ಹೊನ್ನಾವರ : 150ನೇ ವರ್ಷದ ಸಂಭ್ರಮದಲ್ಲಿ ವಂದೆಮಾತರA ಗೀತೆ ಇದ್ದು, ಇದಕ್ಕೆ ಕೊಡುವ ಪ್ರಾಮುಖ್ಯತೆ ಇನ್ನಷ್ಟು ಬಲವಾಗಬೇಕು. ದೇಶದ ರಾಷ್ಟ್ರಗೀತೆಗೆ ಸರಿಸಮಾನವಾಗಿ ವಂದೆಮಾತರA ಗೀತೆ ಇಂದು ಇದೆ. ಇತಿಹಾಸ ಮತ್ತೆ ಕೆದುಕಲು ಹೋಗುವುದಿಲ್ಲ ಎನ್ನುತ್ತಾ ಸಂಸದರಾದ ಕಾಗೇರಿಯವರು, ವಂದೆಮಾತರA ರಾಷ್ಟ್ರಗೀತೆ ಆಗುಬೇಕು ಎನ್ನುವ ಕೂಗು ಬಲವಾಗಿ ಇತ್ತು. ಆದರೆ ಆವತ್ತಿನ ಪೂರ್ವಜರು ವಂದೆ ಮಾತರಂ ಇರಲಿ, ಬ್ರೀಟಿಷ್ ಅಧಿಕಾರಿಗಳನ್ನು ಸ್ವಾಗತಿಸಲು ಇರುವ ಜನಗಮನವು ಇರಲಿ ಎಂದರು. ಆ ಕಾರಣದಿಂದ ಇಂದು ನಾವು ರಾಷ್ಟ್ರಗೀತೆ ಎಂದು ಪಾಲಿಸುತ್ತಿದ್ದೇವೆ. ಸ್ವಾತಂತ್ರ್ಯ ಹೋರಾಟಕ್ಕೆ ವಂದೆಮಾತರA ಕೊಟ್ಟ ಕೊಡುಗೆ ಪ್ರೇರಣೆಯಾಗಿದೆ. 150ನೇ ವರ್ಷದ ಸಂಭ್ರಮದಲ್ಲಿರುವ ಈ ಗೀತೆಯು ಕಂಠ, ಕಂಠದಲ್ಲಿ ಪ್ರತಿಧ್ವನಿಸಬೇಕು ಎಂದು ಕರೆ ನೀಡಿದರು.

ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಕಾಲೇಜು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆದ ಏಕತಾ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಗೀತೆಯ ಬಗ್ಗೆ ಸಂಸದರು ನೀಡಿದ ಈ ಹೇಳಿಕೆಯು ಚರ್ಚೆ ಹುಟ್ಟು ಹಾಕಿದ್ದು, ರಾಷ್ಟ್ರಗೀತೆಗೆ ಸಾರ್ವಜನಿಕ ಸ್ಥಳದಲ್ಲಿ ಜನಪ್ರತಿನಿಧಿಯೊರ್ವರು ಅವಮಾನಿಸಿದಂತಾಗಿದೆ.

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ