November 19, 2025

ಪದವೀಧರರ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಆಹ್ವಾನ

ಭಟ್ಕಳ: ಪಶ್ಚಿಮ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಅವಧಿ 2026ರ ನವೆಂಬರ್ 31ರಂದು ಮುಗಿಯಲಿದ್ದು, ಹೊಸ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ.

2025ರ ನವೆಂಬರ್ 1 ಅನ್ನು ಅರ್ಹತಾ ದಿನಾಂಕವೆAದು ನಿಗದಿ ಮಾಡಲಾಗಿದೆ. ಆ ದಿನಾಂಕಕ್ಕೆ ಕನಿಷ್ಠ ಮೂರು ವರ್ಷಗಳ ಹಿಂದೆ ಪದವಿ ಪಡೆದಿರುವ ಹಾಗೂ ಕ್ಷೇತ್ರದೊಳಗೆ ವಾಸಿಸುತ್ತಿರುವ ಪದವೀಧರರು ತಮ್ಮ ಹೆಸರು ಸೇರಿಸಿಕೊಳ್ಳಲು ಅವಕಾಶವಿದೆ.

ಹೆಸರು ಸೇರಿಸಿಕೊಳ್ಳಲು ನಮೂನೆ-18 ಹಾಗೂ ಮೂರನೇ ಅನುಸೂಚಿಯ ನಮೂನೆಗಳನ್ನು ತುಂಬಿ ಅಗತ್ಯ ದಾಖಲೆಗಳೊಂದಿಗೆ ನವೆಂಬರ್ 6ರೊಳಗೆ ಸಲ್ಲಿಸಬೇಕಿದೆ. ಅರ್ಜಿಯೊಂದಿಗೆ ಪದವಿ ಪ್ರಮಾಣಪತ್ರದ ಪ್ರತಿಯ ಜೊತೆಗೆ ಆಧಾರ್, ಮತದಾರರ ಗುರುತಿನ ಚೀಟಿ ಹಾಗೂ ವಾಸಸ್ಥಳದ ದಾಖಲೆ ಕಡ್ಡಾಯವಾಗಿದೆ. ಈ ದಾಖಲೆಗಳನ್ನು ತಹಶೀಲ್ದಾರ್, ಕಾಲೇಜು ಪ್ರಾಂಶುಪಾಲರು, ಜಂಟಿ ಅಭಿವೃದ್ಧಿ ಅಧಿಕಾರಿಗಳು, ಪುರಸಭೆ ಕಾರ್ಯನಿರ್ವಾಹಕ ಅಧಿಕಾರಿಗಳು, ಗಜೆಟೆಡ್ ಅಧಿಕಾರಿಗಳು ಅಥವಾ ನೋಟರಿ ಪಬ್ಲಿಕ್ ಅವರಿಂದ ದೃಢೀಕರಿಸಬೇಕು.

ಭಟ್ಕಳ ತಾಲೂಕಿನಲ್ಲಿ ತಹಶೀಲ್ದಾರ್ ಕಚೇರಿ (ದೂರವಾಣಿ: 08385-226422) ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಗಳ ಕಚೇರಿ (ದೂರವಾಣಿ: 08385-226429) ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ಪ್ರಕಟಣೆಯಲ್ಲಿ ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ತಿಳಿಸಿದ್ದಾರೆ.

About The Author

error: Content is protected !!