ಖಚಿತ ಮಾಹಿತಿಯ ಮೇರೆಗೆ ಪೊಲೀಸರ ದಾಳಿ ರೂ, 50 ಲಕ್ಷ ರೂ. ನಗದು,401 ಗ್ರಾಂ ಚಿನ್ನ ವಶ
ಭಟ್ಕಳ: ಖಚಿತ ಮಾಹಿತಿಯ ಮೇರೆಗೆ ಭಟ್ಕಳ ಶಹರ ಠಾಣೆ ಪೊಲೀಸರು ವಿ.ಆರ್.ಎಲ್ ಖಾಸಗಿ ಬಸ್‌ನಲ್ಲಿ ನಡೆದ ಅಚ್ಚರಿಯ ಕಳ್ಳ ಸಾಗಾಣಿಕೆಯನ್ನು ಪತ್ತೆಹಚ್ಚಿದ್ದಾರೆ. ಮುಂಬೈಯಿAದ ಭಟ್ಕಳಕ್ಕೆ ಪಾರ್ಸೆಲ್ ರೂಪದಲ್ಲಿ ಕಳುಹಿಸಲ್ಪಟ್ಟ ನೀಲಿಬಣ್ಣದ ಸೂಟ್‌ಕೇಸ್‌ನೊಳಗೆ ಲಕ್ಷಾಂತರ ಮೌಲ್ಯದ ನಗದು ಮತ್ತು ಬಂಗಾರದ ಆಭರಣಗಳು ಪತ್ತೆಯಾದ ಘಟನೆ ಸಂಚಲನ ಸೃಷ್ಟಿಸಿದೆ.

ಮುಂಬೈಯಿAದ ಭಟ್ಕಳ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ವಿ.ಆರ್.ಎಲ್ ಬಸ್‌ನಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ಭಟ್ಕಳದಲ್ಲಿ ಇರ್ಫಾನ್ ಎಂಬವರು ತೆಗೆದುಕೊಳ್ಳುತ್ತಾರೆ ಎಂದು ಹೇಳಿ ನೀಲಿ ಸೂಟ್‌ಕೇಸ್‌ನ್ನು ಪಾರ್ಸೆಲ್ ರೂಪದಲ್ಲಿ ನೀಡಿದ್ದರು.
ಈ ಮಾಹಿತಿಯನ್ನು ಮೊತ್ತಮೊದಲು ಪಡೆದಿದ್ದ ಸಿಪಿಐ ದಿವಾಕರ್ ಹಾಗೂ ಪಿಎಸ್‌ಐ ನವೀನ ನಾಯ್ಕ ಅವರ ನೇತೃತ್ವದ ಪೊಲೀಸರು ಶಂಶುದ್ದೀನ್ ಸರ್ಕಲ್ ಬಳಿ ಬಸ್ ತಪಾಸಣೆ ನಡೆಸಿ ಪಾರ್ಸೆಲ್ ತೆರೆಯಲು ಮುಂದಾದಾಗ ರೂ. 49,98,400 ನಗದು, 401.04 ಗ್ರಾಂ ತೂಕದ 32 ಬಂಗಾರದ ಬಳೆಗಳು, ಮೊಬೈಲ್ ಹಾಗೂ ಪೆನ್‌ಡ್ರೈವ್ ಪತ್ತೆಯಾದವು.
ಘಟನೆಯ ತನಿಖೆಯ ಭಾಗವಾಗಿ ಭಟ್ಕಳ ಬಂದರು ರಸ್ತೆಯ ಬಾಬಾನಂದ್ ಹಾಗೂ ಉಸ್ಮಾನ್ ನಗರದ ಮೊಹ್ಮದ್ ಇರ್ಫಾನ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಐಟಿ ಆಕ್ಟ್ ಸೇರಿದಂತೆ ಸಂಬAಧಿತ ವಿಧಿಗಳಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

More Stories
ಭಟ್ಕಳ ತಲಾಂದ ಶಾಲೆಯಲ್ಲಿ ಉತ್ಸಾಹಭರಿತ ಪ್ರತಿಭಾ ಕಾರಂಜಿ, ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಸಡಗರ
ಭಟ್ಕಳದಲ್ಲಿ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ
ವ್ಯವಹಾರಿಕ ಜ್ಞಾನಕ್ಕೆ ಪಾಠ ಕಲಿಸಿದ ಮಕ್ಕಳ ಸಂತೆ