ಸ್ವಾತಂತ್ರ‍್ಯ ಪೂರ್ವದಲ್ಲಿ, ಸ್ವಾತಂತ್ರ‍್ಯ ಹೋರಾಟದಲ್ಲಿ, ಸ್ವಾತಂತ್ರ‍್ಯಾನAತರದ ಭಾರತದ ನಿರ್ಮಾಣದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲರ ಕೊಡುಗೆ ಸದಾ ಸ್ಮರಿಸುವಂತದಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಹೊನ್ನಾವರ; ಪಟ್ಟಣದ ಪೊಲೀಸ್ ಪೆರೇಡ್ ಮೈದಾನದಲ್ಲಿ ವಿವಿಧ ಇಲಾಖೆಗಳು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸರದಾರ್ ವಲ್ಲಭಭಾಯ್ ಪಟೇಲ ಅವರ 150 ನೇ ಜನ್ಮ ದಿನದ ಅಂಗವಾಗಿ ಬುಧವಾರ ನಡೆದ ಏಕತಾ ನಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಂಗಾಲವನ್ನು ವಿಭಜಿಸಿದ ಬ್ರಿಟೀಷ ಶಕ್ತಿಯ ವಿರುದ್ದ ಹೋರಾಡಿ ಒಡೆದು ಹೋಗಿದ್ದ ಬಂಗಾಲವನ್ನು ಒಂದು ಮಾಡುವುದಕ್ಕೆ ಸ್ಪೂರ್ತಿಯ ಕೇಂದ್ರವಾಗಿದ್ದುದು ವಂದೇ ಮಾತರಂ. ಸ್ವಾತಂತ್ರ‍್ಯ ಹೋರಾಟದಲ್ಲಿ ವಂದೇ ಮಾತರಂ ಮೊಳಗಿತ್ತು. ಸ್ವಾತಂತ್ರ‍್ಯದ ನಂತರವೂ ವಂದೇ ಮೊಳಗುತ್ತಿದೆ. ವಂದೇ ಮಾತರಂ, ಭಾರತ ಮಾತಾ ಕೀ ಜೈ ನಮ್ಮ ಉಸಿರಿನ ಭಾಗವಾಗಬೇಕು ಎಂದರು.

ಸ್ವಾತAತ್ರ‍್ಯದ ಕೆಲವು ದಶಕಗಳು ಗುಲಾಮಿತನದ ಮಾನಸಿಕತೆಯನ್ನು ದೂರ ಮಾಡುವಂಥ ಆಡಳಿತವನ್ನು ಕೊಡಲಿಲ್ಲ. ಈಗ ನರೇಂದ್ರ ಮೋದಿಯವರು ಕಳೆದ ಹತ್ತು ಹನ್ನೊಂದು ವರ್ಷಗಳಲ್ಲಿ ದೇಶ ಮೊದಲು ದೇಶಕ್ಕಾಗಿ ನಾವು ಸಮರ್ಪಿಸಿಕೊಳ್ಳಬೇಕು ಎಂಬ ಇಚ್ಛಾಶಕ್ತಿಯನ್ನು ಜಾಗೃತಗೊಳಿಸುತ್ತಿದ್ದಾರೆ ಎಂದರು

ಭಾರತದ ಏಳಿಗೆಗೆ, ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಕೊಡುಗೆ ಕೊಡಬೇಕು ಎಂಬ ಸಂಕಲ್ಪ ಏಕತಾ ನಡಿಗೆ ಮೂಲಕ ಆಗಬೇಕು. ಜಾತಿ, ಭಾಷೆ, ಆಹಾರ, ಗಡಿಗಳ ಹೆಸರಿನಲ್ಲಿ ನಮ್ಮನ್ನು ಒಡೆದು ಛಿದ್ರಗೊಳಿಸುವ ಜಾಗೃತವಾಗಿವೆ. ಭಯೋತ್ಪಾದಕತೆ ಮುಂತಾದ ಛಿದ್ರಗೊಳಿಸುವ ಶಕ್ತಿಗಳ ವಿರುದ್ದ ಒಂದಾಗಿ ಹೋರಾಟ ಮಾಡೋಣ ಎಂದರು.
ವೇದಿಕೆಯಲ್ಲಿ ಶಾಸಕ ದಿನಕರ ಶೆಟ್ಟಿ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಪ.ಪಂ.ಅಧ್ಯಕ್ಷ ವಿಜಯ ಕಾಮತ್, ಉಪಾಧ್ಯಕ್ಷ ಸುರೇಶ ಹೊನ್ನಾವರ, ಸಹಾಯಕ ಆಯುಕ್ತೆ ಎಸಿ ಕಾವ್ಯರಾಣಿ, ತಹಶೀಲ್ದಾರ ಪ್ರವೀಣ ಕರಾಂಡೆ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ಮಂಡಲಾಧ್ಯಕ್ಷ ಮಂಜುನಾಥ ನಾಯ್ಕ ಪ.ಪಂ.ಸದಸ್ಯರು ಇದ್ದರು. ನಿತೇಶ ಕುಮಾರ ಸ್ವಾಗತಿಸಿದರು.
ಸಭಾ ಕಾರ್ಯಕ್ರಮದ ನಂತರ ಹೆದ್ದಾರಿ ಮೂಲಕ ಶರಾವತಿ ಸರ್ಕಲ್ ಮಾರ್ಗದಿಂದ ಪಟ್ಟಣದ ವಿವಿಧಡೆ ಜಾಥಾ ಸಂಚರಿಸಿತು.
ಕಾರ್ಯಕ್ರಮಕ್ಕೆ ಪ್ರೌಢ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಸ್ವ ಸಹಾಯ ಸಂಘದವರು, ವಿವಿಧ ಇಲಾಖೆಯ ಅಧಿಕಾರಿಗಳು ಹೆಚ್ಚಾಗಿ ಕಂಡುಬAದರು. ಇವರನ್ನು ಒತ್ತಾಯ ಪೂರ್ವಕವಾಗಿ ಕರೆತಂಡAತೆ ಇತ್ತು. ಸಾರ್ವಜನಿಕರ ಕೊರತೆ ಕಂಡು ಬಂತು.
ವೇದಿಕೆ ಮೇಲಿನ ಗಣ್ಯರಿಗೆ ಪೆಂಡಾಲ್ ವ್ಯವಸ್ಥೆ ಮಾಡಲಾಗಿತ್ತು, ವೇದಿಕೆ ಕೆಳಗೆ ಕುಳಿತ ನೂರಾರು ಮಹಿಳೆಯರು ಬಿಸಿಲಿನ ತಾಪ ತಾಳಲಾರದೆ, ಛತ್ರಿಯ ಮೊರೆ ಹೋದರು. ಛತ್ರಿ ತರದ ವಿದ್ಯಾರ್ಥಿಗಳು ಬಿಸಿಲಿನ ದಗೆಯಲ್ಲೇ ಕುಳಿತು ಸಭಾ ಕಾರ್ಯಕ್ರಮ ಮುಗಿಯುವಂತೆ ಮನದಲ್ಲಿ ಬೇಡಿಕೊಳ್ಳುತ್ತಿದ್ದರು.

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”