November 19, 2025

ಭಟ್ಕಳದಲ್ಲಿ ಓ.ಸಿ. ಮಟಕಾ ಜೂಜಾಟದ ಇಬ್ಬರು ಬಂಧನ, ಸಾರ್ವಜನಿಕ ಸ್ಥಳದಲ್ಲೇ ಚಟುವಟಿಕೆ;

ಭಟ್ಕಳ: ನಗರದ ಹಳೆಯ ಬಸ್ ನಿಲ್ದಾಣದ ಹತ್ತಿರದ ಹಳೆಯ ಮೀನು ಮಾರುಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲೇ ಓ.ಸಿ. ಮಟಕಾ ಜೂಜಾಟ ನಡೆಸುತ್ತಿದ್ದ ಇಬ್ಬರನ್ನು ಭಟ್ಕಳ ನಗರ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ಸಾಗರ ರಸ್ತೆಯ ಕಂಡೆಕೊಡ್ಲು ಮೂಲದ ಶಶಿಕಾಂತ ರಾಮಚಂದ್ರ ಶೆಟ್ಟಿ ಹಾಗೂ ಉಪ್ಪುಂದ ಬೈಂದೂರಿನ ವೆಂಕಟಾದ್ರಿ ನಾರಾಯಣ ಖಾರ್ವಿ ಎಂದು ಗುರುತಿಸಲಾಗಿದೆ.

ಇವರಿಬ್ಬರೂ ಸಾರ್ವಜನಿಕರಿಂದ ಹಣ ಪಡೆದು ತಮ್ಮ ಲಾಭಕ್ಕಾಗಿ ಓ.ಸಿ. ಮಟಕಾ ಜೂಜಾಟ ನಡೆಸುತ್ತಿದ್ದ ವೇಳೆ ಪಿ.ಎಸ್.ಐ. ತಿಮ್ಮಪ್ಪ ಮೊಗೇರ್ ಹಾಗೂ ನವೀನ್ ಎಸ್. ನಾಯ್ಕ ಅವರ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ದಾಳಿ ನಡೆಸಿ ಬಂಧಿಸಿತು. ಘಟನಾಸ್ಥಳದಿಂದ ಶಶಿಕಾಂತನಿAದ ರೂ,700 ಹಾಗೂ ವೆಂಕಟಾದ್ರಿಯಿAದ ರೂ.780 ನಗದು ಹಣ ಮತ್ತು ಜೂಜಾಟದ ಸಲಕರಣೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

error: Content is protected !!