯ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ನಾಗಮಂಗಲ ಡಿವೈಎಸ್ ಪಿ ಚಲುವರಾಜು ಹಾಗೂ ಪಟ್ಟಣ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಬಿ.ಸುಮಾರಾಣಿ ಯವರು ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಆಯೋಜಿಸುವ ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಮೆರವಣಿಗೆಯ ಪಥ ಸಂಚಲನದಲ್ಲಿ ಭಾಗವಹಿಸಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!