ಹೊನ್ನಾವರ : ಇತ್ತೀಚೆಗೆ ಮನೆ ಸಮೀಪ ಹರಿದುಬಿದ್ದ ವಿದ್ಯುತ್ ಲೈನ್ ಸ್ಪರ್ಶಿಸಿ ಮೃತಪಟ್ಟಿದ್ದ ಕಾಸರಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಬಟ್ಟೆವಿನಾಯಕಕೇರಿಯ ದಂಪತಿಗಳ ಮನೆಗೆ ಬುಧವಾರ ಸಚಿವ ಮಂಕಾಳ್ ವೈದ್ಯರವರು ತೆರಳಿ ಸರಕಾರದ ಪರಿಹಾರ ಮತ್ತು ವಯಕ್ತಿಕ ಸಹಾಯ ನೀಡಿದರು.

ಮನೆಯ ಬಳಿಯಿಂದ ಹಾದು ಹೋಗಿದ್ದ ವಿದ್ಯುತ್ ಲೈನ್ ಹರಿದು ಬಿದ್ದ ಪರಿಣಾಮ ಸಂತೋಷ ಗೌಡ ಎನ್ನುವವರು ಮೃತಪಟ್ಟಿದ್ದು ಅವರ ರಕ್ಷಣೆಗೆಂದು ಹೋದ ಪತ್ನಿ ಸೀತು ಗೌಡ ಇವರಿಗೂ ವಿದ್ಯುತ್ ತಗುಲಿ ಇಬ್ಬರು ದಾರುಣವಾಗಿ ಮೃತಪಟ್ಟಿದ್ದರು.
ಘಟನೆಗೆ ಸಂಭAದ ಅವರ ಮನೆಗೆ ಭೇಟಿ ನೀಡಿದ ಸಚಿವ ಮಂಕಾಳ ವೈದ್ಯರವರು ಕುಟುಂಬಸ್ಥರನ್ನು ಭೇಟಿ ಮಾಡಿ ಮಕ್ಕಳ ಆರೋಗ್ಯ ವಿಚಾರಿಸಿ ಅಪಘಾತದಲ್ಲಿ ಮೃತ ಪಟ್ಟವರ ಕುಟುಂಬಕ್ಕೆ ಸರಕಾರದಿಂದ ತಲಾ ಐದು ಲಕ್ಷದಂತೆ ರೂ 10 ಲಕ್ಷ ರೂಪಾಯಿಯ ಪರಿಹಾರದ ಚೆಕ್‌ನ್ನು ಹಸ್ತಾಂತರಿಸಿ, ಮಕ್ಳಳ ವಿದ್ಯಾಭ್ಯಾಸಕ್ಕಾಗಿ ವಯಕ್ತಿಕ ರೂ 5 ಲಕ್ಷ ರೂಪಾಯಿ ಸಹಾಯ ನೀಡುವುದರ ಜೊತೆಗೆ ನಿಮ್ಮೊಂದಿಗೆ ನಾನು ಇದ್ದೇನೆ ಎಂದು ಮಕ್ಕಳಿಗೆ ಧೈರ್ಯ ತುಂಬಿ ಮುಂದೆ ಉದ್ಯೋಗ ನೀಡುವ ಭರವಸೆ ನೀಡಿದರು.




ಗೋವಾದಲ್ಲಿ ಸಿಡಿಲು ಬಡಿದು ಮೃತ ಪಟ್ಟ ಕುಟುಂಬಕ್ಕೂ ನೆರವು :
ಕೆಲವು ದಿನಗಳ ಹಿಂದೆ ಗೋವಾದಲ್ಲಿ ಸಿಡಿಲು ಬಡಿದು ಮೃತ ಪಟ್ಟಿದ್ದ ಕಾಸರಕೋಡ ಬಟ್ಟೆವಿನಾಯಕಕೇರಿಯ ಕೃಷ್ಣ ಗಣಪ್ಪಯ್ಯ ಗೌಡ ಇವರ ಮನೆಗೂ ತೆರಳಿ ಕುಟುಂಬದವರ ಜೊತೆ ಚರ್ಚಿಸಿ ಅವರ ಪತ್ನಿ ಮತ್ತು ಮಗಳನ್ನು ಸಂತೈಸಿ ವಯಕ್ತಿಕ ನೆರವು ನೀಡಿದರು. ಗೋವಾ ಸರಕಾರದ ಜೊತೆ ಮಾತನಾಡಿ ಪರಿಹಾರಕೊಡಿಸುವ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ