ಹೊನ್ನಾವರ: ಪ್ರತಿಷ್ಠಿತ ಬಡಾವನೆಗಳಾದ ಪ್ರಭಾತನಗರದ ರಜತಗಿರಿ, ಹೌಸಿಂಗ್ ಬೋರ್ಡ್ ಮತ್ತು ಫಾರೆಸ್ಟ್ ಕಾಲೋನಿಯ ಜನವಸತಿ ಪ್ರದೇಶಗಳಲ್ಲಿ ಬೆಳಕು ಇರುವಾಗಲೇ ಯಾವ ಭಯವಿಲ್ಲದೆ ಕಾಡು ಹಂದಿಗಳು ನಿತ್ಯ ಜನರು ತಿರುಗಾಡುವ ರಸ್ತೆಯಲ್ಲೇ ಓಡಾಡುತ್ತಿವೆ. ಈ ಹಿಂದೆ ೮-೧೦ ಹಂದಿಗಳ ತಂಡ ರಾತ್ರಿ ಹೊತ್ತಿನಲ್ಲಿ ತಿರುಗಾಡುತ್ತಿದ್ದವು, ಅವುಗಳಲ್ಲಿ ೪-೫ ಹಂದಿಗಳು ಬೆರ್ಪಟ್ಟು ಬೆಳಕಿನಲ್ಲಿ ಓಡಾಡುತ್ತಿರುವದರಿಂದ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುವವರು ಭಯದಲ್ಲಿ ಕತ್ತಲೆ ಅವರಿಸುವ ಮೊದಲೇ ಮನೆ ಸೇರಿಕೊಳ್ಳುತ್ತಿದ್ದಾರೆ. ಕಳೆದ ೬ ತಿಂಗಳ ಹಿಂದೆ ರಾಯಲ್ ಕೇರಿಯಲ್ಲಿ ಬೆಳಿಗ್ಗಿನ ಸಮಯದಲ್ಲಿ ಟ್ಯೂಷನ್ ಹೋಗುತ್ತಿರುವ ಹುಡುಗನ ಮೇಲೆ ಹಂದಿ ದಾಳಿಮಾಡಿದ್ದು ಅವನ ಕೈ, ಕಾಲು ಸೀಳಿರುವದು ಇನ್ನೂ ಇಲ್ಲಿಯ ನಿವಾಸಿಗಳಿಗೆ ನೆನಪಿದೆ. ಇನ್ನು ಮಂಗಗಳ ಹಾವಳಿ ವಿಪರೀತವಾಗಿವೆ ಹಾಗಾಗಿ ಹಿಂದಿನ ಅವಘಡ ಮತ್ತೆ ಮರುಕಳಿಸದಿರಲು ಕಾಡುಪ್ರಾಣಿಗಳನ್ನು ಅರಣ್ಯ ಪ್ರದೇಶದಲ್ಲಿ ಬಿಡುವಂತೆ ಸಂಬAಧಪಟ್ಟ ಇಲಾಖೆಯವರು ಸೂಕ್ತ ಕ್ರಮ ತೆಗೆದುಕೊಳ್ಳಲು ಇಲ್ಲಿಯ ನಿವಾಸಿಗಳ ಅಗ್ರಹವಾಗಿದೆ.


More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”