November 19, 2025

ಒಂದೇ ದಿನ ಪತಿ ಪತ್ನಿಯ ಸಾವು.. ಸಾವಿನಲ್ಲೂ ಒಂದಾದ ದಂಪತಿಗಳು.. ಬೂಕನಕೆರೆ ಗ್ರಾಮದಲ್ಲಿ ನಡೆದಿರುವ ಘಟನೆ..

ಕೃಷ್ಣರಾಜಪೇಟೆ: ಗಂಡ, ಹೆಂಡತಿ ಇಬ್ಬರೂ ಒಂದೇ ದಿನ ನಿಧನ ಹೊಂದಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಗ್ರಾಮದಲ್ಲಿ ನಡೆದಿದೆ. ಬೂಕನಕೆರೆ ಗ್ರಾಮದ ಗೌರಮ್ಮ ಎಂಬುವವರು ಭಾನುವಾರ ನಿಧನ ಹೊಂದಿದ್ದರು. ಗೌರಮ್ಮ ಅವರ ಅಂತ್ಯಸAಸ್ಕಾರಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿರುವಾಗ ಅವರ ಪತಿ ಲಿಂಗರಾಜನಾಯಕ ಅವರು ಪತ್ನಿಯ ಶವಕ್ಕೆ ಪೂಜೆ ಸಲ್ಲಿಸುವ ವೇಳೆ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ.

ಕಳೆದ 46ವರ್ಷಗಳ ಹಿಂದೆ ವಿವಾಹವಾಗಿದ್ದ ಗೌರಮ್ನ ಮತ್ತು ನಿಂಗರಾಜನಾಯಕ ಅವರು ವಿವಾಹವಾಗಿದ್ದರು. ಕಳೆದ 46ವರ್ಷಗಳಿಂದ ಜೊತೆಯಲ್ಲಿ ಜೀವನ ನಡೆಸಿದ್ದ ದಂಪತಿಗಳಿಬ್ಬರೂ ಎಲ್ಲಿಗೆ ಹೋದರೂ ಜೊತೆಯಲ್ಲಿಯೇ ಹೋಗಿ ಬರುತ್ತಿದ್ದರು. ಈ ದಂಪತಿಗಳಿಗೆ ಜಗದೀಶ್ ಮತ್ತು ವಿಜಯ್ ಕುಮಾರ್ ಎಂಬ ಇಬ್ಬರು ಪುತ್ರರಿದ್ದರು.

ಗೌರಮ್ಮ ಭಾನುವಾರ ಬೆಳಿಗ್ಗೆ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಗೌರಮ್ಮ ಅವರ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಂಡು, ಮೃತ ಗೌರಮ್ಮ ಅವರ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸುವ ಸಮಯದಲ್ಲಿ ಅವರ ಪತಿ ನಿಂಗರಾಜನಾಯಕ ಅವರು ಪೂಜೆ ಸಲ್ಲಿಸುವುದಕ್ಕೂ ಮುನ್ನವೇ ಅಸ್ವಸ್ಥಗೊಂಡು ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ.

ನಂತರ ಇಬ್ಬರಿಗೂ ಪೂಜೆ ಸಲ್ಲಿಸಿದ ಕುಟುಂಬದವರು, ಹಾಗೂ ಬಂಧುಗಳು ಒಂದೇ ಕಡೆ ಒಂದೇ ಸಮಯದಲ್ಲಿ ಗಂಡ ನಿಂಗರಾಜನಾಯಕ, ಹೆಂಡತಿ ಗೌರಮ್ಮ ಅವರ ಪಾರ್ಥೀವ ಶರೀರವನ್ನು ಅವರ ಜಮೀನಿನಲ್ಲಿ ಅಕ್ಕಪಕ್ಕ ಹೂಳುವ ಮೂಲಕ ಅಂತ್ಯ ಸಂಸ್ಥಾರ ನೆರವೇರಿಸಿದ್ದಾರೆ. ಒಂದೇ ದಿನ ದಂಪತಿಗಳಿಬ್ಬರೂ ಸಾವನ್ನಪ್ಪಿರುವ ಸುದ್ದಿಯೂ ಕಾಡ್ಗಿಚ್ಚಿನಂತೆ ಹರಡಿ, ಬೂಕನಕೆರೆ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿತ್ತು.

ನೂರಾರು ಸಂಖ್ಯೆಯಲ್ಲಿ ಆಗಮಿಸಿ ಅಂತಿಮ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿ ದುಃಖ ವ್ಯಕ್ತಪಡಿಸಿದರು. ಅಲ್ಲದೇ ಒಂದೇ ಸಮಯದಲ್ಲಿ ನಡೆದ ದಂಪತಿಗಳಿಬ್ಬರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ, ಒಂದೇ ದಿನ ತಂದೆ-ತಾಯಿಗಳನ್ನು ಕಳೆದುಕೊಂಡು ತಬ್ಬಲಿಗಳಾದ ಪುತ್ರರಾದ ಜಗದೀಶ್ ಮತ್ತು ವಿಜಯಕುಮಾರ್ ಅವರಿಗೆ ಸಾಂತ್ವನ ಹೇಳಿದರು. ಅಲ್ಲದೆ ಸಾವು ಎಲ್ಲರಿಗೂ ಬರುತ್ತದೆ ಆದರೆ ತಂದೆ ತಾಯಿಗಳಿಬ್ಬರಿಗೂ ಒಂದೇ ದಿನ ಸಾವು ಯಾರಿಗೂ ಬರಬಾರದು ಎಂದು ಮರುಕ ವ್ಯಕ್ತಪಡಿಸಿದರು.
ವರದಿ. ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!