November 19, 2025

ದೋಣಿ ಮಗುಚಿ ನಾಲ್ವರು ಕಣ್ಮರೆಯಾದ ದುರಂತ,ಸಹಾಯಕ ಆಯುಕ್ತರ ಭೇಟಿ, ಶೋಧ ಕಾರ್ಯ ತೀವ್ರತೆಗೊಳಿಸಿ ಪರಿಶೀಲನೆ

ಭಟ್ಕಳ: ಅಳ್ವೆಕೋಡಿ ಬಂದರಿನಿAದ ಮೀನುಗಾರಿಕೆಗೆ ತೆರಳಿದ ದೋಣಿಯೊಂದು ಸಮುದ್ರದ ಅಲೆಗೆ ಸಿಲುಕಿ ಮಗುಚಿಬಿದ್ದ ಪರಿಣಾಮ ನಾಲ್ವರು ಮೀನುಗಾರರು ಕಣ್ಮರೆಯಾಗಿರುವ ದುರ್ಘಟನೆ ಜುಲೈ 30ರ ಮಧ್ಯಾಹ್ನ 3:15ರ ವೇಳೆಗೆ ನಡೆದಿದೆ.

ಘಟನೆ ಸಂಬAಧ ತಾಲೂಕು ಉಪವಿಭಾಗದ ಸಹಾಯಕ ಆಯುಕ್ತೆ ಕುಮಾರಿ ಕಾವ್ಯರಾಣಿ.ಕೆ ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯಾಚರಣೆಯ ಕುರಿತು ಪರಿಶೀಲನೆ ನಡೆಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ದೋಣಿಯಲ್ಲಿ ಆರು ಮಂದಿ ಮೀನುಗಾರರು ಇದ್ದರು. ಅದೃಷ್ಟವಶಾತ್ ಇಬ್ಬರು ಬದುಕುಳಿದಿದ್ದಾರೆ. ನಾಲ್ವರು ಕಣ್ಮರೆಯಾಗಿದ್ದು, ಅವರಲ್ಲಿ ಒಬ್ಬರ ಶವ ಪತ್ತೆಯಾಗಿದೆ. ಇನ್ನುಳಿದ ಮೂವರಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ,” ಎಂದು ತಿಳಿಸಿದರು.

ಈ ಕಾರ್ಯಾಚರಣೆಗೆ ಜಿಲ್ಲಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕರಾವಳಿ ಕಾವಲು ಪಡೆ, ಪೊಲೀಸ್ ಇಲಾಖೆ ಮತ್ತು ಸ್ಥಳೀಯರ ಸಹಕಾರದೊಂದಿಗೆ ಡೋನ್ ಕ್ಯಾಮರಿನ ನೆರವಿನಿಂದ ಶೋಧ ಕಾರ್ಯ ಮುಂದುವರೆದಿದೆ ಎಂದು ಸಹಾಯಕ ಆಯುಕ್ತರು ತಿಳಿಸಿದರು.

ಸ್ಥಳದಲ್ಲಿದ್ದು ಪರಿಶೀಲನೆ ನಡೆಸಿದವರಲ್ಲಿ ತಹಶಿಲ್ದಾರ ನಾಗೇಂದ್ರ ಕೋಳಶೆಟ್ಟಿ, ಡಿವೈಎಸ್ಪಿ ಮಹೇಶ.ಕೆ, ವೃತ್ತ ನಿರೀಕ್ಷಕ ಮಂಜುನಾಥ ಲಿಂಗಾರೆಡ್ಡಿ ಹಾಗೂ ಕರಾವಳಿ ಪೊಲೀಸ್ ಪಡೆ ಸಿಬ್ಬಂದಿ ಸೇರಿದ್ದರು.

About The Author

error: Content is protected !!