August 29, 2025

ಚಿತ್ರಾಪುರದ ಶ್ರೀವಲಿ ಪ್ರೌಢಶಾಲೆಯಲ್ಲಿ ಗುರುವಾರ ಶಾಲಾ ಸಂಸತ್ತಿಗೆ ಚುನಾವಣೆ ನಡೆಯಿತು.

ಭಟ್ಕಳ: ೨೦೨೫/೨೬ನೇ ಸಾಲಿನ ಈ ಚುನಾವಣೆ ‘ಚುನಾವಣಾ ಸಾಕ್ಷರತಾ ಕ್ಲಬ್’ ಅಡಿಯಲ್ಲಿ ನೈಜ ಸಾರ್ವತ್ರಿಕ ಮಾದರಿಯಲ್ಲಿ ನಡೆಯಿತು. ಚುನಾವಣಾ ಸಂಚಾಲಕರಾಗಿ ಸಮಾಜಶಾಸ್ತ್ರ ಶಿಕ್ಷಕರಾದ ನಾರಾಯಣ ನಾಯ್ಕ ನೇಮಕವಾಗಿದ್ದರು. ಮುಖ್ಯಾಧ್ಯಾಪಕಿ ಮಮತಾ ಭಟ್ಕಳ ಹಾಗೂ ಸಲಹೆಗಾರ ಡಾ. ರವೀಂದ್ರ ಕಾಯ್ಕಿಣಿ ಮುಖ್ಯ ಚುನಾವಣಾಧಿಕಾರಿಗಳಾಗಿ ಕೆಲಸ ನಿರ್ವಹಿಸಿದರು. ನಾಮಪತ್ರ ಸಲ್ಲಿಕೆ, ಪರಿಶೀಲನೆ, ಹಿಂಪಡೆಯುವಿಕೆ, ಪ್ರಚಾರ ಸೇರಿದಂತೆ ಎಲ್ಲಾ ಹಂತಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಯಿತು.

೮ ಅಭ್ಯರ್ಥಿಗಳ ಪೈಕಿ ೫ ಸ್ಥಾನಗಳಿಗೆ ಚುನಾವಣೆ ನಡೆಯಿದ್ದು, ವಿದ್ಯಾರ್ಥಿಗಳು ಇ.ವಿ.ಎಮ್ ಮಾದರಿಯಲ್ಲಿ ಪೋಟೋ ಗುರುತಿನ ಚೀಟಿ ಸಹಿತ ಮತದಾನದಲ್ಲಿ ಪಾಲ್ಗೊಂಡರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಚುನಾವಣೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದರು.

ಫಲಿತಾಂಶದAತೆ ಹರ್ಷ ಮಂಜುನಾಥ ನಾಯ್ಕ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತೆ, ಮಂತ್ರಿಗಳಾಗಿ ರಂಜಿತಾ ಎನ್. ನಾಯ್ಕ, ನಾಗರಾಜ ಕೆ. ನಾಯ್ಕ, ಸುದೀಪ ಆರ್. ಆಚಾರಿ, ಪ್ರಥ್ವಿ ಎಲ್. ನಾಯ್ಕ ಆಯ್ಕೆಯಾದರು. ಈ ವೇಳೆ ನೂತನ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು.

ಶಾಲಾ ಸಂಸತ್ ಉದ್ಘಾಟನೆಯನ್ನು ಗ್ರಾಮೀಣ ಠಾಣೆ ಪಿಎಸ್‌ಐ ರನ್ನ ಗೌಡ ಪಾಟೀಲ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, “ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ಹಾಗೂ ಕಾನೂನು ಜಾಗೃತಿ ಮೂಡಬೇಕಿದೆ,” ಎಂದು ತಿಳಿಸಿದರು. ಮುಖ್ಯಾಧ್ಯಾಪಕರು, ಹಿರಿಯ ಶಿಕ್ಷಕರು ಹಾಗೂ ಸಿಬ್ಬಂದಿಯ ಸಹಕಾರದಿಂದ ಚುನಾವಣೆ ಶಿಸ್ತುಬದ್ಧವಾಗಿ ನೆರವೇರಿತು.

About The Author