ಬೆಂಗಳೂರು ; ಮುಖ್ಯಮಂತ್ರಿಯವರ ಕಛೇರಿಯಲ್ಲಿ ಭೇಟಿಮಾಡಿ ವಿವಾದಿತ ಕಾಸರಕೋಡ ವಾಣಿಜ್ಯ ಬಂದರುನಿರ್ಮಾಣ ಯೋಜನೆಯನ್ನು ಕೈಬಿಡಲು ಮತ್ತು ಅಲ್ಲಿನ ಮೀನುಗಾರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಒತ್ತಾಯಪಡಿಸಿದೆ. ಅವರು ಈ ಸಂದರ್ಭದಲ್ಲಿ ಸ್ವತಂತ್ರ ತನಿಖಾ ಸಮಿತಿಯ ವರದಿಯ ಶಿಫಾರಸು ಸಹಿತ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿ ಮುಖ್ಯಮಂತ್ರಿಗಳ ಮದ್ಯಪ್ರವೇಶಕ್ಕೆ ವಿನಂತಿಸಿದೆ. ನಂತರ ಮುಖ್ಯಕಾರ್ಯದರ್ಶಿಗಳನ್ನು ಭೇಟಿ ಮಾಡಿ ತಮ್ಮ ಅಹವಾಲನ್ನು ದಾಖಲಿಸಿದ ವಿದ್ಯಮಾನ ವರದಿಯಾಗಿದೆ. ಹೊನ್ನಾವರವು ಶರಾವತಿ ನದಿ ಮತ್ತು ಅರಬ್ಬಿ ಸಮುದ್ರದ ನಡುವೆ ಇದ್ದು, ಆಲಿವ್ ರಿಡ್ಲೆ ಆಮೆಗಳಂತಹ ಅಪರೂಪದ ಜೀವಿಗಳ ನಿವಾಸ ಸ್ಥಾನವಾಗಿದೆ. ಇಲ್ಲಿನ ಜನರ ಬದುಕು ಸಾಂಪ್ರದಾಯಿಕ ಮೀನುಗಾರಿಕೆ ಆರ್ಥಿಕತೆಯನ್ನು ಅವಲಂಬಿಸಿದೆ.
2010 ರಲ್ಲಿ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ (ಊPPಐ) ಕಂಪನಿಗೆ ವಾಣಿಜ್ಯ ಬಂದರು ನಿರ್ಮಿಸಲು ಅನುಮತಿ ನೀಡಿದಾಗಿನಿಂದ ಈ ಪ್ರದೇಶದಲ್ಲಿ ಆತಂಕ ಮತ್ತು ವಿರೋಧ ಹೆಚ್ಚಿದೆ. ಈ ಯೋಜನೆಯು ಐದು ಮೀನುಗಾರಿಕೆ ಗ್ರಾಮಗಳಿಗೆ ಸೇರಿದ 44 ಹೆಕ್ಟೇರ್ ಭೂಮಿಯಲ್ಲಿ ಸಮುದಾಯದ ಒಪ್ಪಿಗೆ ಇಲ್ಲದೆ ಮತ್ತು ಸಂವಿಧಾನಾತ್ಮಕ ಪರಿಸರ ನಿಯಮಗಳನ್ನು ಉಲ್ಲಂಘಿಸಿ ಕೈಗೊಳ್ಳಲಾಗಿದೆ. 2025 ರಲ್ಲಿ ನಡೆದ ಭೂ ಮಾಪನ ಮತ್ತು ರಸ್ತೆ ನಿರ್ಮಾಣದಂತಹ ಬಲವಂತದ ಹೊಸ ಬೆಳವಣಿಗೆಗಳು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿವೆ. ಸಾಗರ್ ಮಾಲಾ ಯೋಜನೆಯಡಿಯಲ್ಲಿ ಬಂದರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಿಸಲಾಗುತ್ತಿದ್ದು, ಇದು ಮೀನುಗಾರರ ಪರಂಪರಾಗತ ವಸತಿನೆಲೆಯ ಅಖZ-I ಮತ್ತು ಅಖZ-III ಪ್ರದೇಶಗಳಲ್ಲಿ ಹಾದುಹೋಗುತ್ತದೆ. ಈ ರಸ್ತೆಯು ಮೀನು ಒಣಗಿಸುವ ಸ್ಥಳಗಳು ಮತ್ತು ಮೀನುಗಾರರ ಮನೆಗಳಂತಹ ಸಾಮೂಹಿಕ ಸ್ಥಳಗಳನ್ನು ಕಡಿತಗೊಳಿಸುತ್ತದೆ.

ಫೆಬ್ರವರಿ 25, 2025 ರಂದು ನಡೆದ ಶಾಂತಿಯುತ ಪ್ರತಿಭಟನೆಗೆ ಪೊಲೀಸರು ಲಾಠಿ ಪ್ರಹಾರ, ಬಂಧನ ಮತ್ತು ಪ್ರತಿಭಟನಾಕಾರರ ವಿರುದ್ಧ “ದಂಗೆ ಮತ್ತು ಕೊಲೆ” ಯತ್ನದಂತಹ ಗಂಭೀರವಾದ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಶಾಂತಿಯುತ ಹೋರಾಟವನ್ನು ಹತ್ತಿಕ್ಕುವ ಕೆಲಸ ಸ್ಥಳೀಯ ಪೋಲಿಸ ಇಲಾಖೆಯಿಂದ ಆಗಿದೆ. ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕಾರಣಕ್ಕೆ 15 ವರ್ಷದ ಬಾಲಕಿ ಅಪೇಕ್ಷಾಳ ಕುಟುಂಬ ಸದಸ್ಯರ ಮೇಲೆ ದೈಹಿಕ ಹಲ್ಲೆ ನಡೆಸಿ ಬಂಧಿಸಲಾಗಿದೆ. ರೇಖಾ ತಾಂಡೇಲ ಎಂಬ ಮಹಿಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ.ಇದರ ನಡುವೆ ಸುಮಾರು 40 ಜನರು ಪ್ರತಿಭಟನೆಯ ಸಂಕೇತವಾಗಿ ಸಮುದ್ರದೊಳಗೆ ನಡೆದು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಯಿತು ! ಮೀನು ಒಣಗಿಸುವ ಪ್ರದೇಶಗಳಿಗೆ ಪ್ರವೇಶ ಕಳೆದುಕೊಂಡಿರುವುದರಿAದ ಮಹಿಳೆಯರಿಗೆ ಉದ್ಯೋಗ ನಷ್ಟವಾಗಿದ್ದು, ಕುಟುಂಬಗಳ ಆದಾಯ ಕುಸಿದಿದೆ. ಮೀನುಗಾರಿಕಾ ಆರ್ಥಿಕ ತಜ್ಞರ ಪ್ರಕಾರ, ಬಂದರು ನಿರ್ಮಾಣವು ನದಿ-ಸಮುದ್ರ ಸಂಧಿಯ ಪರಿಸರ ವ್ಯವಸ್ಥೆಯನ್ನು ಹಾಳುಮಾಡಿ, ಕರಾವಳಿ ಸವೆತವನ್ನು ಹೆಚ್ಚಿಸಿ ಸ್ಥಳೀಯ ವಾಸಸ್ಥಳಗಳಿಗೆ ಅಪಾಯವನ್ನುಂಟುಮಾಡುತ್ತದೆ. ಖಾಸಗಿ ಲಾಭ ಮತ್ತು ಸರ್ಕಾರದ ಪಾತ್ರದಿಂದಾಗಿ, ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಸಂರಕ್ಷಣಾ ಕ್ರಮಗಳು ಮತ್ತು ಸಮುದಾಯದ ಹಕ್ಕುಗಳನ್ನು ಧ್ವಂಸಗೊಳಿಸಲಾಗುತ್ತಿದೆ ಎಂಬ ತನೀಖಾ ವರದಿಯ ಅಂಶಗಳನ್ನು ಮೇಧಾ ಪಾಟ್ಕರ್ ಅವರು ಮುಖ್ಯಮಂತ್ರಿಗಳ ಗಮನಸೆಳೆದಿದ್ದಾರೆ. ನಿಯೋಗದಲ್ಲಿ ಬಂದರು ವಿರೋದಿ ಹೋರಾಟ ಸಮೀತಿ ಅಧ್ಯಕ್ಷ ರಾಜೇಶ ಗೋವಿಂದ ತಾಂಡೇಲ, ಮಹ್ಮೂದ ಕೋಯಾ, ರಿಯಾನಾಶೇಖ,ನ್ಯಾಯವಾದಿ ಸಂಪ್ರೀತಾ ಮತ್ತು ಇತರ ಪ್ರಮುಖರು ಇದ್ದರು.

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”